Health Tips: ಬೇಸಿಗೆಯಲ್ಲಿ ತಾಳೆಹಣ್ಣು ತಿಂದು ಸುಲಭವಾಗಿ ತೂಕ ಇಳಿಸಿಕೊಳ್ಳಿ

By Vinutha Perla  |  First Published Apr 24, 2023, 7:00 AM IST

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಹವನ್ನು ತಂಪಾಗಿಡಲು ಸೀಸನಲ್ ಫ್ರುಟ್ಸ್ ಹಾಗೂ ತರಕಾರಿಗಳನ್ನು ತಿನ್ನುವುದು ಅಗತ್ಯವಾಗಿದೆ. ಬೇಸಿಗೆಯಲ್ಲಿ ಸಿಗೋ ಹಣ್ಣುಗಳಲ್ಲು ಮುಖ್ಯವಾದುದು ತಾಳೆ ಹಣ್ಣು. ತಾಳೆಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ. ನಿಮಗೆ ಗೊತ್ತಿದ್ಯಾ?


ಸುಡು ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಹವನ್ನು ತಂಪಾಗಿಡಲು ಎಲ್ಲರೂ ಸೀಸನಲ್‌ ಫ್ರುಟ್‌, ವೆಜಿಟೇಬಲ್‌ಗಳನ್ನು ಸೇವಿಸುತ್ತಿದ್ದಾರೆ. ಬೇಸಿಗೆಯಲ್ಲಿ ಸಿಗೋ ಹಣ್ಣುಗಳು ಎಂದರೆ ತಕ್ಷಣಕ್ಕೆ ನೆನಪಾಗೋದು ಕಲ್ಲಂಗಡಿ, ಕರಬೂಜ ಮೊದಲಾದ ಹಣ್ಣುಗಳು. ಇವು ದೇಹಕ್ಕೆ ಹೆಚ್ಚು ನೀರನ್ನು ಒದಗಿಸುವ ಮೂಲಕ ಹೈಡ್ರೇಟ್ ಆಗಿರಲು ನೆರವಾಗುತ್ತದೆ. ಬೇಸಿಗೆಯಲ್ಲಿ ಯಥೇಚ್ಛವಾಗಿ ಸಿಗುವ ಇನ್ನೊಂದು ಹಣ್ಣೆಂದರೆ ತಾಳೆ ಹಣ್ಣು. ಇದು ದಕ್ಷಿಣ ಭಾರತದಲ್ಲಿ ಕಂಡುಬರುವ ಒಂದು ಜನಪ್ರಿಯ ಹಣ್ಣು. ಐಸ್ ಆಪಲ್ ಎಂದೂ ಕರೆಯಲ್ಪಡುವ ಇದನ್ನು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.

ತಾಳೆ ಹಣ್ಣನ್ನು ಬೇಸಿಗೆಯಲ್ಲಿ (Summer) ನಗರದಲ್ಲಿ ಎಲ್ಲೆಡೆ ಮಾರುವುದನ್ನು ನಾವು ನೋಡಬಹುದು. ದೇಹದ ನೀರಿನ ಅಂಶವನ್ನು ಕಾಪಾಡಲು ಮತ್ತು ದೇಹವನ್ನು ತಂಪಾಗಿರಿಸಲು ಇದು ಸಹಾಯ ಮಾಡುತ್ತದೆ. ತಾಳೆ ಹಣ್ಣಿನಲ್ಲಿ ವಿಟಮಿನ್ ಬಿ, ಕಬ್ಬಿಣ, ಸತು, ಪೊಟ್ಯಾಸಿಯಮ್, ರಂಜಕ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಇದು ದೇಹಕ್ಕೆ (Body) ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳನ್ನು (Health benefits) ನೀಡುತ್ತದೆ. ಕಡಿಮೆ ಕ್ಯಾಲೋರಿ ಹೊಂದಿರುವ ತಾಳೆ ಹಣ್ಣಿನಲ್ಲಿ ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ಸಿ, ಎ, ಇ ಮತ್ತು ಕೆ ಕೂಡ ಇದೆ. ಅಷ್ಟೇ ಅಲ್ಲ, ಇದು ಕಬ್ಬಿಣ, ಪೊಟ್ಯಾಶಿಯಂ, ಸತು ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿದೆ.  ಈ ಹಣ್ಣಿನ ಆರೋಗ್ಯ ಪ್ರಯೋಜನಗಳು ಏನೆಂದು ತಿಳಿಯೋಣ. 

Latest Videos

undefined

Health Tips : ಮರೆತೂ ಕೂಡ ಮಾವಿನ ಹಣ್ಣಿನ ಜೊತೆ ಇವನ್ನು ತಿನ್ನಬೇಡಿ

ಡಿಹೈಡ್ರೇಶನ್ ಸಮಸ್ಯೆ ದೂರ ಮಾಡುತ್ತದೆ
ಬೇಸಿಗೆಯಲ್ಲಿ ನಿರ್ಜಲೀಕರಣದ ಸಮಸ್ಯೆ ಕಾಡುವುದು ಸಾಮಾನ್ಯ. ದೇಹ ಡಿಹೈಡ್ರೇಟ್ ಆಗುವುದರಿಂದಲೇ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇಂತಹ ಸಂದರ್ಭಗಳಲ್ಲಿ ತಾಳೆ ಹಣ್ಣು ದೇಹಕ್ಕೆ ತಂಪು (Cool) ನೀಡುತ್ತದೆ. ದೇಹಕ್ಕೆ ಅಗತ್ಯವಾದ ನೀರನ್ನು (Water) ಒದಗಿಸುತ್ತದೆ. ನಿರ್ಜಲೀಕರಣವನ್ನು (Dehydration) ನೈಸರ್ಗಿಕವಾಗಿ ಎದುರಿಸಲು ತಾಳೆಹಣ್ಣಿನ ಸೇವನೆ ಸಹಾಯ ಮಾಡುತ್ತದೆ.

ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು
ಬೇಸಿಗೆಯಲ್ಲಿ ತಾಳೆಹಣ್ಣಿನ ಸೇವನೆ ಸುಲಭವಾಗಿ ತೂಕ ಇಳಿಸಲು (Weight lose) ನೆರವಾಗುತ್ತದೆ. ತಾಳೆಹಣ್ಣಿನಲ್ಲಿ ಕಡಿಮೆ ಕ್ಯಾಲೋರಿ ಮತ್ತು ಅಧಿಕ ನೀರಿನಂಶ ಇರುವುದರಿಂದ ಇದನ್ನು ತಿಂದರೆ ತುಂಬಾ ಹೊತ್ತಿನ ವರೆಗೆ ಹಸಿವಾಗುವುದಿಲ್ಲ. ಈ ಹಣ್ಣಿನಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಚಯಾಪಚಯ ಕ್ರಿಯೆ ಕೂಡಾ ಸರಿಯಾಗಿ ಆಗುವಂತೆ ಮಾಡುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಇದನ್ನು ಹೆಚ್ಚು ಸೇವಿಸುವುದು ಉತ್ತಮ.

Health Tips : ಬೇಸಿಗೆಯಲ್ಲಿ ಬಿಸಿ ಬಿಸಿ ತಿನ್ನೋದು ಸ್ವಲ್ಪ ಕಡಿಮೆ ಮಾಡಿ

ಮಧುಮೇಹವನ್ನು ನಿಯಂತ್ರಿಸಲು ಅತ್ಯುತ್ತಮ 
ತಾಳೆಹಣ್ಣಿನಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಕಾರಣ ಇದು ಮಧುಮೇಹವನ್ನು (Diabetes) ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಈ ಹಣ್ಣನ್ನು ತಿನ್ನುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬೇಸಿಗೆಯಲ್ಲಿ ಸಿಗೋ ಎಲ್ಲಾ ಹಣ್ಣುಗಳಿಗಿಂತ ವಿಭಿನ್ನವಾಗಿ ತಾಳೆಹಣ್ಣಿನ ಸೇವನೆ ರೋಗ ನಿರೋಧಕ ಶಕ್ತಿಯನ್ನು (Immunity power) ಹೆಚ್ಚಿಸಲು ನೆರವಾಗುತ್ತದೆ. ಯಾವುದೇ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ.  ತಾಳೆಹಣ್ಣು ಅನೇಕ ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದ್ದು ಇದು ರೋಗಗಳಿಂದ ದೂರವಿರಲು ನೆರವಾಗುತ್ತದೆ.

ಚರ್ಮದ ಆರೋಗ್ಯ ಕಾಪಾಡುತ್ತದೆ
ತಾಳೆಹಣ್ಣಿನ ಸೇವನೆ ಚರ್ಮದ ಆರೋಗ್ಯಕ್ಕೆ ವಿಶೇಷವಾಗಿ ಅತ್ಯುತ್ತಮವಾಗಿದೆ. ಇದು ಬೇಸಿಗೆಯಲ್ಲಿ ಕಾಣುವ ಹಲವು ರೀತಿಯ ಚರ್ಮದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಲ್ಲದು. ಬೆವರು ಸಾಲೆ, ಚಾರ್ಮ್ ಅದ ದದ್ದು, ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದು ಮುಂತಾದ ಸಮಸ್ಯೆಗಳಿಂದ ಈ ಹಣ್ಣು ಪರಿಹಾರ ನೀಡುತ್ತದೆ. ಹೀಗಾಗಿ ಚರ್ಮ ಕಾಂತಿಯುತವಾಗಿ, ಆರೋಗ್ಯಯುತವಾಗಿ ಹೊಳೆಯುತ್ತದೆ.

click me!