ಟಿಪ್ಪು ಹೊಗಳಿದ ರಾಷ್ಟ್ರಪತಿಗೆ ಆ ಭಾಷಣ ಬರೆದುಕೊಟ್ಟವರಾರು? ಇಲ್ಲಿದೆ ಸೀಕ್ರೆಟ್

Published : Oct 31, 2017, 12:30 PM ISTUpdated : Apr 11, 2018, 12:35 PM IST
ಟಿಪ್ಪು ಹೊಗಳಿದ ರಾಷ್ಟ್ರಪತಿಗೆ ಆ ಭಾಷಣ ಬರೆದುಕೊಟ್ಟವರಾರು? ಇಲ್ಲಿದೆ ಸೀಕ್ರೆಟ್

ಸಾರಾಂಶ

* ಟಿಪ್ಪು ಸುಲ್ತಾನ್'ರನ್ನು ಹೊಗಳಿದ ರಾಷ್ಟ್ರಪತಿಗಳ ಭಾಷಣ ಬರೆದುಕೊಟ್ಟವರು ಬಿಜೆಪಿ ಕಡೆಯವರೆಯಾ? * ರಾಷ್ಟ್ರಪತಿ ಕೋವಿಂದ್'ರ ಅಂದಿನ ಭಾಷಣ ಬರೆದುಕೊಟ್ಟಿದ್ದು ಪತ್ರಿಕಾ ಕಾರ್ಯದರ್ಶಿ ಅಶೋಕ್ ಮಲಿಕ್ * ರಾಷ್ಟ್ರಪತಿ ಕಚೇರಿಯ ಅಧಿಕಾರಿಗಳು ಮೋದಿಯವರ ಕಡೆಯವರೇ

ಟಿಪ್ಪು ಹೊಗಳಿ ರಾಷ್ಟ್ರಪತಿಗಳು ವಿಧಾನಸಭೆಯಲ್ಲಿ ಮಾಡಿದ ಭಾಷಣ ಕರ್ನಾಟಕ ಸರ್ಕಾರದಿಂದ ಬಂದಿದ್ದಲ್ಲ, ಬದಲಾಗಿ ರಾಷ್ಟ್ರಪತಿ ಭವನದ ಅಧಿಕಾರಿಗಳೇ ತಯಾರಿಸಿದ ಭಾಷಣವಂತೆ. ರಾಷ್ಟ್ರಪತಿಗಳ ಭಾಷಣದಿಂದ ಬಿಜೆಪಿ ನಾಯಕರು ಸುಸ್ತಾಗಿದ್ದಾರಾದರು ಹೊರಗಡೆ ಮಾತನಾಡೋಕೆ ಸಾಧ್ಯವಾಗುತ್ತಿಲ್ಲ. ಕೋವಿಂದ ರಾಷ್ಟ್ರಪತಿಗಳಾಗಿ ಆಯ್ಕೆಯಾದಾಗ ಅವರ ಕಾರ್ಯದರ್ಶಿ ಜೊತೆ ಜಂಟಿ ಕಾರ್ಯದರ್ಶಿ ಮತ್ತು ಮಾಧ್ಯಮ ಕಾರ್ಯದರ್ಶಿಗಳನ್ನು ನೇಮಿಸಿದ್ದು ನೇರವಾಗಿ ಪ್ರಧಾನಿ ಕಾರ್ಯಾಲಯ. ಮೋದಿ ಅವರಿಗೆ ಆಪ್ತರಾಗಿದ್ದ ಹರಿಯಾಣ ಕೇಡರ್ ಗುಜರಾತಿ ಅಧಿಕಾರಿ ಸಂಜಯ್ ಕೊಠಾರಿ ರಾಷ್ಟ್ರಪತಿಗಳಿಗೆ ಕಾರ್ಯದರ್ಶಿಯಾಗಿದ್ದರೆ. ಗುಜರಾತ್ ಭವನದಲ್ಲಿದ್ದ ಭರತ್ ಲಾಲ್ ಜಂಟಿ ಕಾರ್ಯದರ್ಶಿ. ಮೋದಿ ಪರವಾಗಿ ಮಾತನಾಡುತ್ತಿದ್ದ ಹಿರಿಯ ಪತ್ರಕರ್ತ ಅಶೋಕ ಮಲ್ಲಿಕ್ ಪತ್ರಿಕಾ ಕಾರ್ಯದರ್ಶಿ. ರಾಷ್ಟ್ರಪತಿ ಭವನದ ಮೂಲಗಳ ಪ್ರಕಾರ ಪ್ರೆಸಿಡೆಂಟ್ ಅವರ ಅವತ್ತಿನ ಭಾಷಣ ಬರೆದಿದ್ದು ಅಶೋಕ್ ಮಲ್ಲಿಕ್ ಅವರೇ ಅಂತೇ. ಯಾರಿಗೆ ಗೊತ್ತು, ಹೀಗೆಲ್ಲ ಟಿಪ್ಪು ಬಗ್ಗೆ ಮಾತನಾಡಿ, ನೋಡಿ ನೀವೇ ನೇಮಿಸಿದ ಅಧಿಕಾರಿಗಳು ಬರೆದುಕೊಟ್ಟಿದ್ದು, ನನಗೂ ಸ್ವಲ್ಪ ಫ್ರೀಡಂ ಕೊಡಿ ಎಂದು ರಾಷ್ಟ್ರಪತಿಗಳು ಹೇಳುವ ಪ್ರಯತ್ನ ಮಾಡುತ್ತಿರಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್
epaperkannadaprabha.com

---------

ಇಂಡಿಯಾ ಗೇಟ್ ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ

ಇವನ್ನೂ ಓದಿ:

* ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿ ಬೇರೆ ರಾಜ್ಯದ ಚುನಾವಣೆಯತ್ತ ರಾಜಕಾರಣಿಗಳ ಲಕ್ಷ್ಯ

* ರಾಹುಲ್'ಗೆ ಪಟ್ಟ; ಸೋನಿಯಾ ಕನ್'ಫ್ಯೂಷನ್; ಕಾರಣ ಏನು?

* ಕಾಂಗ್ರೆಸ್ ಗೆದ್ದರೆ ಆಂಜನೇಯ ಉಪಮುಖ್ಯಮಂತ್ರಿ?

* ಗುಜರಾತ್'ನಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹೇಗೆ ನಡೆಯುತ್ತೆ?

* ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅಖಾಡಕ್ಕಿಳಿಯಲಿರುವ 250 ಪ್ರಬಲ ಆರೆಸ್ಸೆಸ್ ವಿಸ್ತಾರಕರು

* ದಿಲ್ಲಿ ಜನರ ಬಗ್ಗೆ ಗಡ್ಕರಿಗೆ ಯಾಕೆ ಬೇಜಾರು? ಮಂಚ ಮುರಿದುಬಿದ್ದ ಪ್ರಸಂಗ ನೆನಪಿಸಿಕೊಂಡ ಗಡ್ಕರಿ

* ಟಿಪ್ಪು ಹೊಗಳಿದ ರಾಷ್ಟ್ರಪತಿಗೆ ಆ ಭಾಷಣ ಬರೆದುಕೊಟ್ಟವರಾರು? ಇಲ್ಲಿದೆ ಸೀಕ್ರೆಟ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!