ಪ್ರಪಂಚದಲ್ಲಿ ಚಿತ್ರ-ವಿಚಿತ್ರ ಆಹಾರಪದ್ಧತಿಗಳಿವೆ. ಕೆಲವೊಂದು ಆಹಾರಗಳು ಅದೆಷ್ಟು ವಿಚಿತ್ರವಾಗಿದೆಯೆಂದರೆ ಇದನ್ನೆಲ್ಲಾ ತಿನ್ತಾರಪ್ಪಾ ಅಂತ ಗಾಬರಿಯಾಗುತ್ತೆ. ಹಾಗೆಯೇ ಸದ್ಯ ತೈವಾನೀಸ್ ರೆಸ್ಟೋರೆಂಟ್‌ವೊಂದು ಸರ್ವ್ ಮಾಡಿರೋ ಆಹಾರ ನೋಡಿದ್ರೆ ತಲೆ ಸುತ್ತಿ ಬೀಳೋದೊಂದೇ ಬಾಕಿ.
ಹೊಟೇಲ್, ರೆಸ್ಟೋರೆಂಟ್‌ಗಳು ತಮ್ಮ ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡಲು ಇನ್ನಿಲ್ಲದ ಸರ್ಕಸ್ ಮಾಡುತ್ತವೆ. ಹೊಸ ಹೊಸ ಡಿಶ್‌ಗಳನ್ನು ಪರಿಚಯಿಸುವುದರ ಜೊತೆಗೆ, ವಿಭಿನ್ನ ರೀತಿಯಲ್ಲಿ ಫುಡ್ ಸರ್ವ್ ಮಾಡೋ ಮೂಲಕ ಡಿಫರೆಂಟ್ ಆಗಿ ಗಮನ ಸೆಳೆಯಲು ಯತ್ನಿಸುತ್ತವೆ. ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು ಬೇಕಾದ ಎಲ್ಲಾ ತಂತ್ರಗಳನ್ನು ಹೊಟೇಲ್, ರೆಸ್ಟೋರೆಂಟ್‌ಗಳು ಫಾಲೋ ಮಾಡುತ್ತವೆ. ಹಾಗೆಯೇ ಇತ್ತೀಚಿಗೆ ತೈವಾನ್‌ನ ಸ್ಥಳೀಯ ರೆಸ್ಟೋರೆಂಟ್‌ವೊಂದು ತನ್ನ ವಿಚಿತ್ರ ಖಾದ್ಯದಿಂದಾಗಿ ವಿಶ್ವದಾದ್ಯಂತ ಗಮನ ಸೆಳೆದಿದೆ. ಈ ವಿಚಿತ್ರ ಡಿಶ್‌ನ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಮೊಸಳೆಯ ಕಾಲಿನ ಸೂಪ್ ಫೋಟೋ ವೈರಲ್
ಅಂಗಡಿಯು ಮೊಸಳೆಯ ಕಾಲಿನ ಸೂಪ್ (Crocodile leg Soup) ಬೌಲ್‌ನ್ನು ಗ್ರಾಹಕರಿಗೆ ಸರ್ವ್ ಮಾಡಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. ಕೇಳುವಾಗ ಸ್ಪಲ್ಪ ವಿಚಿತ್ರ ಅಂತಾನೆ ಅನ್ಸುತ್ತೆ. ಆ ಸೂಪ್‌ನ್ನು ನೋಡಿದ್ರೆ ನೀವಿನ್ನೂ ಗಾಬರಿಯಾಗ್ತೀರಿ. ತೈವಾನೀಸ್ ರೆಸ್ಟೋರೆಂಟ್, ನು ವು ಮಾವೋ ಕುಯಿ ಈ ಹೊಸ ಡಿಶ್‌ನ್ನು ಪರಿಚಯಿಸಿದೆ. ಗಾಡ್ಜಿಲ್ಲಾ ರಾಮೆನ್ ಎಂಬ ತಮ್ಮ ಹೊಸ ಖಾದ್ಯವನ್ನು (Special dish) ಒಳಗೊಂಡ ಹಲವಾರು ವೀಡಿಯೊಗಳನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. ಪೋಸ್ಟ್‌ನಲ್ಲಿ, ಈ ಮೊಸಳೆಯ ಕಾಲಿನ ಸೂಪ್‌ನ ಫೋಟೋವಿದೆ. ಜೊತೆಗೆ ಯುವತಿಯೊಬ್ಬಳು (Girl) ಈ ಡಿಫರೆಂಟ್ ಸೂಪ್ ಸವಿಯುವ ಫೋಟೋವನ್ನು ಹಂಚಿಕೊಳಲಾಗಿದೆ.
ಯಪ್ಪಾ.ಏನ್ ಜನಾನಪ್ಪ..ಇಲಿಯನ್ನೂ ಬಿಡದೆ ಫ್ರೈ ಮಾಡಿ ತಿನ್ತಾರಲ್ಲಾ!
ಖಾದ್ಯವು ಪೂರ್ವ ಆರ್ಡರ್‌ಗೆ ಮಾತ್ರ ಲಭ್ಯವಿದೆ ಎಂದು ರೆಸ್ಟೋರೆಂಟ್ ತನ್ನ ಪೋಸ್ಟ್‌ನಲ್ಲಿ ವಿವರಿಸಿದೆ. ಮೊಸಳೆ ಕಾಲಿನ ಸೂಪ್ ಕುಡಿಯಲು ಇಷ್ಟಪಡದವರಿಗೆ ಇತರ ಹಲವು ರೀತಿಯ ಸೂಪ್ ಸಹ ಲಭ್ಯವಿದೆ ಎಂದು ತಿಳಿಸಲಾಗಿದೆ. ಫೇಸ್‌ಬುಕ್‌ನಲ್ಲಿ ರೆಸ್ಟೋರೆಂಟ್ ಹಂಚಿಕೊಂಡ ವೀಡಿಯೊದಲ್ಲಿ ಯುವತಿಯೊಬ್ಬಳು ಹೊಸ ಡಿಶ್‌ನ್ನು ಖುಷಿಯಿಂದ ಆಸ್ವಾದಿಸುತ್ತಿರುವುದನ್ನು ನೋಡಬಹುದು. ಮೊಸಳೆ ಕಾಲಿನೊಂದಿಗೆ ಖಾದ್ಯವನ್ನು ಪ್ರಯತ್ನಿಸಲು ಇಷ್ಟಪಡದವರಿಗೆ ತಿನಿಸು ಇತರ ರೀತಿಯ ಸೂಪ್‌ಗಳನ್ನು ಸಹ ನೀಡುತ್ತದೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ..
ವಿಡಿಯೋದಲ್ಲಿ ಯುವತಿ, ದೊಡ್ಡ ಬೌಲ್‌ನಿಂದ ಸೂಪ್ ಸವಿಯುತ್ತಿರುತ್ತಾಳೆ. ಅವಳು ಮೊದಲು ಮೊಸಳೆಯ ಕಾಲನ್ನು ಬದಿಗಿಟ್ಟು ಭಕ್ಷ್ಯದಲ್ಲಿರುವ ರಾಮೆನ್ ಮತ್ತು ಇತರ ಪದಾರ್ಥಗಳನ್ನು ಪ್ರಯತ್ನಿಸುತ್ತಾಳೆ. ಮುಗಿದ ನಂತರ, ಅವಳು ಭಕ್ಷ್ಯದ ಮುಖ್ಯ ಆಕರ್ಷಣೆಯನ್ನು ಪ್ರಯತ್ನಿಸಲು ಮುಂದುವರಿಯುತ್ತಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Food Habits in World: ಹಸುವಿನ ರಕ್ತ, ಕೊಳೆತ ಶಾರ್ಕ್ ಮಾಂಸ… ಅಬ್ಬಬ್ಬಾ, ಏನೆಲ್ಲ ತಿಂತಾರೆ ಗೊತ್ತಾ
40 ಮಸಾಲೆ ಸೇರಿಸಿ ಸಿದ್ಧಪಡಿಸೋ ಸ್ಪೆಷಲ್ ಡಿಶ್ ಸಖತ್ ಫೇಮಸ್
ಈ ಮೊಸಳೆ ಕಾಲಿನ ಸೂಪ್ ಮೊಟ್ಟೆ, ಬೇಬಿ ಕಾರ್ನ್, ಬಿದಿರಿನ ಚಿಗುರುಗಳು ಮತ್ತು ಪ್ರಮುಖ ಆಕರ್ಷಣೆಯಂತಹ ಸಾಮಾನ್ಯ ಮೇಲೋಗರಗಳನ್ನು ಒಳಗೊಂಡಿದೆ. ಮೊಸಳೆ ಕಾಲಿನ ಈ ವಿಶೇಷ ಭಕ್ಷ್ಯವನ್ನು 40 ವಿವಿಧ ಮಸಾಲೆಗಳನ್ನು (Spice) ಸೇರಿಸಿ ಸಿದ್ಧಪಡಿಸಲಾಗಿದೆ. ಪ್ರತಿ ಬೌಲ್‌ಗೆ 1,500 ಹೊಸ ತೈವಾನ್ ಡಾಲರ್ ಅಂದ್ರೆ ಭಾರತದ ನಾಲ್ಕು ಸಾವಿರ ರೂ. ಆಗಿದೆ. ಈ ರುಚಿಕರ ಸೂಪ್ ಆಹಾರ ಪ್ರಿಯರ ಮಧ್ಯೆ 'ಗಾಡ್ಜಿಲ್ಲಾ ರಾಮೆನ್' ಎಂಬ ಅಡ್ಡಹೆಸರನ್ನು ಗಳಿಸಿದೆ.ನೆಟಿಜನ್‌ಗಳು ಖಾದ್ಯದ ಬಗ್ಗೆ ಮಿಶ್ರ ಭಾವನೆಯನ್ನು ಹೊಂದಿದ್ದಾರೆ.
ರೆಸ್ಟೋರೆಂಟ್ ಮಾಲೀಕರ ಪ್ರಕಾರ, ಸೂಪ್‌ಗೆ ಮೊಸಳೆಗಳನ್ನು ಟೈಟಂಗ್‌ನ ಫಾರ್ಮ್‌ನಿಂದ ಪಡೆಯಲಾಗಿದೆ. ನೋಡಲು ಭಯವನ್ನು ಹುಟ್ಟುಹಾಕುತ್ತಿದ್ದರೂ ಸದ್ಯ ಈ ಸೂಪ್ ಸ್ಥಳೀಯವಾಗಿ ಹೆಚ್ಚು ಫೇಮಸ್ ಆಗಿದೆ. ರೆಸ್ಟೋರೆಂಟ್‌ನ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ಇಷ್ಟು ಭೀಕರವಾದುದ್ದನ್ನು ತಿನ್ನುವುದು ಹೇಗೆ' ಎಂದಿದ್ದಾರೆ. ಮತ್ತೊಬ್ಬರು 'ಇಂಥಾ ಆಹಾರಗಳನ್ನು ತಿನ್ನುವುದು ಅನಿವಾರ್ಯವೇ' ಎಂದು ಪ್ರಶ್ನಿಸಿದ್ದಾರೆ.