ಕನಸಿನಲ್ಲಿ ನಗ್ನವಾಗಿ ಕಾಣಿಸಿಕೊಂಡರೆ ಬೇರೇನಲ್ಲ, ಇದೇ ಅರ್ಥ!

Published : Apr 25, 2025, 10:39 PM ISTUpdated : Apr 26, 2025, 07:10 AM IST
ಕನಸಿನಲ್ಲಿ ನಗ್ನವಾಗಿ ಕಾಣಿಸಿಕೊಂಡರೆ ಬೇರೇನಲ್ಲ, ಇದೇ ಅರ್ಥ!

ಸಾರಾಂಶ

ಕನಸುಗಳು ರೋಮಾಂಚನಕಾರಿಯೂ ಹೌದು, ಆತಂಕಕಾರಿಯೂ ನಿಜ. ಪ್ರೀತಿಸಿದ ಹುಡುಗಿಯ/ಹುಡುಗನ ಮೈ ಕಂಡರೆ ರೋಮಾಂಚನ ಅಲ್ಲವೇ? ಆದರೆ ತನಗೆ ತನ್ನದೇ ನಗ್ನ ದೇಹ ಕಂಡರೆ? ಇಂಥ ಕನಸಿನ ಅರ್ಥವೇನು? ಇಲ್ಲಿದೆ ನೋಡಿ. 

ಕನಸುಗಳು ಪ್ರತಿಯೊಬ್ಬ ವ್ಯಕ್ತಿಗೂ ಬೀಳುತ್ತವೆ. ರಾತ್ರಿ ಹೊತ್ತು ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ. ಕನಸುಗಳಿಲ್ಲದ ಗಾಢ ನಿದ್ರೆಯೇ ಅಪರೂಪ. ಜ್ಯೋತಿಷ್ಯವು ಕನಸನ್ನು ನಾನಾ ರೀತಿಯಲ್ಲಿ ಅರ್ಥೈಸುತ್ತದೆ. ಜ್ಯೋತಿಷ್ಯದ ಪ್ರಕಾರ ರಾತ್ರಿ ನಿದ್ರಿಸುವಾಗ ಬೀಳುವ ಕನಸುಗಳು ಭವಿಷ್ಯದ ಘಟನೆಗಳನ್ನು ಅಥವಾ ಭೂತಕಾಲದ ಘಟನೆಗಳನ್ನು ಸೂಚಿಸುತ್ತವೆ. ಕನಸಿನಲ್ಲಿ ನಾವು ನಗ್ನವಾದಂತೆ, ಓಡಿದಂತೆ, ಹಾರಿದಂತೆ, ಬಿದ್ದಂತೆ- ಇತ್ಯಾದಿ ದೃಶ್ಯಗಳು ಕಾಣಬಹುದು. ಪ್ರತಿಯೊಂದಕ್ಕೂ ಅರ್ಥವಿದೆ. ಹಾಗಾದರೆ ಯಾವ ರೀತಿ ಕಂಡರೆ ಏನರ್ಥ ಎಂದು ಇಲ್ಲಿ ತಿಳಿಯೋಣ ಬನ್ನಿ.

ನಗ್ನವಾಗಿ ಕಾಣಿಸಿಕೊಳ್ಳುವುದು 

ಇದೊಂದು ವಿಲಕ್ಷಣ ಕನಸು. ಕನಸಿನಲ್ಲಿ ಬೇರೊಬ್ಬರ ಮುಂದೆ ನಿಮ್ಮನ್ನು ನೀವು ನಗ್ನ ಸ್ಥಿತಿಯಲ್ಲಿ ನೋಡುವುದು ಎಂದರೆ ನಿಜ ಜೀವನದಲ್ಲಿ ನೀವು ನಿಮ್ಮ ಕುರಿತಾದ ಯಾವುದೋ ಗೌಪ್ಯ ವಿಷಯವನ್ನು ಇತರರಿಂದ ಮುಚ್ಚಿಡಲು ಪ್ರಯತ್ನಿಸುತ್ತಿದ್ದೀರಿ ಎಂದರ್ಥ. ಇದರರ್ಥ ನಿಮ್ಮ ಮನಸ್ಸಿನಲ್ಲಿ ಏನೋ ನಡೆಯುತ್ತಿದೆ. ಅದನ್ನು ನೀವು ಇತರರಿಗೆ ಹೇಳಲು ಭಯಪಡುತ್ತಿದ್ದೀರಿ ಅಥವಾ ಹೇಳಲು ಬಯಸುವುದಿಲ್ಲ. 

ಎತ್ತರದಿಂದ ಬೀಳುವುದು

ಕೆಲವು ಸಮಯದಲ್ಲಿ, ನಿಮ್ಮ ಕನಸಿನಲ್ಲಿ ನೀವು ಎತ್ತರದ ಕಟ್ಟಡ ಅಥವಾ ಪರ್ವತದಿಂದ ಬೀಳುವುದನ್ನು ಸಹ ನೀವು ನೋಡಿರಬೇಕು. ಈ ಸಾಮಾನ್ಯ ಕನಸು ನಿಮ್ಮ ಅಭದ್ರತೆಯ ಭಾವವನ್ನು ತೋರಿಸುತ್ತದೆ. ಅಂದರೆ, ನೀವು ಅಸುರಕ್ಷಿತ ಭಾವನೆ ಹೊಂದಿದ್ದೀರಿ. ಇದಲ್ಲದೆ, ನಿಮ್ಮ ಕ್ರಿಯೆಗಳಿಂದ ಉಂಟಾಗುವ ಸಂಭವನೀಯ ಅಪಾಯದ ಬಗ್ಗೆ ನೀವು ಅಸಡ್ಡೆ ಹೊಂದಿದ್ದೀರಿ ಎಂದು ಸಹ ಅರ್ಥೈಸಬಹುದು.

ತಪ್ಪಿಸಿಕೊಳ್ಳಲು ಓಡುವುದು

ಯಾರಾದರೂ ನಿಮ್ಮನ್ನು ಬೆನ್ನಟ್ಟುವಂತೆ ನೀವು ಕನಸು ಕಂಡಿದ್ದರೆ, ಅಂತಹ ಕನಸುಗಳನ್ನು ಬಹಳ ಭಯಾನಕವೆಂದು ಪರಿಗಣಿಸಲಾಗುತ್ತದೆ. ಅಂತಹ ಕನಸು ನಿಮ್ಮ ನಿಜ ಜೀವನದಲ್ಲಿ ನೀವು ಏನನ್ನೋ ನೋಡಿ ಹೆದರುತ್ತಿದ್ದೀರಿ. ನಿಮಗೆ ಇಷ್ಟವಿಲ್ಲದ ಯಾವುದೋ ವಿಷಯ ನಡೆಯಲಿದೆ ಎಂದು ಅರ್ಥ. ಈ ಕನಸು ಬಿದ್ದರೆ ಆ ಕನಸಿನಲ್ಲಿ ಯಾವುದೋ ಒಂದು ಪ್ರಾಣಿ ನಿಮ್ಮನ್ನು ಹಿಂಬಾಲಿಸಿದರೆ ನೀವು ನಿಮ್ಮ ಭಯದಿಂದ ಓಡುತ್ತಿದ್ದೀರಿ ಎಂದು ಪರಿಗಣಿಸಲಾಗಿದೆ.

ಹಲ್ಲು ನೋವಿನ ಬಾಧೆ 

ಕನಸಿನಲ್ಲಿ ಹಲ್ಲು ನೋವು ಕಾಣಿಸಿಕೊಳ್ಳುವುದು ಅನೇಕ ಅರ್ಥಗಳನ್ನು ಹೊಂದಿದೆ. ಇದು ನಿಮ್ಮ ಬಾಹ್ಯ ವ್ಯಕ್ತಿತ್ವದ ಬಗ್ಗೆ ನೀವು ಚಿಂತಿತರಾಗಿದ್ದೀರಿ ಎಂದು ಅರ್ಥ ನೀಡುತ್ತದೆ. ನಿಮ್ಮ ಮಾತುಗಳನ್ನು ನೀವು ಯಾರಿಗೋ ಹೇಳಲು ಹಲವು ದಿನಗಳಿಂದ ಕಾಯುತ್ತಿದ್ದೀರಿ, ಆದರೆ ನೀವು ಅವರ ಮುಂದೆ ಬಂದಾಗ ನಿಮಗೆ ಮಾತನಾಡಲು ಸಾಧ್ಯವಾಗುವುದಿಲ್ಲ ಎಂದು ಅರ್ಥ. ಕನಸಿನಲ್ಲಿ ಹಲ್ಲುನೋವು ಎಂದರೆ ನೀವು ನಿಧಾನವಾಗಿ ನಿಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ.

ಆಕಾಶದಲ್ಲಿ ಹಾರುವುದು

ನೀವು ಕನಸಿನಲ್ಲಿ ಹಾರುತ್ತಿರುವುದನ್ನು ನೀವು ನೋಡಿದರೆ, ಅದು ಎರಡು ಅರ್ಥಗಳನ್ನು ಹೊಂದಿರಬಹುದು. ನಿಮ್ಮ ಕನಸಿನಲ್ಲಿ ಹಾರಲು ನೀವು ಸಂತೋಷಪಟ್ಟರೆ, ನಿಮ್ಮ ಜೀವನದಲ್ಲಿ ಬರುವ ಅನುಭವಕ್ಕಾಗಿ ನೀವು ಉತ್ಸುಕರಾಗಿದ್ದೀರಿ. ಮತ್ತೊಂದೆಡೆ, ನಿಮ್ಮ ಕನಸಿನಲ್ಲಿ ಹಾರುವಾಗ ನೀವು ಭಯಭೀತರಾಗುತ್ತಿದ್ದರೆ, ಆಗ ನೀವು ಹೊಸ ಅನುಭವಕ್ಕಾಗಿ ಚಿಂತಿಸುತ್ತೀರಿ ಅಥವಾ ಭಯಪಡುತ್ತೀರಿ.

Chanakya Niti: ಈ 7 ಕಾರಣಗಳಿಂದ ವ್ಯಕ್ತಿಯ ಆಯುಷ್ಯ ಕಡಿಮೆಯಾಗುತ್ತದೆ ಅಂತಾರೆ ಚಾಣಕ್ಯ! 

ತನ್ನ ಸಾವು ತನಗೇ ಕಾಣುವುದು

ನೀವು ನಿಮ್ಮನ್ನು ಕನಸಿನಲ್ಲಿ ಸಾಯುತ್ತಿರುವಂತೆ ಕಾಣುವುದು ನಿಮ್ಮೊಳಗಿನ ಭಯದ ಪ್ರತೀಕ. ಅಂತಹ ಕನಸು ನಿಮ್ಮೊಳಗೆ ಇರುವ ಆತಂಕವನ್ನು ಪ್ರತಿಬಿಂಬಿಸುತ್ತದೆ. ನಿಮ್ಮ ಮನಸ್ಸಿನಲ್ಲಿ ಅನೇಕ ದಿನಗಳಿಂದ ಒಂದು ಭಯ ಇದೆ. ನಿಮ್ಮ ಮಕ್ಕಳ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಒಂದು ಕಾಳಜಿ ಇದೆ ಎಂಬುದು ಇದರ ಅರ್ಥ.

ಸಿಕ್ಕಿಬಿದ್ದಂತೆ ಆಗುವುದು 

ಕನಸಿನಲ್ಲಿ ನೀವು ಸಿಕ್ಕಿಹಾಕಿಕೊಂಡಿರುವುದು ನಿಜ ಜೀವನದಲ್ಲಿ ನೀವು ಸಿಕ್ಕಿಹಾಕಿಕೊಂಡ ಭಾವನೆಯನ್ನು ಪ್ರತಿಬಿಂಬಿಸುತ್ತದೆ. ಈ ಕನಸು ನಿಮಗೆ ನಿಮ್ಮ ಪ್ರಸ್ತುತ ಎಚ್ಚರದ ಜೀವನದ ಸಂದರ್ಭಗಳ ದೃಶ್ಯ, ಭಾವನಾತ್ಮಕ ಮತ್ತು ದೈಹಿಕ ಪ್ರಾತಿನಿಧ್ಯವನ್ನು ನೀಡುತ್ತದೆ. ಆದ್ದರಿಂದ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬಹುದು. ಆಗ ನೀವು ನಿಜಜೀವನದ ಸ್ಥಿತಿಯನ್ನು ಅವಲೋಕಿಸಬೇಕು.

ಮಹಾಭಾರತ ಯುದ್ಧದ ಬಗ್ಗೆ ಈ 8 ಜನರಿಗೆ ಮೊದಲೇ ತಿಳಿದಿತ್ತಂತೆ! 
 

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ