ಅಮಿತಾಭ್ ಬಚ್ಚನ್ ಅವರ ರಾಮಕಥೆಯನ್ನು ನಿರೂಪಿಸಲಿದ್ದು, ಈ ಸಂಭ್ರಮಾಚರಣೆಗಳಲ್ಲಿ ಆರತಿಗಳು, ಪವಿತ್ರ ತಾಣಗಳ ಪೂಜೆಗಳು ಮತ್ತು ಖ್ಯಾತ ಕಲಾವಿದರಿಂದ ಭಗವಾನ್ ರಾಮನ ಪರಂಪರೆಯನ್ನು ಗೌರವಿಸುವ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಲಿದೆ..
ಕೋಟ್ಯಂತರ ಮಂದಿಗೆ ವಿಶೇಷ ಲೈವ್ ಸ್ಟ್ರೀಮ್ ಮೂಲಕ ರಾಮನವಮಿಯ (Ramanavami) ಪವಿತ್ರ ಸಂಭ್ರಮಾಚರಣೆ ತರಲು ಜಿಯೋ ಹಾಟ್ ಸ್ಟಾರ್ ಮತ್ತು ಪದ್ಮ ವಿಭೂಷಣ ಶ್ರೀ ಅಮಿತಾಭ್ ಬಚ್ಚನ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಲೈವ್ ಪ್ರಸಾರವಾಗಲಿದ್ದು, ಆ ಮೂಲಕ ಕೋಟ್ಯಂತರ ಭಕ್ತರು ಈ ಸಮಯದಲ್ಲಿ ಸದುಪಯೋಗದ ಜೊತೆಗೆ ಭಕ್ತಿಪರವಶತೆಯನ್ನೂ ಅನುಭವಿಸಲು ಸಾಧ್ಯವಾಗಲಿದೆ.
ಪದ್ಮವಿಭೂಷಣ ಶ್ರೀ ಅಮಿತಾಭ್ ಬಚ್ಚನ್ (Amitabh Bachchan) ಅವರ ರಾಮಕಥೆಯನ್ನು ನಿರೂಪಿಸಲಿದ್ದು, ಈ ಸಂಭ್ರಮಾಚರಣೆಗಳಲ್ಲಿ ಆರತಿಗಳು, ಪವಿತ್ರ ತಾಣಗಳ ಪೂಜೆಗಳು ಮತ್ತು ಖ್ಯಾತ ಕಲಾವಿದರಿಂದ ಭಗವಾನ್ ರಾಮನ ಪರಂಪರೆಯನ್ನು ಗೌರವಿಸುವ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗಲಿದೆ.
ಜಿಯೋ ಹಾಟ್ ಸ್ಟಾರ್ ಭಾರತದ ಲೈವ್ ಸ್ಟ್ರೀಮಿಂಗ್ ಅನುಭವವನ್ನು ಹೆಚ್ಚು ಒಳಗೊಳ್ಳುವ ಮತ್ತು ಲಭ್ಯವಾಗುವಂತೆ ಮಾಡುವ ಮೂಲಕ ಕ್ರಾಂತಿಕಾರಕಗೊಳಿಸುವುದನ್ನು ಮುಂದುವರಿಸುತ್ತಿದ್ದು ಲಕ್ಷಾಂತರ ಮಂದಿಯನ್ನು ಸಂಪರ್ಕಿಸುತ್ತಿದೆ ಮತ್ತು ವೀಕ್ಷಕರು ಹಾಗೂ ಅವರ ಅಚ್ಚುಮೆಚ್ಚಿನ ಕಾರ್ಯಕ್ರಮಗಳ ನಡುವೆ ಅಂತರ ತುಂಬುತ್ತಿದೆ. ಕೋಟ್ಯಂತರ ಜನರನ್ನು ಸೆಳೆದ ಕೋಲ್ಡ್ ಪ್ಲೇಯ ಮ್ಯೂಸಿಕ್ ಆಫ್ ಸ್ಫಿಯರ್ಸ್ ಮತ್ತು ಮಹಾಶಿವರಾತ್ರಿ: ದಿ ಡಿವೈನ್ ನೈಟ್ ಲೈವ್ ಸ್ಟ್ರೀಮ್ ಅಭೂತಪೂರ್ವ ಯಶಸ್ಸಿನ ನಂತರ ಈ ಪ್ಲಾಟ್ ಫಾರಂ ರಾಮನವಮಿಯನ್ನು ವೀಕ್ಷಕರಿಗೆ ತರಯತ್ತಿದ್ದು ಏಪ್ರಿಲ್ 6ರಂದು ಅಯೋಧ್ಯೆಯಲ್ಲಿನಡೆಯುವ ಕಾರ್ಯಕ್ರಮದ ವಿಶೇಷ ಲೈವ್ ಸ್ಟ್ರೀಮ್ ಲಭ್ಯವಿರುತ್ತದೆ.
ನಮಗೆ ಕಾಣದ ಭೂಮಿಯ ಪೋಲ್ಸ್ ಬಾಹ್ಯಾಕಾಶದಿಂದ ಹೇಗೆ ಕಾಣುತ್ತೆ? ಅದ್ಭುತ ವಿಡಿಯೋ ಸೆರೆ
ಈ ಸಂಭ್ರಮಾಚರಣೆಯಲ್ಲಿ ಖ್ಯಾತ ನಟ ಪದ್ಮ ವಿಭೂಷಣ ಪುರಸ್ಕೃತ ಶ್ರೀ ಅಮಿತಾಭ್ ಬಚ್ಚನ್ ಅವರು ರಾಮಕಥೆಯ ಸ್ಫೂರ್ತಿದಾಯಕ ಕಥೆಗಳನ್ನು ನಿರೂಪಿಸಲಿದ್ದಾರೆ. ಸಮುದಾಯದ ಸಂಭ್ರಮಾಚರಣೆಗಳನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಈ ಲೈವ್ ಸ್ಟ್ರೀಮ್ ಜಿಯೊಹಾಟ್ ಸ್ಟಾರ್ ನ ಬದ್ಧತೆಯನ್ನು ಮರು ದೃಢೀಕರಿಸುತ್ತಿದ್ದು ಲಭ್ಯತೆ ಹೆಚ್ಚಿಸುತ್ತದೆ, ಸಾಂಸ್ಕೃತಿಕ ಕ್ಷಣಗಳನ್ನು ಕೋಟ್ಯಂತರ ಮಂದಿಗೆ ತರುತ್ತದೆ ಮತ್ತು ಅವಿಸ್ಮರಣೀಯ ಅನುಭವ ನೀಡುತ್ತದೆ.
ಈ ಮಹತ್ತರ ಸಂದರ್ಭದ ಕೇಂದ್ರದಲ್ಲಿ ಪದ್ಮ ವಿಭೂಷಣ ಶ್ರೀ ಅಮಿತಾಭ್ ಬಚ್ಚನ್ ಭಗವಾನ್ ರಾಮನ ಮೌಲ್ಯಗಳ ಕುರಿತಾದ ಸಮಯರಹಿತ ಜ್ಞಾನ ಮತ್ತು ಪ್ರತಿಫಲನಗಳನ್ನು ಹಂಚಿಕೊಳ್ಳುತ್ತಿದ್ದು ನಮ್ಮ ಸಾಂಸ್ಕೃತಿಕ ಪರಂಪರೆಯ ಸಂಭ್ರಮಾಚರಣೆ ಸಾಧ್ಯವಾಗಿಸುತ್ತದೆ ಮತ್ತು ಭಾರತಕ್ಕೆ ಸ್ಫೂರ್ತಿಯುತ ಮುನ್ನೋಟ ನೀಡುತ್ತದೆ. ಈ ಹಬ್ಬವು ಭಗವಾನ್ ರಾಮನ ಜನನ ಮತ್ತು ಪ್ರಯಾಣದ ಆನಂದ ಮತ್ತು ಪೂಜ್ಯತೆಯನ್ನು ಸಂಭ್ರಮಿಸುತ್ತಿದ್ದು ರಾಮಾಯಣದ ಏಳು ಕಾಂಡಗಳನ್ನು ಚಿತ್ರಿಸುತ್ತದೆ, ಈ ಎಲ್ಲವೂ ರಾಮ ಜನ್ಮಭೂಮಿಯ ಹೃದಯದಿಂದ ಲೈವ್ ಸ್ಟ್ರೀಮಿಂಗ್ ಆಗುತ್ತಿದ್ದು ವೀಕ್ಷಕರನ್ನು ಭಗವಂತನ ಪರಂಪರೆಯತ್ತ ಆಧ್ಯಾತ್ಮಿಕವಾಗಿ ಕೊಂಡೊಯ್ಯುತ್ತದೆ.
ಕಾಮನ ಬಿಲ್ಲು ಚಿತ್ರದಲ್ಲಿ ಅಣ್ಣಾವ್ರು-ಎಸ್‌ಪಿಬಿ ಒಟ್ಟಿಗೇ ಹಾಡಿದ ಹಾಡು ಮಾಯವಾಗಿದ್ದು ಯಾಕೆ?
ಶ್ರೀ ಅಮಿತಾಭ್ ಬಚ್ಚನ್ ಅವರು ಮಕ್ಕಳೊಂದಿಗೆ ಸಂವಹನದ ಕಾರ್ಯಕ್ರಮವನ್ನೂ ನಡೆಸಿಕೊಡಲಿದ್ದು ಆಯ್ದ ಕಥೆಗಳು ಮತ್ತು ಕಾಂಡಗಳ ಜೋಡಿ ಪದ್ಯಗಳನ್ನು ಸಕ್ರಿಯ ಮತ್ತು ಸಾಪೇಕ್ಷ ರೀತಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಅಯೋಧ್ಯೆಯಲ್ಲಿ ನಡೆಸುವ ವಿಶೇಷ ಪೂಜೆಯಿಂದ ದೇವಾಲಯಗಳಲ್ಲಿ ನಡೆಸುವ ಆಚರಣೆಗಳಿಂದ ಭದ್ರಾಚಲಂ, ಪಂಚವಟಿ, ಚಿತ್ರಕೂಟ ಮತ್ತು ಅಯೋಧ್ಯೆಯಲ್ಲಿ ನಡೆಯುವ ವಿಶೇಷ ಆರತಿಗಳ ನೇರ ಪ್ರಸಾರದಿಂದ ಭಕ್ತಿಪೂರ್ವಕ ಭಜನೆಗಳಿಂದ ಸಮ್ಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳವರೆಗೆ ಕೈಲಾಶ್ ಖೇರ್ ಮತ್ತು ಮಾಲಿನಿ ಅವಸ್ಥಿ ಅವರಂತಹ ಖ್ಯಾತ ಕಲಾವಿದರ ಪ್ರದರ್ಶನಗಳವರೆಗೆ ಈ ಲೈವ್ ಸ್ಟ್ರೀಮ್ ಭಕ್ತಿ ಮತ್ತು ಒಟ್ಟಿಗೆ ಇರುವುದರ ಸಾಮೂಹಿಕತೆಯ ಭಾವ ಹೊಮ್ಮಿಸುತ್ತದೆ.
ಈ ಉಪಕ್ರಮದ ಕುರಿತು ಜಿಯೋ ಹಾಟ್ ಸ್ಟಾರ್ ವಕ್ತಾರರು, 'ನಮ್ಮ ಲೈವ್ ಸ್ಟ್ರೀಮಿಂಗ್ ಸಾಮರ್ಥ್ಯಗಳು ನಮಗೆ ಭಾರತದಾದ್ಯಂತ ವೀಕ್ಷಕರಿಗೆ ಸಾಂಸ್ಕೃತಿಕವಾಗಿ ಗಮನಾರ್ಹ ಅನುಭವಗಳನ್ನು ತರಲು ಸನ್ನದ್ಧವಾಗಿಸಿದೆ. ಲೈವ್ ಸ್ಪೋರ್ಟ್ಸ್ ನಿಂದ ಕೋಲ್ಡ್ ಪ್ಲೇವರೆಗೆ- ಅಹಮದಾಬಾದ್ ನಿಂದ ಇತ್ತೀಚಿನ ಮಹಾಶಿವರಾತ್ರಿ: ದಿ ಡಿವೈನ್ ನೈಟ್ ವರೆಗೆ ಕಾರ್ಯಕ್ರಮಗಳ ಅಭೂತಪೂರ್ವ ಯಶಸ್ಸು ನಮಗೆ ಗಡಿಗಳನ್ನು ಮೀರಲು ಮತ್ತು ಭಾರತೀಯ ಗ್ರಾಹಕರಿಗೆ ಸರಿಸಾಟಿ ಇರದ ಅನುಭವ ನೀಡಲು ನಮಗೆ ಸ್ಫೂರ್ತಿ ತುಂಬಿವೆ. ರಾಮನವಮಿ ನಮ್ಮ ದೇಶದಲ್ಲಿ ಅತ್ಯಂತ ಸಂಭ್ರಮಾಚರಣೆಯ ಸಂದರ್ಭವಾಗಿದೆ ಮತ್ತು ಅದರ ಪವಿತ್ರ ಸಂಭ್ರಮಾಚರಣೆಗಳನ್ನು ದೇಶದ ಮೂಲೆ ಮೂಲೆಗೂ ಕೋಟ್ಯಂತರ ಮಂದಿಗೆ ತರಲು ನಮಗೆ ಬಹಳ ಗೌರವವಾಗಿದೆ' ಎಂದಿದ್ದಾರೆ.
ರಶ್ಮಿಕಾ ಮಂದಣ್ಣ ಇನ್ಮೇಲೆ ಟ್ರೋಲ್ ಆಗಲ್ಲ.. ಇರೋ ವಿಷ್ಯ ಎಲ್ಲಾ ಮುಂಬೈನಲ್ಲಿ ಹೇಳಿದಾರಲ್ಲ..!
ಶ್ರೀ ಅಮಿತಾಭ್ ಬಚ್ಚನ್ ಅವರು 'ಭಗವಾನ್ ರಾಮನ ಜೀವನದ ಕಥೆಯನ್ನು ನಿರೂಪಿಸುವ ಈ ಅನುಭವವು ಈ ಪವಿತ್ರ ಸಂದರ್ಭಕ್ಕೆ ಗಾಢವಾದ ಭಾವನೆಗಳನ್ನು ಹೊರಹೊಮ್ಮಿಸುವ ಭರವಸೆ ನೀಡುತ್ತದೆ' ಎಂದರು. ಪದ್ಮ ವಿಭೂಷಣ ಶ್ರೀ ಅಮಿತಾಭ್ ಬಚ್ಚನ್, 'ಅಂತಹ ಪವಿತ್ರ ಕಾರ್ಯಕ್ರಮದ ಭಾಗವಾಗುವುದು ಜೀವಿತಾವಧಿಯಲ್ಲಿ ದೊರೆಯುವ ಗೌರವವಾಗಿದೆ. ರಾಮನವಮಿ ಹಬ್ಬಕ್ಕಿಂತ ಹೆಚ್ಚಿನದಾಗಿದೆ- ಇದು ಆಳವಾದ ಪ್ರತಿಫಲನದ ಕ್ಷಣವಾಗಿದೆ, ರಾಮನ ವ್ಯಕ್ತಿತ್ವದ ಆದರ್ಶಗಳಾದ ಧರ್ಮ, ಭಕ್ತಿ ಮತ್ತು ಸದಾಚಾರಗಳನ್ನು ಅನುಸರಿಸುವ ಸಮಯವಾಗಿದೆ. ಜಿಯೊಹಾಟ್ ಸ್ಟಾರ್ ಮೂಲಕ ನಾವು ತಂತ್ರಜ್ಞಾನದ ಶಕ್ತಿಯು ದೂರಗಳನ್ನು ಮೀರಿ ಸಂಚರಿಸಿ ದೇಶಾದ್ಯಂತ ನಂಬಿಕೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಅಸಾಧಾರಣ ಸಂಭ್ರಮಾಚರಣೆಯಲ್ಲಿ ಹೃದಯಗಳನ್ನು ಒಗ್ಗೂಡಿಸಿದೆ ಎನ್ನುವುದು ನಮಗೆ ನಿಜಕ್ಕೂ ಪುಣ್ಯ ತಂದಿದೆ' ಎಂದರು.
ಈ ಬಗೆಯ ಉಪಕ್ರಮಗಳಿಂದ ಜಿಯೋ ಹಾಟ್ ಸ್ಟಾರ್ ಅನಂತ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತಿದ್ದು ದೇಶಾದ್ಯಂತ ವೀಕ್ಷಕರಿಗೆ ಅವರ ಮನೆಗಳ ಅನುಕೂಲದಲ್ಲಿ ಹಬ್ಬದ ಸೌಂದರ್ಯ ಅನುಭವಿಸಲು ಸಾಧ್ಯವಾಗಿಸುತ್ತಿದೆ. ಕೋಲ್ಡ್ ಪ್ಲೇ, ಮಹಾಶಿವರಾತ್ರಿ ಮತ್ತು ರಾಮನವಮಿಯ ಲೈವ್ ಸ್ಟ್ರೀಮ್ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಈ ಪ್ಲಾಟ್ ಫಾರಂ ದೇಶದ ಶ್ರೀಮಂತ ಪರಂಪರೆಯನ್ನು ತಲ್ಲೀನಗೊಳಿಸುವ ಮತ್ತು ಆಳವಾಗಿ ತೊಡಗಿಕೊಳ್ಳುವ ರೀತಿಯಲ್ಲಿ ಸಂಭ್ರಮಿಸುತ್ತಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಡಿಜಿಟಲ್ ಭಕ್ತಿಯ ಶಕ್ತಿಯ ಮೂಲಕ ಏಪ್ರಿಲ್ 6ರಂದು ಜಿಯೋ ಹಾಟ್ ಸ್ಟಾರ್ ನಲ್ಲಿ ವಿಶೇಷ ಲೈವ್ ಸ್ಟ್ರೀಮ್ ಮೂಲಕ ಸಂಭ್ರಮಿಸಬಹುದು.