ವೆಜ್ ಬದಲು ಸರ್ವ್ ಮಾಡಿದ್ದು ಚಿಕನ್ ರೋಲ್‌, ಹೋಟೆಲ್ ವಿರುದ್ಧ 1ಕೋಟಿ ಪರಿಹಾರ ಕೇಳಿದ ವ್ಯಕ್ತಿ!

By Vinutha Perla  |  First Published Apr 23, 2023, 10:18 AM IST

ಪಾಪ ಆತ ಒಳ್ಳೆ ವೆಜ್‌ ರೋಲ್‌ ತಿನ್ನೋಣ ಅಂಥ ಹೋಟೆಲ್‌ ಹೋಗಿ ಆರ್ಡರ್‌ ಮಾಡಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ರುಚಿಯಾದ ವೆಜ್‌ ರೋಲ್‌ ಬಂದಿದೆ. ತಿಂದ ಮೇಲೆ ಗೊತ್ತಾಗಿದೆ ಅದು ವೆಜ್‌ ರೋಲ್‌ ಅಲ್ಲ ಚಿಕನ್‌ ರೋಲ್‌ ಅನ್ನೋದು. ವ್ಯಕ್ತಿ ತನ್ನ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಹೋಟೆಲ್‌ ವಿರುದ್ಧ 1 ಕೋಟಿ ರೂ. ಪರಿಹಾರ ಕೇಳಿದ್ದಾನೆ.


ಅತಿಥಿಗೆ ಸರಿಯಾದ ಊಟದ ಆರ್ಡರ್ ಪೂರೈಸುವಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಆಗ್ರಾದ ಪ್ರತಿಷ್ಠಿತ ಐಷಾರಾಮಿ ಹೋಟೆಲ್‌ವೊಂದು ಬರೋಬ್ಬರಿ 1 ಕೋಟಿ ರೂ. ಪರಿಹಾರ ನೀಡಬೇಕಾಗಿ ಬಂದಿದೆ. ಸಸ್ಯಾಹಾರಿಯಾಗಿರುವ ಅತಿಥಿ, ತನಗೆ ಹೊಟೇಲ್‌ನಲ್ಲಿ ಮಾಂಸಾಹಾರ ನೀಡಲಾಯಿತು ಎಂದು ಆರೋಪಿಸಿದ್ದಾರೆ. ಮಾಂಸಾಹಾರದಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿರುವುದಲ್ಲದೆ ಆರೋಗ್ಯಕ್ಕೂ ತೊಂದರೆಯಾಯಿತು ಎಂದು ಹೇಳಿಕೊಂಡಿದ್ದಾರೆ.

ಪ್ರತಿಷ್ಠಿತ ಅಂತಾರಾಷ್ಟ್ರೀಯ ಐಷಾರಾಮಿ ಹೋಟೆಲ್‌ಗಳ ಲಿಸ್ಟ್‌ನಲ್ಲಿರುವ ಈ ಹೋಟೆಲ್, ಅತಿಥಿ (Guest) ಆರ್ಡರ್ ಮಾಡಿದಂತೆ ಸಸ್ಯಾಹಾರದ (Vegetarian) ಬದಲಿಗೆ ಮಾಂಸಾಹಾರಿ ಆಹಾರವನ್ನು (Nonveg) ನೀಡಿತು ಎಂದು ತಿಳಿದುಬಂದಿದೆ. ವ್ಯಕ್ತಿ ಮಾಂಸಾಹಾರ ಸೇವಿಸಿ ಆರೋಗ್ಯ (Health) ಹದಗೆಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ತಿಳಿಸಿದ್ದಾರೆ. ಅರ್ಪಿತ್ ಗುಪ್ತಾ ಎಂದು ಗುರುತಿಸಲಾದ ವ್ಯಕ್ತಿ ಈಗ ಹೋಟೆಲ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಹೋಟೆಲ್ ಆಡಳಿತ ಮಂಡಳಿಗೆ ನೋಟಿಸ್‌ ನೀಡಿ 1 ಕೋಟಿ ರೂಪಾಯಿ ಪರಿಹಾರ (Compensation) ನೀಡುವಂತೆ ಒತ್ತಾಯಿಸಿದ್ದಾರೆ.

Tap to resize

Latest Videos

ಟೈಟಾನಿಕ್‌ ಹಡಗು ಮುಳುಗಿದ ದಿನ ಪ್ರಯಾಣಿಕರು ತಿಂದಿದ್ದೇನು? 111 ವರ್ಷ ಹಳೆಯ ಮೆನು ವೈರಲ್

ಘಟನೆಯ ವಿವರ ಇಲ್ಲಿದೆ
ಅರ್ಪಿತ್ ಗುಪ್ತಾ ಅವರ ವಕೀಲ ನರೋತ್ತಮ್ ಸಿಂಗ್ ಹೇಳಿರುವ ಪ್ರಕಾರ, 'ಅರ್ಪಿತ್ ಗುಪ್ತಾ ತಮ್ಮ ಸ್ನೇಹಿತ ಸನ್ನಿ ಗಾರ್ಗ್ ಅವರೊಂದಿಗೆ ಏಪ್ರಿಲ್ 14 ರಂದು ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಹೋಟೆಲ್‌ಗೆ ಹೋಗಿದ್ದರು. ಅರ್ಪಿತ್ ವೆಜ್‌ ರೋಲ್‌ಗಾಗಿ ಆರ್ಡರ್ ಮಾಡಿದರು. ಆದರೆ ಸರ್ವ್‌ ಮಾಡಿದ ವೆಜ್‌ ರೋಲ್‌ನ ರುಚಿ ವಿಭಿನ್ನವಾಗಿರುವುದನ್ನು ಅರ್ಪಿತ್ ಗುರುತಿಸಿದರು. ಈ ಬಗ್ಗೆ ಹೊಟೇಲ್ ಸಿಬ್ಬಂದಿಯನ್ನು ಕೇಳಿದಾಗ ಚಿಕನ್ ರೋಲ್ ಸರ್ವ್ ಮಾಡಿರುವುದಾಗಿ ತಿಳಿದುಬಂತು. ಸಸ್ಯಾಹಾರಿಯಾಗಿರುವ ಅರ್ಪಿತ್ ಅವರು ಚಿಕನ್ ಸೇವಿಸಿರುವುದನ್ನು ಅರಿತು ವಾಂತಿ ಮಾಡಲು ಪ್ರಾರಂಭಿಸಿದರು ಮತ್ತು ಅವರ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಅಡ್ಮಿಟ್ ಮಾಡಬೇಕಾಯಿತು' ಎನ್ನಲಾಗಿದೆ.

ಹೋಟೆಲ್ ತನ್ನ ತಪ್ಪನ್ನು ಮರೆಮಾಚುವ ಸಲುವಾಗಿ ಊಟದ ಬಿಲ್ ಕೂಡ ನೀಡಿಲ್ಲ ಎಂದು ನರೋತ್ತಮ್ ಸಿಂಗ್ ಹೇಳಿಕೊಂಡಿದ್ದಾರೆ. ಅರ್ಪಿತ್ ಗುಪ್ತಾ ಘಟನೆಯ ಎಲ್ಲಾ ವಿವರಗಳನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಹೋಟೆಲ್‌ನಿಂದ ಕ್ಷಮೆಯಾಚಿಸುವುದು ಸಾಕಾಗುವುದಿಲ್ಲ. ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಹೋಟೆಲ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Health Tips : ಬೇಸಿಗೆಯಲ್ಲಿ ಬಿಸಿ ಬಿಸಿ ತಿನ್ನೋದು ಸ್ವಲ್ಪ ಕಡಿಮೆ ಮಾಡಿ

ಮತ್ತೊಂದೆಡೆ, ಹೋಟೆಲ್ ಆಡಳಿತವು ಇದು ತಾನು ಮಾಡಿದ ತಪ್ಪಿಗೆ ಅರ್ಪಿತ್ ಅವರಿಗೆ ಕ್ಷಮೆಯಾಚಿಸಿದೆ. ಕಾನೂನು ತಜ್ಞ ಮತ್ತು ಮಾಜಿ ಜಿಲ್ಲಾ ಸರ್ಕಾರಿ ವಕೀಲ ಅಶೋಕ್ ಗುಪ್ತಾ ಹೇಳುತ್ತಾರೆ, ಈ ರೀತಿಯ ಘಟನೆಗಳು ನಡೆದ ಸಂದರ್ಭಗಳಲ್ಲಿ, ಇದರಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಬಹುದು. ಹಾಗಾಗಿ ಆಹಾರ ಸುರಕ್ಷತಾ ಕಾಯ್ದೆ ಮತ್ತು ಕಲುಷಿತ ಆಹಾರವನ್ನು ಬಡಿಸುವ ಸೆಕ್ಷನ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಬಹುದು. ಇದು ಈ ತಪ್ಪಿಗಾಗಿ ಮೂರರಿಂದ ಹತ್ತು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ನೀಡುತ್ತದೆ.

click me!