
ರೈಲು, ವಿಮಾನ ಪ್ರಯಾಣ ಸಂದರ್ಭ ಎಲ್ಲಾ ಸರಿಯಾಗಿದ್ರೂ ಆಹಾರದ ವಿಷಯದಲ್ಲಿ ಏನಾದರೊಂದು ಎಡವಟ್ಟು ಆಗ್ತಾನೇ ಇರುತ್ತೆ. ಕೆಲವೊಮ್ಮೆ ಆಹಾರ ಬಾಯಿಗೆ ಇಡೋಕೆ ಸಾಧ್ಯವಾಗಲ್ಲ. ಕೆಲ ಆಹಾರದಲ್ಲಿ ಕಲ್ಲು, ಹುಳವಿದ್ರೆ ಮತ್ತೆ ಕೆಲ ಆಹಾರದ ರುಚಿ ಕೆಟ್ಟದಾಗಿರುತ್ತದೆ. ಇನ್ನು ಕೆಲವೊಮ್ಮೆ ಬಿರಿಯಾನಿ, ರೈಸ್, ಇಡ್ಲಿ-ಸಾಂಬಾರ್ ಹೀಗೆ ಏನ್ ಕೊಟ್ರೂ ಹುಳ, ಜಿರಳೆ, ಕೀಟಗಳು ಪತ್ತೆಯಾಗೋದಿದೆ. ಸದ್ಯ ಬೆಂಗಳೂರಿನಿಂದ ನವದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರಿಗೆ ಇಂಥದ್ದೇ ಅನುಭವವಾಗಿದೆ. ಬೆಂಗಳೂರಿನಿಂದ ನವದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರಿಗೆ ಆಹಾರದಲ್ಲಿ ಸತ್ತ ಜಿರಳೆ ಸಿಕ್ಕಿದೆ.
ಬೆಂಗಳೂರು ಮೂಲದ ಉದ್ಯಮಿ ಪ್ರವೀಣ್ ವಿಜಯಸಿಂಗ್, ತಮಗೆ ಬಡಿಸಿದ ಸಾಂಬಾರ್‌ನ್ನು ಸೇವಿಸಿದ ನಂತರ ಅದರಲ್ಲಿ ಸತ್ತ ಜಿರಳೆ (Dead cockroach) ಇರೋದು ಗೊತ್ತಾಯಿತು. ಈ ವಿಷಯವನ್ನು ಲೀಡ್ ಫ್ಲೈಟ್ ಅಟೆಂಡೆಂಟ್‌ಗಳಿಗೆ ಹೇಳಿದರೆ ಅವರು ಅದು ಕರಿಬೇವಿನ ಎಲೆ ಅದನ್ನು ತಿನ್ನಬಹುದು ಎಂದು ಹೇಳಿದರು ಎಂದು ತಿಳಿದುಬಂದಿದೆ. ಏರ್ ಇಂಡಿಯಾ ಪ್ರಯಾಣಿಕರಿಗೆ (Passenger) ಆಗಿರುವ ಕೆಟ್ಟ ಅನುಭವವನ್ನು ಸರಿದೂಗಿಸಲು ಫ್ಲೈಯರ್‌ಗೆ ಸಂಪೂರ್ಣ ಟಿಕೆಟ್ ದರವನ್ನು ಮರುಪಾವತಿಸಲು ಮುಂದಾಗಿದೆ. ಆದರೆ ಅವರು ಪ್ರಸ್ತಾಪವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಏರ್ ಇಂಡಿಯಾದ ಆಹಾರದಲ್ಲಿ ಸಿಕ್ತು ಕಲ್ಲು: ಫೋಟೋ ವೈರಲ್
ಈ ಘಟನೆ ಆಗಸ್ಟ್ 22ರಂದು ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 7.05ಕ್ಕೆ ವಿಮಾನ ಹೊರಟಿತ್ತು. ನಗರದ ಸಹಕಾರ ನಗರದಲ್ಲಿರುವ ಐಟಿ ಮತ್ತು ಟೆಲಿಕಾಂ ಸಂಸ್ಥೆಯ ಸಹ ಸಂಸ್ಥಾಪಕ ವಿಜಯಸಿಂಗ್ ಈ ಕೆಟ್ಟ ಅನುಭವವಾಗಿದೆ. ಈ ಮಾತನಾಡಿದ ಅವರು, 'ನಾನು ಕಟ್ಟುನಿಟ್ಟಾದ ಸಸ್ಯಾಹಾರಿ. ಹೀಗಾಗಿ ಉಪಾಹಾರಕ್ಕೆ ಇಡ್ಲಿ, ಸಾಂಬಾರ್ ನೀಡಲು ಹೇಳಿದ್ದೆ. ಅವರು ಆಹಾರವನ್ನು ತಂದುಕೊಟ್ಟರು. ಆದರೆ ಅದನ್ನು ತಿನ್ನುವಾಗ ನನಗೆ ಅಹಿತಕರ ಅನುಭವವಾಯಿತು. ತಿನ್ನುತ್ತಿದ್ದ ಆಹಾರವನ್ನು ಉಗುಳಿ ನೋಡಿದಾಗ ಅದು ಜಿರಳೆಯಾಗಿತ್ತು. ನಾನು ಗಾಬರಿಯಾಗಿ ತಕ್ಷಣ ನನ್ನ ಫ್ಲೈಟ್ ಪರ್ಸನ್‌ಗೆ ಕರೆ ಮಾಡಿ ಮಾಹಿತಿ ನೀಡಿದೆ. ನನಗೆ ಆಶ್ಚರ್ಯವಾಗುವಂತೆ, ಇದು ಜಿರಳೆ ಅಲ್ಲ ಕರಿಬೇವಿನ ಎಲೆ ಮತ್ತು ನಾನು ಅದನ್ನು ಸೇವಿಸಬೇಕು ಎಂದು ಫ್ಲೈಟ್ ಅಟೆಂಡರ್ ಒತ್ತಾಯಿಸಿದರು' ಎಂದು ವಿಜಯ ಸಿಂಗ್ ತಿಳಿಸಿದ್ದಾರೆ.
ನಂತರ, ಅವರು ತಮ್ಮ ದೂರು ದಾಖಲಿಸಲು ನವದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ನಂತರ T3 ಟರ್ಮಿನಲ್‌ನಲ್ಲಿ ಎರಡು ಗಂಟೆಗಳ ಕಾಲ ಕಾಯಬೇಕಾಯಿತು. 'ಮೊದಲು, ನನಗೆ ಸತ್ತ ಜಿರಳೆ ಬಡಿಸಲಾಯಿತು ಮತ್ತು ನಂತರ ಅದು ಕರಿಬೇವಿನ ಎಲೆ ಎಂದು ನಾನು ನಂಬುವಂತೆ ಒತ್ತಾಯಿಸಲಾಯಿತು. ಇದು ಸ್ವೀಕಾರಾರ್ಹವಲ್ಲ; ಎಂದು ವಿಜಯ್ ಸಿಂಗ್ ಹೇಳಿದರು.
ಸಂಜೀವ್ ಕಪೂರ್‌ಗೆ ಕೆಟ್ಟ ಆಹಾರ ನೀಡಿ ಇಕ್ಕಟ್ಟಿಗೆ ಸಿಲುಕಿದ ಏರ್ ಇಂಡಿಯಾ
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಏರ್‌ಲೈನ್ಸ್, 'ಏರ್ ಇಂಡಿಯಾ ಅಂತಹ ಲೋಪಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ನಾವು ಸಂಬಂಧಪಟ್ಟ ಅಡುಗೆದಾರರು ಮತ್ತು ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ. ಘಟನೆಗೆ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ' ಎಂದು ತಿಳಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.