ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ (Breakfast) ಲೈಟ್ ಫುಡ್ (Food) ತಿನ್ಬೇಕು ಅಂತ ಎಲ್ರೂ ಬಯಸ್ತಾರೆ. ಹಾಗಂತಾನೇ ಎಲ್ರೂ ಆಮ್ಲೆಟ್, ಬ್ರೆಡ್ (Bread) ಮೊದಲಾದವನ್ನು ತಿನ್ನೋದನ್ನು ರೂಢಿ ಮಾಡಿಕೊಂಡಿರ್ತಾರೆ. ಆದ್ರೆ ಡೈಲೀ ಬ್ರೆಡ್ ತಿನ್ನೋದು ಆರೋಗ್ಯಕ್ಕೆ (Health) ಅತ್ಯಂತ ಕೆಟ್ಟದ್ದು. ಇದ್ರಿಂದಾಗೋ ತೊಂದ್ರೆ ಒಂದೆರಡಲ್ಲ.
ಆರೋಗ್ಯ (Health) ಯಾವಾಗ್ಲೂ ಚೆನ್ನಾಗಿರಬೇಕು ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಆರೋಗ್ಯ ಚೆನ್ನಾಗಿರಬೇಕಾದರೆ ಆಹಾರಪದ್ಧತಿಯೂ (Food style) ಚೆನ್ನಾಗಿರಬೇಕು. ಆದ್ರೆ ಕೆಲವೊಬ್ಬರು ಆರೋಗ್ಯ ಚೆನ್ನಾಗಿರಬೇಕೆಂದು ಬಯಸೋದು ಮಾತ್ರ, ತಿನ್ನೋ ಆಹಾರದ ಬಗ್ಗೆ ಮಾತ್ರ ಗಮನಾನೇ ಹರಿಸೋದಿಲ್ಲ. ಅದರಲ್ಲೂ ಬೆಳಗ್ಗಿನ ಉಪಾಹಾರದ (Breakfast) ಬಗ್ಗೆಯಂತೂ ನಾವು ಪ್ರತ್ಯೇಕವಾಗಿ ಗಮನಹರಿಸಲೇಬೇಕು. ಕೆಲವೊಬ್ಬರು ಬೆಳಗ್ಗೆ ಶಾಲೆ, ಕಾಲೇಜು, ಆಫೀಸಿಗೆ ಹೋಗುವ ಭರದಲ್ಲಿ ತಿನ್ನೋ ಆಹಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಮ್ಲೆಟ್, ಬ್ಲೆಡ್ ಹೀಗೆ ಏನಾದರೂ ಲೈಟ್ ಫುಡ್ ತಿಂದು ಹೋಗಿ ಬಿಡುತ್ತಾರೆ. ಆದ್ರೆ ಬ್ರೇಕ್‌ಫಾಸ್ಟ್‌ಗೆ ಹೀಗೆ ದಿನಾ ಬ್ರೆಡ್ (Bread) ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ಗೊತ್ತಾ ?
ಆರೋಗ್ಯ ಕಾಪಾಡುವಲ್ಲಿ ಬೆಳಗ್ಗಿನ ಉಪಾಹಾರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಈ ಆಹಾರದಲ್ಲಿ ದಿನಪೂರ್ತಿ ಚಟುವಟಿಕೆಯಿಂದಿರಲು ಬೇಕಾಗುವ ಪೋಷಕಾಂಶಗಳಿವೆಯೇ ಎಂಬುದನ್ನು ಗಮನಿಸಿಕೊಳ್ಳಬೇಕು. ಹೆಚ್ಚಿನವರು ಬೆಳಗ್ಗೆ ಅವಸರದಲ್ಲಿ ಬ್ರೇಕ್‌ಫಾಸ್ಟ್‌ಗೆ ಬ್ರೆಡ್‌ನ್ನೇ ತಿನ್ನುತ್ತಾರೆ. ಆದ್ರೆ ದಿನಾ ಬ್ರೆಡ್ ತಿನ್ನೋದ್ರಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಿದೆ ಅಂತ ಗೊತ್ತಾದ್ರೆ ನೀವು ಬೆಚ್ಚಿ ಬೀಳ್ತೀರಾ ? ಬೆಳಗ್ಗಿನ ಉಪಾಹಾರಕ್ಕಾಗಿ ದಿನಾಲೂ (Daily) ಬ್ರೆಡ್ ಸೇವಿಸಿದರೆ ಆರೋಗ್ಯಕ್ಕೆ ಏನೆಲ್ಲಾ ತೊಂದ್ರೆಯಾಗುತ್ತೆ ತಿಳಿಯೋಣ.
ಹೆಂಡ್ತಿಗೆ ಮ್ಯಾಗಿ ಬಿಟ್ಟು ಮತ್ತೇನ್ ಮಾಡೋಕೆ ಬರಲ್ಲ, ಮೂರು ಹೊತ್ತು ತಿಂದು ಬೇಸತ್ತು ಡಿವೋರ್ಸ್ ನೀಡಿದ ಪತಿ !
ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ: ದಿನಾಲೂ ಬ್ರೆಡ್ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ (Sugar level) ಹೆಚ್ಚಾಗುತ್ತದೆ. ಸಂಸ್ಕರಿಸಿದ ಧಾನ್ಯಗಳಲ್ಲಿನ ಸರಳ ಕಾರ್ಬೋಹೈಡ್ರೇಟ್‌ಗಳ ಹೆಚ್ಚಿನ ಪ್ರಮಾಣವು ಸಂಪೂರ್ಣ ಗೋಧಿಯಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಿಗಿಂತ ಹೆಚ್ಚು ವೇಗವಾಗಿ ರಕ್ತಪ್ರವಾಹಕ್ಕೆ ಹೀರಲ್ಪಡುತ್ತದೆ, ಇದು ರಕ್ತದಲ್ಲಿನ ಸಕ್ಕರೆಯಲ್ಲಿ ತ್ವರಿತ ಏರಿಕೆಗೆ ಕಾರಣವಾಗುತ್ತದೆ.
ತೂಕವನ್ನು ಹೆಚ್ಚಿಸಬಹುದು: ಸರಳವಾದ ಕಾರ್ಬೋಹೈಡ್ರೇಟ್‌ಗಳಾದ ಬಿಳಿ ಬ್ರೆಡ್‌ನಲ್ಲಿ ಇರುವಂತಹವುಗಳು ಹೊಟ್ಟೆ ತುಂಬದಿರಲು ಕಾರಣವಾಗುತ್ತದೆ. ಹೀಗೆ ಬ್ರೇಕ್‌ಫಾಸ್ಟ್‌ಗೆ ಇದನ್ನು ತಿಂದರೂ ಪದೇ ಪದೇ ಬೇರೆ ಆಹಾರವನ್ನು ತಿನ್ನುವಂತಾಗುತ್ತದೆ. ಹೀಗಾಗಿ ಸಹಜವಾಗಿಯೇ ತೂಕ (Weight) ಹೆಚ್ಚುತ್ತಾ ಹೋಗುತ್ತದೆ.
ಮಲಬದ್ಧತೆಯ ಸಮಸ್ಯೆ: ಬಿಳಿ ಬ್ರೆಡ್ ಹೊಟ್ಟು ಮುಕ್ತವಾಗಿದೆ, ಅತ್ಯಲ್ಪ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಆಹಾರದ ನಿಧಾನ ಜೀರ್ಣಕ್ರಿಯೆ (Digestion)ಯನ್ನು ಉತ್ತೇಜಿಸುತ್ತದೆ. ನಿತ್ಯವೂ ಬ್ರೆಡ್ ಸೇವನೆ ಮಾಡಿದರೆ ಮುಂದೆ ಮಲಬದ್ಧತೆ ಸಮಸ್ಯೆ ಬರಲು ಇದೇ ಮುಖ್ಯ ಕಾರಣವಾಗಬಹುದು. ಹೀಗಾಗಿ ನಿಯಮಿತ ಪ್ರಮಾಣದಲ್ಲಿ ಮಾತ್ರ ಬಿಳಿ ಬ್ರೆಡ್ ಸೇವನೆ ಮಾಡುವುದು ಒಳ್ಳೆಯದು.
ಶುಗರ್ ಇರೋರು ಬ್ರೇಕ್‌ಫಾಸ್ಟ್‌ಗೆ ಏನು ತಿಂದ್ರೆ ಒಳ್ಳೇದು
ಬೊಜ್ಜು ಹೆಚ್ಚಾಗುತ್ತದೆ: ತೂಕ ಇಳಿಸಿಕೊಳ್ಳಲು ಬಯಸುವ ಜನರು ಹೆಚ್ಚಾಗಿ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಬ್ರೆಡ್‌ನ್ನು ತಿನ್ನುತ್ತಾರೆ. ಲೈಟ್ ಫುಡ್ ಅನ್ನೋ ಕಾರಣಕ್ಕೆ ಬ್ರೆಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ತಿಂದರೂ ತೊಂದರೆಯೇನಿಲ್ಲ ಅಂದುಕೊಳ್ಳುತ್ತಾರೆ. ಆದ್ರೆ ಆರೋಗ್ಯದ ಬಗ್ಗೆ ಅನೇಕ ಸಂಶೋಧನೆಗಳು ಹೇಳುವ ಪ್ರಕಾರ, ತೂಕ ಇಳಿಸಿಕೊಳ್ಳಲು ಬಯಸುವ ಜನರು ತಮ್ಮ ಆಹಾರದಿಂದ ಬಿಳಿ ಬ್ರೆಡ್ ಅನ್ನು ಕಡಿಮೆ ಮಾಡಬೇಕು. ಬಿಳಿ ಬ್ರೆಡ್ ಸೇವನೆಯು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ ಮತ್ತು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ತ್ವರಿತವಾಗಿ ಕಡಿಮೆಯಾದಾಗ, ವ್ಯಕ್ತಿಯು ಹೆಚ್ಚು ಹಸಿವನ್ನು ಅನುಭವಿಸುತ್ತಾನೆ ಮತ್ತು ಅವನು ಮತ್ತೆ ಮತ್ತೆ ತಿನ್ನುತ್ತಾನೆ. ಇದರಿಂದ ಅವರ ಬೊಜ್ಜು ಹೆಚ್ಚುತ್ತದೆ.
ಉದರ ಸಂಬಂಧಿತ ಸಮಸ್ಯೆ: ಪ್ರತಿದಿನ ಬ್ರೆಡ್ ತಿನ್ನುವುದರಿಂದ ಉದರ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾಕೆಂದರೆ ಬಿಳಿ ಬ್ರೆಡ್ ಹೆಚ್ಚು ಪಿಷ್ಟದ ಉತ್ಪನ್ನವಾಗಿದೆ. ಹೀಗಾಗಿ ಇದನ್ನು ತಿನ್ನುವುದರಿಂದ ಹೊಟ್ಟೆನೋವು, ಹೊಟ್ಟೆ ಕಿವುಚಿದಂತಾಗುವುದು ಮೊದಲಾದ ಸಮಸ್ಯೆ ಕಂಡು ಬರುತ್ತದೆ. ಬಿಳಿ ಬ್ರೆಡ್, ಕಂದು ಬ್ರೆಡ್‌ಗಿಂತ ಭಿನ್ನವಾಗಿ, ಇದು ಫೈಬರ್ ಅನ್ನು ಹೊಂದಿರುವುದಿಲ್ಲ. ಇದಲ್ಲದೆ ಬಿಳಿ ಬ್ರೆಡ್‌ನಲ್ಲಿ ಹೆಚ್ಚಿನ ಪ್ರಮಾಣದ ಗ್ಲುಟನ್ ಕಂಡುಬರುತ್ತದೆ, ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆ ನೋವು, ಭೇದಿ, ವಾಂತಿ ಮುಂತಾದ ಸಮಸ್ಯೆಗಳು ಉದ್ಭವಿಸಬಹುದು.