ಮೊಗದಲ್ಲಿ ನಗು ಉಕ್ಕಿಸುತ್ತಿದೆ ಸಮಾಧಿ ಮೇಲೆ ಬರೆದ ಬರಹ: ಫೋಟೋ ವೈರಲ್

By Anusha Kb  |  First Published Jul 19, 2022, 12:53 PM IST

ಮಹಿಳೆಯೊಬ್ಬರ ಸಮಾಧಿಯ ಮೇಲೆ ಇರುವ ಬರಹ ನೋಡಿದರೆ ನಿಮಗೆ ಅಚ್ಚರಿಯ ಜೊತೆ ಮುಖದಲ್ಲಿ ತಿಳಿನಗೆ ಮೂಡಲಿದೆ. ಏಕೆಂದರೆ ಇಲ್ಲೊಬ್ಬರು ಮಹಿಳೆಯ ಸಮಾಧಿಯಲ್ಲಿ ಅಡುಗೆ ರೆಸಿಪಿಯನ್ನು ಬರೆಯಲಾಗಿದೆ.


ಬದುಕಿನಲ್ಲಿ ಯಾರಾನ್ನಾದರು ಕಳೆದುಕೊಳ್ಳುವುದು ಎಲ್ಲರಿಗೂ ತುಂಬಾ ನೋವಿನ ಹೃದಯ ಘಾಸಿಗೊಳಿಸುವ ಕ್ಷಣವಾಗಿದೆ. ಆದರೆ ದುಃಖವು ಎಷ್ಟು ನೋವಿನಿಂದ ಕೂಡಿದ್ದರೂ, ಕಳೆದುಹೋದವರ ನೆನಪುಗಳಲ್ಲಿ ನಾವು ನಮ್ಮ ಸಾಂತ್ವನವನ್ನು ಕಂಡುಕೊಳ್ಳುತ್ತೇವೆ. ದುಃಖದ ಕ್ಷಣದೊಂದಿಗೆ ಅವರು ಬದುಕಿದ್ದ ನಡೆದಂತಹ ಕೆಲವು ತಮಾಷೆಯ ಖುಷಿಯ ಕ್ಷಣಗಳ ನೆನಪು ಬದುಕಲು ಮತ್ತೆ ಪ್ರೇರಣೆ ನೀಡುತ್ತದೆ. ಅವುಗಳು ಹಳೆಯ ಫೋಟೋಗಳು ಖುಷಿಯ ಕ್ಷಣದ ವಿಡಿಯೋಗಳು ಅವರಿಷ್ಟದ ಕಲಾಕೃತಿಗಳು ಪುಸ್ತಕಗಳೂ ಆಗಿರಬಹುದು. ಅವುಗಳೆಲ್ಲವನ್ನು ನಾವು ಕಳೆದು ಹೋದವರ ನೆನಪಿಗಾಗಿ ಜತನದಿಂದ ಕಾಪಿಡುತ್ತೇವೆ. 

ಸಾಮಾನ್ಯವಾಗಿ ಸಮಾಧಿಯ ಕಲ್ಲಿನ ಮೇಲೆ ಹುಟ್ಟಿದ ದಿನಾಂಕ, ಸಾವಿನ ದಿನಾಂಕ ಅದಕ್ಕಿಂತಲೂ ಹೆಚ್ಚು ಎಂದರೆ ನಾಲ್ಕು ನೆನಪುಗಳ ಸಿಹಿ ಬರಹ ಇರುವುದು ಸಾಮಾನ್ಯ. ಆದರೆ ಇತ್ತೀಚೆಗೆ ಮೃತರಾದ ಮಹಿಳೆಯೊಬ್ಬರ ಸಮಾಧಿಯ ಮೇಲೆ ಇರುವ ಬರಹ ನೋಡಿದರೆ ನಿಮಗೆ ಅಚ್ಚರಿಯ ಜೊತೆ ಮುಖದಲ್ಲಿ ತಿಳಿನಗೆ ಮೂಡಲಿದೆ. ಏಕೆಂದರೆ ಇಲ್ಲೊಬ್ಬರು ಮಹಿಳೆಯ ಸಮಾಧಿಯಲ್ಲಿ ಅಡುಗೆ ರೆಸಿಪಿಯನ್ನು ಬರೆಯಲಾಗಿದೆ. ಚಾಕೋಲೆಟ್ ಮಾಡುವುದು ಹೇಗೆ ಎಂದು ಬರೆಯಲಾಗಿದ್ದು, ಈಗ ಈ ಸಮಾಧಿಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Latest Videos

undefined

ಅಣ್ಣನ ಮೇಲಿನ ಪ್ರೀತಿಗೆ ಅಮೃತಶಿಲೆಯಿಂದ ಸಮಾಧಿ ಕಟ್ಟಿಸಿದ ಧ್ರುವ ಸರ್ಜಾ...!

ಅಮೆರಿಕಾದ ಉತಾಹ್‌ನಲ್ಲಿ ಚಿರನಿದ್ರೆಗೆ ಜಾರಿರುವ ಕ್ಯಾಥರಿನ್ ಕೇ ಆಂಡ್ರ್ಯೂಸ್ ಅವರ ಸಮಾಧಿಯ ಹೊರಭಾಗದಲ್ಲಿ ಕಾಣಿಸುವ ಬರಹವಿದು. ಆಂಡ್ರ್ಯೂಸ್ ಅವರ ಪತಿ, ವೇಡ್ 2000 ನೇ ಇಸವಿಯಲ್ಲಿ ನಿಧನರಾಗಿದ್ದರು. ಈ ವೇಳೆ ತಾನು ಕೂಡ ಶೀಘ್ರದಲ್ಲೇ ತನ್ನ ಪತಿ ಸೇರಿದ ಜಾಗವನ್ನು ಸೇರುತ್ತೇನೆ ಎಂದು ಕ್ಯಾಥರಿನ್ ಕೇ ಆಂಡ್ರ್ಯೂಸ್ ಭಾವಿಸಿದ್ದರಂತೆ. ಆ ಸಂದರ್ಭದಲ್ಲಿ ಅವರು ತನ್ನ ಸಮಾಧಿಯ ಮೇಲೆ ಈ ರೀತಿ ತನ್ನಿಷ್ಟದ ಸಿಹಿ ತಿನಿಸಿನ ಪಾಕ ವಿಧಾನವನ್ನು ಬರೆಯಬೇಕು ಎಂದು ನಿರ್ಧರಿಸಿದರಂತೆ. ಈ ಮೂಲಕ ತಾನು ತನ್ನ ಕುಟುಂಬದವರು ಹಾಗೂ ಸ್ನೇಹಿತರು ಆ ತಿನಿಸನ್ನು ಮರು ಸೃಷ್ಟಿಸಿ ಅವಳ ಉಪಸ್ಥಿತಿಯನ್ನು ನೆನೆಯಬಹುದು ಎಂಬುದು ಅವರ ಕ್ಯಾಥರಿನ್ ಕೇ ಆಂಡ್ರ್ಯೂಸ್ ಅವರ ಯೋಚನೆಯಾಗಿತ್ತು. 

ಅದರಂತೆ ಅವರ ಕುಟುಂಬದವರು ಕ್ಯಾಥರಿನ್ ಕೇ ಆಂಡ್ರ್ಯೂಸ್ ಅವರ ಸಮಾಧಿ ಕಲ್ಲಿನಲ್ಲಿ ಚಾಕೋಲೇಟ್ ಪಾಕ ವಿಧಾನವನ್ನು ಬರೆದಿದ್ದಾರೆ. ಎರಡು ಚೌಕಗಳ ಚಾಕೊಲೇಟ್ ಮತ್ತು ಎರಡು ಟೇಬಲ್‌ ಸ್ಪೂನ್‌ ಬೆಣ್ಣೆಯನ್ನು ಕಡಿಮೆ ಶಾಖದಲ್ಲಿ ಕರಗಿಸಿ. ನಂತರ ಅದು ಕುದಿಯುವಾಗ ಒಂದು ಕಪ್ ಹಾಲು ಬೆರೆಸಿ ಮತ್ತು ಮೂರು ಕಪ್ ಸಕ್ಕರೆ, ಒಂದು ಟೀ ಚಮಚ ವೆನಿಲ್ಲಾ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ. ಅದರ ನಂತರ, ಚಾಕೊಲೇಟ್ ಅನ್ನು ಸಾಫ್ಟ್‌ಬಾಲ್ ಹಂತಕ್ಕೆ ಬೇಯಿಸಿ ಮತ್ತು ಅದನ್ನು ಮಾರ್ಬಲ್ ಸ್ಲ್ಯಾಬ್‌ನಲ್ಲಿ ಇರಿಸಿ, ನಂತರ ತಣ್ಣಗೆ ಆದ ನಂತರ ತಿನ್ನಿ ಎಂದು ಸಮಾಧಿ ಕಲ್ಲಿನಲ್ಲಿ ಬರೆಯಲಾಗಿದೆ. 

ಸಮಾಧಿಯಾದ 130 ವರ್ಷ ಬಳಿಕ ಮುನ್ರೋ ಜೊತೆ ಮಾತನಾಡಿದ ರಾಯರು!

ಕ್ಯಾಥರಿನ್ ಕೇ ಆಂಡ್ರ್ಯೂಸ್ ಅವರು ತಾವು ಬದುಕಿದ್ದಾಗ ರುಚಿಕರವಾದ ಚಾಕೋಲೇಟ್‌ಗಳನ್ನು ತಯಾರಿಸುವುದಕ್ಕೆ ಹೆಸರು ಗಳಿಸಿದ್ದರು. ಅವಳ ಸ್ವಾಗತಾರ್ಹ ವ್ಯಕ್ತಿತ್ವ ಮತ್ತು ಆರೋಗ್ಯಕರ ಸ್ವಭಾವದಿಂದ ಜನರಿಗೆ ಹೆಚ್ಚು ಪ್ರಿಯವಾಗಿದ್ದರು. ಜನರನ್ನು ಹೆಚ್ಚು ಪ್ರೀತಿಸುತ್ತಿದ್ದರು. ಜೊತೆಗೆ ಕವನಗಳನ್ನು ಬರೆಯುತ್ತಿದ್ದ ಆಕೆ ಜನರೆಲ್ಲರೂ ಜೊತೆ ಸೇರಿದಾಗ ಚಾಕೋಲೇಟ್ ತಯಾರಿಸುತ್ತಿದ್ದಳು ಎಂದು ಅವರ ಪುತ್ರಿ ಜಾನಿಸ್ ಹೇಳಿದರು. 
 

click me!