ತನ್ನ ನೆಚ್ಚಿನ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಅಮೆರಿಕಾದ ಮಹಿಳೆಯೊಬ್ಬರು ಅಮೆರಿಕಾದಿಂದ 6000 ಮೈಲುಗಳಷ್ಟು ದೂರದಲ್ಲಿರುವ ಟರ್ಕಿಗೆ ಹಾರಿದ್ದಾರೆ.
ಹೇರ್ ಸ್ಟೈಲ್, ಹೇರ್ ಕಟ್ಟಿಂಗ್ ಬೇಕೆಂದಲ್ಲೆಲ್ಲಾ ಮಾಡಿಸಿಕೊಳ್ಳಲು ಎಲ್ಲರೂ ಇಷ್ಟ ಪಡುವುದಿಲ್ಲ. ಅನೇಕರಿಗೆ ಇಂತಹದ್ದೇ ಶಾಪ್ ಹಾಗೂ ಶಾಪ್‌ನಲ್ಲಿರುವ ಈ ವ್ಯಕ್ತಿಯೇ ನಮ್ಮ ಹೇರ್ ಸ್ಟೈಲ್ ಮಾಡಬೇಕೆಂದು ಬಯಸುತ್ತಾರೆ. ಕೇಶ ವಿನ್ಯಾಸ ನಮ್ಮ ಲುಕ್‌ನ್ನೇ ಸಂಪೂರ್ಣವಾಗಿ ಬದಲಿಸುವುದರಿಂದಾಗಿ ಹೇರ್ ಸ್ಟೈಲ್‌ನ ಬಗ್ಗೆ ಅಷ್ಟೊಂದು ನಿಖರವಾಗಿ ಇರುತ್ತಾರೆ ಅನೇಕರು. ಹೀಗಾಗಿ ಕೆಲವರು ಹೇರ್ ಕಟ್ಟಿಂಗ್‌ಗೋಸ್ಕರ ತಮ್ಮ ನೆಚ್ಚಿನ ಸಲೂನ್‌ಗಳಿಗೆ ಹೋಗುತ್ತಾರೆ. ಇದು ತಮ್ಮೂರಿನಲ್ಲಿ ಇಲ್ಲವೆಂದಾದರೆ ಬೇರೆ ಊರಿಗೆ ಹೋಗುವುದನ್ನು ಸಹ ನೋಡಿದ್ದೇವೆ. ಆದರೆ ಬೇರೆ ದೇಶಕ್ಕೆ ಹೋಗುವವರನ್ನು ಎಲ್ಲಾದರೂ ನೋಡಿದ್ದೀರಾ. ಹೌದು ಮಹಿಳೆಯೊಬ್ಬಳು ಹೇರ್ ಕಟ್ಟಿಂಗ್ಗೋಸ್ಕರ ತನ್ನ ದೇಶ ಬಿಟ್ಟು ದೂರದ ಟರ್ಕಿಗೆ ಹಾರಿದ್ದಾರೆ.
ಅಚ್ಚರಿ ಎನಿಸಿದರು ಇದು ಸತ್ಯ. ಸಾಮಾನ್ಯವಾಗಿ ಒಂದೊಂದು ಸಲೂನ್‌ನಲ್ಲಿ ಒಂದೊಂದು ರೀತಿಯ ದರವನ್ನು ಬೇರೆ ಬೇರೆ ಕೇಶ ವಿನ್ಯಾಸಕ್ಕೆ ನಿಗದಿ ಪಡಿಸಿರುತ್ತಾರೆ. ಕೆಲವೆಡೆ ಇದು ಕಡಿಮೆ ಇದ್ದರೆ ನಗರ ಪ್ರದೇಶಗಳಲ್ಲಿ ಇದರ ದರ ಎರಡುಪಟ್ಟು ಮೂರು ಪಟ್ಟು ಹೆಚ್ಚಿರುತ್ತದೆ. ಆದರೆ ಅಮೆರಿಕಾದ ಸಲೂನ್ ಒಂದು ಮಹಿಳೆಗೆ ಬರೋಬರಿ $4,000 ಡಾಲರ್ ಎಂದರೆ ಭಾರತದ ಸುಮಾರು 3.12 ಲಕ್ಷ ರೂಪಾಯಿಯಷ್ಟು ಶುಲ್ಕ ಹೇರಿದೆ. ಇದರಿಂದ ಕಂಗೆಟ್ಟ ಆಕೆ ತನ್ನ ನೆಚ್ಚಿನ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಅಮೆರಿಕಾದಿಂದ ಸುಮಾರು 6000 ಮೈಲುಗಳಷ್ಟು ದೂರದಲ್ಲಿರುವ ಟರ್ಕಿಗೆ ಹಾರಿದ್ದಾರೆ.
PPE ಕಿಟ್ ಬಳಸಿ ಹೇರ್ ಡ್ರೆಸ್ಸಿಂಗ್ ಮಾಡಿದ ಸಲೂನ್ ಮಾಲೀಕ
ಆಕೆಯ ಕೇಶ ವಿನ್ಯಾಸಕಿ ಆಕೆಗೆ ಕೇಶ ವಿನ್ಯಾಸ ಮಾಡಲು $4,000 (ರೂ. 3.12 ಲಕ್ಷ) ಆಗುವುದು ಎಂದು ಹೇಳಿದ ನಂತರ ತಾನು ಕಡಿಮೆ ವೆಚ್ಚದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಟರ್ಕಿಗೆ ಹಾರಿದ್ದಾಗಿ ಬ್ರೈನ್ ಎಲಿಸ್ ಎಂಬ ಮಹಿಳೆ ಹೇಳಿದ್ದಾಳೆ. ಕೂದಲು ರೂಪಾಂತರಗೊಳ್ಳುವ ಮೊದಲು ಮತ್ತು ನಂತರದ ವೀಡಿಯೊವನ್ನು ಬ್ರೈನ್ ಎಲಿಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮೆರಿಕಾದಲ್ಲಿ ನಿಮ್ಮ ಕನಸಿನ ಕೂದಲನ್ನು ಪಡೆಯಲು ನೀವು $4000 ಅನ್ನು ಪಾವತಿಸೇಕು ಎಂದಾದಲ್ಲಿ ನೀವು ಟರ್ಕಿಗೆ ಹಾರಿ ಅದನ್ನು ಅಲ್ಲಿಯೇ ಮಾಡಿ ಆಕೆ ಬರೆದಿದ್ದಾರೆ.
ನನ್ನ ಎರಡು ವಾರಗಳ ರಜೆಯನ್ನು ಒಳಗೊಂಡಂತೆ ಇದು ಕಡಿಮೆ ವೆಚ್ಚವಾಗಿದೆ ಎಂದು ಅವರು ವೀಡಿಯೊದ ಶೀರ್ಷಿಕೆಯಲ್ಲಿ ಹೇಳಿದ್ದಾರೆ. ಒಟ್ಟಾರೆಯಾಗಿ, ಬ್ರೈನ್ ತನ್ನ ವಿಮಾನ ವೆಚ್ಚ ಕೂದಲು ಮತ್ತು ಟರ್ಕಿಯಲ್ಲಿ ಎರಡು ವಾರಗಳ ವಾಸ್ತವ್ಯಕ್ಕಾಗಿ $2,200 (ರೂ. 171 499. ಲಕ್ಷ) ಖರ್ಚು ಮಾಡಿದ್ದಾಗಿ ಆಕೆ ಹೇಳಿದ್ದಾರೆ. ಹಣದುಬ್ಬರದಿಂದಾಗಿ ಮತ್ತು ಬೇಡಿಕೆಯನ್ನು ಮುಂದುವರಿಸಲು ತನ್ನ ಮೂಲ ಕೇಶ ವಿನ್ಯಾಸಕರು ತಮ್ಮ ಶುಲ್ಕ ಹೆಚ್ಚಿಸಿದ್ದಾರೆ ಎಂದು ಬ್ರೈನ್ ಹೇಳಿದ್ದಾರೆ.
ತಮಿಳುನಾಡು ಕ್ಷೌರಿಕನ 13 ವರ್ಷದ ಮಗಳು ವಿಶ್ವಸಂಸ್ಥೆ ರಾಯಭಾರಿ!
ನನ್ನ ಸೂಪರ್ ದಪ್ಪ ಕೂದಲಿಗೆ 8 ಗಂಟೆಗಳ ಆರೈಕೆ, ಟೋನಿಂಗ್ ಮತ್ತು ಉತ್ತಮ ಗುಣಮಟ್ಟದ 24 ಕೂದಲು ವಿಸ್ತರಣೆಗಳಿಗಾಗಿ ನಾನು ಟರ್ಕಿಯಲ್ಲಿ $450 ಪ್ಲಸ್ ಟಿಪ್ ಅನ್ನು ಪಾವತಿಸಿದ್ದೇನೆ. US ನಲ್ಲಿ ನನ್ನ ಸಲೂನ್ ನನಗೆ ಮೋಸ ಮಾಡಲು ಪ್ರಯತ್ನಿಸುತ್ತಿಲ್ಲ, ನಾನು ವರ್ಷಗಳಿಂದ ಅವರ ಬಳಿಗೆ ಹೋಗುತ್ತಿದ್ದೇನೆ ಮತ್ತು ಬೇಡಿಕೆಯನ್ನು ಉಳಿಸಿಕೊಳ್ಳಲು ಅವರು ನಿಧಾನವಾಗಿ ತಮ್ಮ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಬ್ರೈನ್ ಹೇಳಿದ್ದಾರೆ.
ಆದರೆ ಅವರು ನನ್ನ ಕೂದಲಿನ ಬಣ್ಣ, ಉದ್ದ ಮತ್ತು ಮೊತ್ತಕ್ಕೆ $2000 ರಿಂದ $3000 ವರೆಗೆ ಬೆಲೆಗಳನ್ನು ಹೆಚ್ಚಿಸಿದಾಗ, ನಾನು ಈ ಬಗ್ಗೆ ಲೆಕ್ಕಾಚಾರ ಮಾಡಿದೆ ಮತ್ತು ನನಗೆ ಅಗತ್ಯವಿರುವ ಬಣ್ಣ, ಚಿಕಿತ್ಸೆಗಳು ಮತ್ತು ಸಲಹೆಯು $4000 ಕ್ಕಿಂತ ಕಡಿಮೆಗೆ ಸಿಗುವುದು ಎಂದು ನಾನು ಲೆಕ್ಕಾಚಾರ ಹಾಕಿ ಅದಕ್ಕಾಗಿಯೇ ನಾನು ಟರ್ಕಿಯನ್ನು ಆರಿಸಿದೆ ಎಂದು ಬ್ರೈನ್ ಹೇಳಿದ್ದಾರೆ.