
ಇತ್ತೀಚಿನ ದಿನಗಳಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜನರನ್ನು ಮರಳು ಮಾಡಿ ಹಣ ದೋಚುವವರು ನಾನಾ ಮಾರ್ಗಗಳನ್ನು ಕಂಡುಹಿಡಿದುಕೊಳ್ತಾರೆ. ಆನ್ಲೈನ್ ಸ ಮಾತ್ರವಲ್ಲ ಎದುರಲ್ಲೇ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲ ಕ್ಷೇತ್ರದಲ್ಲೂ ಈ ಮೋಸಗಾರರನ್ನು ನೀವು ನೋಡ್ಬಹುದು. ಯಾರು ಪ್ರಾಮಾಣಿಕರು, ಯಾರು ಮೋಸಗಾರರು ಎಂಬುದನ್ನು ಪತ್ತೆ ಮಾಡೋದು ಕಷ್ಟವಾಗಿದೆ. ಈಗ ಚೀನಾದ ದಂಪತಿ ಸುದ್ದಿಯಲ್ಲಿದ್ದಾರೆ. ಈ ದಂಪತಿ ರೆಸ್ಟೋರೆಂಟ್ ಗೆ ಮೋಸ ಮಾಡಿದ್ದಲ್ಲದೆ ಹೊಟೇಲ್ ಮಾಲೀಕರಿಂದಲೇ ಹಣ ವಸೂಲಿ ಮಾಡ್ತಿದ್ದ ವಿಷ್ಯ ಬಯಲಾಗಿದೆ. ಅವರು ಸುಮಾರು 17 ರೆಸ್ಟೋರೆಂಟ್‌ಗಳಿಗೆ ಮೋಸ ಮಾಡಿದ್ದಾರೆ. ರೆಸ್ಟೋರೆಂಟ್ ಗೆ ಹೋಗಿ ಆಹಾರ ತಿನ್ನುವ ದಂಪತಿ ನಂತ್ರ ನಾಟಕವಾಡ್ತಿದ್ದರು. ಇದಾದ್ಮೇಲೆ ಮಾಲೀಕರ ಜೊತೆ ಜಗಳಕ್ಕೆ ಇಳಿಯುತ್ತಿದ್ದರು. ಪೊಲೀಸ್ರ ಭಯಕ್ಕೆ ಮಾಲಿಕರು ಅವರಿಗೆ ಹಣ ನೀಡ್ತಿದ್ದರು. ಪುಕ್ಕಟ್ಟೆ ಆಹಾರ ಸೇವನೆ ಮಾಡಿದ್ದಲ್ಲದೆ ಹೊಟೇಲ್ ಮಾಲಿಕರಿಂದಲೇ ಹಣ ವಸೂಲಿ ಮಾಡ್ತಿದ್ದರು. ದಂಪತಿ ಪ್ರತಿಯೊಂದು ಹೊಟೇಲ್ ನಿಂದಲೂ ಸುಮಾರು ೧ ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೊಟೇಲ್ (Hotel) ಗೆ ಹೀಗೆ ಮೋಸ ಮಾಡ್ತಿದ್ದರು ದಂಪತಿ (Couple) : ಶಾಂಘೈನ ಚೆನ್ ಮತ್ತು ಜಿಯಾಂಗ್ ದಂಪತಿಯೇ ರೆಸ್ಟೋರೆಂಟ್ ಗೆ ಮೋಸ ಮಾಡ್ತಿದ್ದ ದಂಪತಿ. ಇಬ್ಬರು ಬೇರೆ ಬೇರೆ ಹೊಟೇಲ್ ಗೆ ಹೋಗಿ ಆಹಾರ ಸೇವನೆ ಮಾಡ್ತಿದ್ದರು. ಈ ಸಂದರ್ಭದಲ್ಲಿ ಗಾಜಿನ ಚೂರುಗಳನ್ನು ಬಾಯಿಗೆ ಹಾಕಿಕೊಳ್ಳುತ್ತಿದ್ದರು. ನಂತ್ರ ಆಹಾರದಲ್ಲಿ ಗಾಜಿನ ಚೂರಿತ್ತು ಎಂದು ಆರೋಪ ಮಾಡ್ತಿದ್ದರು. ಹೊಟೇಲ್ ಸಿಬ್ಬಂದಿ ಜೊತೆ ಜಗಳವಾಡ್ತಿದ್ದರು. ಆಹಾರದ ಬಿಲ್ ನೀಡ್ತಿರಲಿಲ್ಲ. ನಂತ್ರ ಹೆಚ್ಚುವರಿ ಹಣ (Money) ವನ್ನು ಹೊಟೇಲ್ ಮಾಲಿಕರಿಂದ ವಸೂಲಿ ಮಾಡ್ತಿದ್ದರು. ಇಲ್ಲವೆಂದ್ರೆ ಪೊಲೀಸ್ ಠಾಣೆಗೆ ದೂರು ನೀಡೋದಾಗಿ ಹೆದರಿಸುತ್ತಿದ್ದರು. ಪೊಲೀಸ್ ಕಿರಿಕಿರಿ, ಕೋರ್ಟ್ ಗೆ ಅಲೆಯುವ ಬದಲು ಪ್ರಕರಣವನ್ನು ಇಲ್ಲೇ ಇರ್ತ್ಯರ್ಥ ಮಾಡಿಕೊಳ್ಳೋಣ ಎಂದುಕೊಳ್ತಿದ್ದ ಮಾಲಿಕರು, ಈ ದಂಪತಿಗೆ ಹಣ ನೀಡಲು ಮುಂದಾಗ್ತಿದ್ದರು. ಅವರನ್ನು ಭಯಗೊಳಿಸಿ ಒಂದು ಲಕ್ಷದವರೆಗೆ ಹಣ ದೋಚಿದ್ದಾರೆ ಈ ದಂಪತಿ.
48 ಸಿಂಪಿ ತಿಂದ ಗರ್ಲ್ ಫ್ರೆಂಡ್! ಬಿಲ್ ನೋಡಿ ಬಾಯ್ ಫ್ರೆಂಡ್ ಪರಾರಿ
ಸಿಸಿಟಿವಿಯಲ್ಲಿ (CCTV) ಸೆರೆಯಾದ ದೃಶ್ಯ: ಶಾಂಘೈ ಜಿಂಗಾನ್ ಜಿಲ್ಲಾ ಪೀಪಲ್ಸ್ ಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಪ್ರಾಸಿಕ್ಯೂಟರ್ ವಾಂಗ್ ಜಿಯಾ, ಈ ವರ್ಷ ಮಾರ್ಚ್ ನಲ್ಲಿ ಈ ದಂಪತಿ ಟ್ರಿಕ್ಸ್ ಉಪಯೋಗ ಶುರು ಮಾಡಿದ್ದರು ಎಂದಿದ್ದಾರೆ. ಮಾರ್ಚ್ ನಿಂದ ಮೇ ತಿಂಗಳವರೆಗೆ ಬೇರೆ ಬೇರೆ ಸುಮಾಋ 16 ರೆಸ್ಟೋರೆಂಟ್ ನಲ್ಲಿ ಅವರು ಈ ಟ್ರಿಕ್ಸ್ ಅನುಸರಿಸಿದ್ದಾರೆ. ಆದ್ರೆ ಮೇನಲ್ಲಿ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಇವರ ಕೃತ್ಯ ಸೆರೆಯಾಗಿದೆ. ಆಹಾರಕ್ಕೆ ಏನೋ ಸೇರಿಸುತ್ತಿರುವುದು ಅಲ್ಲಿ ಸ್ಪಷ್ಟವಾಗಿ ಕಾಣ್ತಿತ್ತು. ಆ ನಂತ್ರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.
50 ಕೆ.ಜಿ ತೂಕ 7 ಅಡಿ ಉದ್ದದ ಮೀನನ್ನು ಹೆಂಗೆಲ್ಲ ತಿಂದ ಗೊತ್ತಾ?
ದಂಪತಿಗೆ ಶಿಕ್ಷೆ ನೀಡಿದ ಕೋರ್ಟ್ : ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ದಂಪತಿಗೆ ಶಿಕ್ಷೆ ವಿಧಿಸಿದೆ. ತಲಾ ೨೨ ತಿಂಗಳ ಜೈಲು ಶಿಕ್ಷೆಯನ್ನು ಕೋರ್ಟ್ ನೀಡಿದೆ. ಅಲ್ಲದೆ 11,000 ಯುವಾನ್ ಅಂದ್ರೆ ಸುಮಾರು 1.25 ಲಕ್ಷ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದೆ.
ಸ್ಪೇನ್ (Spain) ನಲ್ಲೂ ಪೊಲೀಸ್ ಕೈಗೆ ಸಿಕ್ಕಿಬಿದ್ದ ಭೂಪ : ಸ್ಪೇನ್ ನಲ್ಲೂ ಇಂಥಹದ್ದೇ ಘಟನೆ ನಡೆದಿದೆ. ಆತ ಹೊಟೇಲ್ ಬಿಲ್ ಬರ್ತಾ ಇದ್ದಂತೆ ಹೃದಯಾಘಾತವಾದಂತೆ ನಾಟಕವಾಡ್ತಿದ್ದ. ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.