ಅಮೇರಿಕಾದಲ್ಲಿ ಸಾದಾ ದೋಸೆ ಹೆಸ್ರು ನೇಕೆಡ್ ಕ್ರೇಪ್ಸ್, ಬೆಲೆ ಭರ್ತಿ 1400 ರೂ.!

By Suvarna News  |  First Published Jul 19, 2022, 11:12 AM IST

 ಭಾರತೀಯ ತಿನಿಸುಗಳಿಗೆ ಮನಸೋಲದವರಿಲ್ಲ. ವೈವಿಧ್ಯಮಯ ಖಾದ್ಯಗಳ ರುಚಿ ಎಂಥವರನ್ನೂ ಸೆಳೆಯುತ್ತದೆ. ಸದ್ಯ ಯುಎಸ್‌ನ ರೆಸ್ಟೋರೆಂಟ್‌ವೊಂದು ಭಾರತೀಯ ಆಹಾರಗಳನ್ನು ಬೇರೆಯದೇ ಹೆಸರಲ್ಲಿ ಮಾರಾಟ ಮಾಡ್ತಿದೆ.


ಭಾರತೀಯ ಶೈಲಿಯ ಆಹಾರ ದೇಶ-ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ಇಂಡಿಯನ್ ಫುಡ್ ಅಂದ್ರೆ ವಿದೇಶಿಗರು ಸಹ ಇಷ್ಟಪಟ್ಟು ತಿನ್ತಾರೆ. ಹೀಗಾಗಿಯೇ ವಿದೇಶಗಳಲ್ಲಿರುವ ಭಾರತೀಯ ರೆಸ್ಟೋರೆಂಟ್‌ಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರ್ತಾರೆ. ಆದ್ರೆ ಸದ್ಯ ಯುಎಸ್‌ನ ರೆಸ್ಟೋರೆಂಟ್‌ವೊಂದು ಭಾರತೀಯ ಆಹಾರಗಳನ್ನು ಬೇರೆಯದೇ ಹೆಸರಲ್ಲಿ ಮಾರಾಟ ಮಾಡ್ತಿದೆ. ಮಾತ್ರವಲ್ಲ ಇದಕ್ಕೆ ಸಿಕ್ಕಾಪಟ್ಟೆ ದರವನ್ನೂ ನಿಗದಿಪಡಿಸಿದೆ. ಪ್ರಭಾವಿತ ದೇಸಿಸ್ ಎಂಬುವವರು ರೆಸ್ಟೊರೆಂಟ್ ಮೆನು ಮತ್ತು ಬೆಲೆ ದರಗಳ ಸ್ಕ್ರೀನ್‌ಶಾಟ್ಅನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದು, ಇದೀಗ ವೈರಲ್‌ ಆಗುತ್ತಿದೆ. ಈ ರೆಸ್ಟೊರೆಂಟ್ ದಕ್ಷಿಣ ಭಾರತೀಯ ಆಹಾರವನ್ನು ಪೂರೈಸುತ್ತದೆ. ಆದರೆ, ದಕ್ಷಿಣ ಭಾರತೀಯ ಭಕ್ಷ್ಯಗಳನ್ನು ‘ಕ್ರೇಪ್ಸ್’ ಮತ್ತು 'ಡೋನಟ್ಸ್' ಎಂದು ಮರುಬ್ರಾಂಡ್ ಮಾಡುತ್ತಿದೆ. ಖಾದ್ಯಗಳ ವಿಲಕ್ಷಣ ಹೆಸರುಗಳಲ್ಲದೆ, ರೆಸ್ಟೋರೆಂಟ್‌ಗಳು ಅವುಗಳನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತವೆ ಎಂದಿದ್ದಾರೆ.

ಭಾರತೀಯ ಆಹಾರ (Indian food)ವನ್ನು ನೀಡುತ್ತಿರುವ ಯುನೈಟೆಡ್ ಸ್ಟೇಟ್ಸ್‌ನ ಉಪಾಹಾರ ಗೃಹದ ಮೆನು ಆನ್‌ಲೈನ್‌ನಲ್ಲಿ ಸಂಚಲನವನ್ನು ಹುಟ್ಟುಹಾಕಿದೆ. ಯುಎಸ್ ರೆಸ್ಟೊರೆಂಟ್ ಭಾರತೀಯ  ಸಾದಾ ದೋಸೆಯನ್ನು "ನೇಕೆಡ್ ಕ್ರೆಪ್" ಎಂದು ಪಟ್ಟಿ ಮಾಡಿದೆ, ಸಾಂಬಾರ್ ವಡಾವನ್ನು "ಡಂಕ್ಡ್ ಡೋಗ್ನಟ್ ಡಿಲೈಟ್" ಎಂದು ಪಟ್ಟಿ ಮಾಡಿದೆ. ಈ ಭಾರತೀಯ ಖಾದ್ಯಗಳ ಹೆಸರನ್ನು ಏಕೆ ಬದಲಾಯಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಚರ್ಚಿಸುತ್ತಿದ್ದಾರೆ ಮತ್ತು ರೆಸ್ಟೋರೆಂಟ್‌ಗಳು ವಿಧಿಸುತ್ತಿರುವ ದುಬಾರಿ ಬೆಲೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ಇವರಿಗಿರುವುದೊಂದೇ ಕೈ ಆದರೇನು ರೆಡಿ ಮಾಡ್ತಾರೆ ರುಚಿರುಚಿ ಬಿಸಿಬಿಸಿ ಪಾವ್‌ಬಾಜಿ

ಇಲ್ಲಿ ಸ್ಮಾಶ್ಡ್ ಪೊಟಾಟೊ ಕ್ರೇಪ್” $18.69 (ರೂ. 1,491), “ನೇಕೆಡ್ ಕ್ರೇಪ್” $17.59 (ರೂ. 1,404), “ಡಂಕ್ಡ್ ಡೋನಟ್ ಡಿಲೈಟ್” $16.49 (ರೂ. 1,316) ಮತ್ತು “ಡಂಕ್ಡ್ ರೈಸ್ ಕೇಕ್ ಡಿಲೈಟ್” $15.39 (Rs 1,228) ಗೆ ಮಾರಾಟವಾಗುತ್ತದೆ.

omfg pic.twitter.com/EEIkpBJcoA

— inika⛓ (@inika__)

ಇದೀಗ ವೈರಲ್ ಆಗುತ್ತಿರುವ ಮೆನುವಿನ ಫೋಟೋದಲ್ಲಿ ಪ್ರದರ್ಶಿಸಲಾದ ಆಹಾರವು ದಕ್ಷಿಣ ಭಾರತದ (South Indian) ಜನಪ್ರಿಯ ಭಕ್ಷ್ಯಗಳಾದ ದೋಸೆ, ಇಡ್ಲಿ ಮತ್ತು ಸಾಂಬಾರ್ ವಡಾವನ್ನು ತೋರಿಸುತ್ತದೆ. ಭಾನುವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು 18,000 ಲೈಕ್‌ಗಳನ್ನು ಮತ್ತು 2,200 ಕ್ಕೂ ಹೆಚ್ಚು ರೀ-ಟ್ವೀಟ್‌ ಪಡೆದುಕೊಂಡಿದೆ. 

ಮೆನುವಿನ ಸ್ಕ್ರೀನ್‌ಶಾಟ್ ಅನ್ನು ನೋಡಿದ ಟ್ವಿಟರ್ ಬಳಕೆದಾರರು, 'ನಾವು ಪ್ರಪಂಚದ ಎಲ್ಲೆಡೆ ಪಿಜ್ಜಾವನ್ನು ಪಿಜ್ಜಾ ಎಂದು ಕರೆಯುತ್ತಿರುವಾಗ ದೋಸೆಯನ್ನು ಯಾಕೆ ಹಾಗೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ನೇಕೆಡ್ ಕ್ರೇಪ್‌ ಭಾರತೀಯ ದೋಸೆಯನ್ನು ಹೋಲುತ್ತದೆ. ಮತ್ಯಾಕೆ ಇದಕ್ಕೆ ಬೇರೆ ಹೆಸರು ಎಂದು ಗೇಲಿ ಮಾಡಿದ್ದಾರೆ. ಕೆಲವು ಆ ಹೆಸರುಗಳು ಹೇಗೆ ಅರ್ಥಪೂರ್ಣವಾಗಿವೆ. ಅವರು ಅದನ್ನು ಅಮೆರಿಕನ್ನರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಹೆಸರಿಸಿದ್ದಾರೆ" ಎಂದು ಟ್ವೀಟ್‌ಗಳಲ್ಲಿ ಒಂದನ್ನು ಓದಲಾಗಿದೆ.

ಮನೇಲಿ ರೆಸ್ಟೋರೆಂಟ್‌ ಸ್ಟೈಲ್ ಕಬಾಬ್‌ ಮಾಡ್ಬೇಕಾ ? ಈ ಟ್ರಿಕ್ಸ್ ಬಳಸಿ

ರೆಸ್ಟೋರೆಂಟ್‌ಗಳು ಈ ಖಾದ್ಯಗಳನ್ನು ನೀಡುತ್ತಿರುವ ಬೆಲೆಯ ಬಗ್ಗೆ ಬಳಕೆದಾರರಿಗೆ ಆಶ್ಚರ್ಯವಾಯಿತು. ದಕ್ಷಿಣ ಭಾರತದ ಆಹಾರವನ್ನು ₹ 1000 ಕ್ಕಿಂತ ಹೆಚ್ಚು ಮಾರಾಟ ಮಾಡುವುದು ಅಪರಾಧ. ನಾನು ಭಾರತದಲ್ಲಿ ₹ 80 ಕ್ಕೆ 2 ದೋಸೆಗಳನ್ನು (ಕ್ರೆಪ್ಸ್) ಕಾನೂನುಬದ್ಧವಾಗಿ ಪಡೆಯಬಹುದು. ನೀವು $ 2 ಕ್ಕಿಂತ ಕಡಿಮೆ (ಯುಎಸ್‌ಎಯಲ್ಲಿ) ಮಾಡುವ ಯಾವುದನ್ನಾದರೂ $ 16 ಚಾರ್ಜ್ ಮಾಡುವುದು ನಿಜಕ್ಕೂ ಅತಿಯಾಗಿದೆ ಎಂದು ಬಳಕೆದಾರರು ಹೇಳಿದರು.

click me!