ಗಾರ್ಬೇಜ್‌ ಕೆಫೆ, ಇಲ್ಲಿ ಉಚಿತವಾಗಿ ಸಿಗುತ್ತೆ ಊಟ!

By Roopa Hegde  |  First Published Dec 10, 2024, 12:36 PM IST

ತ್ಯಾಜ್ಯ ನೀಡಿ, ಆಹಾರ ಸೇವನೆ ಮಾಡಿ ಅಂತ ನಾವು ಹೇಳಿದ್ರೆ ನೀವು ನಂಬ್ದೆ ಇರಬಹುದು. ನೀವು ತೆಗೆದುಕೊಂಡು ಹೋದ ತ್ಯಾಜ್ಯವನ್ನು ತೂಕ ಹಾಕಿ, ಫ್ರೀಯಾಗಿ ನಿಮಗೆ ಆಹಾರ ನೀಡುವ ಹೋಟೆಲ್ ಒಂದಿದೆ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ. 
 


ಹಸಿವಾಗಿದೆ, ಮನೆಯಿಂದ ಹೊರಗಿದ್ದೀರಿ ಎಂದಾಗ ಹೋಟೆಲ್ (Hotel)ಗೆ ಹೋಗ್ತೇವೆ. ರೆಸ್ಟೋರೆಂಟ್ಗೆ ಹೋಗೋ ಮೊದಲು ಜೇಬಿನಲ್ಲಿ ಇಲ್ಲ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬುದನ್ನು ಮೊದಲು ಚೆಕ್ ಮಾಡಿಕೊಳ್ತೇವೆ. ಹಸಿವು ಅಂತ ಒಂದಿಷ್ಟು ಆರ್ಡರ್ ಮಾಡಿ, ಕೊನೆಯಲ್ಲಿ ಮುಜುಗರ ಆಗ್ಬಾರದು ಎಂಬ ಕಾರಣಕ್ಕೆ ನಾವೆಲ್ಲ ಈ ಕೆಲಸ ಮಾಡೋದು ಸಹಜ. ಆದ್ರೆ ಈಗ ನಾವು ಹೇಳ್ತಿರುವ ಹೋಟೆಲ್ ನಲ್ಲಿ ನೀವು ಹಣ ನೀಡದೆ ಆಹಾರ ಸೇವನೆ ಮಾಡ್ಬಹುದು. ಯಸ್,. ನಿಮಗೆ ಉಚಿತವಾಗಿ ಆಹಾರ ಸಿಗುತ್ತೆ. ಆದ್ರೆ ಒಂದು ಕಂಡಿಷನ್ ನೀವು ಫಾಲೋ ಮಾಡ್ಬೇಕಾಗುತ್ತೆ. ನಿಮ್ಮ ಬಳಿ ಪ್ಲಾಸ್ಟಿಕ್ (plastic) ಕಸ ಅಂತ ಎಸೆಯುವ ಖಾಲಿ ನೀರಿನ ಬಾಟಲಿ (bottle) ಇದ್ರೆ ಸಾಕು. 

ಗಾರ್ಬೇಜ್ ಕೆಫೆ (garbage café) ಎಲ್ಲಿದೆ? : ಈ ಗಾರ್ಬೇಜ್ ಕೆಫೆ ಭಾರತದಲ್ಲಿಯೇ ಇದೆ. ಛತ್ತೀಸ್‌ಗಢ (Chhattisgarh)ದ ಅಂಬಿಕಾಪುರ ನಗರದಲ್ಲಿ ಈ ಗಾರ್ಬೇಜ್ ಕೆಫೆ ಇದೆ. ಗಾರ್ಬೇಜ್ ಕೆಫೆಯಲ್ಲಿ ಜನರಿಗೆ ಉಚಿತವಾಗಿ ಆಹಾರ ನೀಡಲಾಗುತ್ತದೆ. ನೀವು ಅದಕ್ಕೆ ಬದಲಾಗಿದೆ ಪ್ಲಾಸ್ಟಿಕ್ ತ್ಯಾಜ್ಯ, ಖಾಲಿಯಾದ ನೀರಿನ ಬಾಟಲಿ ನೀಡಬೇಕು. 

Tap to resize

Latest Videos

ದಿನಕ್ಕೆ ಎಷ್ಟು ಬಾದಾಮಿ ತಿನ್ನಬೇಕು?

ಸ್ವಚ್ಛತೆಗೆ ಆದ್ಯತೆ : ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಉದ್ದೇಶದಿಂದಲೇ ಈ ಗಾರ್ಬೇಜ್ ಕೆಫೆಯನ್ನು ಶುರು ಮಾಡಲಾಗಿದೆ. ಛತ್ತೀಸ್ಗಢದಲ್ಲಿ ಇಂದೋರ್ ಹಾಗೂ ಅಂಬಿಕಾನಗರ ಸ್ವಚ್ಛತೆಗೆ ಹೆಸರುವಾಸಿಯಾಗಿದೆ. ರಸ್ತೆ ಮೇಲೆ ಅಥವಾ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಎಸೆಯುವುದನ್ನು ತಪ್ಪಿಸಲು ಕೆಫೆ ಈ ವಿನೂತನ ಕೆಲಸ ಮಾಡ್ತಿದೆ.

undefined

ಎಷ್ಟು ಕೆಜಿ ಪ್ಲಾಸ್ಟಿಕ್ ನೀಡಿದ್ರೆ ಸಿಗುತ್ತೆ ಆಹಾರ? : ಕೆಫೆ ಮೆನ್ಯು ಸಿದ್ಧಪಡಿಸಿದೆ. ಅದ್ರ ಪ್ರಕಾರ ನೀವು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೀಡ್ಬೇಕಾಗುತ್ತದೆ. ನಿಮಗೆ ಬ್ರೇಕ್ ಫಾಸ್ಟ್ ಬೇಕು ಎಂದಾದ್ರೆ ಅರ್ಧ ಕೆ.ಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ನೀವು ಕೆಫೆಗೆ ನೀಡ್ಬೇಕು. ಆಲೂಗಡ್ಡೆ ಚಾಪ್, ಸಮೋಸಾ, ಬ್ರೆಡ್ ಚಾಪ್, ಇಡ್ಲಿಯಲ್ಲಿ ಒಂದನ್ನು ನೀವು ಬ್ರೇಕ್ ಫಾಸ್ಟ್ ಆಗಿ ಸೇವನೆ ಮಾಡ್ಬಹುದು. 

ಬೀಟ್ರೂಟ್ ಜ್ಯೂಸ್‌ನ 6 ಪ್ರಮುಖ ಆರೋಗ್ಯ ಪ್ರಯೋಜನಗಳು

ಪ್ಲಾಸ್ಟಿಕ್ ತ್ಯಾಜ್ಯ ಇಲ್ಲದೆ ಹೋದಲ್ಲಿ ಏನ್ ಮಾಡೋದು? : ಎಲ್ಲರಿಗೂ ಅರ್ಧ ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಿಗದೆ ಹೋಗ್ಬಹುದು. ಅಂತ ಗ್ರಾಹಕರನ್ನು ಕೆಫೆ ನಿರ್ಲಕ್ಷ್ಯ ಮಾಡೋದಿಲ್ಲ. ಅವರಿಗೆ ಅತ್ಯಂತ ಕಡಿಮೆ ಬೆಲೆಗೆ ತನ್ನ ಆಹಾರವನ್ನು ಸರ್ವ್ ಮಾಡ್ತಿದೆ. 40ರಿಂದ 100 ರೂಪಾಯಿ ಒಳಗೆ ನಿಮಗೆ ಕೆಫೆಯಲ್ಲಿ ಆಹಾರ ಸಿಗುತ್ತದೆ. ಸಾದಾ ಥಾಲಿಯ ಬೆಲೆ 40 ರೂಪಾಯಿ. ಇದರಲ್ಲಿ ಗ್ರಾಹಕರಿಗೆ ತರಕಾರಿ, ಅನ್ನ, ಬೇಳೆಕಾಳುಗಳು, ಉಪ್ಪಿನಕಾಯಿ ಮತ್ತು ಸಲಾಡ್ ಲಭ್ಯವಿದೆ. 50 ರೂಪಾಯಿ ಥಾಲಿಯಲ್ಲಿ ತರಕಾರಿಗಳು, 4 ರೊಟ್ಟಿ, ದಾಲ್, ಅನ್ನ, ಸಲಾಡ್, ಪಾಪಡ್ ಮತ್ತು ಉಪ್ಪಿನಕಾಯಿ ಸಿಗುತ್ತದೆ. ಪನೀರ್ ಕರಿ ಇರುವ ಥಾಲಿಯ ಬೆಲೆ 70 ರೂಪಾಯಿ. 100 ರೂಪಾಯಿ ಬೆಲೆಗೆ ವಿಶೇಷ ಥಾಲಿ ಲಭ್ಯವಿದೆ.  ಇದರಲ್ಲಿ ಎರಡು ರೀತಿಯ ಪನೀರ್ ಕರಿ, ತರಕಾರಿ, 4 ತುಪ್ಪ ಲೇಪಿತ ರೊಟ್ಟಿ, ಅನ್ನ, ದಾಲ್, ಸಿಹಿ ಮೊಸರು, ಪಾಪಡ್, ಉಪ್ಪಿನಕಾಯಿ ಮತ್ತು ಸಲಾಡ್ ಲಭ್ಯವಿದೆ.

click me!