ಆನ್‌ಲೈನ್ ಫುಡ್ ಡೆಲಿವರಿ ಬಾಯ್ಸ್ ಅಂದ್ರೆ ಎಲ್ಲರೂ ಅವರನ್ನು ಅಸಡ್ಡೆಯಿಂದ ನೋಡುವುದೇ ಹೆಚ್ಚು. ಆದ್ರೆ ಅವರ ಜೀವನವೂ ಅದೆಷ್ಟೋ ಕಷ್ಟಕರವಾಗಿರುತ್ತದೆ. ಹೊತ್ತಿನ ತುತ್ತಿಗಾಗಿ ಅವರೂ ಸಹ ಒದ್ದಾಡುತ್ತಿರುತ್ತಾರೆ. ಅಂಥಹದ್ದೇ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳು ಬಂದಾಗಿನಿಂದ ಜನಜೀವನ ಇನ್ನಷ್ಟು ಸುಲಭವಾಗಿದೆ. ಅಡುಗೆ ಮಾಡುವ ಕಷ್ಟವಿಲ್ಲ. ಊಟದ ಹೊತ್ತಿಗೆ ಸರಿಯಾಗಿ ಏನು ತಿನ್ಬೇಕು ಅಂತ ಅನಿಸುತ್ತದೆಯೋ ಅದನ್ನು ಆರ್ಡರ್ ಮಾಡಿದರಾಯಿತು. ಕೆಲವೇ ಹೊತ್ತಿನಲ್ಲಿ ಆರ್ಡರ್ ಡೋರ್ ಮುಂದೆಯಿರುತ್ತದೆ. ಮಳೆ ಬರ್ತಿದ್ರೆ ಬಜ್ಜಿ, ಬೋಂಡಾ, ಪಾರ್ಟಿ ಅಂದ್ರೆ ಪಿಜ್ಜಾ, ವೀಕೆಂಡ್ ಅಂದ್ರೆ ಬಿರಿಯಾನಿ, ಕೋಲ್ಡ್ ಏನೋ ತಿನ್ಬೇಕು ಅನಿಸಿದ್ರೆ ಐಸ್‌ಕ್ರೀಮ್. ಒಟ್ನಲ್ಲಿ ಏನ್ ಆರ್ಡರ್ ಮಾಡಿದರೂ ಆಹಾರ ಮನೆ ಮುಂದೆಯಿರುತ್ತದೆ. ಹೀಗೆ ಫುಡ್ ಮನೆ ಬಾಗಿಲಿಗೆ ಬರೋಕ್ಕೆ ಕಾರಣ ಫುಡ್ ಡೆಲಿವರಿ ಆಪ್‌ಗಳು ಕಾರಣವಾದ್ರೂ ನಿಗದಿತ ಸಮಯಕ್ಕೆ ಆಹಾರ ತಲುಪಿಸುವಲ್ಲ ಫುಡ್ ಡೆಲಿವರಿ ಬಾಯ್‌ಗಳ ಪರಿಶ್ರಮ ಸಾಕಷ್ಟಿದೆ.
ಆರ್ಡರ್ ಮಾಡಿ ಎಷ್ಟು ಹೊತ್ತಾಯ್ತು ಈಗ ತರ್ತಿದ್ದೀರಾ, ಎಷ್ಟ್ ಸಾರಿ ರೂಟ್ ಹೇಳೋದು ಯಾವ ಕ್ರಾಸ್ ಅಂತ ಗೊತ್ತಾಗಲ್ವಾ ಹೀಗೆಲ್ಲಾ ಬೈಸಿಕೊಳ್ಳೋದು ಫುಡ್ ಡೆಲಿವರಿ ಬಾಯ್ಸ್. ಆದ್ರೆ ಸರಿಯಾದ ಸಮಯಕ್ಕೆ ಬಿಸಿಯಾದ ಆಹಾರವನ್ನು (Food) ಗ್ರಾಹಕರ ಮುಂದಿಡಲು ಈ ಡೆಲಿವರಿ ಬಾಯ್ಸ್ ಇನ್ನಿಲ್ಲದ ಪರಿಶ್ರಮ ಪಡುತ್ತಾರೆ. ಮಳೆ ಬಂದರೂ, ಟ್ರಾಫಿಕ್ ಇದ್ದರೂ ಸಮಯಕ್ಕೆ ಸರಿಯಾಗಿ ಆಹಾರವನ್ನು ತಲುಪಿಸಲು ಒದ್ದಾಡುತ್ತಾರೆ. ಹೀಗಿದ್ದರೂ ಇವರಿಗೆ ಹೊಗಳಿಕೆಯ ಬದಲು ತೆಗಳಿಕೆಯೇ ಜಾಸ್ತಿ ಸಿಗುತ್ತದೆ. ಅವರ ಪರಿಶ್ರಮವನ್ನು (Effort) ಯಾರೂ ಗುರುತಿಸುವುದೇ ಇಲ್ಲ.
ಬುದ್ಧಿವಂತ ವಿದ್ಯಾರ್ಥಿಯಲ್ಲ,ಆದರೂ ಐಐಟಿಯಲ್ಲಿ ಓದು,ಈಗ ದಿನದ ಗಳಿಕೆ ಒಂದು ಕೋಟಿ;ಇದು ಝೊಮ್ಯಾಟೋ ಸಿಇಒ ಯಶೋಗಾಥೆ!
ಎಲ್ಲರಿಗೂ ಆಹಾರ ವಿತರಿಸುವವ ಮಂದಿ ಊಟ ಮಾಡೋದು ಯಾವಾಗ್ಲೋ!
ಅದೆಷ್ಟೋ ಸಾರಿ ದಿನವಿಡೀ ಫುಡ್ ಡೆಲಿವರಿ ಮಾಡೋ ಈ ಏಜೆಂಟ್ಸ್ ಸಮಯಕ್ಕೆ ಸರಿಯಾಗಿ ತಿನ್ನುವುದೇ ಇಲ್ಲ. ಮತ್ತೊಬ್ಬರಿಗೆ ಫುಡ್ ತಲುಪಿಸುವ ಧಾವಂತದಲ್ಲಿ ಸ್ವತಃ ತಮಗೇ ತಿನ್ನಲು ಸಮಯ (Time)ವಿರುವುದಿಲ್ಲ. ಅದೆಷ್ಟೋ ಬಾರಿ ಸಂಜೆಯ ವರೆಗೆ ಹಸಿದುಕೊಂಡೇ ಇನ್ನೊಬ್ಬರಿಗೆ ಆಹಾರ ತಲುಪಿಸುತ್ತಿರುತ್ತಾರೆ. ಹಾಗೆಯೇ ಸದ್ಯ ಝೊಮೆಟೋ ಡೆಲಿವರಿ ಬಾಯ್ ಪ್ಲಾಸ್ಟಿಕ್ ಕವರ್‌ನಿಂದ ಊಟ ಮಾಡುತ್ತಿರುವ ವಿಡಿಯೋವೊಂದು ಎಲ್ಲರನ್ನೂ ಭಾವುಕರನ್ನಾಗಿಸಿದೆ.
ಈ ಹಿಂದೆ ಸ್ವಿಗ್ಗಿ ಡೆಲಿವರಿ ಬಾಯ್ಸ್ ರಸ್ತೆಬದಿಯ ತಳ್ಳುಗಾಡಿಯೊಂದರ ಪಕ್ಕ ಕುಳಿತು ತಿನ್ನುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಇದು ಫುಡ್ ಡೆಲಿವರಿ ಬಾಯ್‌ಗಳ ದುಸ್ಥಿತಿಯ ಚಿತ್ರಣವನ್ನು ಕಣ್ಣ ಮುಂದಿಟ್ಟಿತ್ತು. ಎಲ್ಲರಿಗೂ ಬಿರಿಯಾನಿ, ಫ್ರೈಡ್ ರೈಸ್, ಕಬಾಬ್ ಎಂದು ಟೇಸ್ಟೀ ಫುಡ್ ವಿತರಿಸೋ ಡೆಲಿವರಿ ಬಾಯ್ಸ್ ತಾವು ಸ್ವತಃ ಎಂಥಾ ಆಹಾರ ತಿನ್ನುತ್ತಾರೆ ಎಂಬುದು ಬಹುತೇಕರಿಗೆ ಮನವರಿಕೆಯಾಗಿತ್ತು. ಹಾಗೆಯೇ ಸದ್ಯ, ಝೊಮಾಟೊ ಡೆಲಿವರಿ ಏಜೆಂಟ್ ಪ್ಲಾಸ್ಟಿಕ್ ಬ್ಯಾಗ್‌ನಿಂದ (Plastic cover) ಸಾಧಾರಣ ಅನ್ನ, ದಾಲ್ ತಿನ್ನುತ್ತಿರುವ ದೃಶ್ಯ ವೈರಲ್ ಆಗಿದ್ದು, ನೆಟಿಜನ್‌ಗಳು ಭಾವುಕರಾಗಿದ್ದಾರೆ.
ಮೋಟಾರೀಕೃತ ಗಾಲಿಕುರ್ಚಿಯಲ್ಲಿ ಫುಡ್ ಡೆಲಿವರಿ, ಇಂಥವರೇ ನಮ್ಮ ಹೀರೋಸ್ ಎಂದ ಝೊಮೇಟೋ
ಪಾರ್ಕ್ ಮಾಡಿದ ಬೈಕ್ ಹತ್ತಿರ ನಿಂತಿರುವ ಫುಡ್ ಡೆಲಿವರಿ ಬಾಯ್ ಅತ್ತಿತ್ತ ನೋಡುತ್ತಾ ಪ್ಲಾಸ್ಟಿಕ್ ಕವರ್ ಒಂದರಿಂದ ಅನ್ನ, ದಾಲ್ ತಿನ್ನುತ್ತಾನೆ. ಅತ್ತ ಮತ್ತೆ ಫುಡ್ ಡೆಲಿವರಿ ಮಾಡಲು ಹೋಗಲು ಲಗುಬಗೆಯಲ್ಲಿ ಇರುವಂತೆ ಗೋಚರಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು ನೋಡಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ನಾನಾ ರೀತಿಯಲ್ಲಿ ಕಮೆಂಟಿಸಿದ್ದಾರೆ.
ಛತ್ತೀಸ್‌ಗಢದ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 'ಜನರು ಇನ್ನೊಬ್ಬರ ಬಗ್ಗೆ ಪ್ರೀತಿ, ಕಾಳಜಿ ಇಟ್ಟುಕೊಂಡು ಜೀವನ ನಡೆಸಬೇಕು' ಎಂದು ಈ ವಿಡಿಯೋ ಕ್ಲಿಪ್‌ಗೆ ಶೀರ್ಷಿಕೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ 312.6K ವೀವ್ಸ್, 1,076 ರಿಟ್ವೀಟ್‌ಗಳು, 41 ಕಾಮೆಂಟ್‌ಗಳು, 9,812 ಇಷ್ಟಗಳು ಮತ್ತು 56 ಬುಕ್‌ಮಾರ್ಕ್‌ಗಳನ್ನು ಪಡೆದುಕೊಂಡಿದೆ.
ಜನರು ಕಾಮೆಂಟ್ ಮಾಡಿ, 'ಅವರೂ ಸಹ ಮನುಷ್ಯರೇ. ಅವರ ಅದ್ಭುತ ಕೆಲಸಕ್ಕೆ ನಾವೆಲ್ಲರೂ ಅವರಿಗೆ ಹೆಚ್ಚಿನ ಹಣವನ್ನು ನೀಡಬೇಕು' ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಜನರು ಹಸಿವಿನಿಂದ ಇರದಂತೆ ಊಟವನ್ನು ಬಿಟ್ಟುಬಿಡುವ ಡೆಲಿವರಿ ಏಜೆಂಟ್‌ಗಳ ಕಷ್ಟವನ್ನು ಯಾರೂ ಸಹ ಅರ್ಥ ಮಾಡಿಕೊಳ್ಳುವುದಿಲ್ಲ' ಎಂದಿದ್ದಾರೆ. ಇನ್ನೊಬ್ಬರು 'ನಾನು ಮನೆಗೆ ಬರುವ ಪ್ರತಿಯೊಬ್ಬ ಡೆಲಿವರಿ ಬಾಯ್‌ಗೂ ಹಣ್ಣು, ಜ್ಯೂಸ್ ಏನನ್ನಾದರೂ ನೀಡುತ್ತೇನೆ' ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಒಟ್ನಲ್ಲಿ ಈ ವೀಡಿಯೊದಿಂದ ಡೆಲಿವರಿ ಏಜೆಂಟ್‌ಗಳ ಜೀವನ ಅಷ್ಟು ಸುಲಭವಾಗಿರುವುದಿಲ್ಲ ಎಂಬುದು ತಿಳಿದುಬರುತ್ತದೆ.
ಎಲ್ಲರ ಜೀವನದಲ್ಲಿಯೂ ಕಷ್ಟಗಳಿರುತ್ತವೆ. ಯಾರ ಸಮಸ್ಯೆಯೂ ಯಾರ ಕಣ್ಣಿಗೂ ಕಾಣುವುದಿಲ್ಲ ಅಷ್ಟೆ. ಹೀಗಾಗಿ ಎಲ್ಲರೂ ಮನುಷ್ಯತ್ವವನ್ನು ಇಟ್ಟುಕೊಂಡು ಜನರೊಂದಿಗೆ ವ್ಯವಹರಿಸುವುದು ಮುಖ್ಯವಾಗಿದೆ.
इस मौसम में इनका भी ख्याल रखें. pic.twitter.com/Rf2kHs4srk
— Awanish Sharan 🇮🇳 (@AwanishSharan)