ಕುರ್ಕುರೆ ಹಿಂಗೆಲ್ಲ ತಿಂದ Urfi Javed ವಿಡಿಯೋ ವೈರಲ್ !

By Suvarna News  |  First Published Jul 13, 2023, 4:32 PM IST

ನಟನೆ, ಜಾಹೀರಾತು, ಸಾಮಾಜಿಕ ಜಾಲತಾಣದ ಮೂಲಕ ಗಳಿಕೆಯಲ್ಲಿ ಮುಂದಿರುವ ಉರ್ಫಿ ಭಿನ್ನ ಬಟ್ಟೆಗಳಿಂದಲೇ ಪ್ರಸಿದ್ಧಿ ಪಡೆದಿದ್ದಾಳೆ. ಆದ್ರೀಗ ಆಕೆಯ ವಿಶಿಷ್ಠ ತಿನ್ನುವ ಸ್ಟೈಲ್ ಒಂದು ಚರ್ಚೆಗೆ ಬಂದಿದೆ.  
 


ಉರ್ಫಿ ಜಾವೇದ್ ಯಾರಿಗೆ ಗೊತ್ತಿಲ್ಲ ಹೇಳಿ? ಸಾಮಾಜಿಕ ಜಾಲತಾಣ ಬಳಕೆ ಮಾಡೋರಿಗೆ ದಿನಕ್ಕೊಂದು ವಿಡಿಯೋ ನೋಡೋಕೆ ಸಿಗುತ್ತೆ. ತನ್ನ ಫ್ಯಾಶನ್ ಸೆನ್ಸ್  ಮೂಲಕವೇ ಉರ್ಫಿ ಜಾವೇದ್ ಹೆಸರು ಮಾಡಿದ್ದಾಳೆ. ಪ್ರತಿದಿನ ತನ್ನ ಬಟ್ಟೆಗಳ ಮೇಲೆ ಒಂದೊಂದು ಪ್ರಯೋಗ ನಡೆಸ್ತಾಳೆ ಉರ್ಫಿ. ಆಕೆ ಧರಿಸುವ ಒಂದೊಂದು ಬಟ್ಟೆಯೂ ವಿಚಿತ್ರವಾಗಿರುತ್ತದೆ. ಚೀಲದಿಂದ ಮಾಡಿದ ಡ್ರೆಸ್, ಪ್ಲಾಸ್ಟಿಕ್ ಡ್ರೆಸ್, ಫಿಜ್ಜಾ ಡ್ರೆಸ್, ಹೂವಿನ ಡ್ರೆಸ್, ಮಣ್ಣಿನ ಡ್ರೆಸ್, ಮಣಿ ಡ್ರೆಸ್ ಹೀಗೆ ಬೇರೆ ಬೇರೆ ರೀತಿ ಬಟ್ಟೆ ಧರಿಸುವ ಉರ್ಫಿ ಕೆಲವೊಮ್ಮೆ ತನ್ನ ಕೂದಲನ್ನೇ ಡ್ರೆಸ್ ಮಾಡಿಕೊಳ್ತಾಳೆ.

ಉರ್ಫಿ ಜಾವೇಸ್ (Urfi Javed), ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಡಿಯೋ (Video) ಅಥವಾ ಫೋಟೋ ಹಾಕಿದ್ರು ಜನರು ಇವತ್ತು ಯಾವ ಡ್ರೆಸ್ ಅಂತಾ ಎರಗಿ ನೋಡ್ತಾರೆ. ಆದ್ರೆ ಈ ಬಾರಿ ಉರ್ಫಿ ಜಾವೇದ್ ಸ್ವಲ್ಪ ಭಿನ್ನವಾಗಿ ಬಂದಿದ್ದಾಳೆ. ಉರ್ಫಿ ಬಟ್ಟೆ ಬದಲು ಕುರ್ಕುರೆ (Kurkure) ಹಿಡಿದು ನಿಂತಿರುವ ವಿಡಿಯೋವನ್ನು ನೀವು ನೋಡ್ಬಹುದು. 

Tap to resize

Latest Videos

ಮುಂಬೈನಲ್ಲಿ ಕಾಣಿಸಿಕೊಂಡ ಸಮಂತಾ: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

ಉರ್ಫಿ ಜಾವೇದ್ ಹಾಕಿದ ವಿಡಿಯೋದಲ್ಲಿ ಏನಿದೆ? : ಸ್ನ್ಯಾಕ್ಸ್ ಎಲ್ಲರಿಗೂ ಇಷ್ಟವಾಗುತ್ತೆ. ಅದ್ರಲ್ಲೂ ಲೇಸ್, ಕುರ್ಕುರೆ ತಿನ್ನೋರ ಸಂಖ್ಯೆ ಹೆಚ್ಚು. ಕುರ್ಕುರೆ ಪ್ಯಾಕೆಟ್ ಹರಿದು, ನಾವು ತಿನ್ನಲು ಶುರು ಮಾಡ್ತೇವೆ. ಕುರ್ಕುರೆ ತಿನ್ನುವ ವೇಳೆ ಮಸಾಲೆ ಬೆರಳಿಗೆ ಅಂಟೋದು ಕಾಮನ್. ಕೆಲವರು ಕೊನೆಯಲ್ಲಿ ಕೈ ತೊಳದ್ರೆ ಮತ್ತೆ ಕೆಲವರು ಅದನ್ನೇಕೆ ಬಿಡೋದು ಅಂತಾ ಚೀಪ್ತಾರೆ. ಅದೇನೇ ಇರಲಿ, ಉರ್ಫಿ ಜಾವೇದ್ ಮಾತ್ರ ಕುರ್ಕುರೆಯನ್ನು ಭಿನ್ನವಾಗಿ ತಿಂದಿದ್ದಾಳೆ. ಆಕೆ ಜನರ ಇಷ್ಟದ ಕುರ್ಕುರೆ ತಿಂದ ವಿಧಾನ ಕೆಲವರ ಕೋಪಕ್ಕೂ ಕಾರಣವಾಗಿದೆ. 

ಉರ್ಫಿ ಜಾವೇದ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಉರ್ಫಿ, ಅಡುಗೆ ಮನೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಕೈನಲ್ಲಿ ಸ್ಟೇನರ್ ಹಿಡಿದಿದ್ದಾರೆ. ಅದಕ್ಕೆ ಮೊದಲು ಕುರ್ಕುರೆ ಹಾಕ್ತಾಳೆ. ನಂತ್ರ ಅದನ್ನು ನೀರಿನಲ್ಲಿ ವಾಶ್ ಮಾಡ್ತಾಳೆ. ಕುರ್ಕುರೆ ತಿನ್ನಲು ಇದು ಬೆಸ್ಟ್ ಉಪಾಯ ಎನ್ನುತ್ತಾಳೆ ಉರ್ಫಿ ಜಾವೇದ್. ಇದ್ರಿಂದ ಕುರ್ಕುರೆ ಮೆದುವಾಗುತ್ತದೆ. ಹಾಗೆಯೇ ಅದ್ರ ಮಸಾಲೆಗಳು ಕೈಗೆ ಹಿಡಿದುಕೊಳ್ಳೋದಿಲ್ಲ ಎಂಬುದು ಉರ್ಫಿ ಮಾತು.

ಬರೀ ಕುರ್ಕುರೆ ಮಾತ್ರವಲ್ಲ ಯಾವುದೇ ಚಿಪ್ಸ್ ತಿನ್ನಲು ನೀವು ಈ ಮಾರ್ಗ ಅನುಸರಿಸಬಹುದು ಎನ್ನುತ್ತಾಳೆ ಆಕೆ. ಬಾಲ್ಯದಿಂದಲೂ ಉರ್ಫಿ ಇದೇ ಮಾರ್ಗವನ್ನು ಪಾಲಿಸಿಕೊಂಡು ಬಂದಿದ್ದಾಳಂತೆ. ಸಾಮಾಜಿಕ ಜಾಲತಾಣದಲ್ಲಿ ಉರ್ಫಿ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗಿದೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತಪಸ್ವಿನಿ ಪೂಣಚ್ಚ; ಕೊಡವ ಮದುವೆ ಹೀಗಿತ್ತು!

ನೆಟ್ಟಿಗರ ಪ್ರತಿಕ್ರಿಯೆ : ಉರ್ಫಿ ಜಾವೇದ್ ಕುರ್ಕುರೆ ವಿಡಿಯೋಕ್ಕೂ ಅನೇಕ ಕಮೆಂಟ್ ಬಂದಿದೆ. ಕುರ್ಕುರೆ ರ್ಯಾಪರ್ ಹಾಗೂ ಕುರ್ಕುರೆಯಿಂದ ನೀವು ಡ್ರೆಸ್ ಮಾಡ್ತೀರೆಂದು ನಾನು ಭಾವಿಸಿದ್ದೇನೆ ಎಂದು ಬಳಕೆದಾರರೊಬ್ಬರು ತಮಾಷೆಯ ಕಮೆಂಟ್ ಮಾಡಿದ್ದಾರೆ. ಇದು ಹೊಸದು. ಆದ್ರೆ ಸಂಪೂರ್ಣ ಸ್ವೀಕಾರಾರ್ಹವಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಕ್ರೈಮ್ ಗೆ ನಿಮಗೆ ಜೈಲು ಶಿಕ್ಷೆಯಾಗ್ಬೇಕು ಎಂದು ಇನ್ನೊಬ್ಬರು ಬರೆದಿದ್ದಾರೆ. ಉರ್ಫಿ ಇದ್ದೂ ಅಲ್ಲಿ ವಿಶೇಷವಿಲ್ಲವೆಂದ್ರೆ ಹೇಗೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಉರ್ಫಿಯ ಈ ವಿಡಿಯೋ ಈವರೆಗೆ 587 ಕೆ ವೀವ್ಸ್ ಪಡೆದಿದೆ. 51 ಕೆ ಲೈಕ್ಸ್ ಸಿಕ್ಕಿದೆ. ಅನೇಕರು ಉರ್ಫಿ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಉರ್ಫಿ ಜಾವೇದ್, ಸಾಮಾಜಿಕ ಜಾಲತಾಣದ ಫೇಮಸ್ ಸೆಲೆಬ್ರಿಟಿ. ಆಕೆ ಇನ್ಸ್ಟಾಗ್ರಾಮ್ ನಲ್ಲಿ 4.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಶ್ರೀಮಂತಿಕೆ ವಿಷ್ಯದಲ್ಲೂ ಉರ್ಫಿ ಹಿಂದೆ ಬಿದ್ದಿಲ್ಲ. ಆಕೆ ತಿಂಗಳ ಸಂಬಳ 2 ಕೋಟಿ ಆಸುಪಾಸಿದೆ.

click me!