Yummy ಮೀನು ಫ್ರೈ ತಿನ್ನೋ ಮುಂಚೆ ಗೊತ್ತಿರ್ಲಿ, ಅಲರ್ಜಿ ಕಾಡ್ಬೋದು

By Suvarna News  |  First Published Jul 17, 2022, 1:11 PM IST

ಸಮುದ್ರಾಹಾರವು ಪೌಷ್ಟಿಕವಾಗಿದೆ ಮತ್ತು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೂ ಪ್ರತಿಯೊಬ್ಬರೂ ಸೀಫುಡ್‌ ಇಷ್ಟಪಡುವುದಿಲ್ಲ. ಯಾಕೆಂದರೆ ಸಮುದ್ರಾಹಾರವನ್ನು ತಿನ್ನಲು ಕೆಲವು ಅನಾನುಕೂಲತೆಗಳಿವೆ. ಹಾಗಿದ್ರೆ ಸೀಫುಡ್ ಸೇವನೆಯಿಂದ ಆರೋಗ್ಯಕ್ಕೆ ಆಗೋ ಪ್ರಯೋಜನ ಮತ್ತು ತೊಂದ್ರೆಯೇನು ತಿಳ್ಕೊಳ್ಳೋಣ.


ನೀವು ಬೀಚ್ ವಿಹಾರದಲ್ಲಿದ್ದಾಗ ಹತ್ತಿರದ ಸ್ಟಾಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರವನ್ನು ಸೇವಿಸುವುದು ಅಗತ್ಯವಾಗಿರುತ್ತದೆ. ಏಕೆಂದರೆ ಅವುಗಳು ನಿಮಗೆ ವಿವಿಧ ಸಮುದ್ರಾಹಾರದ ಆಯ್ಕೆಗಳನ್ನು ಒದಗಿಸುತ್ತವೆ. ಸಿಗಡಿ ಮೀನುಗಳಿಂದ ಹಿಡಿದು ದೊಡ್ಡದಾದ ಅಂಜಲ್‌ ಮೀನಿನ ವರೆಗೆ ಇವೆಲ್ಲವೂ ಬಾಯಿಯ ರುಚಿಯನ್ನು ತಣಿಸುತ್ತವೆ. ಕೇವಲ ರುಚಿಗೆ ಮಾತ್ರವಲ್ಲ, ಸೀಫುಡ್‌ ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಆರೋಗ್ಯಕ್ಕೆ ಪ್ರಯೋಜನಾನೂ ಇದೆ, ಹಾಗೆಯೇ ತೊಂದರೆನೂ ಇದೆ. 

ಸಮುದ್ರಾಹಾರವನ್ನು (Sea food) ಎಲ್ಲರೂ ಇಷ್ಟಪಡುತ್ತಾರೆ ಮತ್ತು ಸಮುದ್ರಾಹಾರವು ಪೌಷ್ಟಿಕವಾಗಿದೆ ಮತ್ತು ದೇಹಕ್ಕೆ (Body) ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಮೀನು, ಒಮೆಗಾ 3 ಅಂಶದಲ್ಲಿ ಸಮೃದ್ಧವಾಗಿದೆ. ಇದು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯ ಕಾಯಿಲೆಗಳ (Heart disease) ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಮೆಗಾ -3 ನಿಮ್ಮ ಕೂದಲು ಮತ್ತು ಚರ್ಮದ (Skin) ಆರೋಗ್ಯಕ್ಕೂ ಒಳ್ಳೆಯದು. ಹಾಗೆಯೇ ಕೆಲವೊಮ್ಮೆ ಸೀಫುಡ್ ಆರೋಗ್ಯಕ್ಕೆ ತೊಂದರೆಯನ್ನೂ ಉಂಟು ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆಯಾ ? ಹಾಗಿದ್ರೆ ಸಮುದಾಹಾರ ಸೇವನೆಯಿಂದ ಸಿಗೋ ಪ್ರಯೋಜನವೇನು, ತೊಂದರೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.

Tap to resize

Latest Videos

ಮಂಗಳೂರು ಶೈಲಿ ಬಂಗುಡೆ ಮೀನು ಗಸಿ ಮಾಡೋದು ಹೇಗೆ ಗೊತ್ತಾ?

ಸೀಫುಡ್ ಸೇವಿಸುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು
ಸಮುದ್ರಾಹಾರವು ಒಮೆಗಾ -3ಯ ಸಮೃದ್ಧ ಮೂಲವಾಗಿದೆ. ಇದು ದೇಹದ ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಮೆಗಾ -3 ಅಂಶ ನಿಮ್ಮ ಕೂದಲು ಮತ್ತು ಚರ್ಮಕ್ಕೂ ಒಳ್ಳೆಯದು.ಸೀ ಫುಡ್‌ನಲ್ಲಿರುವ ಒಮೆಗಾ-3 ಕಣ್ಣುಗಳನ್ನೂ ರಕ್ಷಿಸುತ್ತದೆ. ಣ್ಣುಗಳನ್ನು ಮ್ಯಾಕ್ಯುಲರ್ ಡಿಜೆನರೇಶನ್‌ನಿಂದ ರಕ್ಷಿಸುತ್ತದೆ ಮತ್ತು ದೃಷ್ಟಿ ನಷ್ಟವನ್ನು ತಡೆಯುತ್ತದೆ.

ಸಮುದ್ರಾಹಾರದಲ್ಲಿ ಪ್ರೋಟೀನ್ ಕೂಡಾ ಸಮೃದ್ಧವಾಗಿದೆ. ಇದು ದೇಹಕ್ಕೆ ಅಗತ್ಯವಾದ ಪ್ರಮಾಣದ ಪ್ರೋಟೀನ್‌ನ್ನು ಒದಗಿಸುತ್ತದೆ ಮತ್ತು ದೇಹವನ್ನು ಆರೋಗ್ಯಕರವಾಗಿಡುತ್ತದೆ. ಏಕೆಂದರೆ ಇದು ಕ್ಯಾಲೋರಿ ಸೇವನೆಯನ್ನು ಸೇರಿಸುವುದಿಲ್ಲ. 

ಸೀಫುಡ್ ಸೇವಿಸುವುದರಿಂದ ಆಗುವ ತೊಂದರೆಗಳು
ಎಲ್ಲರಿಗೂ ಸೀಫುಡ್ ಇಷ್ಟ ಆಗಲೇಬೇಕು ಎಂದೇನಿಲ್ಲ. ಕೆಲವರಿಗೆ ಇದು ಉತ್ತಮ ಆಯ್ಕೆಯಾಗಿದ್ದರೂ, ಇನ್ನು ಕೆಲವರಿಗೆ ಸಮುದ್ರಾಹಾರ ಇಷ್ಟವಾಗುವುದಿಲ್ಲ. ಕೆಲವರ ದೇಹಕ್ಕೆ ಸೀ ಫುಡ್ ಅಲರ್ಜಿಯನ್ನುಂಟು ಮಾಡುತ್ತದೆ. ಕೆಲವು ಜನರಲ್ಲಿ ಇದು ತೀವ್ರವಾಗಿರಬಹುದು ಮತ್ತು ಅಂಥವರನ್ನು ಆಸ್ಪತ್ರೆಗೆ ಸೇರಿಸಬೇಕಾಗಿ ಬರುತ್ತದೆ. ಸಮುದ್ರದ ನೀರು ಹೆಚ್ಚು ಕಲುಷಿತವಾಗಿದೆ ಮತ್ತು ಆದ್ದರಿಂದ, ಸಮುದ್ರದಿಂದ ಬರುವ ಆಹಾರವು ಹೆಚ್ಚು ಕಲುಷಿತವಾಗಿದೆ. ಈ ಸಮುದ್ರಾಹಾರವನ್ನು ತಿನ್ನುವುದು ಉತ್ತಮ ಆಯ್ಕೆಯಾಗಿಲ್ಲದಿರಬಹುದು. ಏಕೆಂದರೆ ಇದು ದೇಹಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಹೆಚ್ಚುತ್ತಿರುವ ಬೇಡಿಕೆಗಳಿಂದಾಗಿ, ಮೀನುಗಳನ್ನು ಈಗ ಸಾಕಣೆ ಮಾಡಲಾಗುತ್ತಿದೆ. ಇದನ್ನು ರಾಸಾಯನಿಕಗಳನ್ನು ಬಳಸುವ ಫಾರ್ಮ್‌ಗಳಲ್ಲಿ ಉತ್ಪಾದಿಸಲಾಗುತ್ತಿದೆ ಮತ್ತು ಇದು ಸಮುದ್ರಾಹಾರವನ್ನು ಸೇವನೆಗೆ ಅನಾರೋಗ್ಯಕರವಾಗಿಸುತ್ತದೆ.

ಹಲ್ಲಿನ ಆರೋಗ್ಯಕ್ಕಾಗಿ ಯಾವ ಆಹಾರ ತಿನ್ನೋದು ಒಳ್ಳೆಯದು ?

ಸೀಫುಡ್ ಸೇವನೆಯಿಂದ ತೂಕ ಕಡಿಮೆ ಮಾಡ್ಕೊಳ್ಳೋದು ಹೇಗೆ ?
ತೂಕ ನಷ್ಟಕ್ಕೆ (Weight loss) ಸಮುದ್ರಾಹಾರ ಉತ್ತಮವಾಗಿದೆ. ಆದ್ರೆ ಅವುಗಳನ್ನು ತಿನ್ನುವಾಗ ಕೆಲವೊಂದು ವಿಷಯಗಳನ್ನು ಗಮನಿಸಬೇಕು. ತೂಕವನ್ನು ಗಮನದಲ್ಲಿಟ್ಟುಕೊಳ್ಳಲು ನೀವು ಮೀನುಗಳನ್ನು ತಿನ್ನಲು ಆಯ್ಕೆ ಮಾಡಿಕೊಂಡಿದ್ದರೆ, ಹೆಚ್ಚು ಬೆಣ್ಣೆಯನ್ನು ಸೇರಿಸುವ ತಪ್ಪನ್ನು ಮಾಡಬೇಡಿ. ಸಮುದ್ರಾಹಾರ ತಯಾರಿಸುವಾಗ ಬೆಣ್ಣೆಯ ಘನಗಳನ್ನು ಸೇರಿಸುವ ಬದಲು, ಹೆಚ್ಚುವರಿ ಆಲಿವ್ ಎಣ್ಣೆಯನ್ನು ಬಳಸುವುದು ಒಳ್ಳೆಯದು. 

ಕರಿದ ಆಹಾರಗಳು ಅತ್ಯುತ್ತಮವಾದ ರುಚಿಯನ್ನು ನೀಡುತ್ತದೆ. ಆದರೆ ನೀವು ತೂಕವನ್ನು ಇಳಿಸಲು ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರಾಗಿದ್ದರೆ, ಕಡಿಮೆ ಕ್ಯಾಲೋರಿ ಮೀನು ಅಥವಾ ಇತರ ಯಾವುದೇ ಸಮುದ್ರಾಹಾರವಾಗಿದ್ದರೂ ಸಹ, ಕರಿದ ಆಹಾರವನ್ನು ತಪ್ಪಿಸಿ. ಗರಿಗರಿಯಾಗಿ ತಿನ್ನುವುದು ಬಾಯಿಗೆ ರುಚಿ ಅನಿಸಬಹುದು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕರಿದ ಮೀನಿನ ಪದಾರ್ಥ ತೂಕವನ್ನು ಹೆಚ್ಚಿಸುತ್ತದೆಯಷ್ಟೇ ಬದಲು ಕಡಿಮೆ ಮಾಡುವುದಿಲ್ಲ. . 

click me!