ಮುಂಬೈ(ಏ.3): ಪ್ರತಿಯೊಂದು ಆಹಾರಕ್ಕೂ ತಿನ್ನಲು ಒಂದು ರೀತಿ ಇದೆ. ಅದರಲ್ಲೂ ಭಾರತ ಹೇಗೆ ತನ್ನ ಸಂಸ್ಕೃತಿ, ಸಂಪ್ರದಾಯ, ಭಾಷೆ, ಕಲೆ ಆಚಾರ ವಿಚಾರಗಳಿಂದ ವೈವಿಧ್ಯತೆ ಹೊಂದಿದೆಯೋ ಹಾಗೆ ದೇಶದ ಆಹಾರ ಸಂಸ್ಕೃತಿ ಹಲವು ವೈವಿಧ್ಯತೆಯನ್ನು ಹೊಂದಿದೆ. ಟೀ ಕಾಫಿಯಿಂದ ಹಿಡಿದು ಬೃಹತ್ ಭೋಜನದವರೆಗೆ ಸಾವಿರಾರು ಬಗ್ಗೆಯ ವೆರೈಟಿ ಇದೆ. ಕೇವಲ ದೋಸೆಯೊಂದರಲ್ಲೇ ನೂರಾರು ಬಗೆಯ ವೆರೈಟಿಗಳನ್ನು ಕಾಣಬಹುದು. ಈಗ ಆಹಾರ ಬ್ಲಾಗರ್ ಒಬ್ಬರು ಮಸಾಲೆ ದೋಸೆಯನ್ನು ತಿನ್ನುವುದು ಹೇಗೆ ಎಂದು ವಿಡಿಯೋ ಮಾಡಿ ತೋರಿಸಿಕೊಟ್ಟಿದ್ದು, ಈ ವಿಡಿಯೋಗೆ ನೆಟ್ಟಿಗರು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಟೀಕೆ ಮಾಡಿದ್ದಾರೆ.
ದೋಸೆ ಮತ್ತು ಇಡ್ಲಿ ಭಾರತೀಯ ಪಾಕಪದ್ಧತಿಯಲ್ಲಿ (Indian Food Culture) ಹೆಚ್ಚು ಬೇಡಿಕೆ ಇರುವ ಭಕ್ಷ್ಯ ಎಂದರೆ ತಪ್ಪಾಗಲಾರದು. ಆರೋಗ್ಯಕರ ಮತ್ತು ಆರಾಮದಾಯಕ, ಈ ದಕ್ಷಿಣ ಭಾರತದ ಆಹಾರವನ್ನು ನಾವು ಪ್ರತಿಯೊಂದು ಭಾರತೀಯ ರೆಸ್ಟೋರೆಂಟ್‌ನಲ್ಲಿಯೂ (Indian Restaurant) ಕಾಣುತ್ತೇವೆ. ಆದರೆ ಇವುಗಳನ್ನು ತಿನ್ನುವುದಕ್ಕೂ ಒಂದು ರೀತಿ ರಿವಾಜುಗಳಿವೆ. ನಾವೇನೋ ದಕ್ಷಿಣ ಭಾರತೀಯರು (South Indian Food) ಮಸಾಲೆ ದೋಸೆ (dosa) ತಿನ್ನೋದನ್ನ ನಮಗೆ ಹೇಳಿ ಕೊಡಬೇಕಾದ ಅಗತ್ಯವಿಲ್ಲ. ಆದರೆ ಮೊದಲ ಬಾರಿ ದೇಶಕ್ಕೆ ಬಂದ ವಿದೇಶಿಗರಿಗೆ ಇದರ ಬಗ್ಗೆ ಗೊತ್ತಿರಲು ಸಾಧ್ಯವಿಲ್ಲ. ವಿದೇಶದಲ್ಲಿ ಬಹುತೇಕ ಜನ ಆಹಾರವನ್ನು ಚಮಚಗಳ ಮೂಲಕವೇ ಸೇವಿಸುತ್ತಾರೆ. ಆಹಾರ ತಿನ್ನಲು ಕೈಗಳನ್ನು ಬಳಸುವ ಸಂಸ್ಕೃತಿ ಅವರಲಿಲ್ಲ. ಆದರೆ ದೋಸೆಯನ್ನು ಚಮಚಗಳಲ್ಲಿ ತಿನ್ನಲಾಗದು. ಈ ವೇಳೆ ಇದನ್ನು ಹೇಗೆ ತಿನ್ನವುದು ಎಂದು ಅವರು ಪರದಾಡುತ್ತಾರೆ. ಬಹುಶಃ ಅಂಥಹವರಿಗೆ ಈ ವಿಡಿಯೋ ಸಹಾಯವಾಗಬಹುದೇನೋ.
ಬೊಂಬಾಟ್ ಮಸಾಲೆ ದೋಸೆ ಎಂದಿದ್ದ ಕಮಿಷನರ್‌ಗೆ ವಡಾಪಾವ್ ಮೋಡಿ!
ಈ ವಿಡಿಯೋದಲ್ಲಿ ಕಾಣಿಸುವಂತೆ ಹೋಟೇಲ್‌ವೊಂದರ ದೃಶ್ಯ ಇದಾಗಿದ್ದು, ವೇಟರ್ ಒಬ್ಬರು ಸಾಂಬಾರ್ ಚಟ್ನಿ ಜೊತೆ ಮಸಾಲೆ ದೋಸೆಯನ್ನು ತಂದು ಮೇಜಿನ ಮೇಲೆ ಇಡುತ್ತಾರೆ. ಈ ವೇಳೆ ಆಹಾರ ತಿನ್ನವಾತ ದೋಸೆಯನ್ನು ಚಮಚದ ಮೂಲಕ ಮಧ್ಯಭಾಗದಲ್ಲಿ ದುಂಡನೆಯಾಗಿ ಕತ್ತರಿಸುತ್ತಾನೆ. ನಂತರ ಕೈಗಳಿಂದ ಅದನ್ನು ಚಟ್ನಿ ಹಾಗೂ ಸಂಬಾರ್ ಜೊತೆ ಬೆರೆಸುತ್ತಾ ಬಾಯಿಗೆ ಇಡುತ್ತಾನೆ. ಫುಡ್ ಸ್ಟೈಲಿಸ್ಟ್ ಮತ್ತು ಬ್ಲಾಗರ್, ಮಾನ್ಸಿ ಶಿವ ರಾಥಿ ಅವರು ಇತ್ತೀಚೆಗೆ ತಮ್ಮ Instagram ಪ್ರೊಫೈಲ್ @_pizzandpie_ ನಲ್ಲಿ ದೋಸೆಯನ್ನು ಹೇಗೆ ತಿನ್ನಬೇಕು ಎಂಬುದನ್ನು ವಿವರಿಸುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದಾರೆ.
Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್
ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಜೊತೆಗೆ ಭಿನ್ನ ವಿಭಿನ್ನವಾದ ಕಾಮೆಂಟ್ ಮಾಡಿದ್ದಾರೆ. ಅದ್ಭುತ ತಂತ್ರ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ ಮತ್ತೊಬ್ಬರು ಇಷ್ಟು ದಿನ ಎಲ್ಲಿದ್ದೆ ಎಂದು ಪ್ರಶ್ನಿಸಿದ್ದಾರೆ. ಧನ್ಯವಾದಗಳು, ಇದು ನನ್ನನ್ನು ಮುಜುಗರದಿಂದ ರಕ್ಷಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ದೋಸೆ ತಿನ್ನುವಾಗ ನೀವು ಚಮಚ(Spoon) ಅಥವಾ ಫೋರ್ಕ್ ಬಳಸಬೇಡಿ. ಇದು ನಾಚಿಕೆಗೇಡಿನ ಸಂಗತಿ. ಮಸಾಲೆ ದೋಸೆ ತಿನ್ನುವಾಗ ನೀವು ನಿಮ್ಮ ಕೈಗಳನ್ನು ಹೊರತುಪಡಿಸಿ ನೀವು ಏನನ್ನೂ ಬಳಸುವುದಿಲ್ಲ. ಇದು ಖಂಡಿತವಾಗಿಯೂ ದೋಸೆ ತಿನ್ನಲು ಸರಿಯಾದ ಮಾರ್ಗವಲ್ಲ, ಒಬ್ಬ ದಕ್ಷಿಣ ಭಾರತೀಯನಾಗಿ ನಾನು ಈ ಸ್ಟೈಲ್ ಅನ್ನು ಅನುಮೋದಿಸುವುದಿಲ್ಲ ಎಂದೆಲ್ಲಾ ಹಲವರು ರೀತಿಯ ಕಾಮೆಂಟ್‌ಗಳು ಈ ವಿಡಿಯೋಗೆ ಬಂದಿವೆ.