ಪೇಪರ್ ಕಪ್‌ನಲ್ಲಿ ಟೀ ಕುಡೀತೀರಾ? ಕ್ಯಾನ್ಸರ್ ಕಾಡ್ಬೋದು ಹುಷಾರ್!

By Vinutha PerlaFirst Published Jan 26, 2023, 1:06 PM IST
Highlights

ವಿಪರೀತ ಟೀ ಕುಡಿಯೋ ಅಭ್ಯಾಸ ಇರೋದು ಮನೆಯಿಂದ ಹೊರಗಡೆ ಹೊಟೇಲ್‌, ಸ್ಟಾಲ್‌ಗಳಲ್ಲಿ ಟೀ ಕುಡಿಯುತ್ತಿರುತ್ತಾರೆ. ಆದ್ರೆ ಅಲ್ಲಿ ಪೇಪರ್ ಗ್ಲಾಸ್‌ನಲ್ಲಿ ಟೀ ನೀಡುತ್ತಾರೆ. ಕುಡಿದು ಸುಲಭವಾಗಿ ಎಸೆಯಬಹುದು ಅನ್ನೋ ಕಾರಣಕ್ಕೆ ಪೇಪರ್‌ ಕಪ್‌ನ್ನು ಬಳಸಲಾಗುತ್ತದೆ. ಆದ್ರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅನ್ನೋದು ನಿಮಗೆ ಗೊತ್ತಿದ್ಯಾ ?

ಚಹಾ ಕುಡಿಯೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೆಳಗ್ಗೆ, ಸಂಜೆಯಂತೂ ತಪ್ಪದೇ ಟೀ ಬೇಕೇಬೇಕು. ಅದರ ಮಧ್ಯೆ ಟೆನ್ಶನ್‌ ಆದಾಗ, ಬೋರ್ ಅನಿಸಿದಾಗ, ಫ್ರೆಂಡ್ಸ್ ಸಿಕ್ಕಾಗ, ತಲೆನೋವು ಬಂದಾಗ ಟೀ ಕುಡಿಯೋದು ಬೇರೆ. ಒಟ್ನಲ್ಲಿ ಆಗಾಗ ಟೀ ಕುಡಿಯಲೇಬೇಕು ಅನ್ನುವವರು ಮನೆಯಿಂದ ಹೊರಗಡೆ ಟೀ ಕುಡಿಯೋದೆ ಹೆಚ್ಚು. ಹೀಗೆ ಹೊಟೇಲ್‌, ಸ್ಟಾಲ್‌ಗಳಲ್ಲಿ ಟೀ ಕುಡಿಯುವಾಗ ಅಲ್ಲಿ ಪೇಪರ್ ಗ್ಲಾಸ್‌ನಲ್ಲಿ ಟೀ ನೀಡುತ್ತಾರೆ. ಕುಡಿದು ಸುಲಭವಾಗಿ ಎಸೆಯಬಹುದು ಅನ್ನೋ ಕಾರಣಕ್ಕೆ ಪೇಪರ್‌ ಕಪ್‌ನ್ನು ಬಳಸಲಾಗುತ್ತದೆ. ಆದ್ರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅನ್ನೋದು ನಿಮಗೆ ಗೊತ್ತಿದ್ಯಾ ?

ಪೇಪರ್ ಕಪ್‌ನಲ್ಲಿ ಟೀ ಕುಡಿಯೋದ್ರಿಂದ ಕ್ಯಾನ್ಸರ್ ಕಾಡ್ಬೋದು
ಪೇಪರ್ ಕಪ್‌ನಲ್ಲಿ ಟೀ ಕುಡಿಯೋದು ಆರೋಗ್ಯಕ್ಕೆ (Health) ತುಂಬಾ ಹಾನಿಕಾರಕ ಅನ್ನೋದನ್ನು ಇತ್ತೀಚಿನ ಅಧ್ಯಯನ ಬಹಿರಂಗಪಡಿಸಿದೆ. ಐಐಟಿ ಖರಗ್ಪುರದ ಇತ್ತೀಚಿನ ಅಧ್ಯಯನವು ಪೇಪರ್ ಕಪ್‌ಗಳಲ್ಲಿ ಚಹಾ ಅಥವಾ ಇತರ ಬಿಸಿ ದ್ರಾವಣಗಳನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಬಹಿರಂಗಪಡಿಸಿದೆ. ಪೇಪರ್ ಕಪ್ ಗಳಲ್ಲಿ ದಿನಕ್ಕೆ ಮೂರು ಬಾರಿ 100 ಮಿಲಿ ಬಿಸಿ ಚಹಾ (Tea) ಕುಡಿಯುವುದರಿಂದ ಸುಮಾರು 75,000 ಹಾನಿಕಾರಕ ಮೈಕ್ರೋಪ್ಲಾಸ್ಟಿಕ್ ಕೋಶಗಳು ದೇಹವನ್ನು ಪ್ರವೇಶಿಸುತ್ತವೆ. ಈ ರೀತಿಯಾಗಿ ದೇಹವನ್ನು ಪ್ರವೇಶಿಸುವ ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆ (Disease)ಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವು ತಿಳಿಸಿದೆ.

ಟೀ ಕಪ್ ಕಪ್ಪು ಕಪ್ಪಾಗಿದ್ಯಾ? ಹೀಗೇ ಮೆಂಟೇನ್ ಮಾಡ್ಬೇಕು ನೋಡಿ

ಕಪ್‌ನಲ್ಲಿರುವ ಮೇಣದ ಅಂಶ ದೇಹವನ್ನು ಸೇರುತ್ತೆ
ನೀವು ಬಿಸಾಡಬಹುದಾದ ಕಾಗದದ ಕಪ್‌ನಿಂದ ಚಹಾ ಅಥವಾ ಕಾಫಿಯನ್ನು ಹೀರುವಾಗ, ನೀವು ಸ್ವಲ್ಪ ಮೇಣ (Wax)ವನ್ನು ಸಹ ಸೇವಿಸುತ್ತೀರಿ. ಎಲ್ಲಾ ಪೇಪರ್ ಕಪ್‌ಗಳು ದ್ರವದ ಸಂಪರ್ಕದ ಮೇಲೆ ವಿಘಟನೆಯಾಗುವುದನ್ನು ತಡೆಯಲು ಅವುಗಳ ಒಳ ಮೇಲ್ಮೈಯಲ್ಲಿ ಮೇಣದ ತೆಳುವಾದ ಲೇಪನವನ್ನು ಹೊಂದಿರುತ್ತವೆ. ಅಂತಹ ಕಪ್‌ನಲ್ಲಿ ಬಿಸಿ ದ್ರವವನ್ನು ಸುರಿದಾಗ, ಮೇಣವು ಕ್ರಮೇಣ ಕರಗುತ್ತದೆ ಮತ್ತು ಅದರೊಂದಿಗೆ ಬೆರೆಯುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

ತಜ್ಞರು ಹೇಳುವಂತೆ ಹೊಟ್ಟೆಯಲ್ಲಿರುವ ಆಮ್ಲವು ಸಾಮಾನ್ಯವಾಗಿ ಯಾವುದೇ ಮೇಣವನ್ನು ಸೇವಿಸಿದರೂ ಅದನ್ನು ಹೊರಹಾಕುತ್ತದೆ. ಆದರೆ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ಸಂಗ್ರಹವಾಗಬಹುದು ಮತ್ತು ಕರುಳಿನಲ್ಲಿ (Gut) ಅಡಚಣೆಯನ್ನು ಉಂಟುಮಾಡಬಹುದು. ಪ್ಲಾಸ್ಟಿಕ್ ಕಪ್‌ಗಳು ಮೇಣದ ಲೇಪಿತ ಕಾಗದದ ಕಪ್‌ಗಳಿಗಿಂತ ಹೆಚ್ಚು ಅಪಾಯಕಾರಿ (Dangerous) ಎಂದು ಹೇಳಲಾಗುತ್ತದೆ ಏಕೆಂದರೆ ಅವು ಪಾಲಿಮರ್‌ಗಳನ್ನು ಬಿಸಿ ದ್ರವಕ್ಕೆ ಬಿಡುಗಡೆ ಮಾಡುತ್ತವೆ ಎನ್ನಲಾಗಿದೆ.

Skeletal fluorosis : ಚಹಾ ಚಟ ಹೆಚ್ಚಾದ್ರೆ ಈ ಗಂಭೀರ ಕಾಯಿಲೆಗೆ ಬಲಿಯಾಗಬೇಕು ಹುಷಾರ್ !

ಪೇಪರ್ ಕಪ್‌ ತಯಾರಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳು
ಉತ್ಪಾದನಾ ಪ್ರಕ್ರಿಯೆಯಲ್ಲಿ ಮೇಣದ ತೆಳುವಾದ ಕೋಟ್ ಅನ್ನು ಸಿಂಪಡಿಸಲಾಗುತ್ತದೆ. ಪಾಲಿಥಿನ್ ಮತ್ತು ಪ್ಯಾರಾಫಿನ್ ಅನ್ನು ದ್ರವವನ್ನು ಹೀರಿಕೊಳ್ಳದಂತೆ ಕಾಗದವನ್ನು ತಡೆಯುವ ಮೂಲಕ ಉತ್ಪನ್ನದ ಬಾಳಿಕೆಯನ್ನು ಎತ್ತಿಹಿಡಿಯಲು ಬಳಸಲಾಗುತ್ತದೆ. ಆದರೆ ಪೇಪರ್ ಕಪ್‌ಳನ್ನು ತಯಾರಿಸಲು ವ್ಯಾಖ್ಯಾನಿಸಲಾದ ಮಾರ್ಗಸೂಚಿಗಳಿವೆ. ಮೇಣದ ಪದರದ ದಪ್ಪವು ಕನಿಷ್ಟವಾಗಿರಬೇಕು ಮತ್ತು ಉತ್ಪನ್ನವನ್ನು ನೀರಿನಲ್ಲಿ ನೆನೆಸಿದಾಗ ಅದು ಯಾವುದೇ ವಿಷಕಾರಿ (Poisonus) ದ್ರವವನ್ನು ಬಿಡುಗಡೆ ಮಾಡಬಾರದು. ಹೀಗಿದ್ದೂ ತಯಾರಕರು ಗುಣಮಟ್ಟವನ್ನು ನಿರ್ಲಕ್ಷಿಸುತ್ತಾರೆ ಮತ್ತು ಗುಣಮಟ್ಟದ ಪರಿಶೀಲನೆಗಳನ್ನು ತೆರವುಗೊಳಿಸದೆ ಉತ್ಪನ್ನಗಳು ಚಿಲ್ಲರೆ ವ್ಯಾಪಾರಿಗಳನ್ನು ತಲುಪುತ್ತವೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ಪಾಲಿಮರ್ಸ್ ಮತ್ತು ಫಂಕ್ಷನಲ್ ಮೆಟೀರಿಯಲ್ಸ್ ವಿಭಾಗದ ವಿಜ್ಞಾನಿ ಹೇಳುತ್ತಾರೆ.

ಟೀ ಕುಡಿಯಲು ಸ್ಟೀಲ್‌, ಗಾಜಿನ ಲೋಟ ಬಳಸೋದು ಉತ್ತಮ
ಸಾಮಾನ್ಯವಾಗಿ ಕಾಗದದ ಕಪ್ ಅನ್ನು ಹೈಡ್ರೋಫೋಬಿಕ್ ಫಿಲ್ಮ್ ನ ಪದರದಿಂದ ತಯಾರಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಕಾಗದದ ಕಪ್ ಗಳನ್ನು ಇತರ ವಸ್ತುಗಳಿಂದ ತಯಾರಿಸಲಾಗುತ್ತದೆ. ಚಹಾದಂತಹ ಬಿಸಿ ದ್ರವಗಳನ್ನು ಕಾಗದದ ಕಪ್ ಗಳಲ್ಲಿ ಸುರಿದಾಗ, ಅದರಲ್ಲಿನ ಪ್ಲಾಸ್ಟಿಕ್ ಪದರವು ಸುಲಭವಾಗಿ ಕರಗುತ್ತದೆ ಮತ್ತು ಚಹಾದ ಮೂಲಕ ದೇಹವನ್ನು ತಲುಪುತ್ತದೆ. ಅದಕ್ಕಾಗಿಯೇ ತಜ್ಞರು ಕಾಗದದ ಕಪ್ ಗಳಲ್ಲಿ ಚಹಾ ಮತ್ತು ಕಾಫಿ ಕುಡಿಯುವುದನ್ನು ಸಾಧ್ಯವಾದಷ್ಟು ತಪ್ಪಿಸಲು ಸಲಹೆ ನೀಡುತ್ತಾರೆ, ಮತ್ತು ಸಾಧ್ಯವಾದಷ್ಟು ಸ್ಟೀಲ್ ಮತ್ತು ಗಾಜಿನ ಲೋಟಗಳನ್ನು ಬಳಸುವುದು ಉತ್ತಮ.

click me!