
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಮನಾರ್ಹ ಸಾಮರ್ಥ್ಯಗಳೊಂದಿಗೆ ಆನ್‌ಲೈನ್ ಸಮುದಾಯವನ್ನು ಅಚ್ಚರಿಗೊಳಿಸುತ್ತಿದೆ. ಈಗಿನ ದಿನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಜನರು ಕಲ್ಪನೆಗೆ ಮೀರಿದ ಚಿತ್ರಗಳನ್ನು ನಮಗೆ ನೀಡ್ತಿದ್ದಾರೆ. ಇದು ಪ್ರಸಿದ್ಧ ಹ್ಯಾರಿ ಪಾಟರ್ ಕೂಡ ಬಿಟ್ಟಿಲ್ಲ. ಪ್ರಖ್ಯಾತ ಡಿಸೈನರ್ ಸಬ್ಯಸಾಚಿ ಅವರು, ಹ್ಯಾರಿ ಪಾಟರ್ ಪಾತ್ರಗಳ ವೇಷಭೂಷಣಗಳನ್ನು ಹೇಗೆ ರೂಪಿಸುತ್ತಾರೆ ಎಂಬುದನ್ನು ತೋರಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಲಾಗಿದೆ. ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಈ ಫೋಟೋ ಹರಿದಾಡ್ತಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ.
ಸಬ್ಯಸಾಚಿ (Sabyasachi) ಪ್ರಸಿದ್ಧ ಡಿಸೈನರ್. ಅವರ ವೇಷ, ಭೂಷಣಗಳು ಆಕರ್ಷಣೆಯಿಂದ ಹಾಗೂ ಭಿನ್ನತೆಯಿಂದ ಕೂಡಿರುತ್ತವೆ. ಅನೇಕ ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಸಬ್ಯಸಾಚಿ ಡ್ರೆಸ್ ಡಿಸೈನ್ ಮಾಡಿದ್ದಾರೆ. ಈಗ ಸಬ್ಯಸಾಚಿ, ಹ್ಯಾರಿ ಪಾಟರ್ (Harry Potter) ಚಿತ್ರದಲ್ಲಿ ಬರುವ ಕಲಾವಿದರಿಗೆ ವಸ್ತ್ರವಿನ್ಯಾಸ ಮಾಡಿದ್ರೆ ಹೇಗಿರುತ್ತೆ ಎಂಬುದನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಸಿ ತೋರಿಸುವ ಪ್ರಯತ್ನ ನಡೆದಿದೆ. ಹ್ಯಾರಿ ಪಾಟರ್, ಹರ್ಮಿಯೋನ್, ಗಿನ್ನಿ, ಹ್ಯಾಗ್ರಿಡ್, ಪ್ರೊಫೆಸರ್ ಮೆಕ್‌ಗೊನಾಗಲ್ ಮತ್ತು ಕುಖ್ಯಾತ ವೊಲ್ಡೆಮೊರ್ಟ್‌ನ ಪಾತ್ರಗಳನ್ನು ಸಬ್ಯಸಾಚಿಯ ಶೈಲಿಯಲ್ಲಿ ಜೀವಂತಗೊಳಿಸಲಾಗಿದೆ.
TATTOO ಕಾರಣಕ್ಕೆ ಟಾಯ್ಲೆಟ್ ತೊಳೆಯೋ ಕೆಲಸವೂ ಸಿಗ್ತಿಲ್ಲ, ಆದ್ರೂ ಹುಚ್ಚು ಬಿಟ್ಟಿಲ್ಲ
ಇನ್ಸ್ಟಾಗ್ರಾಮ್ (Instagram) ಪೋಸ್ಟ್ ನಲ್ಲಿ ಏನಿದೆ? : ಮನೋಜ್ ಓಮ್ರೆ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದು ಇನ್ಸ್ಟಾ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. AI ತಂತ್ರಜ್ಞಾನದಿಂದ ಮಾಡಲ್ಪಟ್ಟ ಈ ಫೋಟೋಗಳು ಜನರನ್ನು ಬೆರಗುಗೊಳಿಸಿವೆ. ಪಾತ್ರಗಳ ಉಡುಗೆ ತೊಡುಗೆಗಳು ಅತಿಮುಖ್ಯವಾದ ಥೀಮ್‌ಗೆ ಹೇಗೆ ಹೊಂದಿಕೆಯಾಗುತ್ತವೆ ಎಂದು ಹಲವರು ಹೊಗಳಿದ್ದಾರೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಹ್ಯಾರಿ ಪಾಟರ್ ಗೆ ಆಕರ್ಷಕ ಉಡುಪನ್ನು ನೀಡಲಾಗಿದೆ. ಸಂಕೀರ್ಣ ಕಸೂತಿ ಮನಸ್ಸು ಸೆಳೆಯುತ್ತದೆ. ಫೋಟೋ ನೋಡಿದ್ರೆ ಹೀಗೊಬ್ಬ ವ್ಯಕ್ತಿ ಇರಬಹುದು ಎಂಬ ನಂಬಿಕೆ ನಮಗೆ ಬರುವಂತಿದೆ. ಕೋಟ್ ಧರಿಸಿರುವ ಹ್ಯಾರಿ ಪಾಟರ್ ಹಿಂದೆ ಉಳಿದ ಕಲಾವಿದರನ್ನು ನಾವು ನೋಡ್ಬಹುದು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಹರ್ಮಿಯೋನ್ ಗ್ರ್ಯಾಂಜರ್ ಳಿಗೂ ಸುಂದರ ರೂಪ ನೀಡಲಾಗಿದೆ. ಹರ್ಮಿಯೋನ್ ಧರಿಸಿರುವ ಗೌನ್ ಅವಳ ಬುದ್ಧಿವಂತಿಕೆ ಮತ್ತು ಸೊಬಗನ್ನು ಪ್ರದರ್ಶಿಸುವ ಸೂಕ್ಷ್ಮ ಮಾದರಿಗಳಿಂದ ಕೂಡಿದೆ. ದೊಡ್ಡ ಮೂಗಿನ ನತ್ತು, ಕತ್ತಿನ ಆಭರಣ ಸೇರಿದಂತೆ ಆಕೆ ಧರಿಸಿದ ಅಲಂಕಾರಿಕ ವಸ್ತುಗಳು ಆಕೆಯನ್ನು ಮತ್ತಷ್ಟು ಆಕರ್ಷಕಗೊಳಿಸಿದೆ.
ಶುದ್ಧ ಮನಸ್ಸಿಲ್ಲವೆಂದ್ರೆ ಹೆಣಕ್ಕೆ ಬಟ್ಟೆ ಹಾಕಿದಂತೆ : ಫ್ಯಾಷನ್ ಬಗ್ಗೆ ರವಿಶಂಕರ್ ಗುರೂಜಿ ಮಾತು
ಇನ್ನು ಗಿನ್ನಿ ವೀಸ್ಲಿ ಕೂಡ ಬೆರಗುಗೊಳಿಡುವ ಉಡುಪು ಧರಿಸಿದ್ದಾರೆ. ಈ ಡ್ರೆಸ್ ನಲ್ಲಿ ಅವರ ಆತ್ಮವಿಶ್ವಾಸ ಎದ್ದು ಕಾಣ್ತಿದೆ. ಹಾಗೇ ಹ್ಯಾಗ್ರಿಡ್ ಗೆ ಅವರ ವ್ಯಕ್ತಿತ್ವಕ್ಕಿಂತ ದೊಡ್ಡ ಸ್ಥಾನವನ್ನು ಇಲ್ಲಿ ನೀಡಲಾಗಿದೆ. ಇಷ್ಟೇ ಅಲ್ಲ ಅಸಾಧಾರಣ ರೂಪದಲ್ಲಿ ಪ್ರೊಫೆಸರ್ ಮೆಕ್‌ಗೊನಾಗಲ್ ಮಿಂಚಿದ್ದಾರೆ. ಅವರ ಲುಕ್ ತುಂಬಾ ಆಕರ್ಷಕವಾಗಿದೆ. ಸೀರೆಯುಟ್ಟು ಸ್ಟೈಲಿಶ್ ಆಗಿ ಪ್ರೊಫೆಸರ್ ಮೆಕ್‌ಗೊನಾಗಲ್ ಕುಳಿತಿರುವುದನ್ನು ನೀವು ನೋಡ್ಬಹುದು. ಇವರ ಫೋಟೋ, ಅಧಿಕಾರ ಮತ್ತು ಸೊಬಗನ್ನು ಹೊರಹಾಕುತ್ತದೆ. ಅವರ ಬುದ್ಧಿವಂತಿಕೆ ಮತ್ತು ನಾಯಕತ್ವವನ್ನು ಎತ್ತಿ ತೋರಿಸುತ್ತದೆ. ಹ್ಯಾರಿಪಾಟರ್ ನಲ್ಲಿ ಅಪಶಕುನ ಎನ್ನಿಸಿಕೊಳ್ಳುವ ವೋಲ್ಡೆಮೊರ್ಟ್ ಗೂ ಕಪ್ಪು ಡ್ರೆಸ್ ಹಾಕಲಾಗಿದ್ದು, ಮೋಡಿಗಾರನ ರೂಪಕ್ಕೆ ಬಟ್ಟೆ ಸರಿಹೊಂದುತ್ತದೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆದ ಈ ಫೋಟೋಗಳನ್ನು ಬಳಕೆದಾರರು ಮೆಚ್ಚಿಕೊಂಡಿದ್ದಾರೆ. ಇದೊಂದು ಅಧ್ಬುತ ಸಮ್ಮಿಲನ ಎಂದಿದ್ದಾರೆ. ಇದು ಸೃಜನಶೀಲತೆ ಹಾಗೂ ಕಲ್ಪನಾ ಜಗತ್ತಿಗೆ ಎಐ ಹೇಗೆ ನೆರವಾಗಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ.
ಕೆಲ ಬಳಕೆದಾರರಿಗೆ ಹ್ಯಾರಿ ಪಾಟರ್ ನ ಇನ್ನೊಷ್ಟ ಪಾತ್ರಗಳನ್ನು ಸಬ್ಯಸಾಚಿ ಡಿಸೈನ್ ನಲ್ಲಿ ನೋಡುವ ಆಸೆಯಿದೆ. ಇನ್ನೂ ಕೆಲ ಪಾತ್ರಗಳಿಗೆ ಜೀವ ತುಂಬುವಂತೆ ಬಳಕೆದಾರರು ಕೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.