ಸೋರೆಕಾಯಿಯನ್ನು ಹೀಗೆ ತಿಂದ್ರೆ ಹಾಲಾಹಲವಾಗ್ಬಹುದು

By Suvarna News  |  First Published Aug 29, 2023, 7:00 AM IST

ಸೋರೆಕಾಯಿ ಆರೋಗ್ಯಕ್ಕೆ ಒಳ್ಳೆಯದು, ಅದ್ರ ಜ್ಯೂಸ್ ಸೇವನೆ ಮಾಡ್ಬೇಕು ಅಂತಾ ಎಲ್ಲರೂ ಹೇಳೋದನ್ನು ನೀವು ಕೇಳಿರ್ತೀರಿ. ಹಾಗಂತ ಎಲ್ಲ ಸೋರೆಕಾಯಿ ನಿಮ್ಮ ಆರೋಗ್ಯ ಸುಧಾರಿಸೋದಿಲ್ಲ. ಕೆಲವು ನಿಮ್ಮ ಸಾವಿಗೆ ಕಾರಣವಾಗಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ. 
 


ತರಕಾರಿಗಳು ನಮ್ಮ ಶರೀರಕ್ಕೆ ಅನೇಕ ಬಗೆಯ ಪೋಷಕಾಂಶಗಳನ್ನು ನೀಡುತ್ತವೆ. ಆದರೆ ಕೆಲವೊಮ್ಮೆ ನಮ್ಮ ನಿಷ್ಕಾಳಜಿಯಿಂದ ಅಥವಾ ಅಜಾಗರೂಕತೆಯಿಂದ ಅವು ಶರೀರಕ್ಕೆ ಮಾರಕವೂ ಆಗಬಹುದು. ಅದೇ ರೀತಿ ಆರೋಗ್ಯಕ್ಕೆ ಬಹಳ ಒಳ್ಳೆಯದಾದ ಸೋರೆಕಾಯಿ ಕೂಡ ನಮ್ಮ ಆರೋಗ್ಯಕ್ಕೆ ಹಾನಿಮಾಡಬಹುದು.

ಸೋರೆಕಾಯಿ (Bottle Gourd)  ನಮ್ಮ ಆರೋಗ್ಯ (Health) ಕ್ಕೆ ಬಹಳ ಒಳ್ಳೆಯದು. ಅದರಿಂದ ಅನೇಕ ಖಾಯಿಲೆಗಳು ವಾಸಿಯಾಗುತ್ತವೆ. ಇದರಲ್ಲಿ ವಿಟಮಿನ್ ಬಿ, ಸಿ, ಎ, ಕೆ, ಇ ಮತ್ತು ಕಬ್ಬಿಣಾಂಶ, ನಾರಿನ ಅಂಶ ಹೇರಳವಾಗಿದೆ. ಇದರಿಂದ ರಕ್ತದೊತ್ತಡ, ಹೃದಯದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮಧುಮೇಹ ಖಾಯಿಲೆಗೂ ಇದು ರಾಮಬಾಣವಾಗಿದೆ. ಸೋರೆಕಾಯಿಯಿಂದ ಜ್ಯೂಸ್, ಪಾಯಸ, ಪಲ್ಯ, ಹಲ್ವ ಮುಂತಾದವುಗಳನ್ನು ತಯಾರಿಸಲಾಗುತ್ತದೆ. ಆರೋಗ್ಯಕ್ಕೆ ಇಷ್ಟೆಲ್ಲ ಪ್ರಯೋಜನಕಾರಿಯಾದ ಸೋರೆಕಾಯಿ ಆರೋಗ್ಯಕ್ಕೆ ಮಾರಕವೂ ಆಗಬಹುದು.

Tap to resize

Latest Videos

HEALTH TIPS: ತೂಕ ಇಳಿಸೋಕೆ ಅಣಬೆ ಸಹಾಯ ಮಾಡುತ್ತಾ? ಬಳಸೋದು ಹೇಗೆ?

ಸೋರೆಕಾಯಿ ಆರೋಗ್ಯಕ್ಕೆ ಹೇಗೆ ಮಾರಕವಾಗುತ್ತೆ? :  ಸೋರೆಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು, ಇದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತೆ ಎಂದು ಅನೇಕ ಮಂದಿ ಇದರ ಜ್ಯೂಸ್ ಮಾಡಿ ಕುಡಿಯುತ್ತಾರೆ. ಇದು ನಮ್ಮ ಜೀವಕ್ಕೇ ಅಪಾಯ ತಂದೊಡ್ಡಬಹುದು, ಏಕೆಂದರೆ  ಸೋರೆಕಾಯಿಯಲ್ಲಿ ಕುಕುರ್ಬಿಟಾಸಿನ್ (Cucurbitacin) ಎಂಬ ವಿಷಕಾರಿ ಟೆಟ್ರಾಸೈಕ್ಲಿಕ್ ಟ್ರೆಂಟರ್ ಪೆನಾಯ್ಡ್ ಸಂಯುಕ್ತಗಳನ್ನು ಹೊಂದಿದೆ. ಈ ಕಾರಣದಿಂದಲೇ ಕೆಲವೊಮ್ಮೆ ಸೋರೆಕಾಯಿಯಲ್ಲಿ ಕಹಿ ಅಂಶ ಇರುತ್ತದೆ. ಕೆಲವು ಸವತೆಕಾಯಿಯಲ್ಲಿ ಕೂಡ ನಾವು ಈ ಸಂಯುಕ್ತವನ್ನು ಕಾಣಬಹುದು. ಹಾಗಾಗಿಯೇ ಕೆಲವು ಸವತೆಕಾಯಿಗಳು ಕೂಡ ಕಹಿ ಬರುತ್ತದೆ. ಸೋರೆಕಾಯಿ ಬಳ್ಳಿ ತನ್ನನ್ನು ತಾನು ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳಲು ಈ ವಿಷಕಾರಿ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಪೌಷ್ಠಿಕ ತಜ್ಞರು ಪ್ರಕಾರ, ಆಧುನಿಕ ವಿಜ್ಞಾನ ಮತ್ತು ಆಯುರ್ವೇದಗಳೆರಡೂ ಈ ರೀತಿಯ ಕಹಿ ಹಾಲುಗುಂಬಳದ ಸೇವನೆಯನ್ನು ನಿಷೇಧಿಸುತ್ತವೆ.

ಕಹಿ ಸೋರೆಕಾಯಿ ತಿನ್ನೋದ್ರಿಂದ ಹೀಗಾಗುತ್ತೆ :  ಕಹಿ ಸೋರೆಕಾಯಿ ಸೇವನೆ ದೇಹದಲ್ಲಿ ವಿಷವನ್ನು ಹರಡುತ್ತದೆ. ಇದರ ವಿರುದ್ಧ ಹೋರಾಡಬಲ್ಲ ಇನ್ನೊಂದು ವಿಷವಿಲ್ಲ ಎಂದು ಹೇಳಲಾಗುತ್ತೆ. ಈ ಕಹಿ ಸೋರೆಕಾಯಿ ಜ್ಯೂಸ್ ಕುಡಿಯೋದ್ರಿಂದ ದೇಹದಲ್ಲಿ ವಿಷದ ಅಂಶ ಹರಡುತ್ತದೆ. ಅದರ ಪರಿಣಾಮವಾಗಿ ಹೊಟ್ಟೆ ನೋವು, ವಾಂತಿ , ಅಜೀರ್ಣ, ಅತಿಸಾರ, ಹೆಮಟೆಮೆಸಿಸ್, ಹೆಮಟೊಚೆಜಿಯಾ, ಡೈರಿಯಾ, ಶಾಕ್ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೇ ಸೋರೆಕಾಯಿ ಜ್ಯೂಸಿನಿಂದ ಜಠರಗರುಳಿನ ರಕ್ತಸ್ರಾವ ಮತ್ತು ಹೈಪೋಟೆನ್ಶನ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

Brown Bread Vs White Bread: ಬ್ರೌನ್ ಬ್ರೆಡ್ ನಿಜಕ್ಕೂ ಆರೋಗ್ಯಕ್ಕೆ ಉತ್ತಮನಾ?

ಸೋರೆಕಾಯಿಯನ್ನು ಹೀಗೆ ಪರೀಕ್ಷೆ ಮಾಡಿ :  ಸವತೆಕಾಯಿಯ ತುದಿ ಅಥವಾ ಬುಡದ ಭಾಗ ಕಹಿ ಬಂದರೆ ಅದನ್ನು ನಾವು ಉಜ್ಜಿ ನಂತರ ಬಳಸುತ್ತೇವೆ ಇಲ್ಲವೇ ಸವತೆಕಾಯಿಯ ತುದಿ ಮತ್ತು ಬುಡದ ಭಾಗವನ್ನು ಕತ್ತರಿಸಿ ಬಳಸುತ್ತೇವೆ. ಹಾಗೆ ಮಾಡಿದಾಗ ಸವತೆಕಾಯಿಯ ಕಹಿಯ ಅಂಶ ಹೊರಟುಹೋಗುತ್ತದೆ. ಕೆಲವೊಮ್ಮೆ ಸವತೆಕಾಯಿ ಪೂರ್ತಿಯಾಗಿ ಕಹಿಯಾಗಿರುವುದೂ ಉಂಟು. ಆಗ ಅದನ್ನು ಎಸೆಯಬೇಕಾಗುತ್ತದೆ.
ಉಳಿದ ತರಕಾರಿಗಳಂತೆಯೇ ಒಮ್ಮೊಮ್ಮೆ ಸೋರೆಕಾಯಿ ಕೂಡ ಕಹಿ ಬರಬಹುದು. ಹಾಗಾಗಿ ಅದರ ಜ್ಯೂಸ್ ಮಾಡುವ ಮೊದಲು ನೀವು ಮೊದಲು ಅದನ್ನು ಟೇಸ್ಟ್ ಮಾಡಿ. ಸೋರೆಕಾಯಿಯ ಜ್ಯೂಸ್ ತಯಾರಿಸುವ ಮೊದಲು ಅದರ ಸಣ್ಣ ಭಾಗವನ್ನು ತಿಂದು ನೋಡಿ. ಹಾಗೊಮ್ಮೆ ಸೋರೆಕಾಯಿ ಕಹಿಯಾಗಿದ್ದಲ್ಲಿ ಅದನ್ನು ಜ್ಯೂಸ್ ಮಾಡದೇ ಹಾಗೇ ಎಸೆದುಬಿಡಿ. ಹೀಗೆ ಕಹಿಯಾಗಿರುವ ಸೋರೆಕಾಯಿಯ ಜ್ಯೂಸ್ ಸೈನೈಡ್ ಗೆ ಸಮ ಎನ್ನುತ್ತಾರೆ ತಜ್ಞರು. ಈ ಜ್ಯೂಸ್ ಸೇವಿಸಿದ ಕೆಲವೇ ಕ್ಷಣಗಳಲ್ಲಿ ವಾಂತಿ ಆರಂಭವಾಗುತ್ತೆ ಹಾಗೂ ರಕ್ತದೊತ್ತಡವೂ ಕೂಡ ಬಹಳ ವೇಗವಾಗಿ ಇಳಿಯುತ್ತೆ. ಹಾಗಾಗಿ ಯಾವುದೇ ಆಹಾರವನ್ನು ತಯಾರಿಸುವಾಗಲೂ ನಾವು ಎಚ್ಚರಿಕೆಯಿಂದ ಇರಬೇಕು ಹಾಗೂ ಅದರ ಬಗ್ಗೆ ಸರಿಯಾಗಿ ತಿಳಿದಕೊಳ್ಳಬೇಕು ಇಲ್ಲವಾದಲ್ಲಿ ಅವು ನಮ್ಮ ಶರೀರಕ್ಕೆ ವಿಷಕಾರಿಯಾಗಬಹುದು.
 

click me!