
ಒಳ್ಳೆ ಬಟ್ಟೆ ಧರಿಸ್ಬೇಕು, ನಾನು ಸುಂದರವಾಗಿ ಕಾಣ್ಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುತ್ತೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ತರಹೇವಾರಿ ವಿನ್ಯಾಸದ ಬಟ್ಟೆಗಳು ಸಿಗುತ್ತವೆ. ವಯಸ್ಸಿಗೆ ಅನುಗುಣವಾಗಿ ಅವರವರ ಡ್ರೆಸ್ಸಿಂಗ್ ಕೂಡ ಭಿನ್ನವಾಗಿರುತ್ತದೆ. ಚಿಕ್ಕ ಮಕ್ಕಳು ಫ್ರಾಕ್, ದೊಡ್ಡವರು ಚೂಡಿದಾರ, ಜೀನ್ಸ್, ಮಹಿಳೆಯರು ಸೀರೆ ಹೀಗೆ ವಯಸ್ಸಿಗೆ ತಕ್ಕಂತೆ ಡ್ರೆಸ್ ಮಾಡಿಕೊಂಡ್ರೆ ಸಹಜವಾಗಿಯೇ ಚೆನ್ನಾಗಿ ಕಾಣಿಸಬಹುದು.
ಈಗೀಗ ಜನರು ತಮ್ಮ ವಯಸ್ಸಿಗೆ ತಕ್ಕಂತೆ ಬಟ್ಟೆ (Clothes) ಧರಿಸದೇ ಚಿತ್ರ ವಿಚಿತ್ರದ ಡ್ರೆಸ್ (Dress) ಧರಿಸೋದು ಕಾಮನ್ ಆಗಿಬಿಟ್ಟಿದೆ. ಚಿಕ್ಕ ಮಕ್ಕಳು ಹಾಕಿಕೊಳ್ಳುವ ಬಟ್ಟೆಯನ್ನು ಇಳಿವಯಸ್ಸಿನವರು ಬೇಕಾದರೂ ಹಾಕಿಕೊಳ್ಳುವ ಮಾಡರ್ನ್ ಯುಗದಲ್ಲಿ ನಾವಿದ್ದೇವೆ. ಆದರೆ ಹೀಗೆ ವಯಸ್ಸಿಗೆ ಅನುಗುಣವಾಗಿ ಬಟ್ಟೆಯನ್ನು ಧರಿಸದೇ ಇರುವುದರಿಂದ ಕೆಲವೊಮ್ಮೆ ಮುಜುಗರಕ್ಕೆ ಒಳಗಾಗುವ ಸಾಧ್ಯತೆಯೂ ಇರುತ್ತದೆ ಅಥವಾ ಬೇರೆಯವರು ನಮ್ಮನ್ನು ನೋಡುವ ದೃಷ್ಟಿ ಕೂಡ ಬದಲಾಗಬಹುದು. ಹಾಗಾಗಿ 40 ವರ್ಷದ ನಂತರ ಮಹಿಳೆ (Woman) ಯರು ಕೆಲವು ಬಟ್ಟೆಗಳನ್ನು ಧರಿಸದೇ ಇರುವುದು ಒಳ್ಳೆಯದು.
Fitness Tips: ತೆಳ್ಳಗಾಗಬೇಕೆಂದರೆ ವರ್ಕ್ ಔಟ್ ಸಾಲೋಲ್ಲ, ಡಯಟ್ ಮಾಡಿ ಅಂತಾರೆ ಶೆಲ್ಪಾ ಶೆಟ್ಟಿ
ಕಾರ್ಟೂನ್ ಚಿತ್ರದ ಟಿ-ಶರ್ಟ್ ಮತ್ತು ಕ್ರಾಫ್ಡ್ ಟಾಪ್ ಬೇಡ : ಮಹಿಳೆಯರು 40 ವರ್ಷ ದಾಟಿದ ನಂತರ ಮಿಕ್ಕಿ-ಮಿನಿ ಮೌಸ್ ಹೊಂದಿರುವ ಟೀ ಶರ್ಟ್ ಗಳನ್ನು ಧರಿಸಬಾರದು. ಇದರ ಜೊತೆಗೆ ಕ್ರಾಫ್ಡ್ ಟಾಪ್ ಗಳನ್ನು ಕೂಡ ನಿಮ್ಮ ವಾರ್ಡ್ ರೋಬಿನಿಂದ ಹೊರಗೆ ಹಾಕುವುದು ಒಳ್ಳೆಯದು. ಏಕೆಂದರೆ ಇಂತಹ ಧಿರಿಸುಗಳು ಬಾಲಿಶ ಎನಿಸುತ್ತವೆ. ಅವುಗಳ ಬದಲು ಗಂಭೀರವಾಗಿ ಕಾಣಿಸುವಂತಹ ಬಟ್ಟೆಯನ್ನು ಹಾಕಿಕೊಳ್ಳಬೇಕು.
ಸರಿಯಾಗಿ ಹೊಂದಿಕೊಳ್ಳದ ಒಳ ಉಡುಪುಗಳು ಬೇಡ : ಮಹಿಳೆಯರಿಗೆ ಮೆನೊಪಾಸ್ ಸಮಯದಲ್ಲಿ ಅಥವಾ ಮಕ್ಕಳಾದ ನಂತರ ಶರೀರದಲ್ಲಿ ಅನೇಕ ರೀತಿಯ ಬದಲಾವಣೆಗಳು ಆಗುತ್ತವೆ. ಹಾಗಾಗಿ 40 ವರ್ಷದ ನಂತರ ಮಹಿಳೆಯರು ಒಳ್ಳೆಯ ಸರಿಯಾದ ಫಿಟಿಂಗ್ ಇರುವ ಒಳ ಬಟ್ಟೆಗಳನ್ನೇ ಧರಿಸಬೇಕು. ನೀವು ಸುಂದರವಾಗಿ ಕಾಣಲು ಇಂತಹ ಉಡುಪುಗಳು ಸಹಕಾರಿಯಾಗಿವೆ.
Artificial Intelligence: ಸಬ್ಯಸಾಚಿ ಉಡುಗೆಯಲ್ಲಿ ಹ್ಯಾರಿ ಪಾಟರ್ ತಂಡ..
ಮಸುಕಾದ ಅಥವಾ ಲೋ ರೈಸ್ ಜೀನ್ಸ್ ಬೇಡ : ಮಸುಕಾದ ಬಣ್ಣದ ಜೀನ್ಸ್ ಬದಲು ಸೊಲಿಡ್ ಕಲರ್ ಜೀನ್ಸ್ ಬಳಸಿ. ಲೋ ರೈಸ್ ಜೀನ್ಸ್ ಬದಲು ಮಿಡ್ ರೈಸ್ ಅಥವಾ ಹೈ ರೈಸ್ ಜೀನ್ಸ್ ಅನ್ನು ಹೆಚ್ಚು ಪ್ರಿಫರ್ ಮಾಡಿ. ಇಂತಹ ಬಟ್ಟೆ ನಿಮ್ಮನ್ನು ಹೆಚ್ಚು ಕಾನ್ಫಿಡೆಂಟ್ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಫೋಲ್ಡೆಡ್ ಜೀನ್ಸ್ : ಹೆಣ್ಣು ಮಕ್ಕಳು ತಮ್ಮ ಜೀನ್ಸ್ ಸ್ವಲ್ಪ ಉದ್ದವಾದರೆ ಅದನ್ನು ಫೋಲ್ಡ್ ಮಾಡಿ ಧರಿಸುತ್ತಾರೆ. 40 ವರ್ಷವಾದ ನಂತರ ಹೀಗೆ ಮಾಡುವುದನ್ನು ಬಿಟ್ಟು ಬಿಡಿ. ಜೀನ್ಸ್ ಅನ್ನು ಫೋಲ್ಡ್ ಮಾಡುವ ಬದಲು ಅದನ್ನು ನಿಮ್ಮ ಆ್ಯಂಕಲ್ ಲೆಂಥ್ ಗೆ ಅನುಗುಣವಾಗಿ ಕತ್ತರಿಸಿ ಸ್ಟಿಚ್ ಹಾಕಿ ಧರಿಸಿ. ಅದು ನಿಮಗೆ ಒಳ್ಳೆಯ ಲುಕ್ ನೀಡುತ್ತೆ.
ಹೊಸ ವಿನ್ಯಾಸದ ಬಟ್ಟೆಗಳು ಕೂಡ ಬೇಡ : ಫ್ಯಾಷನ್ ಲೋಕದಲ್ಲಿ ದಿನೇ ದಿನೇ ಹೊಸ ಟ್ರೆಂಡ್ ನ ಬಟ್ಟೆಗಳು ಬರುತ್ತಲೇ ಇರುತ್ತವೆ. ವಿವಿಧ ವಿನ್ಯಾಸದ ಬಾಟಮ್ ವೇರ್ ಮತ್ತು ಟಾಪ್ಸ್ ಮಾರುಕಟ್ಟೆಗೆ ಬರುತ್ತವೆ. ಅಂತಹ ಹೊಸ ಉಡುಪುಗಳನ್ನು ಕೂಡ ಟ್ರೈ ಮಾಡಲು ಹೋಗಬೇಡಿ. 40ರ ನಂತರ ನೀವು ಬಟ್ಟೆಯನ್ನು ಫಿಲ್ಟರ್ ಮಾಡಿಯೇ ತೆಗೆದುಕೊಳ್ಳಬೇಕು.
ಶಾರ್ಟ್ ಪ್ಲೀಟೆಡ್ ಸ್ಕರ್ಟ್ : ಶಾರ್ಟ್ ಪ್ಲೀಟೆಡ್ ಸ್ಕರ್ಟ್ ಅನ್ನು ಯುವತಿಯರು ಧರಿಸಬಹುದು. 30 ವರ್ಷದ ನಂತರ ಇಂತಹ ಸ್ಕರ್ಟ್ ಗಳನ್ನು ಧರಿಸದೇ ಇರುವುದು ಉತ್ತಮ. ಇಂತಹ ಸ್ಕರ್ಟ್ ಗಳ ಬದಲು ನಿಮ್ಮ ವಯಸ್ಸಿಗೆ ಸೂಕ್ತವಾಗುವ ಸ್ಕರ್ಟ್ ಗಳನ್ನು ಧರಿಸಬಹುದು.
ಸೆಲೆಬ್ರಿಟಿಗಳನ್ನು ಅನುಸರಿಸಬೇಡಿ : ಬಾಲಿವುಡ್ ನಟಿಯರು ಯಾವುದೇ ರೀತಿಯ ಉಡುಪುಗಳನ್ನಾದರೂ ಸಲೀಸಾಗಿ ಧರಿಸುತ್ತಾರೆ. ಸಾಮಾನ್ಯ ಜೀವನದಲ್ಲಿ ನೀವು ಅವರನ್ನು ಅನುಸರಿಸುವುದು ಸರಿಯಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.