ಭರಪೂರ ಊಟವಾಯ್ತು(Dinner) ಸಾಕು ಇನ್ನೇನು ತಿನ್ನೋದಕ್ಕೆ ಆಗುವುದಿಲ್ಲ ಎನ್ನುವಾಗ "ಹಾಗೆ ಎದ್ದು ಹೋಗಬಾರದು ಸ್ವಲ್ಪವಾದರೂ ಮೊಸರನ್ನ(Curdrice) ತಿಂದು ಎದ್ದೇಳು" ಎಂದು ಸಾಮಾನ್ಯವಾಗಿ ಹೇಲುತ್ತಾರೆ. ಹೀಗೆ ಹೇಲುವುದರ ಹಿಂದೆ ಹಲವು ಕಾರಣಗಳಿವೆ. ಅಲ್ಲದೆ ನಮ್ಮ ಬಾಲಿವುಡ್ ಸ್ಟರ‍್ಸ್(Bollywood stars) ಸಹ ಇದನ್ನು ತಮ್ಮ ಡಯೆಟ್ ಲೀಸ್ಟ್ನಲ್ಲಿ(Diet list) ಸೇರಿಸಿಕೊಂಡಿದ್ದಾರೆ. ಮೊಸರನ್ನ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತೆ? ಅದರ ಪ್ರಯೋಜನ ಹಾಗೂ ಯಾರೆಲ್ಲಾ ಮೊಸರವನ್ನು ಫಾಲೋ(Follow) ಮಾಡ್ತಾರೆ ಎಂಬ ಮಾಹಿತಿ ಇಲ್ಲಿದೆ.
ಊಟ ಎಂದು ಬಂದಾಗ ಕಂಪ್ಲೀಟ್(Complete) ಅಗುವುದು ಮೊಸರನ್ನದಿಂದ ಅಲ್ವೆ. ಎಷ್ಟೇ ಹೊಟ್ಟೆ ಫುಲ್ ಆದರೂ ಮೊಸರ ತಿನ್ನದೆ ಎದ್ದೇಳುವುದಿಲ್ಲ. ಬೇಸಿಗೆಯಲ್ಲಂತೂ ಮಜ್ಜಿಗೆ, ಮೊಸರು(Curd) ಬೇಕೆ ಬೇಕು. ಕೆನೆಭರಿತ ಹಾಲಿನೊಂದಿಗೆ ಹೆಪ್ಪಿಗಿಟ್ಟರೆ ಬೆಳಗ್ಗೆ ದಪ್ಪನೆಯದಾಗಿ ಮೊಸರು ರೆಡಿಯಾಗಿರುತ್ತದೆ. ಅದನ್ನು ಕೇಕ್(Cake) ರೀತಿ ಕಟ್ ಮಾಡಬೇಕಾಗುತ್ತೆ. ಅನ್ನದೊಂದಿಗೆ ತಿಂದರೆ ಹೊಟ್ಟೆಗೆ ತೃಪ್ತಿಯ ಭಾವ ಮೂಡುತ್ತೆ. ಬಿಸಿಲಿನಿಂದ ಬಂದವರಿಗೆ ಒಂದು ಲೋಟ ಮಜ್ಜಿಗೆ ಕೊಟ್ಟರೆ ಹಾಯ್! ಎನಿಸುತ್ತೆ. ಯಾವ ತಂಪು ಪಾನಿಯವೂ ಇದರ ಮುಂದೆ ಸಮವಲ್ಲ.
ಮೊಸರನ್ನ ನಮ್ಮ ಸಾಂಪ್ರದಾಯಿಕ(Traditional) ಆಹಾರಗಳಲ್ಲೊಂದು. ಬೇಸಿಗೆಯಲ್ಲಿ ಇದನ್ನು ತಿಂದರೆ ಹೊಟ್ಟೆಗೆ ತಂಪು ನೀಡುತ್ತದೆ ಜೊತೆಗೆ ಶಕ್ತಿ ನೀಡುತ್ತದೆ. ಆರೋಗ್ಯಕ್ಕೂ ಉತ್ತಮವಾಗಿದ್ದು, ಬೇಸಿಗೆಯಲ್ಲಿ ದೇಹದ ಉಷ್ಣವನ್ನು(Heat) ನಿಯಂತ್ರಿಸುತ್ತದೆ. ಇದರಲ್ಲಿ ಪ್ರೋಟೀನ್(Protein), ಫೈಬರ್(Fiber), ಆಯಂಟಿ ಆಕ್ಸಿಡೆಂಟ್(Antioxidant), ನ್ಯೂಟ್ರೀಷನ್(Nutrition) ಹೆಚ್ಚಿನ ಪ್ರಮಾಣದಲ್ಲಿದೆ. ಈ ಬಗ್ಗೆ ಜನರಲ್ಲಿ ತಿಳಿವಳಿಕೆ ಕಡಿಮೆ ಇದ್ದು. ಮೊಸರನ್ನದಿಂದ ದೂರ ಇರುವವರೂ ಇದ್ದಾರೆ. ನಮ್ಮ ಸ್ಟಾರ್ ನಟ ನಟಿಯರೂ ಸಹ ಮೊಸರನ್ನಕ್ಕೆ ಮೊರೆ ಹೋಗಿದ್ದಾರೆ. ಅವರಿಗೆಲ್ಲ ಮೊಸರನ್ನ ಎಂದರೆ ಅಷ್ಟು ಪ್ರೀತಿ ಹಾಗೂ ತಮ್ಮ ಡಯೆಟ್‌ನಲ್ಲಿ(Diet) ಅಳವಡಿಸಿಕೊಂಡಿದ್ದಾರೆ. ಮೊಸರು ನಮ್ಮ ದೇಹ ಹಾಗೂ ಆರೋಗ್ಯದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮೊಸರಿನಲ್ಲಿರುವ ಅಂತಹ ಗುಣಗಳೇನು, ಅದರ ಪ್ರಯೋಜನವೇನು? ಸ್ಟಾರ‍್ಸಗಳಿಗೇಕೆ ಇಷ್ಟ ಎಂಬ ಮಾಹಿತಿ ಇಲ್ಲಿದೆ.
Food Tips: ಮಜ್ಜಿಗೆ ಊಟಾನೋ, ಮೊಸರನ್ನವೋ ಆರೋಗ್ಯಕ್ಕೆ ಯಾವುದು ಬೆಸ್ಟ್?
ಮೊಸರನ್ನದ ಪ್ರಯೋಜನಗಳು
1. ಮೊಸರನ್ನ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ. ಅನ್ನದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್(Protein) ಇದ್ದು, ಮೊಸರಿನ ಜೊತೆ ಸೇರಿದರೆ ಹೊಟ್ಟೆ(Stomach) ಹಾಗೂ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ.
2. ಆಯಂಟಿಆಕ್ಸಿಡೆAಟ್(Antioxident), ಪ್ರೊಬಾಯಾಟಿಕ್(Probiotic), ಒಳ್ಳೆಯ ಕೊಬ್ಬಿನಾಂಶ(Fat) ಇರುವುದರಿಂದ ಆಯಾಸ(Anxiety) ಹೊರಹಾಕುವುದರ ಜೊತೆಗೆ ರಿಲಾಕ್ಸ್(Relax) ನೀಡುತ್ತದೆ. ಒತ್ತಡ(Stress) ಹಾಗೂ ಆಯಾಸ ನಿವಾರಿಸುತ್ತದೆ.
3. ಒಂದು ಬೌಲ್‌ನಷ್ಟು ಮೊಸರನ್ನ ತಿಂದರೆ ದಿನಕ್ಕೆ ಶರೀರಕ್ಕೆ(Body) ಬೇಕಾದಷ್ಟು ಶಕ್ತಿ(Energy) ಒದಗಿಸುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿದ್ದು, ಜೀರ್ಣಕ್ರಿಯೆ(Digestion) ಸುಗಮಗೊಳಿಸುತ್ತದೆ.
4. ಮೊಸರನ್ನ ಸೇವನೆ ಚರ್ಮಕ್ಕೂ ಒಳ್ಳೆಯದು. ಪ್ರತೀ ದಿನ ಮೊಸರನ್ನ ಸೇವಿಸುವುದರಿಂದ ಚರ್ಮದಲ್ಲಿನ ಕಲೆಗಳಿಂದ ಮುಕ್ತವಾಗಿಸಿ ಕ್ಲಿಯರ್ ಆಗಿರುವಂತೆ ನೋಡಿಕೊಳ್ಳುತ್ತದೆ.
5. ದೇಹದಲ್ಲಿನ ರಕ್ತದೊತ್ತಡ ನಿಯಂತ್ರಿಸುವ ಗುಣ ಮೊಸರನ್ನಕ್ಕಿದೆ. ಇದರಲ್ಲಿ ಉಪ್ಪಿನಾಂಶ ಕಡಿಮೆ ಇದ್ದು, ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಿದೆ.
6. ಒಂದು ಬೌಲ್ ಮೊಸರಿಗೆ ಸಕ್ಕರೆ(Sugar) ಹಾಕಿ ಮಕ್ಕಳಿಗೆ ಕೊಟ್ಟರೆ ಅವರ ಬೆಳವಣಿಗೆಗೆ ಒಳ್ಳೆಯದು. ಸಕ್ಕರೆಯಲ್ಲಿನ ಗ್ಲೂಕೋಸ್(Glucose) ಹಾಗೂ ಮೊಸರಲ್ಲಿರುವ ಕಾರ್ಬೋಹೈಡ್ರೇಟ್(Carbohydrate) ಅಂಶ ಮಕ್ಕಳ ಮಿದುಳು(Mind) ಬೆಳವಣಿಗೆಗೆ, ಮೂಳೆಗೆ(Bone) ಸಹಕಾರಿಯಾಗಿದೆ.
7. ಗರ್ಭಿಣಿಯರು(Pregnent woman) ರಾತ್ರಿ ಸ್ವಲ್ಪ ಅನ್ನ, ಹಾಲು(Milk) ಹಾಕಿ ಹೆಪ್ಪಿಗಿಟ್ಟು ಬೆಳಗ್ಗೆ 6ಗಂಟೆಗೆ ಎದ್ದು ತಿನ್ನುವುದು ಒಳ್ಳೆಯದು. ಹೊಟ್ಟೆಯಲ್ಲಿನ ಮಗುವಿನ(Baby) ಬೆಳವಣಿಗೆಗೆ ಇದು ಒಳ್ಳೆಯದು.
Reheat Leftovers: ಅನ್ನ, ಇಡ್ಲಿ ಮಿಕ್ಕಿದ್ಯಾ ? ಹೀಗ್ ಮಾಡಿ ಫಟಾಫಟ್ ಖಾಲಿಯಾಗುತ್ತೆ
ಸ್ಟಾರ್ಸ್ ಡಯೆಟ್ ಫ್ರೆಂಡ್ಲಿ ಮೊಸರನ್ನ!
ದಕ್ಷಿಣ ಭಾರತದಲ್ಲಿ ಮೊಸರನ್ನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಬಾಲಿವುಡ್‌ನಲ್ಲಿ ಸ್ಟರ‍್ಸಗಳು ಇದರ ಪ್ರಾಮುಖ್ಯತೆ ತಿಳಿದಿದ್ದಾರೆ. ಅಲ್ಲದೆ ಪ್ರತೀ ದಿನ ತಮ್ಮ ಆಹಾರದಲ್ಲಿ ಅಳವಡಿಸಿಕೊಂಡಿದ್ದಾರೆ.
ಆಲಿಯಾ ಭಟ್: ತೂಕಕ್ಕೆ(Weight) ಸಂಬAಧಿಸಿದ ಫಿಟ್ನೆಸ್ ಕಾಯ್ದುಕೊಂಡವರಲ್ಲಿ ಬಾಲಿವುಡ್(Bollywood) ಸ್ಟಾರ್ ನಟಿ ಆಲಿಯಾ ಭಟ್ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹೇಳುತ್ತಿರುತ್ತಾರೆ. ಅದರಲ್ಲೊಂದಾದ ಮೊಸರನ್ನ ಸಹ ತಮ್ಮ ಡಯೆಟ್ ಸೀಕ್ರೇಟ್(Diet secret). ಜೊತೆಗೆ ಮನೆಯೂಟದಲ್ಲಿ ಮೊಸರನ್ನ ಅವರಿಗೆ ಇಷ್ಟವಾದ ಆಹಾರ ಎಂದು ಹೇಳಿದ್ದಾರೆ. ಇದು ಅವರಿಗೆ ಶಾಂತತೆ(Peaceful) ಹಾಗೂ ವಿಶ್ರಾಂತಿ(Relax) ಎರಡನ್ನೂ ನೀಡುತ್ತದೆಯಂತೆ.
ಮಲೈಕಾ ಅರೋರ: ಬಾಲಿವುಡ್‌ನಲ್ಲಿ ಒಳ್ಳೆಯ ಫಿಗರ್(Figure) ಮೇಂಟೇನ್ ಮಾಡಿರುವ ಮಲೈಕಾ ಅರೋರಾ ತಮ್ಮ ಆಹಾರದಲ್ಲಿ ಮೊಸರನ್ನ ಮಿಸ್ ಮಾಡುವುದಿಲ್ಲ. ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿ(Social Media) ತಮ್ಮ ವಿಡಿಯೋ(Video) ಹಾಗೂ ಫಿಟ್ನೆಸ್ ಪ್ಲಾನನಲ್ಲಿ(Fitness plan) ಆಗಾಗ್ಗೆ ತಿಳಿಸುತ್ತಾರೆ. ಮೊಸರನ್ನಕ್ಕೆ ಇವರು ಫ್ಯಾನ್ ಆಗಿದ್ದಾರಂತೆ.
ರಾಕುಲ್ ಪ್ರೀತ್ ಸಿಂಗ್: ಫ್ಯಾಷನ್ ಐಕಾನ್(Fashion Icon) ಹಾಗೂ ಫಿಟ್ನೆಸ್(Fitness) ತಾರೆ ರಾಕುಲ್ ಅವರು ಮನೆಯ ಆಹಾರವನ್ನೇ(Home made Food) ಸೇವಿಸುತ್ತಾರೆ. ಹೊರಗಿನ ತಿಂಡಿ ಅವರಿಗೆ ಇಷ್ಟವಾಗುವುದಿಲ್ಲವಂತೆ. ಮನೆಯ ಆಹಾರದಲ್ಲಿ ಮೊಸರನ್ನಕ್ಕೆ ಸ್ವಲ್ಪ ಉಪ್ಪು(Salt) ಸೇರಿಸಿ ತಿನ್ನುವುದು ಅವರಿಗೆ ಬಹಳ ಇಷ್ಟ ಎಂದು ಹೇಳುತ್ತಾರೆ.
Healthy Breakfast: ತೂಕ ಇಳಿಸ್ಬೇಕೆಂದ್ರೆ ಬಾಳೆಹಣ್ಣಿನ ಜೊತೆ ಬೆಳಿಗ್ಗೆ ಇದನ್ನು ತಿಂದ್ನೋಡಿ
ಮೊಸರನ್ನ ಯಾವಾಗ ಸೇವಿಸಬೆಕು?
ರಾತ್ರಿಗಿಂತ(Night) ಹಗಲಲ್ಲಿ(Day) ಮೊಸರನ್ನ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಆಯುರ್ವೇದದಲ್ಲಿ(Ayurveda) ತಿಳಿಸಲಾಗಿದೆ. ಶೀತ(Cold), ಕಫದ ಕೆಮ್ಮು(Cough) ಇರುವವರು ರಾತ್ರಿ ವೇಳೆ ಮೊಸರನ್ನ ತಿನ್ನಲೇಬಾರದು. ಇದರಲ್ಲಿ ಜಿಡ್ಡಿನಾಂಶ ಹೆಚ್ಚಿರುವುದರಿಂದ ಕೆಮ್ಮು ಹೆಚ್ಚಾಗುವುದು ತಡೆಯಬಹುದಾಗಿದೆ.