ವೈಕುಂಠ ಏಕಾದಶಿಯ ಧಾರ್ಮಿಕ ಮಹತ್ವ

By Suvarna Web DeskFirst Published Jan 8, 2017, 10:14 AM IST
Highlights

ಏಕಾಗ್ರತೆಯ ಉಚ್ಛ್ರಾಯಸ್ಥಿತಿ ಮುಟ್ಟುವುದಕ್ಕೂ ಉಪವಾಸಕ್ಕೂ ಯಾವುದೇ ಸಂಬಂಧವಿಲ್ಲವಾದರೂ, ಧ್ಯಾನದ ಸಂದರ್ಭದಲ್ಲಿ ದೇಹವನ್ನು ಹಗುರವಾಗಿಡುತ್ತದೆ.

ಪ್ರತಿಯೊಂದು ಚಾಂದ್ರಮಾನ ಮಾಸದ ಪ್ರತೀ 15 ದಿನಗಳ ಪೈಕಿ 11ನೇ ದಿನವನ್ನು ಏಕಾದಶಿಯಾಗಿ ಆಚರಿಸಲಾಗುತ್ತದೆ. ಆದ್ದರಿಂದ ಪ್ರತಿ ಚಾಂದ್ರಮಾನ ಮಾಸದಲ್ಲಿ 2 ಏಕಾದಶಿಗಳಿರುತ್ತವೆ. ಋಗ್ವೇದದ ಪ್ರಕಾರ ಸೂರ್ಯನನ್ನು ಆತ್ಮಕಾರಕ ಎನ್ನಲಾಗುತ್ತದೆ. ಇದರ ಅರ್ಥ ಮಾನವನ ಆತ್ಮ ಮತ್ತು ಬ್ರಹ್ಮಾಂಡದ ಆತ್ಮ ಸೂರ್ಯ ಮತ್ತು ಚಂದ್ರನಿಗೆ ವೇದಗಳಲ್ಲಿ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದ್ದು, ಏಕಾದಶಿ ದಿನದಂದು ಇವೆರಡು ಆಕಾಶಕಾಯಗಳು ತಮ್ಮ ಖಗೋಳ ಸ್ಥಾನಗಳಿಂದ ಮಾನವನ ಮನಸ್ಸಿನ ಮೇಲೆ ಅಗಾಧ ಪ್ರಭಾವ ಬೀರುತ್ತವೆ. ಈ ಕಾರಣದಿಂದಲೇ ಯೋಗಿಗಳು ಮತ್ತು ಭಕ್ತರು ಏಕಾದಶಿ ದಿನದಂದು ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ಏಕಾಗ್ರತೆಯ ಉಚ್ಛ್ರಾಯಸ್ಥಿತಿ ಮುಟ್ಟುವುದಕ್ಕೂ ಉಪವಾಸಕ್ಕೂ ಯಾವುದೇ ಸಂಬಂಧವಿಲ್ಲವಾದರೂ, ಧ್ಯಾನದ ಸಂದರ್ಭದಲ್ಲಿ ದೇಹವನ್ನು ಹಗುರವಾಗಿಡುತ್ತದೆ.

(epaper.kannadaprabha.in)

click me!