ತೂಕ ಹೆಚ್ಚಳ ಇತ್ತೀಚಿನ ಕೆಲ ವರ್ಷಗಳಿಂದ ಹಲವರನ್ನು ಕಾಡುತ್ತಿರುವ ಸಮಸ್ಯೆ. ತೂಕವನ್ನು ಇಳಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡ್ತಾರೆ. ಆದ್ರೆ ಇಡ್ಲಿ-ಸಾಂಬಾರ್ ತಿಂದ್ಕೊಂಡು ಸುಲಭವಾಗಿ ತೂಕ ಕಳೆದುಕೊಳ್ಬೋದು ಅನ್ನೋ ವಿಷ್ಯ ನಿಮ್ಗೊತ್ತಾ ?
ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯೆಂದರೆ ತೂಕ ಹೆಚ್ಚಾಗುವುದು (Weight gain) ಮತ್ತು ಬೊಜ್ಜಿನ ಸಮಸ್ಯೆ. ಇದು ಕೇವಲ ಕಳಪೆ ಆಹಾರ ಪದ್ಧತಿ ಅಥವಾ ಜೀವನಶೈಲಿ (Lifestyle)ಯಿಂದ ಉಂಟಾಗುವುದಿಲ್ಲ. ಬದಲಿಗೆ ಔಷಧೀಯ ಅಡ್ಡಪರಿಣಾಮಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಲೂ ಸಂಭವಿಸಬಹುದು. ತೂಕವನ್ನು ಕಳೆದುಕೊಳ್ಳಲು ಜನರು ತಮ್ಮ ಜೀವನಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಲು ವಿಫಲರಾಗುತ್ತಾರೆ. ಹೀಗಾಗಿ ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗುತ್ತದೆ ಮತ್ತು ಬೊಜ್ಜಿನ ಸಮಸ್ಯೆ (Obesity) ಕಾಣಿಸಿಕೊಳ್ಳುತ್ತದೆ. ತೂಕವನ್ನು ಕಳಿಸಿಕೊಳ್ಳಲು ವಾಕಿಂಗ್, ವರ್ಕೌಟ್, ಡಯೆಟ್ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ವಿಧಾನವನ್ನು ಅನುಸರಿಸುತ್ತಾರೆ.
ತೂಕ ಇಳಿಸಿಕೊಳ್ಳೋಕೆ ಹೆಚ್ಚಿನವರು ಫಾಲೋ ಮಾಡೋದು ಡಯೆಟ್. ಇಷ್ಟವಾದ ಆಹಾರಗಳನ್ನೆಲ್ಲಾ ಬಿಟ್ಟು ಸೊಪ್ಪು ತರಕಾರಿ, ಹಣ್ಣುಗಳು, ಮೊಳಕೆಕಾಳುಗಳನ್ನು ತಿಂದು ಸಮಯ ಕಳೀತಾರೆ. ಇಷ್ಟವಾದ ತಿಂಡಿಗಳು ಕಣ್ಣೆದುರು ಇದ್ರೂ ತಿನ್ನೋ ಹಾಗಿರುವುದಿಲ್ಲ. ಆದ್ರೆ ಇಡ್ಲಿ ತಿಂದು ತೂಕ ಇಳಿಸಿಕೊಳ್ಬೋದು ಅನ್ನೋ ವಿಷ್ಯ ನಿಮ್ಗೊತ್ತಾ ?
Weight Loss Tips: ಬೇಗ ತೂಕ ಇಳಿಸ್ಕೋಬೇಕಾ, ಚಪಾತಿಗೆ ತುಪ್ಪ ಹಚ್ಕೊಂಡು ತಿನ್ನಿ ಸಾಕು
ಇಡ್ಲಿ-ಸಾಂಬಾರ್ ತಿಂದು ತೂಕ ಇಳಿಸ್ಕೊಳ್ಳಿ
ದಕ್ಷಿಣಭಾರತದ ಫೇಮಸ್ ತಿನಿಸಿ ಇಡ್ಲಿ-ಸಾಂಬಾರ್, ಜೊತೆಗೆ ಚಟ್ನಿ. ಎಲ್ಲಾ ಹೊಟೇಲ್‌ಗಳಲ್ಲೂ ಸಾಮಾನ್ಯವಾಗಿ ಏನಿಲ್ಲಾಂದ್ರೂ ಇಡ್ಲಿ ಸಾಂಬಾರ್ ಅಂತೂ ಇದ್ದೇ ಇರುತ್ತದೆ. ಬಿಸಿ ಬಿಸಿ ಇಡ್ಲಿಯನ್ನು ಸಾಂಬಾರಿನಲ್ಲಿ ಅದ್ದಿ ತಿಂದರೆ ಅದ್ಭುತ ರುಚಿ, ಸ್ವರ್ಗಕ್ಕೆ ಮೂರೇ ಗೇಣು. ಆದರೆ ಇದು ತೂಕ ಇಳಿಕೆಗೆ ಪರ್ಫೆಕ್ಟ್ ಕಾಂಬಿನೇಷನ್ ಅನ್ನೋದು ಕೂಡಾ ನಿಜ.
ಇಡ್ಲಿ ಸಾಂಬಾರ್ ಅನೇಕರ ನೆಚ್ಚಿನ ಉಪಾಹಾರಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದಲ್ಲಿ ಇಡ್ಲಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ತೆಂಗಿನಕಾಯಿ ಚಟ್ನಿ ಜೊತೆ ಇಡ್ಲಿ ಸವಿಯಲಾಗುತ್ತದೆ. ವಾಸ್ತವವಾಗಿ ಇಡ್ಲಿಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇಡ್ಲಿ ಮಾಡಲು ಅಕ್ಕಿ ಹೆಚ್ಚಾಗಿ ಬೇಕಾಗುತ್ತದೆ. ಆದರೆ ನೀವು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ತೆಗೆದುಕೊಳ್ಳಲು ಬಯಸಿದರೆ ನೀವು ಅಕ್ಕಿ ಪ್ರಮಾಣವನ್ನು ಕಡಿಮೆ ಮಾಡಬಹುದು ಮತ್ತು ಉದ್ದಿನ ಪ್ರಮಾಣವನ್ನು ಹೆಚ್ಚಿಸಬಹುದು. ಈ ಹಿಟ್ಟಿಗೆ ತರಕಾರಿಗಳು ಮತ್ತು ಆರೋಗ್ಯಕರ ಮಸಾಲೆಗಳನ್ನು ಕೂಡ ಸೇರಿಸಬಹುದು.
ಯಾವೆಲ್ಲಾ ಇಡ್ಲಿ ವೈಟ್ ಲಾಸ್‌ಗೆ ಒಳ್ಳೇದು: ಮಿನಪ್ಪು ಇಡ್ಲಿ ಮತ್ತು ಓಟ್ ಇಡ್ಲಿ ಕೂಡ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಓಟ್ಸ್ ಇಡ್ಲಿ ಸಾಂಪ್ರದಾಯಿಕ ಇಡ್ಲಿಗೆ ಆರೋಗ್ಯಕರ ಪರ್ಯಾಯವಾಗಿದೆ. ಓಟ್ಸ್ ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಅಲ್ಲದೆ ಫೈಬರ್ ಅಂಶವೂ ಅಧಿಕವಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ನಿಮ್ಮ ಹೊಟ್ಟೆಯು ಹೆಚ್ಚು ಕಾಲ ತುಂಬಿರುತ್ತದೆ. ಇದರಿಂದ ನೀವು ಅತಿಯಾಗಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುವುದಿಲ್ಲ.
Blood Type Diet: ಬ್ಲಡ್ ಗ್ರೂಪ್‌ಗೆ ತಕ್ಕಂತೆ ಡಯೆಟ್ ಮಾಡಿದ್ರೆ ಬೇಗ ತೂಕ ಇಳಿಯುತ್ತೆ
ಹುದುಗಿಸಿದ ಹಿಟ್ಟಿನಿಂದ ಇಡ್ಲಿಗಳನ್ನು ತಯಾರಿಸಲಾಗುತ್ತದೆ. ಹುದುಗಿಸಿದ ಆಹಾರವನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿನ ಜೀವಸತ್ವಗಳು ಮತ್ತು ಖನಿಜಗಳು ಒಡೆಯುತ್ತವೆ. ಅಲ್ಲದೆ ಜೀರ್ಣಕ್ರಿಯೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, ಹುದುಗಿಸಿದ ಆಹಾರಗಳಲ್ಲಿ ಇರುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಕರುಳಿನಲ್ಲಿನ pH ಸಮತೋಲನವನ್ನು ಬದಲಾಯಿಸುತ್ತದೆ. ಇದು ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯದೊಂದಿಗೆ ಸಂಬಂಧಿಸಿದೆ ಎಂದು ತಜ್ಞರು ಹೇಳುತ್ತಾರೆ.
ತೂಕನಷ್ಟಕ್ಕೆ ಸಾಂಬಾರ್ : ತೂಕನಷ್ಟಕ್ಕೆ ಸಂಬಂಧಿಸಿದಂರೆ ಸಾಂಬಾರ್ ಬಗ್ಗೆ ಹೇಳುವುದಾದರೆ, ಇದು ಪ್ರೋಟೀನ್‌ಗಳು, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಾತ್ರವಲ್ಲ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ನೀವು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಸಾಂಬಾರ್‌ಗೆ ಹೆಚ್ಚಿನ ತರಕಾರಿಗಳನ್ನು ಸೇರಿಸಿ. ಅಲ್ಲದೆ, ನಿಮ್ಮ ದೇಹದಲ್ಲಿ ಕಾರ್ಬೋಹೈಡ್ರೇಟ್‌ಗಳು ಸಂಗ್ರಹವಾಗುವುದನ್ನು ತಡೆಯಲು ಇಡ್ಲಿ ಹಿಟ್ಟಿಗೆ ಸ್ವಲ್ಪ ಸಿಟ್ರಸ್ ರಸವನ್ನು ಸೇರಿಸಲು ತಜ್ಞರು ಸಲಹೆ ನೀಡುತ್ತಾರೆ.