ವಂದೇ ಭಾರತ ರೈಲಿನ ಆಹಾರದಲ್ಲಿ ಕೆಟ್ಟ ವಾಸನೆ: ಪ್ರಯಾಣಿಕರಿಂದ ತರಾಟೆ: ವೀಡಿಯೋ ವೈರಲ್

By Anusha Kb  |  First Published Jun 29, 2023, 6:04 PM IST

ವಂದೇ ಭಾರತ್ ರೈಲಿನಲ್ಲಿ ನೀಡಿದ ಆಹಾರ ಕೆಟ್ಟು ಹೋಗಿದೆ ಎಂದು ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 


ವಂದೇ ಭಾರತ್ ರೈಲಿನಲ್ಲಿ ನೀಡಿದ ಆಹಾರ ಕೆಟ್ಟು ಹೋಗಿದೆ ಎಂದು ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ವೀಡಿಯೋದಲ್ಲಿ ಮಹಿಳೆಯರು ಹಾಗೂ ಇತರ ಪ್ರಯಾಣಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಇದು ಯಾವ ಜಾಲದ ರೈಲ್ವೆಯಲ್ಲಿ ನಡೆದ ಘಟನೆ ಎಂಬ ಬಗ್ಗೆ ವೀಡಿಯೋದಲ್ಲಿ ಎಲ್ಲೂ ಉಲ್ಲೇಖವಿಲ್ಲ, ವೀಡಿಯೋ ಪೋಸ್ಟ್ ಮಾಡಿದವರು 'ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನೀಡಿದ ಆಹಾರದಲ್ಲಿ ಕೊಳೆತ ವಾಸನೆ, ಹೊಸ ಯೋಜನೆಗಳನ್ನು ಉದ್ಘಾಟಿಸುವುದು ಸುಲಭ, ಆದರೆ ಭರವಸೆ ನೀಡಿದಂತೆ ಗುಣಮಟ್ಟ ಕಾಯ್ದುಕೊಳ್ಳುವುದು  ಕಷ್ಟದ ಕೆಲಸ' ಎಂದು ಬರೆದುಕೊಂಡಿದ್ದಾರೆ ಅಲ್ಲದೇ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ (Ashwin vaishnav)ಅವರಿಗೆ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು,  ರೈಲ್ವೆಯ ಕೇಟರಿಂಗ್ ಸರ್ವಿಸ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಲವರು ಆರೋಪಿಸಿದ್ದಾರೆ.  ಮತ್ತೆ ಕೆಲವರು ಐಆರ್‌ಸಿಟಿಸಿಯ ಕೆಟರಿಂಗ್ ಸರ್ವೀಸ್‌ನ್ನು ಬಂದ್ ಮಾಡುವ ಸಮಯ ಬಂದಿದೆ ಎಂದು ಟೀಕಿಸಿದ್ದಾರೆ. 

ವೀಡಿಯೋದ ಹಿನ್ನೆಲೆಯಲ್ಲಿ ಒಬ್ಬರು ಮಾತನಾಡುತ್ತಿದ್ದು, ವಂದೇ ಭಾರತ್ ರೈಲಿನಲ್ಲಿ ನೀಡಿದ ಆಹಾರವನ್ನು ಪ್ರಯಾಣಿಕರು ವಾಪಸ್ ನೀಡುತ್ತಿದ್ದಾರೆ. ಏಕೆಂದರೆ ತಿನ್ನಲು ಸಾಧ್ಯವಾಗದ ಸ್ಥಿತಿಯಲ್ಲಿ ಈ ಆಹಾರವಿದೆ ಎಂದು ಒಬ್ಬರು ಹೇಳುತ್ತಿದ್ದಾರೆ. ವಂದೇ ಭಾರತ್‌ನ (Vande Bharat) ಆಹಾರ ವಿಭಾಗದ ಸೇವೆಯೂ ಬಹಳ ಕೆಟ್ಟದಾಗಿದೆ. ಈ ರೀತಿಯ ಆಹಾರ ತಿಂದು ಆರೋಗ್ಯ ಹದಗೆಟ್ಟರೇ ಜವಾಬ್ದಾರಿ ಯಾರು ಎಂದು ಮಹಿಳೆಯೊಬ್ಬರು ಆಹಾರ (Food) ಪೂರೈಕೆ ಮಾಡಿದ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಆಹಾರ ಕೆಟ್ಟದಾದ ಕಾರಣಕ್ಕೆ ಪ್ರಯಾಣಿಕರೆಲ್ಲಾ ತಿರುಗಿ ಬಿದ್ದಿದ್ದು, ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Latest Videos

undefined

ಎರಡೇ ತಾಸಿ​ನಲ್ಲಿ ಅರ​ಸೀ​ಕೆರೆ ತಲು​ಪಿದ ವಂದೇ ಭಾರತ್‌ ಎಕ್ಸ್‌​ಪ್ರೆ​ಸ್‌ ರೈಲು..!

ರೈಲ್ವೆ ಇಲಾಖೆ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ,  ವೇಗವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ತಲುಪುವುದಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಚಾಲನೆಗೆ ತಂದಿದ್ದು, ಒಂದಲ್ಲ ಒಂದು ಕಾರಣಕ್ಕೆ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸುದ್ದಿಯಾಗುತ್ತಿದೆ.  ಚಾಲನೆ ನೀಡಿದ ಆರಂಭದಲ್ಲಿ ಹಸುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗ ನಜ್ಜುಗುಜ್ಜಾಗಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದಾದ ನಂತರ ಕೆಲವೆಡೆ ಕಿಡಿಗೇಡಿಗಳು ರೈಲಿನ ಮೇಲೆ ಕಲ್ಲೆಸೆದು ಹಾನಿ ಮಾಡಿದ್ದರು. ಈಗ ಆಹಾರದ ವಿಚಾರಕ್ಕೆ ವಂದೇ ಭಾರತ್ ಸುದ್ದಿಯಾಗಿದೆ. 

ವಂದೇ ಭಾರತ್ ರೈಲು ಅತ್ಯಾಧುನಿಕ ಗುಣಮಟ್ಟದ ರೈಲಾಗಿದ್ದು, ಇದರ ಒಳಾಂಗಣದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದರ ಜೊತೆಗೆ ಇದರ ವೇಗದ ಚಾಲನೆಯಿಂದ ಸಮಯದ ಉಳಿತಾಯವೂ ಆಗುತ್ತಿದೆ. 

ಬೆಂಗಳೂರಿನಿಂದ ಕೇವಲ 6 ಗಂಟೆಗಳಲ್ಲಿ ಧಾರವಾಡ ತಲುಪಿದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು

Pungent smell from food served on .

Flagging off is easy, but maintaining quality as promised is not easy. pic.twitter.com/Iw8XTyW1eE

— Брат (@B5001001101)

 

click me!