ಅತ್ಯಂತ ದುಬಾರಿ ಮಸಾಲೆಗಳಲ್ಲಿ ಒಂದಾಗಿರುವ ಕೇಸರಿ ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಇದೇ ಕಾರಣಕ್ಕೆ ಪುರಾತನ ಕಾಲದಿಂದಲೂ ಅದರ ಬಳಕೆಯ ಉಲ್ಲೇಖವಿದೆ. ಈ ಕೇಸರಿ ಆರೋಗ್ಯ ಸುಧಾರಣೆ ಜೊತೆ ದಾಂಪತ್ಯಕ್ಕೊಂದು ಮೆರಗು ನೀಡುತ್ತದೆ.
ಕೇಸರಿ ವಿಶ್ವದ ಅತ್ಯಂತ ದುಬಾರಿ ಮತ್ತು ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ. ಹಲವಾರು ಔಷಧೀಯ ಗುಣಗಳಿರುವ ಕಾರಣ, ಪ್ರತಿ ಮನೆಯಲ್ಲೂ ಕೇಸರಿ ಬಳಸಲಾಗುತ್ತದೆ. ಕೇಸರಿಯನ್ನು ಅನೇಕ ರೀತಿಯಲ್ಲಿ ನೀವು ಸೇವನೆ ಮಾಡಬಹುದು. ಅದನ್ನು ಹಾಲಿಗೆ ಹಾಕಿ, ಪಾಯಸ, ಪೇಡಾ ಸೇರಿದಂತೆ ಸಿಹಿ ಖಾದ್ಯಕ್ಕೆ ಸೇರಿಸಿ ಸೇವನೆ ಮಾಡುವವರಿದ್ದಾರೆ. ಕೆಲವರು ಕೇಸರಿ ಟೀ ಕುಡಿಯಲು ಇಷ್ಟಪಡುತ್ತಾರೆ.
ಕೇಸರಿ (Saffron) ಚಹಾವನ್ನು ನೀವು ರಾತ್ರಿ ಮಲಗುವ ಮುನ್ನ ಸೇವನೆ ಮಾಡಿದ್ರು ಹಲವಾರು ಅದ್ಭುತ ಪ್ರಯೋಜನ (Benefit) ಗಳನ್ನು ಕಾಣಬಹುದು. ಕೇಸರಿ ಟೀ (Tea) ಸೇವನೆಯಿಂದ ಸೆಕ್ಸ್ ಆರೋಗ್ಯದಲ್ಲಿ ಸುಧಾರಣೆ : ಕೇಸರಿ ಜನಪ್ರಿಯ ಮತ್ತು ಅತ್ಯಂತ ದುಬಾರಿ ಮಸಾಲೆಯಾಗಿದೆ. ಆದರೆ ಆಯುರ್ವೇದದಲ್ಲಿ ಕೇಸರಿಯನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ. ಇದು ಕಾರ್ಟಿಸೋಲ್ ಹಾರ್ಮೋನ್ ಬಿಡುಗಡೆಯನ್ನು ನಿಯಂತ್ರಿಸುತ್ತದೆ ಮತ್ತು ಖಿನ್ನತೆ ಕಡಿಮೆ ಮಾಡುವ ಕೆಲಸ ಮಾಡುತ್ತದೆ.
ಡಿಪ್ರೆಶನ್‌ನಿಂದ ಬಳಲುತ್ತಿದ್ದ ಮಹಿಳೆ ಮೆದುಳಿನಲ್ಲಿತ್ತು 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳ
ಕೇಸರಿ ಟೀಯನ್ನು ನೀವು ಪ್ರತಿದಿನ ಸೇವಿಸುವುದರಿಂದ ನಿಮ್ಮ ಮನಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಲೈಂಗಿಕ ಬಯಕೆ ಮತ್ತು ಸಾಮರ್ಥ್ಯ ಹೆಚ್ಚಾಗುತ್ತದೆ. ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಂಡ ಮಹಿಳೆಯರು ಪ್ರತಿ ದಿನ 30 ಮಿಲಿಗ್ರಾಂ ಕೇಸರಿ ಸೇವನೆ ಮಾಡಬೇಕು. ನೀವು ಕೇಸರಿ ಟೀ ಮಾಡಿ ಕುಡಿಯೋದು ಒಳ್ಳೆಯ ಆಯ್ಕೆ. ಸತತ 60 ದಿನಗಳ ಕಾಲ ನೀವು ಕೇಸರಿ ಟೀ ಸೇವನೆ ಮಾಡ್ತಾ ಬಂದಲ್ಲಿ ಮಹಿಳೆಯರ ಸೆಕ್ಸ್ ಹಾರ್ಮೋನ್ ಬಿಡುಗಡೆಯಲ್ಲಿ ಸುಧಾರಣೆ ಕಾಣಬಹುದು. ಪುರುಷರು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಹೊಂದಿದ್ದರೆ 30 ಮಿಗ್ರಾಂ ಕೇಸರಿಯನ್ನು ವಾರಗಳವರೆಗೆ ಪ್ರತಿದಿನ ಸೇವಿಸಬೇಕು. ನಿಮಿರುವಿಕೆಯ ಕಾರ್ಯವು ಗಮನಾರ್ಹವಾಗಿ ಸುಧಾರಿಸುತ್ತದೆ.
ಕೇಸರಿ ಟೀ ಸೇವನೆಯಿಂದಾಗುವ ಇನ್ನಷ್ಟು ಲಾಭಗಳು :
• ನೀವು ರಾತ್ರಿ ಮಲಗುವ ಮುನ್ನ ಕೇಸರಿ ಟೀ ಕುಡಿದ್ರೆ ಆತಂಕ, ಒತ್ತಡ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆ ಕಡಿಮೆಯಾಗುತ್ತದೆ. ನಿಮ್ಮ ಮಾನಸಿಕ ಸ್ಥಿತಿಯಲ್ಲಿ ಸುಧಾರಣೆಯನ್ನು ನೀವು ಕಾಣಬಹುದು.
• ಕ್ರೋಸೆಟಿನ್ ಮತ್ತು ಕ್ರೋಸಿನ್ ನಂತಹ ಆಂಟಿಆಕ್ಸಿಡೆಂಟ್‌ಗಳು ಕೇಸರಿಯಲ್ಲಿ ಕಂಡುಬರುತ್ತವೆ, ಇದು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ.
• ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಕೇಸರಿ ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಕೇಸರಿ ಚಹಾವನ್ನು ತೆಗೆದುಕೊಳ್ಳುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಮತ್ತು ಯಾವುದೇ ರೀತಿಯ ಅಸ್ವಸ್ಥತೆ ನಿಮ್ಮನ್ನು ಕಾಡುವುದಿಲ್ಲ.
• ಸಫ್ರಾನಾಲ್ ನಂತಹ ಸಂಯುಕ್ತಗಳು ಕೇಸರಿಯಲ್ಲಿ ಕಂಡುಬರುತ್ತವೆ. ಇದು ದೇಹವನ್ನು ಶಾಂತಗೊಳಿಸುವ ಕೆಲಸ ಮಾಡುತ್ತದೆ. ಮಲಗುವ ಮೊದಲು ಕೇಸರಿ ಚಹಾವನ್ನು ಸೇವಿಸಿದರೆ ನಿಮ್ಮ ಮನಸ್ಸು ಮತ್ತು ದೇಹವು ಸಾಕಷ್ಟು ವಿಶ್ರಾಂತಿ ಪಡೆಯುತ್ತದೆ. ರಾತ್ರಿ ಉತ್ತಮ ನಿದ್ರೆಗೆ ಇದು ಸಹಕಾರಿ.
• ಕೇಸರಿಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
Sex Life: ಸಂಭೋಗದ ವೇಳೆ ಸೀನು ಬರಲು ಇದೇ ಕಾರಣ!
ಕೇಸರಿ ಟೀ ತಯಾರಿಸೋದು ಹೇಗೆ? : ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಸಿಕೊಳ್ಳಿ. ನಂತ್ರ ಒಂದು ಗ್ಲಾಸ್ ಗೆ ನಾಲ್ಕೈದು ಕೇಸರಿ ಎಸಳನ್ನು ಹಾಕಿ ಅದಕ್ಕೆ ಬಿಸಿ ನೀರನ್ನು ಹಾಕಿ. ಕೇಸರಿ ತನ್ನ ಬಣ್ಣ ಬಿಟ್ಟುಕೊಳ್ಳಲು ಶುರು ಮಾಡುತ್ತದೆ. ನೀರು ಸ್ವಲ್ಪ ತಣ್ಣಗಾದ ಮೇಲೆ ನೀವು ಅದಕ್ಕೆ ಜೇನು ತುಪ್ಪವನ್ನು ಸೇರಿಸಿ ಸೇವನೆ ಮಾಡಬಹುದು. ನೀವು ಇದನ್ನು ಬೆಳಿಗ್ಗೆ ಸೇವನೆ ಮಾಡುವವರಿದ್ದಲ್ಲಿ ಈ ನೀರಿಗೆ ಎರಡು ಬಾದಾಮಿ ಹಾಕಿ ಹಾಗೆಯೇ ಮುಚ್ಚಿಡಿ. ಬೆಳಿಗ್ಗೆ ಸೇವನೆ ಮಾಡಿ.