ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಈ ಮಾತನ್ನು ನಂಬಿ ನಾವು ಅನೇಕ ಬಾರಿ ಮಿತಿಯಿಲ್ಲದೆ ಹಣ್ಣಿನ ಸೇವನೆ ಮಾಡ್ತೇವೆ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಿತ್ತಳೆ ಹಣ್ಣು ಸೇವನೆ ಮೊದಲೂ ಇದ್ರ ಬಗ್ಗೆ ತಿಳಿದಿರಬೇಕು.
ಕಿತ್ತಳೆ ಹಣ್ಣು (Orange Fruit), ಕಿತ್ತಳೆ ಹಣ್ಣಿನ ಜ್ಯೂಸ್ (Juice) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಬೇಸಿಗೆ (Summer) ಬಿಸಿಯಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದ್ರೆ ಹೊಟ್ಟೆ (Stomach) ತಂಪಾಗುವ ಜೊತೆಗೆ ಮನಸ್ಸು (mind) ತಾಜಾಗೊಳ್ಳುತ್ತದೆ. ಅನೇಕರು ಬೆಳಿಗ್ಗೆ (morning) ಉಪಹಾರದ ಜೊತೆ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಲು ಇಷ್ಟಪಡ್ತಾರೆ. ಕಿತ್ತಳೆ ಹಣ್ಣು ಆರೋಗ್ಯ (Health) ಕ್ಕೆ ಒಳ್ಳೆಯದು. ಕಿತ್ತಳೆ ಹಣ್ಣಿನ ಜ್ಯೂಸ್ ನಮಗೆ ಶಕ್ತಿ (Energy) ನೀಡುತ್ತದೆ. ಇದೇ ಕಾರಣಕ್ಕೆ ಪ್ರತಿ ನಿತ್ಯ ಎರಡೆರಡು ಬಾರಿ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವವರಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಕಿತ್ತಳೆ ಹಣ್ಣಿನ ಜ್ಯೂಸ್ ಕೊಡಬಹುದು. ಯಾವುದೇ ಆಹಾರವಿರಲಿ, ಅತಿಯಾದ್ರೆ ತೊಂದರೆಯಾಗುತ್ತದೆ. ಅದೇ ರೀತಿ ಕಿತ್ತಳೆ ಹಣ್ಣು ಕೂಡ. ಕಿತ್ತಳೆ ಹಣ್ಣನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಯಸ್. ಅಚ್ಚರಿ ಎನ್ನಿಸಿದ್ರೂ ಇದು ಸತ್ಯ. ಕಿತ್ತಳೆ ಹಣ್ಣನ್ನು ಅತಿಯಾಗಿ ಸೇವನೆ ಮಾಡಿದ್ರೆ ಯಾವೆಲ್ಲ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ ಎಂಬುದನ್ನು ನಾವಿಂದು ಹೇಳ್ತೇವೆ.
ಕಿತ್ತಳೆ ಹಣ್ಣಿನ ಅತಿಯಾದ ಸೇವನೆಯಿಂದ ಕಾಡುತ್ತೆ ಈ ಸಮಸ್ಯೆ
undefined
ಮೂಳೆ (Bone) ಗಳು ದುರ್ಬಲಗೊಳ್ಳುತ್ತವೆ : ಅತಿಯಾದ ಪ್ರಮಾಣದಲ್ಲಿ ಕಿತ್ತಳೆ ಹಣ್ಣು ತಿಂದ್ರೆ ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ವಿಟಮಿನ್ ಸಿ (Vitamin c ) ಕಿತ್ತಳೆ ಹಣ್ಣಿನಲ್ಲಿ ಹೇರಳವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ದೇಹದಲ್ಲಿ ವಿಟಮಿನ್ ಸಿ ಪ್ರಮಾಣವು ಹೆಚ್ಚಾದರೆ ನಮ್ಮ ಮೂಳೆಗಳು ಹೆಚ್ಚು ಕ್ಯಾಲ್ಸಿಯಂ (Calcium) ಅನ್ನು ಬಿಡುಗಡೆ ಮಾಡುತ್ತವೆ. ದೀರ್ಘಕಾಲದವರೆಗೆ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಸೇವಿಸಿದರೆ ಅದು ನಮ್ಮ ಮೂಳೆಗಳನ್ನು ದುರ್ಬಲಗೊಳಿಸುವ ಅಪಾಯ ಹೆಚ್ಚಿರುತ್ತದೆ.
INTERNATIONAL NO DIET DAY 2022: ದೇಹದ ತೂಕದ ಬಗ್ಗೆ ಯೋಚಿಸದೆ ಬೇಕಾದ್ದನ್ನೆಲ್ಲಾ ತಿನ್ನಲು ಒಂದು ದಿನ !
ಶಕ್ತಿ ನಷ್ಟ : ಅರೇ..! ಕಿತ್ತಳೆ ಹಣ್ಣು ತಿಂದ್ರೆ ಶಕ್ತಿ ಬರುತ್ತೆ ಎನ್ನುತ್ತಾರೆ, ಇದೇನಿದು? ಶಕ್ತಿ ನಷ್ಟವಾಗುತ್ತೆ ಎನ್ನುತ್ತಾರಲ್ಲ ಅಂದ್ಕೊಳ್ಬೇಡಿ. ಅತಿಯಾಗಿ ಕಿತ್ತಳೆ ಹಣ್ಣು ತಿಂದ್ರೆ ಅದು ನಿಮ್ಮ ಶಕ್ತಿ ಮೇಲೆ ಪ್ರಭಾವ ಬೀರುತ್ತದೆ. ಯಾಕೆಂದ್ರೆ ಕಿತ್ತಳೆ ಸಿಹಿ ಹಣ್ಣಾಗಿದೆ. ಇದು ಸಕ್ಕರೆ ಪಾನೀಯದಂತೆ. ಇದು ನಿಮ್ಮ ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಒಮ್ಮೆ ಶಕ್ತಿಯ ಮಟ್ಟ ಹೆಚ್ಚಾಗಿ ನಂತ್ರ ಕಡಿಮೆಯಾಗುವುದು ದೇಹಕ್ಕೆ ಹಾನಿಕರ. ಹಾಗಾಗಿ ಸದಾ ಶಕ್ತಿ ಮಟ್ಟವನ್ನು ಒಂದೇ ರೀತಿಯಲ್ಲಿ ಕಾಪಾಡುವ ಆಹಾರ ಸೇವನೆ ಮಾಡ್ಬೇಕು.
ಅತಿಸಾರಕ್ಕೆ ದಾರಿ : ಕೆಲವರು ಒಂದೇ ಬಾರಿ ನಾಲ್ಕೈದು ಕಿತ್ತಳೆ ಹಣ್ಣನ್ನು ತಿಂದು ಮುಗಿಸ್ತಾರೆ. ಅತಿಯಾದ ಸೇವನೆಯು ಹೊಟ್ಟೆ ನೋವು ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದ್ರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ತೊಂದರೆಗೊಳಗಾಗಬಹುದು. ಕಿತ್ತಳೆಯಲ್ಲಿ ಬಹಳಷ್ಟು ಫೈಬರ್ ಇದೆ. ಇದರಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ಆದ್ರೆ ಕಿತ್ತಳೆಯ ಒಂದು ವಿಶೇಷವೆಂದ್ರೆ ಆಹಾರ ಸೇವಿಸಿದ ನಂತರ ಕಿತ್ತಳೆಯನ್ನು ತಿಂದರೆ ಅದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ಕಿತ್ತಳೆ ತಿನ್ನುವುದು ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ.
Food News : ನಾಲ್ಕು ಕೆ. ಜಿ ತೂಕದ ಈ ಮ್ಯಾಂಗೋ ಒಮ್ಮೆ ತಿಂದು ನೋಡಿ
ಹಸಿವಿನ ಹೆಚ್ಚಳ : ಕಿತ್ತಳೆಯಲ್ಲಿ ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ಕೂಡ ಸಮೃದ್ಧವಾಗಿವೆ. ಇದು ನಮ್ಮ ಹಸಿವನ್ನು ಹೆಚ್ಚಿಸುತ್ತದೆ. ಹಸಿವು ಹೆಚ್ಚಾದ್ರೆ ಆಹಾರ ದೇಹ ಸೇರುವುದು ಹೆಚ್ಚಾಗುತ್ತದೆ. ಇದು ನಿರಂತರವಾಗಿ ನಡೆದ್ರೆ ತೂಕ ಹೆಚ್ಚಾಗುತ್ತದೆ. ತೂಕ ಇಳಿಕೆ ಬಯಸುವವರು ಅತಿಯಾಗಿ ಕಿತ್ತಳೆ ಹಣ್ಣನ್ನು ಸೇವನೆ ಮಾಡಬಾರದು. ಹಾಗೆಯೇ ಬೆಳಿಗ್ಗೆ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ನಿಲ್ಲಿಸಿ.