ಐಪಿಎಲ್‌ ಬ್ಯುಸಿ ನಡುವೆಯೂ ಬೆಂಗಳೂರಿನ CTRಗೆ ಭೇಟಿ ನೀಡಿದ ವಿರುಷ್ಕಾ ಜೋಡಿ

By Vinutha Perla  |  First Published Apr 22, 2023, 4:00 PM IST

ಬೆಂಗಳೂರು ಅಂದ್ರೆ ಆಹಾರಪ್ರಿಯರ ಪಾಲಿಗೆ ಸ್ವರ್ಗ. ನಾನಾ ಬಗೆಯ ಆಹಾರಗಳು ಇಲ್ಲಿ ಲಭ್ಯವಿದೆ. ಹೀಗಾಗಿ ಬೇರೆ ರಾಜ್ಯದ, ದೇಶದ ಜನರು ಬೆಂಗಳೂರಿಗೆ ಆಗಮಿಸಿ ಇಲ್ಲಿನ ಬಗೆಬಗೆಯ ಆಹಾರವನ್ನು ಸವಿಯುತ್ತಾರೆ. ಅಷ್ಟೇ ಯಾಕೆ ಸೆಲಬ್ರಿಟಿಗಳು ಸಹ ಇಲ್ಲಿನ ರುಚಿಗೆ ಮಾರುಹೋಗಿದ್ದಾರೆ. ಇವತ್ತು ಬೆಂಗಳೂರಿನ CTRಗೆ ಕ್ರಿಕೆಟ್-ತಾರಾ ಜೋಡಿ ವಿರುಷ್ಕಾ ಭೇಟಿ ನೀಡಿದ್ರು. 


ಸಿಲಿಕಾನ್ ಸಿಟಿ ಬೆಂಗಳೂರು, ಹಲವಾರು ಪ್ರಸಿದ್ಧ ಹೊಟೇಲ್‌ಗಳನ್ನು ಹೊಂದಿದೆ. ಕೆಲವು ತಮ್ಮ ಐಷಾರಾಮಿತನಕ್ಕೆ ಹೆಸರಾದರೆ ಇನ್ನು ಕೆಲವು ಹತ್ತು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ತಮ್ಮ ರುಚಿಯಿಂದಲೇ ಫೇಮಸ್ ಆಗಿವೆ. ಹೀಗಾಗಿ ಬೇರೆ ರಾಜ್ಯ, ದೇಶಗಳಿಂದ ಆಗಮಿಸುವ ಜನರು ಇಲ್ಲಿನ ಹೆಸರುವಾಸಿ ಹೊಟೇಲ್‌ಗಳಿಗೆ ತಪ್ಪದೇ ಭೇಟಿ ನೀಡುತ್ತಾರೆ. ಇಂಥಾ ಹಳೆಯ ಮತ್ತು ಫೇಮಸ್ ಹೊಟೇಲ್‌ಗಳಲ್ಲೊಂದು CTR ಅಥವಾ ಸೆಂಟರ್ ಟಿಫಿನ್ ರೂಮ್‌. ಮಲ್ಲೇಶ್ವರಂನಲ್ಲಿರುವ ಈ ಹೊಟೇಲ್‌ ರುಚಿಕರವಾದ ಮಸಾಲೆ ದೋಸೆಗೆ ಹೆಚ್ಚು ಹೆಸರುವಾಸಿಯಾಗಿದೆ. ಹೀಗಾಗಿಯೇ ಬೆಂಗಳೂರಿಗೆ ಬರುವ ಸೆಲೆಬ್ರಿಟಿಗಳು ತಪ್ಪದೇ ಇಲ್ಲಿಗೆ ಭೇಟಿ ನೀಡುತ್ತಾರೆ. 

ಇಂದು ಐಪಿಎಲ್‌ ಬ್ಯುಸಿ ನಡುವೆಯೂ ವಿರಾಟ್‌ ಕೊಹ್ಲಿ-ಅನುಷ್ಕಾ ಜೋಡಿ ಸಿಟಿಆರ್‌ಗೆ ಭೇಟಿ (Visit) ನೀಡಿದ್ರು. ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೂ ಮುನ್ನ ದಂಪತಿ (Couple) ಮಲ್ಲೇಶ್ವರಂನಲ್ಲಿರುವ ಸೆಂಟರ್‌ ಟಿಫನ್‌ ರೂಂಗೆ ಭೇಟಿ ಕೊಟ್ರು. ಅಭಿಮಾನಿಗಳು (Fans) ವಿರುಷ್ಕಾ ಜೋಡಿಯ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ರು.

Latest Videos

undefined

ಕಾಫಿ ಪ್ರಿಯರಾ, ಬೆಂಗಳೂರಿನಲ್ಲಿ ಅತ್ಯುತ್ತಮ ಫಿಲ್ಟರ್ ಕಾಫಿ ಇಲ್ಲಿ ಸಿಗುತ್ತೆ ನೋಡಿ

1920ರಲ್ಲಿ ಸ್ಥಾಪಿಸಿದ ರೆಸ್ಟೋರೆಂಟ್ ಸೆಂಟ್ರಲ್ ಟಿಫಿನ್ ರೂಂ
ಬೆಂಗಳೂರಿನಲ್ಲಿ ವೈವಿ ಸುಬ್ರಮಣ್ಯಂ ಅವರು 1920ರಲ್ಲಿ ಸ್ಥಾಪಿಸಿದ ರೆಸ್ಟೋರೆಂಟ್ CTR. ಈ ಹೊಟೇಲ್ ಸಸ್ಯಾಹಾರಿ ಆಹಾರವನ್ನು ಮಾತ್ರ ಪೂರೈಸುತ್ತದೆ ಇಲ್ಲಿನ ರುಚಿಕರವಾದ ಆಹಾರ (Food)ದಿಂದಾಗಿ ಇಲ್ಲಿ ಯಾವಾಗಲೂ ಜನಸಂದಣಿ ಇರುತ್ತದೆ. ದೋಸೆಗಳ ಹೊರತಾಗಿ CTR ಇಡ್ಲಿ-ವಡಾ , ಪೂರಿ-ಸಾಗು, ಖಾರಾಬಾತ್, ಕೇಸರಿಬಾತ್, ಮಂಗಳೂರು ಬಜ್ಜಿ , ಮದ್ದೂರು ವಡಾ ಮತ್ತು ಫಿಲ್ಟರ್ ಕಾಫಿಗೆ ಸೆಂಟರ್ ಟಿಫಿನ್ ರೂಂ ಹೆಸರುವಾಸಿಯಾಗಿದೆ.

ಮಲ್ಲೇಶ್ವರಂನ ಸಿಟಿಆರ್‌ನಲ್ಲಿ ಮಸಾಲೆ ದೋಸೆ ಸವಿದ ಜೆ.ಪಿ. ನಡ್ಡಾ
ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮಲ್ಲೇಶ್ವರದ ಹೆಸರಾಂತ ಸಿಟಿಆರ್ ಹೋಟೆಲಿನಲ್ಲಿ ಜನಸಾಮಾನ್ಯರ ಜತೆ ಬೆರೆತು, ತಮ್ಮ ಪಕ್ಷದ  ಸಹವರ್ತಿಗಳೊಂದಿಗೆ ಮಸಾಲೆದೋಸೆ ಸವಿದಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮಂಡಲ ಮುಖ್ಯಸ್ಥೆ ಕಾವೇರಿ ಕೇದಾರನಾಥ್ ಮುಂತಾದವರು ನಡ್ಡಾ ಅವರು ಜೊತೆಗಿದ್ದರು.

ಇದಕ್ಕೂ ಮೊದಲು ಹೋಟೆಲಿಗೆ ಆಗಮಿಸಿದ ನಡ್ಡಾ ಅವರನ್ನು ಸಿಟಿಆರ್ ಸಿಬ್ಬಂದಿ ಹೂಗುಚ್ಛ ನೀಡಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಡ್ಡಾ ಮತ್ತು ಅಶ್ವತ್ಥ ನಾರಾಯಣ ಅವರಿಗೆ ಜೈಕಾರ ಕೂಗಿದರು. ಹೋಟೆಲಿನಲ್ಲಿ ಇದ್ದ ಗ್ರಾಹಕರ ಬಳಿಗೆ ಹೋಗಿ, ಅವರನ್ನೆಲ್ಲಾ ಮಾತನಾಡಿಸಿದ ನಡ್ಡಾ, ಎಲ್ಲರ ಮಾತುಗಳನ್ನು ಆಲಿಸಿದರು.  ಲೋಕಾಭಿರಾಮವಾಗಿ ಕೆಲಹೊತ್ತು ಕಳೆದು ಸಿಟಿಆರ್ ಹೋಟೆಲ್ ಮತ್ತಿತರ ಸಂಗತಿಗಳ ಬಗ್ಗೆ ಹಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು

ನಾನ್‌ವೆಜ್‌ ಪ್ರಿಯರಾ ? ಬೆಂಗಳೂರಲ್ಲಿ ಬೆಸ್ಟ್ ದೊನ್ನೆ ಬಿರಿಯಾನಿ ಇಲ್ಲೆಲ್ಲಾ ಸಿಗುತ್ತೆ ನೋಡಿ

ವಿದ್ಯಾರ್ಥಿ ಭವನದಲ್ಲಿ ಮಸಾಲೆ ದೋಸೆ, ಫಿಲ್ಟರ್‌ ಕಾಫಿ ಸವಿದ ಸ್ಟಾರ್‌ಬಕ್ಸ್ ಸಹ ಸಂಸ್ಥಾಪಕ
ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನಕ್ಕೆ ಅನಿರೀಕ್ಷಿತ ಅತಿಥಿಯೊಬ್ಬರು ಆಗಮಿಸಿದ್ದರು. ಇಲ್ಲಿನ ಫೇಮಸ್ ಮಸಾಲೆ ದೋಸೆ ಹಾಗೂ ಫಿಲ್ಟರ್ ಕಾಫಿ ಸವಿದು ವಾರೆ ವ್ಹಾ ಅಂದರು. ಇಲ್ಲಿಗೆ ಭೇಟಿ ನೀಡಿದ್ದು ಮತ್ಯಾರೂ ಅಲ್ಲ ಸ್ಟಾರ್‌ಬಕ್ಸ್‌ನ ಸಹ-ಸಂಸ್ಥಾಪಕರಾದ ಜೆವ್ ಸೀಗಲ್. ನಗರದಲ್ಲಿ ನಡೆಯುತ್ತಿರುವ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್ 2022ರಲ್ಲಿ ಪಾಲ್ಗೊಳ್ಳಲು ಜೆವ್ ಸೀಗಲ್ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿ ಭವನಕ್ಕೆ ಆಗಮಿಸಿ ಮಸಾಲೆ ದೋಸೆ ಸವಿದರು. ಅವರು 1971ರಲ್ಲಿ ಸ್ಟಾರ್‌ಬಕ್ಸ್, ಕಾಫಿಹೌಸ್‌ಗಳ ಸಂಸ್ಥೆಯನ್ನು ಸಹ-ಸ್ಥಾಪಿಸಿದರು. 1980ರಲ್ಲಿ ಕಂಪನಿಯಿಂದ ನಿರ್ಗಮಿಸುವವರೆಗೆ ಉಪಾಧ್ಯಕ್ಷ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರು ಈಗ ಸ್ಟಾರ್ಟ್-ಅಪ್ ಸಲಹೆಗಾರ ಮತ್ತು ವ್ಯಾಪಾರ ಸಲಹೆಗಾರರಾಗಿ ಕೆಲಸ ಮಾಡುತ್ತಾರೆ.

. and spotted this legendary Malleshwaram restaurant..crowd chants pic.twitter.com/tPCocgI1en

— A Sharadhaa (@sharadasrinidhi)
click me!