ಐಸ್‌ಕ್ರೀಂ ಮೇಲೆ ಡ್ರೈಫ್ರೂಟ್ ಅಲ್ಲ ಹುಳ ಹುಪ್ಪಟೆ.. ವಿಡಿಯೋ ನೋಡಿ

By Anusha Kb  |  First Published Mar 8, 2023, 1:17 PM IST

ಇಲ್ಲೊಂದು ಕಡೆ ಐಸ್‌ಕ್ರೀಂ ಮೇಲೆ ಡ್ರೈ ಪ್ರೂಟ್‌ ಬದಲು ಕ್ರಿಮಿ ಕೀಟಗಳನ್ನು ಚೆಲ್ಲಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಯಾಕ್ ವೇ ವೇ ಅಂತ ಉದ್ಘರಿಸುತ್ತಿದ್ದಾರೆ. 


ಐಸ್‌ಕ್ರೀಂನಲ್ಲಿ ಹಲವು ವೆರೈಟಿಗಳಿವೆ.  ಬಹುತೇಕ ಎಲ್ಲರೂ ಐಸ್ ಕ್ರೀಮ್ ಅನ್ನು ಇಷ್ಟಪಡುತ್ತಾರೆ  ನೀವು ಐಸ್‌ಕ್ರೀಂ ಪ್ರಿಯರಾಗಿದ್ದಲ್ಲಿ  ತರ ತರಹದ ಐಸ್‌ಕ್ರೀಂಗಳನ್ನು ನೀವು ಸವಿದಿರುತ್ತೀರಿ.... ಮಾವಿನಹಣ್ಣಿನ ಐಸ್‌ಕ್ರೀಂ, ಡ್ರೈಪ್ರೂಟ್‌ ಐಸ್‌ಕ್ರೀಂ, ಚಾಕೋಲೇಟ್‌ ಐಸ್‌ಕ್ರೀಂ ಹೀಗೆ ಕಾಲಕ್ಕೆ ತಕ್ಕಂತೆ ಹಲವು ವಿವಿಧ ವೆರೈಟಿಗಳ ಐಸ್‌ಕ್ರೀಂ ಅನ್ನು ನೀವು ನೋಡಿರುತ್ತೀರಿ.  ಹಾಗೆಯೇ ಕೆಲವು ಐಸ್‌ಕ್ರೀಂಗಳ ಮೇಲ್ಭಾಗದಲ್ಲಿ ಡ್ರೈಫ್ರೂಟ್ ಚೆಲ್ಲಿರೋದನ್ನು ನೀವು ನೋಡಿರುತ್ತೀರಾ. ಆದರೆ ಇಲ್ಲೊಂದು ಕಡೆ ಐಸ್‌ಕ್ರೀಂ ಮೇಲೆ ಡ್ರೈ ಪ್ರೂಟ್‌ ಬದಲು ಕ್ರಿಮಿ ಕೀಟಗಳನ್ನು ಚೆಲ್ಲಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಯಾಕ್ ವೇ ವೇ ಅಂತ ಉದ್ಘರಿಸುತ್ತಿದ್ದಾರೆ. 

ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕ್ರಿಮಿ ಕೀಟಗಳನ್ನು ಮಾಮೂಲಿ ಎಂಬಂತೆ ತಿನ್ನುತ್ತಾರೆ. ಅವರಿಗೋ ಅದೇನು  ಅಸಹ್ಯ ಅನಿಸದು. ಅವರು ಕ್ರಿಮಿ ಕೀಟಗಳನ್ನು ಬಾಯಿ ಚಪ್ಪರಿಸಿ ತಿನ್ನುತ್ತಾರೆ.  ಆದರೆ ನಮ್ಮ ಭಾರತದಲ್ಲಿ  ಕ್ರಿಮಿ ಕೀಟಗಳನ್ನು ತಿನ್ನುವುದಿರಲಿ ಅಪ್ಪಿತಪ್ಪಿ ಎಲ್ಲಾದರೂ ಆಹಾರದಲ್ಲಿ ಸಿಕ್ಕರೂ ವಾಂತಿ ಬರುವಷ್ಟು ಅಸಹ್ಯ ಪಟ್ಟುಕೊಳ್ಳುತ್ತಾರೆ.  ಹೀಗಿರುವಾಗ ಹುಳ ಹುಪ್ಪಟೆ ಇರುವ ಐಸ್‌ಕ್ರೀಂ ಮಾಡಿದರೆ ತಿನ್ನುವವರಾರು ಅಲ್ವೇ? ಆದರೆ ಈ ಐಸ್‌ಕ್ರೀಂ ರೆಡಿ ಮಾಡಿರುವುದು ಜರ್ಮನಿಯ ರೆಸ್ಟೋರೆಂಟ್‌. 

Tap to resize

Latest Videos

ವಡಾ ಪಾವ್‌ ಪಿಜ್ಜಾ ಮಾಡೋ ವೀಡಿಯೋ ವೈರಲ್, ಯಾಕ್ರಪ್ಪಾ ಹೀಗೆಲ್ಲಾ ಅಸಹ್ಯ ಮಾಡ್ತೀರಿ!

ಜರ್ಮನ್ (Germany) ಪಟ್ಟಣವಾದ ರೊಟೆನ್‌ಬರ್ಗ್ (Rottenburg) ಆಮ್ ನೆಕರ್‌ ಎಂಬಲ್ಲಿರುವ Eiscafé Rino ಎಂಬ ಐಸ್ ಕ್ರೀಮ್ ಅಂಗಡಿ ಈಗ ಹೀಗೆ ವಿಲಕ್ಷಣವಾದ ಐಸ್‌ಕ್ರೀಂ ತಯಾರಿಸಿ ಸುದ್ದಿಯಲ್ಲಿದೆ. ಅಂದಹಾಗೆ ಕ್ರಿಕೆಟ್ ಎಂಬ ಪೊದೆಗಳಲ್ಲಿ ಕಾಣಸಿಗುವ ಕೀಟಗಳನ್ನು ಬಳಸಿ ತಯಾರಿಸಲಾಗಿದೆ.  ಇದನ್ನು ಕಂದು ಬಣ್ಣದ ಐಸ್‌ಕ್ರೀಂ ಮೇಲ್ಭಾಗದಲ್ಲಿ ಡ್ರೈ ಪ್ರೂಟ್‌ಗಳಂತೆ ಹರವಿ ಗ್ರಾಹಕರಿಗೆ ನೀಡಲಾಗುತ್ತದೆ. 

ಇದರ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋಗಳಲ್ಲಿ ವ್ಯಕ್ತಿಯೊಬ್ಬ  ಐಸ್ ಕ್ರೀಂ ಮೇಲೆ ಕ್ರಿಕೆಟ್ ಹೆಸರಿನ ಕೀಟಗಳನ್ನು ಹರವಿ ಹಿಡಿದಿರುವುದನ್ನು ನೋಡಬಹುದಾಗಿದೆ. ಥಾಮಸ್ ಮೈಕೋಲಿನೊ (Thomas Micolino) ಎಂಬುವವರು ಈ ಫ್ಲೇವರ್ ಅನ್ನು ಕಂಡು ಹಿಡಿದಿದ್ದಾರೆ.

ಈ ಬಗ್ಗೆ ಜರ್ಮನ್ ನ್ಯೂಸ್ ಏಜೆನ್ಸಿ ಡಾಯ್ಚ್ ಪ್ರೆಸ್ ಅಜೆಂಟರ್‌ ಜೊತೆ ಮಾತನಾಡಿದ ಮೈಕೊಲಿನೊ, ನಾನೊಬ್ಬ ತುಂಬಾ ಕುತೂಹಲಕಾರಿ ವ್ಯಕ್ತಿಯಾಗಿದ್ದು, ಎಲ್ಲ ಹೊಸತನವನ್ನು  ಪ್ರಯತ್ನಿಸಲು ಬಯಸುತ್ತೇನೆ. ನಾನು ಬಹಳಷ್ಟು ವಿಚಿತ್ರವಾದ ವಸ್ತುಗಳನ್ನು ಒಳಗೊಂಡ ಬಹಳಷ್ಟು ಖಾದ್ಯಗಳನ್ನು ತಿಂದಿದ್ದೇನೆ ಮತ್ತು ಈ ಕ್ರಿಕೆಟ್‌ ಕೀಟಗಳನ್ನು ನಾನು  ಐಸ್‌ಕ್ರೀಮ್‌ನ ರೂಪದಲ್ಲಿ ಪ್ರಯತ್ನಿಸಲು ಬಯಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ ಇದನ್ನು ಪ್ರಯತ್ನಿಸುವವರು ಕೂಡ ತುಂಬಾ ಉತ್ಸಾಹಭರಿತರಾಗಿದ್ದಾರೆ. ಪ್ರತಿದಿನ ಇಲ್ಲಿಗೆ ಬಂದು ಸ್ಕೂಪ್ ಖರೀದಿಸುವ ಗ್ರಾಹಕರನ್ನು ನಾನು ನೋಡಿದ್ದೇನೆ ಎಂದರು.  

Food Habits in World: ಹಸುವಿನ ರಕ್ತ, ಕೊಳೆತ ಶಾರ್ಕ್‌ ಮಾಂಸ… ಅಬ್ಬಬ್ಬಾ, ಏನೆಲ್ಲ ತಿಂತಾರೆ ಗೊತ್ತಾ

 

click me!