ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದ್ರೆ ಹಿತವೆನ್ನಿಸುತ್ತದೆ. ಅದ್ರಲ್ಲೂ ಫ್ರಿಜ್ ನಲ್ಲಿಟ್ಟಿರುವ ತಣ್ಣನೆ ಹಣ್ಣು ತಂಪಿನ ಅನುಭವವನ್ನು ನೀಡುತ್ತದೆ. ಆರಾಮವೆನ್ನಿಸುತ್ತೆ ಅಂತಾ ಫ್ರಿಜ್ ನಲ್ಲಿ ಕಲ್ಲಂಗಡಿ ಹಣ್ಣಿಟ್ಟು ತಿಂದ್ರೆ ಆಸ್ಪತ್ರೆ ಸೇರ್ಬೇಕಾಗುತ್ತೆ.
ಬೇಸಿಗೆಯ ಝಳಕ್ಕೆ ದೇಹ ಸುಡ್ತಿದೆ. ವಿಪರೀತ ಬಿಸಿಲಿನಿಂದಾಗಿ ಹೀಟ್ ಸ್ಟ್ರೋಕ್ ಗೆ ಜನ ಸಾಯ್ತಿದ್ದಾರೆ. ಇಂಥ ಬೇಸಿಗೆಯಲ್ಲಿ ಪ್ರತಿಯೊಬ್ಬರಿಗೂ ತಣ್ಣನೆ ಜ್ಯೂಸ್ ಇಲ್ಲವೆ ಆಹಾರ ಸೇವನೆ ಮಾಡಬೇಕೆಂಬ ಮನಸ್ಸಾಗುತ್ತದೆ. ಮನೆಯಲ್ಲಿರುವ ಜ್ಯೂಸ್ ಅಥವಾ ಹಣ್ಣನ್ನು ಫ್ರಿಜ್ ನಲ್ಲಿಟ್ಟು ಅದನ್ನು ತಿನ್ನುವ ಅಭ್ಯಾಸವನ್ನು ಅನೇಕರು ಮಾಡಿಕೊಂಡಿರುತ್ತಾರೆ. ನೀರನ್ನು ಕೂಡ ಫ್ರಿಜ್ ನಲ್ಲಿಟ್ಟು ತಣ್ಣಗಾದ್ಮೇಲೆ ಕುಡಿಯುತ್ತಾರೆ. ಹಾಗೆಯೇ ಕತ್ತರಿಸಿದ ಹಣ್ಣನ್ನು ಫ್ರಿಜ್ ನಲ್ಲಿ ಇಡ್ತಾರೆ. ಕತ್ತರಿಸಿದ್ದಿರಲಿ ಇಲ್ಲ ಹಾಗೆ ಇರಲಿ, ಹಣ್ಣು ತಾಜಾ ಇರಬೇಕು, ಕೆಲ ದಿನ ಬರಬೇಕು ಅಂದ್ರೆ ಅದನ್ನು ಫಿಜ್ ನಲ್ಲಿ ಇಡಬೇಕು. ಆದ್ರೆ ಎಲ್ಲ ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡೋದು ಒಳ್ಳೆಯದಲ್ಲ.
ಫ್ರಿಜ್ (Fridge) ಬಳಕೆ ಬೇಸಿಗೆ ಇರಲಿ, ಮಳೆಗಾಲವಿರಲಿ ಇಲ್ಲ ಚಳಿಗಾಲವಿರಲಿ ಆರೋಗ್ಯ (Health) ಕ್ಕೆ ಒಳ್ಳೆದಲ್ಲ. ತಾಜಾ ಆಹಾರ (Food) ಸೇವನೆ ಮಾಡ್ಬೇಕೆಂದು ತಜ್ಞರು ಸಲಹೆ ನೀಡ್ತಾರೆ. ಅದ್ರಲ್ಲೂ ಕೆಲ ಆಹಾರವನ್ನು ಫ್ರಿಜ್ ನಲ್ಲಿ ಇಟ್ಟರೆ ರುಚಿ ಬದಲಾಗುವ ಜೊತೆಗೆ ಆರೋಗ್ಯವೂ ಹಾಳಾಗುತ್ತದೆ. ಹಣ್ಣುಗಳನ್ನು ಫ್ರಿಜ್ ನಲ್ಲಿ ಇಡದಂತೆ ಸಲಹೆ ನೀಡಲಾಗುತ್ತದೆ. ಹಣ್ಣು (Fruit) ಗಳನ್ನು ತಾಜಾ ಇರುವಾಗ್ಲೇ ಸೇವನೆ ಮಾಡ್ಬೇಕು. ಹಣ್ಣುಗಳನ್ನು ಮಾರುಕಟ್ಟೆಯಿಂದ ತಂದ ನಂತ್ರ ಫ್ರಿಜ್ ನಲ್ಲಿ ಇಡೋರು ನೀವಾಗಿದ್ರೆ ಇಲ್ಲವೆ ಕತ್ತರಿಸಿದ ಹಣ್ಣನ್ನು ಫ್ರಿಜ್ ನಲ್ಲಿ ಇಡುವ ಅಭ್ಯಾಸ ನಿಮಗಿದ್ದರೆ ಇನ್ಮುಂದೆ ಕಲ್ಲಂಗಡಿ ಹಣ್ಣನ್ನು ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿ ಇಡಬೇಡಿ. ಫ್ರಿಜ್ ನಲ್ಲಿ ಕಲ್ಲಂಗಡಿ ಹಣ್ಣು ಇಡೋದ್ರಿಂದ ಏನೆಲ್ಲ ನಷ್ಟವಾಗುತ್ತೆ ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ.
VIRAL VIDEO : ಮಟನ್ ಗೆ ಮದ್ಯ ಬೆರೆಸಿ ಕೊಡ್ತಾನೆ ಈತ..!
ಕಲ್ಲಂಗಡಿ ಹಣ್ಣನ್ನು ಏಕೆ ಫ್ರಿಜ್ ನಲ್ಲಿ ಇಡಬಾರದು ಗೊತ್ತಾ? : ಕಲ್ಲಂಗಡಿ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದ್ರ ಪೌಷ್ಟಿಕಾಂಶ ನಷ್ಟವಾಗಲು ಶುರುವಾಗುತ್ತದೆ. ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಪ್ರಿಜ್ ನಲ್ಲಿ ಇಟ್ಟರೆ ಫುಡ್ ಪಾಯಿಸನ್ ಆಗುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಕತ್ತರಿಸಿದ ಕಲ್ಲಂಗಡಿ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಹಾನಿಕರವಾಗಿರುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡೋದ್ರಿಂದ ಸಾಕಷ್ಟು ಲಾಭವಿದೆ. ಆದ್ರೆ ತಪ್ಪಾಗಿ ಅದ್ರ ಸೇವನೆ ಮಾಡೋದ್ರಿಂದ ಲಾಭದ ಬದಲು ನಷ್ಟವಾಗುತ್ತದೆ.
ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಇದೆ ಇಷ್ಟೆಲ್ಲ ಲಾಭ : ಬೇಸಿಗೆಯಲ್ಲಿ ಪ್ರತಿಯೊಬ್ಬರೂ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡ್ಬೇಕು. ಇದು ನೀರಿನಿಂದ ಕೂಡಿರುವ ಹಣ್ಣಾಗಿದೆ. ನಮ್ಮ ದೇಹಕ್ಕೆ ನೀರನ್ನು ಒದಗಿಸುವ ಕೆಲಸವನ್ನು ಇದು ಮಾಡುತ್ತದೆ. ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆ ಕಾಡೋದು ಹೆಚ್ಚು. ದೇಹ ಹೈಡ್ರೇಟ್ ಆಗಿರಬೇಕೆಂದ್ರೆ ನೀವು ಕಲ್ಲಂಗಡಿ ಹಣ್ಣಿನ ಸೇವನೆ ಬಿಡಬೇಡಿ.
Health Tips : ಮರೆತೂ ಕೂಡ ಮಾವಿನ ಹಣ್ಣಿನ ಜೊತೆ ಇವನ್ನು ತಿನ್ನಬೇಡಿ
ತೂಕ ಇಳಿಕೆಗೆ (Weight Loss) ಒಳ್ಳೆಯದು : ಕಲ್ಲಂಗಡಿ ಹಣ್ಣಿನ ಸೇವನೆ ಮಾಡಿ ನೀವು ತೂಕ ಇಳಿಸಿಕೊಳ್ಳಬಹುದು. ಕಲ್ಲಂಗಡಿಯಲ್ಲಿ ಕ್ಯಾಲೋರಿ ಕಡಿಮೆ. ಹಾಗೆಯೇ ಅದು ಹೊಟ್ಟೆ ತುಂಬಿದ ಅನುಭವ ನೀಡುವುದ್ರಿಂದ ಬೇಗ ಹಸಿವಾಗುವುದಿಲ್ಲ.
ಜೀರ್ಣಕ್ರಿಯೆ ಸಮಸ್ಯೆಗೆ ಮದ್ದು (Medicine for Digestive System) : ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ಲ ಎನ್ನುವವರು ನೀವಾಗಿದ್ದರೆ ಕಲ್ಲಂಗಡಿ ಹಣ್ಣನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಇದ್ರಲ್ಲಿ ಫೈಬರ್ ಅಂಶ ಹೆಚ್ಚಿರುವ ಕಾರಣ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಕರುಳಿನ ಆರೋಗ್ಯಕ್ಕೆ (Gus Health) ಬೆಸ್ಟ್ : ಕಲ್ಲಂಗಡಿ ಹಣ್ಣನ್ನು ನೀವು ನಿಯಮಿತವಾಗಿ ಸೇವನೆ ಮಾಡೋದ್ರಿಂದ ನಿಮ್ಮ ಕರುಳಿನ ಆರೋಗ್ಯ ಸುಧಾರಿಸುತ್ತದೆ. ವಿಟಮಿನ್ ಬಿ ಹಾಗೂ ಸಿ ಇದ್ರಲ್ಲಿರುವ ಕಾರಣ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳೆಯಲು ಇದು ನೆರವಾಗುತ್ತದೆ.
ಹೃದಯದ ಆರೋಗ್ಯ (Heart Health) ಕಾಪಾಡುತ್ತೆ ಕಲ್ಲಂಗಡಿ : ಹೃದಯದ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಕೆಲಸವನ್ನು ಕೂಡ ಇದು ಮಾಡುತ್ತದೆ.