ಬೆಂಗಳೂರು ಹಲವಾರು ಹಳೆಯ ಹೊಟೇಲ್‌ಗಳನ್ನು ಹೊಂದಿದೆ. ಇಂಥಾ ಹೊಟೇಲ್‌ಗಳು ತಮ್ಮ ವಿಶಿಷ್ಟ ಶೈಲಿಯ ಆಹಾರದಿಂದಲೇ ಪ್ರಸಿದ್ಧಯಾಗಿವೆ. ಹೀಗಾಗಿಯೇ ಬೆಂಗಳೂರಿಗೆ ಆಗಮಿಸುವ ಗಣ್ಯರು ಇಂಥಾ ಹೊಟೇಲ್‌ಗಳಿಗೆ ತಪ್ಪದೇ ವಿಸಿಟ್ ಮಾಡ್ತಾರೆ.
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಇಂದು ಬೆಳಗ್ಗೆ ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲಿನಲ್ಲಿ ಜನಸಾಮಾನ್ಯರ ಜತೆ ಬೆರೆತು, ತಮ್ಮ ಪಕ್ಷದ ಸಹವರ್ತಿಗಳೊಂದಿಗೆ ಮಸಾಲೆದೋಸೆ ಸವಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮಂಡಲ ಮುಖ್ಯಸ್ಥೆ ಕಾವೇರಿ ಕೇದಾರನಾಥ್ ಮುಂತಾದವರು ನಡ್ಡಾ ಅವರು ಜೊತೆಗಿದ್ದರು.
ಇದಕ್ಕೂ ಮೊದಲು ಹೋಟೆಲಿಗೆ ಆಗಮಿಸಿದ ನಡ್ಡಾ ಅವರನ್ನು ಸಿಟಿಆರ್ ಸಿಬ್ಬಂದಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಡ್ಡಾ ಮತ್ತು ಅಶ್ವತ್ಥ ನಾರಾಯಣ ಅವರಿಗೆ ಜೈಕಾರ ಕೂಗಿದರು. ಹೋಟೆಲಿನಲ್ಲಿ ಇದ್ದ ಗ್ರಾಹಕರ ಬಳಿಗೆ ಹೋಗಿ, ಅವರನ್ನೆಲ್ಲಾ ಮಾತನಾಡಿಸಿದ ನಡ್ಡಾ, ಎಲ್ಲರ ಮಾತುಗಳನ್ನು ಆಲಿಸಿದರು. ಲೋಕಾಭಿರಾಮವಾಗಿ ಕೆಲಹೊತ್ತು ಕಳೆದು ಸಿಟಿಆರ್ ಹೋಟೆಲ್ ಮತ್ತಿತರ ಸಂಗತಿಗಳ ಬಗ್ಗೆ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು.
2 ಮಸಾಲೆ ದೋಸೆ, 2 ಕಾಫಿ ಬೆಲೆ ಎರಡೇ ರೂಪಾಯಿ! 1971ರ ರೆಸ್ಟೋರೆಂಟ್ ಬಿಲ್ ವೈರಲ್
ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ, ಫಿಲ್ಟರ್ ಕಾಫಿ ಸವಿದ ಸ್ಟಾರ್‌ಬಕ್ಸ್ ಸಹ ಸಂಸ್ಥಾಪಕ
ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನಕ್ಕೆ ಅನಿರೀಕ್ಷಿತ ಅತಿಥಿಯೊಬ್ಬರು ಆಗಮಿಸಿದ್ದರು. ಇಲ್ಲಿನ ಫೇಮಸ್ ಮಸಾಲೆ ದೋಸೆ ಹಾಗೂ ಫಿಲ್ಟರ್ ಕಾಫಿ ಸವಿದು ವಾರೆ ವ್ಹಾ ಅಂದರು. ಇಲ್ಲಿಗೆ ಭೇಟಿ ನೀಡಿದ್ದು ಮತ್ಯಾರೂ ಅಲ್ಲ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರಾದ ಜೆವ್ ಸೀಗಲ್. ನಗರದಲ್ಲಿ ನಡೆಯುತ್ತಿರುವ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2022ರಲ್ಲಿ ಪಾಲ್ಗೊಳ್ಳಲು ಜೆವ್ ಸೀಗಲ್ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿ ಭವನಕ್ಕೆ ಆಗಮಿಸಿ ಮಸಾಲೆ ದೋಸೆ ಸವಿದರು. ಅವರು 1971ರಲ್ಲಿ ಸ್ಟಾರ್‌ಬಕ್ಸ್, ಕಾಫಿಹೌಸ್‌ಗಳ ಸಂಸ್ಥೆಯನ್ನು ಸಹ-ಸ್ಥಾಪಿಸಿದರು. 1980ರಲ್ಲಿ ಕಂಪನಿಯಿಂದ ನಿರ್ಗಮಿಸುವವರೆಗೆ ಉಪಾಧ್ಯಕ್ಷ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ಈಗ ಸ್ಟಾರ್ಟ್-ಅಪ್ ಸಲಹೆಗಾರ ಮತ್ತು ವ್ಯಾಪಾರ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ.
ವಿದ್ಯಾರ್ಥಿ ಭವನ ಸೋಷಿಯಲ್ ಮೀಡಿಯಾದಲ್ಲಿ ಝೇವ್ ಸೀಗಲ್ ಹೊಟೇಲ್‌ಗೆ ಗ್ರಾಹಕರಾಗಿ ವಿಸಿಟ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿತ್ತು. ಜೆವ್ ಸೀಗಲ್ ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ ಮತ್ತು ಫಿಲ್ಟರ್ ಕಾಫಿ ಸವಿದ ಫೋಟೋಗಳನ್ನು ಶೇರ್ ಮಾಡಿಕೊಂಡಿತ್ತು ಸೀಗಲ್ ತಮ್ಮ ಅತಿಥಿ ಪುಸ್ತಕದಲ್ಲಿ ರೆಸ್ಟೋರೆಂಟ್‌ಗಾಗಿ ಸುಂದರವಾದ ಟಿಪ್ಪಣಿಯನ್ನು ಸಹ ಬರೆದಿದ್ದರು. 'ನನ್ನ ಸ್ನೇಹಿತರೇ, ನಿಮ್ಮ ಪ್ರಸಿದ್ಧ ಆಹಾರ, ಕಾಫಿ ಮತ್ತು ಆತ್ಮೀಯ ಸ್ವಾಗತವನ್ನು ಆನಂದಿಸಿ ಖುಷಿಯಾಗಿದೆ. ನಾನು ಈ ಅದ್ಭುತ ಅನುಭವವನ್ನು ನನ್ನೊಂದಿಗೆ ಸಿಯಾಟಲ್‌ಗೆ ಕೊಂಡೊಯ್ಯುತ್ತೇನೆ' ಎಂದು ಪೋಸ್ಟ್ ಮಾಡಿದ್ದರು.
ಅಬ್ಬಾ ಏನ್ ಕ್ರಿಯೇಟಿವಿಟಿ..ಬೆಕ್ಕಿನ ಆಕಾರದ ದೋಸೆ ಮೇಕಿಂಗ್ ವೀಡಿಯೋ ವೈರಲ್
ಜೆವ್ ಸೀಗಲ್ ಒಬ್ಬ ಅಮೇರಿಕನ್ ಉದ್ಯಮಿಯಾಗಿದ್ದು, ಅವರು 1971 ರಲ್ಲಿ ಸ್ಟಾರ್‌ಬಕ್ಸ್ ಅನ್ನು ಸಹ-ಸ್ಥಾಪಿಸಿದರು. ನಂತರ ಅವರು ಸ್ಟಾರ್‌ಬಕ್ಸ್‌ನ ಉಪಾಧ್ಯಕ್ಷ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ತಮ್ಮ ಸಂಗ್ರಹವಾದ ಅನುಭವದ ಆಧಾರದ ಮೇಲೆ ತಮ್ಮ ಉದ್ಯಮಶೀಲತೆಯ ಒಳನೋಟಗಳನ್ನು ಹಂಚಿಕೊಳ್ಳಲು ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2022 ರಲ್ಲಿ ಪಾಲ್ಗೊಳ್ಳುವವರಾಗಿ ಬೆಂಗಳೂರಿಗೆ ಆಗಮಿಸಿದ್ದರು.