ಪರೋಟಾ ಪಾರ್ಸೆಲ್‌ನಲ್ಲಿ ಸಿಕ್ತು ಹಾವಿನ ಚರ್ಮ ! ಬೆಚ್ಚಿಬಿದ್ದ ಗ್ರಾಹಕರು

By Suvarna News  |  First Published May 7, 2022, 1:40 PM IST

ತಿನ್ನೋ ಆಹಾರ (Food) ಯಾವಾಗ್ಲೂ ಕ್ಲೀನ್‌ ಆಗಿರ್ಬೇಕು ಅಂತ ಎಲ್ರೂ ಬಯಸ್ತಾರೆ. ಹೀಗಾಗಿಯೇ ಕೆಲವೊಬ್ಬರು ಹೊಟೇಲ್‌ (Hotel), ರೆಸ್ಟೋರೆಂಟ್ ಫುಡ್ ತಿನ್ನೋಕೆ ಹಿಂಜರಿಯುತ್ತಾರೆ. ತಿನ್ನೋ ಆಹಾರದಲ್ಲಿ ಜಿರಳೆ, ಹಲ್ಲಿ ಸಿಕ್ಕಿರೋ ಬಗ್ಗೆ ಈ ಹಿಂದೆ ಕೇಳಿರ್ತೀರಿ. ಆದ್ರೆ ಇಲ್ಲೊಂದೆಡೆ ಆಹಾರದ ಪಾರ್ಸೆಲ್‌ನಲ್ಲಿ ಹಾವಿನ ಚರ್ಮ (Snake sking) ಸಿಕ್ಕಿದೆ. ಆ ಬಗ್ಗೆ ಡೀಟೈಲಾಗಿ ಹೇಳ್ತಿವಿ. 


ಇತ್ತೀಚಿಗೆ ಕೆಲವೊಂದು ಹೊಟೇಲ್‌ಗಳಲ್ಲಿ ಕಳಪೆ ಆಹಾರವನ್ನು ಪೂರೈಸುವ ಘಟನೆಗಳು ಹೆಚ್ಚಾಗ್ತಿವೆ. ಹಲ್ಲಿ ಬಿದ್ದ ಸಾಂಬಾರು, ಜಿರಳೆ ಬಿದ್ದ ಟೀ ಮುಂತಾದವುಗಳನ್ನು ಪೂರೈಕೆ ಮಾಡಲಾಗುತ್ತದೆ. ಆದ್ರೆ ಇಲ್ಲೊಂದೆಡೆ ಆಹಾರದ ಜೊತೆಗೆ ಬಂದಿರೋ ವಸ್ತುವನ್ನು ನೋಡಿ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ತಿರುವನಂತಪುರಂನ ನೆಡುಮಂಗಡ ಪುರಸಭೆ ವ್ಯಾಪ್ತಿಯ ಹೋಟೆಲ್ ವೊಂದರಲ್ಲಿ ನೀಡಲಾದ ಪಾರ್ಸೆಲ್‌ನಲ್ಲಿ ಗ್ರಾಹಕರಿಗೆ ಪರೋಟಾದ ಜೊತೆ ಹಾವಿನ ಚರ್ಮ ಸಿಕ್ಕಿದೆ. 

ಆಹಾರ (Food) ಪೊಟ್ಟಣದಲ್ಲಿ ಹಾವಿನ ಚರ್ಮದ (Snake Skin) ಭಾಗವನ್ನು ಗ್ರಾಹಕರು ಪತ್ತೆ ಮಾಡಿದ ಹಿನ್ನೆಲೆಯಲ್ಲಿ ತಿರುವನಂತಪುರಂನ ನೆಡುಮಂಗಡ ಪುರಸಭೆ ವ್ಯಾಪ್ತಿಯ ಹೋಟೆಲ್ (Hotel) ಅನ್ನು ಗುರುವಾರ ಮುಚ್ಚಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.   ದೂರುದಾರರಾದ ಚೆಲ್ಲಂಕೋಡ್ ನಿವಾಸಿ ಪ್ರಿಯಾ ಅವರು ಚಂತಮುಕ್ಕಿನ ಶಾಲಿಮಾರ್ ಹೋಟೆಲ್‌ನಿಂದ ಖರೀದಿಸಿದ ಕೆಲವು ಪರೋಟಾಗಳನ್ನು (Parota) ಪ್ಯಾಕ್ ಮಾಡಲು ಬಳಸಲಾದ ಪತ್ರಿಕೆಯ ತುಣುಕಿನಲ್ಲಿ ಹಾವಿನ ಚರ್ಮವನ್ನು (Snake Skin) ಕಂಡುಹಿಡಿದಿದ್ದಾರೆ. ದೂರಿನ ಆಧಾರದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ರೆಸ್ಟೋರೆಂಟ್ (restaurant) ಅನ್ನು ಪರಿಶೀಲಿಸಿ ಅದನ್ನು ಮುಚ್ಚಲು ಆದೇಶಿಸಿದರು. 

Latest Videos

undefined

ಚಿಕನ್ ಶವರ್ಮಾ ತಿಂದು ಕಾಸರಗೋಡಿನ ಯುವತಿ ಸಾವು; ಶಿಗೆಲ್ಲಾ ಬ್ಯಾಕ್ಟಿರೀಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

ಹೊಟೇಲ್ ಅನ್ನು ಪರಿಶೀಲಿಸಲಾಗಿದ್ದು, ಅದು ಕೆಟ್ಟ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಎಂದು ನೆಡುಮಂಗಾಡ್ ಸರ್ಕಲ್‌ನ ಆಹಾರ ಸುರಕ್ಷತಾ ಅಧಿಕಾರಿ ಅರ್ಶಿತಾ ಬಶೀರ್ ತಿಳಿಸಿದ್ದಾರೆ. ಅಡುಗೆಮನೆಗೆ ಸಾಕಷ್ಟು ಬೆಳಕು ಇರಲಿಲ್ಲ ಮತ್ತು ಸ್ಕ್ರ್ಯಾಪ್ ಅನ್ನು ಹೊರಗೆ ಎಸೆಯಲಾಗಿದೆ. ಔಟ್ಲೆಟ್ ಅನ್ನು ತಕ್ಷಣವೇ ಮುಚ್ಚಲಾಯಿತು ಮತ್ತು ಶೋಕಾಸ್ ನೋಟಿಸ್ ನೀಡಲಾಯಿತು ಎಂದು ತಿಳಿಸಿದ್ದಾರೆ.

ಸತ್ತ ಹಾವಿನ ಚರ್ಮ ಸಿಕ್ಕಿರುವ  ಉಳಿದ ಆಹಾರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಆಹಾರದ ಪೊಟ್ಟಣವನ್ನು ಕಟ್ಟಲು ಬಳಸುವ ಪತ್ರಿಕೆಗೆ ಮೃತ ಚರ್ಮ ಅಂಟಿಕೊಂಡಿತ್ತು ಎಂಬುದು ಅವರ ಪ್ರಾಥಮಿಕ ಪತ್ತೆ ಎಂದು ಬಶೀರ್ ಹೇಳಿದ್ದಾರೆ. ಪರೋಟಾವನ್ನು ಪಾರದರ್ಶಕ ಪ್ಯಾಕಿಂಗ್ ಪೇಪರ್‌ನಲ್ಲಿ ಇರಿಸಲಾಗಿತ್ತು ಮತ್ತು ವೃತ್ತಪತ್ರಿಕೆಯಿಂದ ಸುತ್ತಿಡಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಹಾರ ಸುರಕ್ಷತಾ ಇಲಾಖೆಯು ಆಹಾರ ಪದಾರ್ಥಗಳನ್ನು ಪಾರ್ಸೆಲ್ ಮಾಡಲು ಪತ್ರಿಕೆಗಳನ್ನು ಬಳಸುವುದನ್ನು ಈ ಹಿಂದೆ ನಿಷೇಧಿಸಿತ್ತು. 

International No Diet Day 2022: ದೇಹದ ತೂಕದ ಬಗ್ಗೆ ಯೋಚಿಸದೆ ಬೇಕಾದ್ದನ್ನೆಲ್ಲಾ ತಿನ್ನಲು ಒಂದು ದಿನ !

ಇತ್ತೀಚಿಗಷ್ಟೇ  ಕಾಸರಗೋಡು (Kasaragod) ಜಿಲ್ಲೆಯಲ್ಲಿ ಶವರ್ಮಾ (Shawarma) ಸೇವಿಸಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ವಿಚಾರದಲ್ಲಿ ಆಘಾತಕಾರಿ ವಿಚಾರ ಬಯಲಾಗಿತ್ತು. ಮೇ 1ರಂದು ಕಾಸರಗೋಡಿನ ಐಡಿಯಲ್ ಫುಡ್ ಪಾಯಿಂಟ್ ಎಂಬ ಉಪಾಹಾರ ಗೃಹದಿಂದ ಚಿಕನ್ ಶವರ್ಮಾ ತಿಂದ 16 ವರ್ಷದ ದೇವಾನಂದ (Devananda) ಸಾವನ್ನಪ್ಪಿದ್ದು, ಹಲವರು ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಜಿಲ್ಲಾ ವೈದ್ಯಾಧಿಕಾರಿ (ಡಿಎಂಒ) ಡಾ.ಎ.ವಿ.ರಾಮದಾಸ್, ಶಿಗೆಲ್ಲ ಎಂಬ ಬ್ಯಾಕ್ಟೀರಿಯಾ (Shigella Bacteria) ದಿಂದ ಆಹಾರ ವಿಷಪೂರಿತವಾಗಿ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದ್ದರು.

ಫುಡ್‌ ಪಾಯ್ಸನಿಂಗ್‌ನಿಂದಾಗಿ ಯುವತಿಯ ಸಾವು ಮತ್ತು 40ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾದ ನಂತರ, ರಾಜ್ಯ ಆರೋಗ್ಯ ಇಲಾಖೆ ದುರಂತದ ಹಿಂದಿನ ಕಾರಣವನ್ನು ಗುರುತಿಸಿದೆ. ಅನಾಹುತಕ್ಕೆ ಕಾರಣವಾಗಿದ್ದು ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾ ಎಂದು ತಿಳಿಸಿದೆ.

click me!