ದಿನದ ಉತ್ತಮ ಆರಂಭಕ್ಕೆ ಬೆಳಗಿನ ಉಪಾಹಾರ ತುಂಬಾ ಮುಖ್ಯ. ಬೆಳಗ್ಗಿನ ಉಪಾಹಾರ ದಿನವಿಡೀ ನಿಮಗೆ ಚಟುವಟಿಕೆಯಿಂದಿರಲು ದೇಹಕ್ಕೆ ಶಕ್ತಿಯನ್ನು ನೀಡುತ್ತೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಆದ್ರೆ ಭಾರತದಲ್ಲಿ ಹಿಂದಿನ ಕಾಲದಲ್ಲಿ ನಾಷ್ಟಾ ಮಾಡೋ ಅಭ್ಯಾಸ ಇರಲ್ಲಿಲ್ಲ ಅನ್ನೋ ವಿಷ್ಯ ನಿಮ್ಗೊತ್ತಾ ? ಹಾಗಿದ್ರೆ ಬ್ರೇಕ್‌ಫಾಸ್ಟ್ ತಿನ್ನೋ ಅಭ್ಯಾಸ ಯಾವತ್ತಿಂದ ಶುರುವಾಯ್ತು ?
ಆರೋಗ್ಯವಾಗಿರಲು ಸಮರ್ಪಕ ರೀತಿಯಲ್ಲಿ ಆಹಾರ (Food) ತಿನ್ನುವುದು ತುಂಬಾ ಮುಖ್ಯ. ಹೆಲ್ದೀಯಾಗಿರಲು ಬೆಳಗ್ಗಿನ ಉಪಾಹಾರ, ಮಧ್ಯಾಹ್ನ, ರಾತ್ರಿ ಸರಿಯಾದ ಪ್ರಮಾಣದಲ್ಲಿ ಊಟ ಮಾಡಬೇಕು. ಬೆಳಗಿನ ಬ್ರೇಕ್ ಫಾಸ್ಟ್ ಪ್ರತಿಯೊಬ್ಬರಿಗೂ ಎಷ್ಟೊಂದು ಮುಖ್ಯ ಅನ್ನೋದು ನಿಮಗೆ ಗೊತ್ತೆ ಇದೆ. ಅದರಲ್ಲೂ ಉತ್ತಮ ಉಪಾಹಾರವು ಆರೋಗ್ಯಕ್ಕೆ (Health) ತುಂಬಾನೇ ಪ್ರಯೋಜನಕಾರಿ. ಆದರೆ, ಇಂದಿನ ಫಾಸ್ಟ್ ಜೀವನಶೈಲಿಯಿಂದಾಗಿ, ನಾವು ಏನು ತಿನ್ನಬೇಕು ಮತ್ತು ಬೆಳಿಗ್ಗೆ (Morning) ಏನು ತಿನ್ನಬಾರದು ಎಂಬುದರ ಬಗ್ಗೆ ಯೋಚಿಸಲು ಜನರಿಗೆ ಸಮಯವಿಲ್ಲ. ಮಾತ್ರವಲ್ಲ ಹಿಂದಿನ ಕಾಲದಲ್ಲಿ ಬ್ರೇಕ್‌ಫಾಸ್ಟ್ ಮಾಡೋ ಅಭ್ಯಾಸನೇ (Habit) ಇರಲ್ಲಿಲ್ಲ ಅನ್ನೋ ವಿಷ್ಯ ನಿಮ್ಗೊತ್ತಾ ?
ಉಪಾಹಾರದ ಪರಿಕಲ್ಪನೆಯು ಭಾರತಕ್ಕೆ ಹೇಗೆ ಬಂತು ?
ಪ್ರತಿದಿನ ಬೆಳಗ್ಗೆ ನಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ವಿಷಯವೆಂದರೆ ತಿಂಡಿಗೆ ಏನು ಮಾಡೋದು ಅನ್ನೋದು. ಬೆಳಗ್ಗೆದ್ದು ಬ್ರೇಕ್‌ಫಾಸ್ಟ್, ಮಧ್ಯಾಹ್ನ ಲಂಚ್, ರಾತ್ರಿಗೆ ಡಿನ್ನರ್ ಮಾಡೋದು ಮನುಷ್ಯನ ಸಾಮಾನ್ಯ ಆಹಾರಕ್ರಮ. ಆದರೆ ಇಂದು ಎಲ್ಲರೂ ಅನುಸರಿಸುವಂತೆ ಬೆಳಗ್ಗಿನ ನಾಷ್ಟಾ ಹಿಂದಿನಿಂದಲೂ ಭಾರತದಲ್ಲಿ ರೂಢಿಯಲ್ಲಿರಲ್ಲಿಲ್ಲ. ಬೆಳಗ್ಗಿನ ಉಪಾಹಾರ ಭಾರತದ ಸಂಸ್ಕೃತಿಯ ಭಾಗವಾಗಿರಲ್ಲಿಲ್ಲ.
Healthy Lifestyle: ತಿಂಡಿಗೆ ಬ್ರೆಡ್, ಬಿಸ್ಕತ್ ತಿಂತೀರಾ? ಬೇಡ, ಇವತ್ತೇ ಬಿಟ್ಬಿಡಿ
14ನೇ ಶತಮಾನದವರೆಗೆ, ಭಾರತದಲ್ಲಿ ಮುಂಜಾನೆ ಬ್ರೇಕ್‌ಫಾಸ್ಟ್ ಮಾಡುವ ಅಭ್ಯಾಸ ಸಾಮಾನ್ಯವಾಗಿರಲಿಲ್ಲ. ಅಲ್ಲಿಯವರೆಗೆ ಮಧ್ಯಾಹ್ನ ಮಾತ್ರ ಜನರು ಆಹಾರವನ್ನು ಸೇವಿಸುತ್ತಿದ್ದರು. ರಾತ್ರಿಯ ಹೊತ್ತು ಊಟ ಮಾಡಲಾಗುತ್ತಿತ್ತು. ಆದರೆ ಇದು ಮಧ್ಯಾಹ್ನದ ಊಟಕ್ಕಿಂತ ಲಘು ಆಹಾರವಾಗಿರುತ್ತಿತ್ತು. ಜನಸಂಖ್ಯೆಯು ಪ್ರಾಥಮಿಕವಾಗಿ ಭೂ- ಮಾಲೀಕರಾದ ರೈತರು ಮತ್ತು ಸಂಗ್ರಹಕಾರರನ್ನು ಒಳಗೊಂಡಿರುವುದರಿಂದ, ಈ ವಿಧಾನವು ಅವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು.
ಉಪಾಹಾರದ ಪರಿಚಯ ಆರಂಭವಾಗಿದ್ದು ಯಾವಾಗ ?
ರಾಷ್ಟ್ರದಲ್ಲಿ ಕೃಷಿಯನ್ನು ಹೊರತುಪಡಿಸಿ ಉಳಿದ ಉದ್ಯೋಗದ ಆಗಮನದೊಂದಿಗೆ, ಆಹಾರಕ್ರಮಗಳು ಸಹ ಬದಲಾಗಲಾರಂಭಿಸಿದವು. ಕಚೇರಿ ಅಥವಾ ಗಿರಣಿಗಳಲ್ಲಿ ಕೆಲಸ ಮಾಡುವ ಜನರು ಮುಂಜಾನೆ ಲಘು ಉಪಾಹಾರಕ್ಕಾಗಿ ಸಮಯವನ್ನು ನಿಗದಿ ಮಾಡಲು ಪ್ರಾರಂಭಿಸಿದರು. ಇದು ಮೊದಲು ಮಕ್ಕಳು, ವೃದ್ಧರು ಮತ್ತು ರೋಗಿಗಳಿಗೆ ಮಾತ್ರ ಇತ್ತು. 17ನೇ ಶತಮಾನದಲ್ಲಿ ಯುರೋಪ್, ಕಾಫಿ, ಚಹಾ ಮತ್ತು ಚಾಕೊಲೇಟ್‌ನ್ನು ಕಂಡುಹಿಡಿದ ನಂತರ, 19 ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತಕ್ಕೆ ತನ್ನ ದಂಡಯಾತ್ರೆಯನ್ನು ಮಾಡುವ ಹೊತ್ತಿಗೆ, ಅವರು ತಮ್ಮೊಂದಿಗೆ ಉಪಹಾರದ ಪರಿಕಲ್ಪನೆಯನ್ನು ತಂದರು. ಕೈಗಾರಿಕಾ ಕ್ರಾಂತಿಯ ಯುಗದಲ್ಲಿ ಜನರು ತಮ್ಮ ದಿನವನ್ನು ಕಳೆಯುವ ಮೊದಲು ಉಪಹಾರಕ್ಕಾಗಿ ಟೇಬಲ್‌ನಲ್ಲಿ ಸೇರುತ್ತಿದ್ದರು. ಬ್ರೇಕ್‌ಫಾಸ್ಟ್ ಅಭ್ಯಾಸ ಆರಂಭವಾದ ಬೆನ್ನಲ್ಲೇ ರೆಡಿ-ಟು-ಈಟ್ ಬ್ರೇಕ್‌ಫಾಸ್ಟ್ ಐಟಂಗಳ ವಾಣಿಜ್ಯೀಕರಣದ ಯುಗವು ಪ್ರಾರಂಭವಾಯಿತು.
ಬ್ರೇಕ್‌ಫಾಸ್ಟ್‌ಗೆ ಭಾರತೀಯ ಉಪಾಹಾರ
ಬ್ರೇಕ್‌ಫಾಸ್ಟ್ ಪದ್ಧತಿ ಆರಂಭವಾದ ನಂತರ ಜನರು ಸ್ಥಳೀಯವಾಗಿ ಆಹಾರ ತಯಾರಿಸಿ ನಾಷ್ಟಾ ಮಾಡಲು ಶುರು ಮಾಡಿದರು. ಉತ್ತರದಲ್ಲಿ, ಪೋಹಾ, ಪರೋಟಾ, ಸೂಜಿ ಕಾ ಹಲ್ವಾ, ಉಪ್ಮಾ, ಪೂರಿ-ಸಬ್ಜಿ, ಸಮೋಸಾ, ಚೋಲೆ ಭಾತುರೆ, ಧೋಕ್ಲಾ, ಕಚೋರಿ, ಚೀಲಾ ಇತ್ಯಾದಿಗಳು ಬೆಳಗಿನ ಉಪಾಹಾರದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ದಕ್ಷಿಣದಲ್ಲಿ, ಇಡ್ಲಿ, ವಡಾ, ದೋಸೆ, ಉಪ್ಮಾ, ಇತ್ಯಾದಿಗಳನ್ನು ಚಟ್ನಿ, ಸಾಂಬಾರ್ ಜೊತೆ ಬೆಳಗ್ಗೆ ಸವಿಯಲು ಆರಂಭಿಸಿದರು. ಶೀರಾ, ಬಜ್ಜಿ ಮೊದಲಾದವುಗಳನ್ನು ಸಹ ಬ್ರೇಕ್‌ಫಾಸ್ಟ್‌ಗೆ ಸವಿಯಲಾಗುತ್ತದೆ.
ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡೋ ಮಕ್ಕಳ ಅಭ್ಯಾಸ ಖಿನ್ನತೆಗೆ ಕಾರಣವಾಗ್ಬೋದು!
ಬ್ರೇಕ್‌ಫಾಸ್ಟ್‌ಗೆ ಕಾರ್ನ್‌ಫ್ಲೇಕ್ಸ್ ಮತ್ತು ಓಟ್ಸ್
ಹಿಂದೆಲ್ಲಾ ಬೆಳಗ್ಗಿನ ಉಪಾಹಾರ ಮಾಡುವ ಆಹಾರಪದ್ಧತಿ ಇರಲ್ಲಿಲ್ಲವಲ್ಲ. ಹೀಗಾಗಿಯೇ ಬೆಳಗ್ಗಿಗೆ ತಿಂಡಿಯೇನು ತಯಾರಿಸುವುದು ಎಂಬುದು ಹಲವರಿಗೆ ತಲೆನೋವಾಗಿ (Headache) ಪರಿಣಮಿಸಿತು. ಹೀಗಾಗಿ ಕಡಿಮೆ ಸಮಯ ತೆಗೆದುಕೊಳ್ಳುವ ಬ್ರೆಡ್ ಟೋಸ್ಟ್, ಕಾರ್ನ್‌ಫ್ಲೇಕ್‌ಗಳು ಮತ್ತು ಹಾಲು, ಓಟ್ಸ್ ಅಥವಾ ಪಾಸ್ತಾ ಮೊದಲಾದವುಗಳು ಈಗ ಮುಖ್ಯ ಬ್ರೇಕ್‌ಫಾಸ್ಟ್ ಆಗಿ ಬದಲಾಗಿವೆ. ಈ ಬ್ರೇಕ್‌ಫಾಸ್ಟ್ ಆಯ್ಕೆಗಳು ಬ್ಯುಸಿಯಾಗಿರುವ ಬೆಳಗಿನ ಸಮಯದಲ್ಲಿ ತಯಾರಿಸಲು ತುಂಬಾ ಸುಲಭವಾಗಿವೆ ಮತ್ತು ಅವುಗಳು ಸಾಕಷ್ಟು ಪೌಷ್ಟಿಕವಾಗಿದೆ.
ಸ್ಥಳೀಯ ವಿಧಾನದಲ್ಲಿ ರೆಡಿ ಟು ಈಟ್ ಫುಡ್
ಕೇವಲ ವಿದೇಶಿ ಆಹಾರಕ್ರಮಗಳು ಮಾತ್ರವಲ್ಲ ಸ್ವದೇಶಿ ಆಹಾರಗಳು ಸಹ ಇತ್ತೀಚಿನ ವರ್ಷಗಳಲ್ಲಿ ರೆಡಿ ಟು ಈಟ್ ರೀತಿ ತಿನ್ನಲು ಲಭ್ಯವಿದೆ. ಗೋಧಿ, ರಾಗಿ, ಜೋಳ ಮೊದಲಾದ ಸಿರಿ ಧಾನ್ಯ (Grains)ಗಳಿಂದ ತಯಾರಿಸಿದ ರೋಟಿ, ಚಪಾತಿಗಳು ಹಲವೆಡೆ ಸಿಗುತ್ತವೆ. ಭಾರತೀಯರು ಯಾವಾಗಲೂ ಸಾಂಪ್ರದಾಯಿಕ ಆಹಾರಗಳನ್ನು ಇಷ್ಟಪಡುತ್ತಾರೆ. ಹೀಗಾಗಿಯೇ ಇಂಥವುಗಳು ರೆಡಿ ಟು ಈಟ್‌ನಲ್ಲಿ ಸಿಕ್ಕಾಗ ಹೆಚ್ಚು ಅನುಕೂಲವಾಗಿರುತ್ತಾರೆ.