ಜ್ಯೂಸ್​ ಬದಲು ಲಿಕ್ವಿಡ್​ ಡಿಟರ್ಜೆಂಟ್ ಕೊಟ್ಟ ರೆಸ್ಟೋರೆಂಟ್‌!

By Vinutha Perla  |  First Published Jan 31, 2023, 10:49 AM IST

ಹೊಟೇಲ್‌ಗಳಲ್ಲಿ ನಿರ್ಧಿಷ್ಟ ಆಹಾರವನ್ನು ಆರ್ಡರ್ ಮಾಡಿದಾಗ ತಪ್ಪಿ ಇನ್ಯಾವುದೋ ಫುಡ್‌ ತಂದು ಕೊಡುವುದು ಸಾಮಾನ್ಯ. ಹಾಗಾದ್ರೂ ಪರ್ವಾಗಿಲ್ಲ ಬಿಡಿ ಅಂತ ಸುಮ್ನಿರ್ಬೋದು ಬಿಡಿ. ಆದ್ರೆ ಚೀನಾದ ರೆಸ್ಟೋರೆಂಟ್‌ವೊಂದು ಇದಕ್ಕಿಂತ ದೊಡ್ಡ ಎಡವಟ್ಟು ಮಾಡಿಕೊಂಡಿದೆ. ಗ್ರಾಹಕರಿಗೆ ಜ್ಯೂಸ್ ಬದಲು ಲಿಕ್ವಿಡ್ ಡಿಟರ್ಜೆಂಟ್ ಸರ್ವ್ ಮಾಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಹೊಟೇಲ್, ರೆಸ್ಟೋರೆಂಟ್‌ಗಳು ಆಗಿಂದಾಗೆ ಏನಾದರೊಂದು ಯಡವಟ್ಟು ಮಾಡಿಕೊಳ್ತಾನೆ ಇರ್ತವೆ. ಯಾವುದೋ ಫುಡ್ ಆರ್ಡರ್ ಮಾಡಿದಾಗ ಇನ್ಯಾವುದೋ ಫುಡ್ ಸರ್ವ್ ಮಾಡುವುದು, ವೆಜ್‌ಗೆ ನಾನ್‌ವೆಜ್ ಮಿಕ್ಸ್ ಆಗುವುದು, ಎಕ್ಸ್ಟ್ರಾ ಬಿಲ್‌ ಆಡ್‌ ಮಾಡುವುದು ಮೊದಲಾದವುಗಳನ್ನು ಮಾಡ್ತಾರೆ. ಆದ್ರೆ ಇದೆಲ್ಲವನ್ನೂ ಮೀರಿ ಚೀನಾದ ರೆಸ್ಟೋರೆಂಟ್‌ವೊಂದು ಗ್ರಾಹಕರಿಗೆ ಜ್ಯೂಸ್​ ಬದಲು ಲಿಕ್ವಿಡ್​ ಡಿಟರ್ಜೆಂಟ್ ನೀಡಿ ಎಡವಟ್ಟು ಮಾಡಿಕೊಂಡಿದೆ. ಘಟನೆಯಲ್ಲಿ ಏಳು ಮಂದಿ ಅಸ್ವಸ್ಥರಾಗಿದ್ದಾರೆ. ಏಳು ಮಂದಿ ಸಹ ಸರ್ವರ್​ ಕೊಟ್ಟ ಜ್ಯೂಸ್​ ಕುಡಿದರು. ನಂತರ ಹೊಟ್ಟೆ ತೊಳೆಸಿದಂತಾದಾಗ ಎಲ್ಲರೂ ಅಸ್ವಸ್ಥರಾದರು. ಬಳಿಕ ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಯಿತು. ಪಂಪ್ ಮಾಡಿ ಸೇವಿಸಿದ ಜ್ಯೂಸ್​ ಹೊರತೆಗೆಯಲಾಯಿತು. ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಜ್ಯೂಸ್ ಬದಲಿಗೆ ಡಿಟರ್ಜೆಂಟ್ ನೀರು ಸರ್ವ್‌ ಮಾಡಿದರ ವೈಟರ್
ಚೀನಾದ ರೆಸ್ಟೋರೆಂಟ್​ ತನ್ನ ಗ್ರಾಹಕರಿಗೆ (Customers) ಹಣ್ಣಿನ ರಸದ ಬದಲಾಗಿ ಲಿಕ್ವಿಡ್​ ಡಿಟರ್ಜೆಂಟ್ ಕೊಟ್ಟಿದೆ. ಈ ಘಟನೆಯು ಜನವರಿ 16ರಂದು ಝೆಜಿಯಾಂಗ್​ನಲ್ಲಿ ನಡೆದಿದೆ. ಸರ್ವರ್ ಮಾಡಿದ ಪ್ರಮಾದದಿಂದ ಈ ಘಟನೆ ಸಂಭವಿಸಿದೆ. ಸಿಸ್ಟರ್ ವುಕಾಂಗ್ ತನ್ನ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಚೀನಾದ ಝೆಜಿಯಾಂಗ್ ಪ್ರಾಂತ್ಯದ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ವೈಟರ್ ಜ್ಯೂಸ್ ಎಂದು ಹೇಳಿ ಪಾನೀಯವನ್ನು ತಂದಿಟ್ಟಿದ್ದಾನೆ. ಎಲ್ಲರೂ ಇದನ್ನೇ ಸೇವಿಸಿದ್ದು, ಆರೋಗ್ಯ (Health) ಹದಗೆಟ್ಟಿದೆ. ಬಳಿಕ ಪರಿಶೀಲನೆ ನಡೆಸಿದಾಗ ಅದು ಜ್ಯೂಸ್ ಬದಲಿಗೆ ಡಿಟರ್ಜೆಂಟ್ ನೀರಾಗಿತ್ತು ಎಂದು ತಿಳಿದುಬಂದಿದೆ.

Tap to resize

Latest Videos

ಭಾರತದ ಸಾದಾ ಹಪ್ಪಳ ಮಲೇಷಿಯನ್​ ರೆಸ್ಟೋರೆಂಟ್‌ನಲ್ಲಿ 'ಏಷ್ಯನ್​ ನಾಚೋಸ್​', ಬೆಲೆ ಕೇಳಿದ್ರೆ ದಂಗಾಗ್ತೀರಾ!

ಈ ಬಗ್ಗೆ ಮಾತನಾಡಿರುವ ವುಕಾಂಗ್​, 'ಏಳು ಮಂದಿ ಊಟ ಮಾಡಿ ಜ್ಯೂಸ್​ ಕುಡಿದೆವು. ನನ್ನ ಗಂಡ ಮೊದಲು ಕುಡಿದರು.  ಜ್ಯೂಸ್ ಸಿಕ್ಕಾಪಟ್ಟೆ ಕಹಿ ಇದೆ ಎಂದು ಹೇಳಿದರು. ಬಳಿಕ ನಾನೂ ಕುಡಿದೆ ನನಗೂ ಹಾಗೇ ಅನ್ನಿಸಿತು. ಜ್ಯೂಸ್ ಕುಡಿದ ತಕ್ಷಣವೇ ಗಂಟಲು ಚುರುಗುಟ್ಟಿತು' ಎಂದು ಹೇಳಿದರು. 'ಆಸ್ಪತ್ರೆಯಲ್ಲಿ ನಮ್ಮೆಲ್ಲರ ಹೊಟ್ಟೆಯನ್ನು (Stomach) ಪಂಪ್​ ಮಾಡಿ ಆ ಹಾನಿಕಾರಕ ಲಿಕ್ವಿಡ್​ ಹೊರತೆಗೆಯಲಾಯಿತು. ಆನಂತರ ಸರ್ವರ್​, ಕಣ್ತಪ್ಪಿನಿಂದ ಆಗಿದೆ' ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.  'ತಾನು ಸಾಮಾನ್ಯವಾಗಿ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವುದಿಲ್ಲ. ಬದಲಿಗೆ ಕೆಲವೊಂದು ದಿನ ಸಹಾಯಕ್ಕೆ ಬರುವುದಾಗಿ ಪರಿಚಾರಿಕೆ ನಮಗೆ ಹೇಳಿದಳು. ಮಾತ್ರವಲಲ್ಲ ಆಕೆ ದೃಷ್ಟಿಹೀನತೆಯಿಂದ ಸಹ ಬಳಲುತ್ತಿದ್ದಾಳೆ' ಎಂದು ವುಕಾಂಗ್  ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಗೆ ದಾಖಲಾಗಿರುವ ಏಳು ಜನರ ಸ್ಥಿತಿ ಸ್ಥಿರವಾಗಿದೆ ಎಂದು ಕ್ಸುಕುನ್ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಹಕರು ರೆಸ್ಟೋರೆಂಟ್‌ನಿಂದ ಪರಿಹಾರವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಛೀ..ಶೌಚಾಲಯ, ಸಿಂಕ್‌ ನೀರನ್ನು ಮರುಬಳಕೆ ಮಾಡುತ್ತಂತೆ ಈ ರೆಸ್ಟೋರೆಂಟ್!

ಆದರೆ ಗ್ರಾಹಕರಿಗೆ ಯಾವ ಫ್ಲೋರ್​ ಕ್ಲೀನರ್​ ಕೊಡಲಾಗಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿ ಯಾವುದೇ ಮಾಹಿತಿ ದೊರಕಿಲ್ಲ ಎಂದು ರೆಸ್ಟೋರೆಂಟ್​ನ ಮಾಲೀಕರು ತಿಳಿಸಿದ್ದಾರೆ. ಚೈನೀಸ್ ಆನ್​ಲೈನ್​ ಮಾರುಕಟ್ಟೆಯಲ್ಲಿ ಕಿತ್ತಳೆಹಣ್ಣಿನ ರಸದಂತೆ (Juice) ಕಾಣುವ ಅನೇಕ ಫ್ಲೋರ್​ ಕ್ಲೀನರ್​ಗಳು ಲಭ್ಯವಿವೆ. ಅವುಗಳ ಪ್ಯಾಕೆಟ್​ ಮೇಲೆ ಚೈನೀಸ್​ ಭಾಷೆ ಇರುವುದರಿಂದ ಸಿಬ್ಬಂದಿಗಳಿಗೆ ಇದು ಓದಲು ಅರ್ಥವಾಗುವುದಿಲ್ಲ. ಹೀಗಾಗಿ ಇಂಥಾ ಯಡವಟ್ಟುಗಳು ನಡೆಯುತ್ತವೆ.

ಅದೇನೆ ಇರ್ಲಿ,ಹೊಟೇಲ್‌, ರೆಸ್ಟೋರೆಂಟ್‌ಗಳು ಮಾಡೋ ಇಂಥಾ ಎಡವಟ್ಟಿನಿಂದ ಜನರು ಅಲ್ಲಿಗೆ ಭಯಪಡುವಂತಾಗುತ್ತೆ. ಇಂಥಾ ಸಣ್ಣಪುಟ್ಟ ತಪ್ಪುಗಳು ಪ್ರಾಣವನ್ನು ಬೇಕಾದ್ರೂ ತೆಗೀಬೋದು ಅನ್ನೋದು ಕೂಡಾ ನಿಜ. 

click me!