ವಿಶ್ವದ ಅತಿದೊಡ್ಡ ವಿಸ್ಕಿ ಬಾಟಲಿಯು ಹರಾಜಿಗೆ ಮಾರುಕಟ್ಟೆಗೆ ಬರಲು ಸಿದ್ಧ

By Suvarna NewsFirst Published May 6, 2022, 4:22 PM IST
Highlights

ಇವತ್ತಿನ ದಿನಗಳ್ಲಿ ಖುಷಿಯಿರಲಿ,  ದುಃಖವಾಗಿರಲಿ ಎಣ್ಣೆ ಹಾಕೋಣ ಬಾ ಗುರು ಅನ್ನೋರೆ ಹಲವರು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮದ್ಯ (Alcohol) ಪ್ರಿಯವಾಗಿರುತ್ತದೆ. ಕೆಲವರಿಗೆ ವೈನ್‌ (Wine), ಕೆಲವರಿಗೆ ಬಿಯರ್, ಕೆಲವರು ವಿಸ್ಕಿಯನ್ನು ಇಷ್ಟಪಡುತ್ತಾರೆ. ನೀವು  ಕೂಡಾ ವಿಸ್ಕಿ ಪ್ರಿಯರಾಗಿದ್ದರೆ ಇಲ್ಲಿದೆ ಒಂದು ಖುಷಿಯ ವಿಚಾರ.

ನೀವು ವಿಸ್ಕಿ (Whisky) ಅಭಿಮಾನಿಯಾಗಿದ್ದೀರಾ ? ಹಾಗಿದ್ರೆ ನಿಮಗೊಂದು ಗುಡ್ ನ್ಯೂಸ್‌ (Good news) ಇದೆ. ವಿಶ್ವದ ಅತಿದೊಡ್ಡ ವಿಸ್ಕಿ ಬಾಟಲಿಯು ಹರಾಜಿಗೆ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. 1989ರ ಮಕಲನ್ ಸಿಂಗಲ್ ಮಾಲ್ಟ್ ಪ್ರೀಮಿಯಂ ಸ್ಕಾಚ್ ವಿಸ್ಕಿಯಾಗಿದೆ, ಇದು ಕಳೆದ ವರ್ಷ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತಿದೊಡ್ಡ ವಿಸ್ಕಿ ಬಾಟಲಿಯ ಶೀರ್ಷಿಕೆಯನ್ನು ಗೆದ್ದಿದೆ. 2022 ರ ಮೇ 25 ರಂದು ಹರಾಜು ನಡೆಯಲು ಸಿದ್ಧವಾಗಿದೆ ಮತ್ತು ಇದುವರೆಗೆ ಮಾರಾಟ (Sale)ವಾದ ಅತ್ಯಂತ ದುಬಾರಿ ವಿಸ್ಕಿ ಎಂಬ ದಾಖಲೆ (Record) ಯನ್ನು ಮುರಿಯುವ ನಿರೀಕ್ಷೆಯಿದೆ.

ಇದು ವಿಶ್ವದ ಅತೀ ದೊಡ್ಡ ವಿಸ್ಕಿ ಬಾಟಲ್ (Bottle), ಬರೋಬ್ಬರಿ 5.11 ಅಡಿ ಎತ್ತರವಿರುವು ಈ ವಿಸ್ಕಿ ಬಾಟಲಿಯಲ್ಲಿ ಬರೋಬ್ಬರಿ 311 ಲೀಟರ್ ಸ್ಕಾಚ್ ವಿಸ್ಕಿ ತುಂಬಲಾಗಿದೆ. 32 ವರ್ಷಗಳ ಹಳೆಯ ವಿಸ್ಕಿ ಇದಾಗಿದೆ. ಇದೀಗ ಈ ಅಪರೂಪದ, ವಿಶ್ವದ ಅತೀ ದೊಡ್ಡ ಸ್ಕಾಚ್ ವಿಸ್ಕಿ ಬಾಟಲ್ ಹರಾಜಿಗೆ ಇಡಲಾಗಿದೆ. ಮೇ. 25 ರಂದು ಘಟಾನುಘಟಿಗಳು ಈ ಬಾಟಲ್ ಬಿಡ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ವಿಸ್ಕಿಯನ್ನು ಐಸ್ ಹಾಕಿ ಕುಡಿಯಬಾರದು ಅಂತಾರಲ್ಲ ಯಾಕೆ ?

ಈ ವಿಸ್ಕಿ ಮಿಶ್ರಣದ ವಿಶೇಷತೆ ಏನು ?
ಮಕಲನ್ ವಿಸ್ಕಿಯು ಸೂಕ್ಷ್ಮವಾದ ಅಂಶಗಳ ಸೊಗಸಾದ ಮಿಶ್ರಣವನ್ನು ಹೊಂದಿದೆ. ಸೌಮ್ಯವಾದ ಸುವಾಸನೆಯನ್ನು ಹರಡುತ್ತದೆ. ಇದಕ್ಕಿಂತ ಹೆಚ್ಚಾಗಿ, ಲಿಯಾನ್ ಮತ್ತು ಟರ್ನ್‌ಬುಲ್ ವೆಬ್‌ಸೈಟ್‌ನ ಪ್ರಕಾರ, ಈ ವಿಸ್ಕಿಯು ಸಿರಪ್‌ನಲ್ಲಿನ ಪೇರಳೆಯೊಂದಿಗೆ ಬೇಯಿಸಿದ ಸೇಬು  ಮತ್ತು ಸಣ್ಣ-ಕ್ರಸ್ಟ್ ಪೇಸ್ಟ್ರಿಯ ಬಾದಾಮಿಯೊಂದಿಗೆ ಸಂಯೋಜಿಸಲಾಗಿದೆ. 

32 ವರ್ಷಗಳ ಬಟ್ಟಿ ಇಳಿಸುವಿಕೆಯ ಮೂಲಕ ತಯಾರಿ
ಈ ವಿಶೇಷ ವಿಸ್ಕಿ ಬಾಟಲಿಯ ಕಣ್ಮನ ಸೆಳೆಯುವ ಪ್ಯಾಕೇಜಿಂಗ್ 5 ಅಡಿ 11 ಇಂಚು ಎತ್ತರವಿದೆ, 32 ವರ್ಷಗಳ ಬಟ್ಟಿ ಇಳಿಸುವಿಕೆಯ ವಿಧಾನದ ಮೂಲಕ ಇದನ್ನು ತಯಾರಿಸಲಾಗುತ್ತದೆ. ಇದಲ್ಲದೆ ಈ ಬಾಟಲಿಯನ್ನು ಫಾಹ್ ಮಾಯ್ ಹೋಲ್ಡಿಂಗ್ಸ್ ಗ್ರೂಪ್ ಇಂಕ್. ಮತ್ತು ರೋಸ್‌ವಿನ್ ಹೋಲ್ಡಿಂಗ್ಸ್ ಪಿಎಲ್‌ಸಿ ರಚಿಸಿದೆ. ಇದನ್ನು ಲಿಯಾನ್ ಮತ್ತು ಟರ್ನ್‌ಬುಲ್‌ನಲ್ಲಿ ಹರಾಜು ಮಾಡಲಾಗುತ್ತದೆ. ಡೈಲಿ ರೆಕಾರ್ಡ್ ಪ್ರಕಟಿಸಿದ ವರದಿಯ ಪ್ರಕಾರ, ಹರಾಜು ಬೆಲೆಯ ಒಂದು ಭಾಗವನ್ನು ಮೇರಿ ಕ್ಯೂರಿ ಚಾರಿಟಿಗೆ ನೀಡಲಾಗುತ್ತದೆ.

ವಿಸ್ಕಿಯನ್ನು ಓಕ್ ಹಾಗ್‌ಹೆಡ್ಸ್‌ಗೆ ವರ್ಗಾಯಿಸಲಾಯಿತು ಮತ್ತು ಮೇ 3,1989 ರಂದು ಬಟ್ಟಿ ಇಳಿಸಲಾಯಿತು. ವರದಿಗಳ ಪ್ರಕಾರ, ನಂತರ ಅದನ್ನು 32 ವರ್ಷಗಳ ಕಾಲ ಮಕಲನ್ ಡಿಸ್ಟಿಲರಿಯಲ್ಲಿ ಅಡೆತಡೆಯಿಲ್ಲದೆ ಬಿಡಲಾಯಿತು. ಈ ವಿಸ್ಕಿಯನ್ನು ಮುಚ್ಚಲಾಗಿದೆ. ಸದ್ಯ ಈ ಸ್ಪೆಷಲ್ ವಿಸ್ಕಿ, ವಿಸ್ಕಿ ಪ್ರಿಯರ ಗಮನ ಸೆಳೆಯುತ್ತಿದೆ. 

ವಿಸ್ಕಿಯಿಂದ ಆರೋಗ್ಯ ಹಾಳು ನಿಜ, ಆದರೆ ವಿಸ್ಕಿ ಫೇಷಿಯಲ್‌ ಮಾತ್ರ ಸೂಪರ್!

ಯುನೈಟೆಡ್ ಕಿಂಗ್ಡಮ್ ಎಡಿನ್‌ಬರ್ಗ್‌ನಲ್ಲಿ ಈ ವಿಸ್ಕಿ ಹರಾಜಿಗೆ ಇಡಲಾಗಿದೆ. ಈಗಾಗಲೇ ಆನ್‌ಲೈನ್ ಮೂಲಕ ನೋಂದಣಿ ಕಾರ್ಯ ನಡೆಯುತ್ತಿದೆ. ಮೇ.25 ರಂದು ಹರಾಜು ನಡೆಯಲಿದೆ. ಈಗಾಗಲೇ ಹಲವರು ನೋಂದಣಿ ಮಾಡಿಕೊಂಡಿದ್ದಾರೆ. ವಿಶ್ವದ ಯಾವುದೇ ಪ್ರದೇಶದಿಂದ ಈ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆಯಲಿದೆ. ಇಷ್ಟೇ ಅಲ್ಲ ಇಡೀ ಜಗತ್ತೇ ಇದೀಗ ಈ ವಿಸ್ಕಿ ಹರಾಜಿಗಾಗಿ ಕಾದುಕುಳಿತಿದೆ.

311 ಲೀಟರ್ ವಿಸ್ಕಿ ಅಂದರೆ 750 ಎಂಎಲ್ ನ 444 ಬಾಟಲ್‌ಗೆ ಸಮ. 32 ವರ್ಷ ಹಳೆಯ ಈ ವಿಸ್ಕಿಯನ್ನು ದಿನಕ್ಕೊಂದು ಪೆಗ್ ಹಾಕಿದರೆ ಮುಂದಿನ 32 ವರ್ಷ ಸವಿಯಬಹುದು. ಹರಾಜಿನಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಈ ಅತೀ ದೊಡ್ಡ ಸ್ಕಾಚ್ ವಿಸ್ಕಿ ಮುರಿಯಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ನೀಜವಾಗುವು ಸಾಧ್ಯತೆ ಇದೆ. 

click me!