ಸಾರಿ ಉಟ್ಟು ಕನ್ನಡಿ ಮುಂದೆ ಚಮಕ್ ಮಾಡ್ತಿರೋ ಪುಟಾಣಿ : ವಿಡಿಯೋ ವೈರಲ್‌

By Anusha Kb  |  First Published Jun 9, 2022, 4:59 PM IST

ಮಗುವೊಂದು ಅಮ್ಮನಂತೆ ಸೀರೆ ಉಟ್ಟು ಕನ್ನಡಿ ಮುಂದೆ ವೈಯಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಮುದ್ದಾದ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಮಗುವೊಂದು ಅಮ್ಮನಂತೆ ಸೀರೆ ಉಟ್ಟು ಕನ್ನಡಿ ಮುಂದೆ ವೈಯಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಮುದ್ದಾದ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಬಾಲ್ಯದಲ್ಲಿ ಮಾಡುವ ಪ್ರತಿಯೊಂದು ತರಲೆಯೂ ಚಂದ, ಪುಟಾಣಿಗಳ ತರಲೆಗಳ ಮುದ್ದಾದ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತಿರಿ. ಮೊದಲೆಲ್ಲಾ ಹೆಣ್ಣು ಮಕ್ಕಳು ಗಂಡು ಮಕ್ಕಳು ಎಂಬ ಬೇಧವಿಲ್ಲದೇ ಹಳ್ಳಿಗಳಲ್ಲಿ ಮಣ್ಣಿನಲ್ಲಿ ಮನೆ ಕಟ್ಟುವುದು ಅಡಿಗೆ ಮಾಡುವುದು ಮುಂತಾದವುಗಳನ್ನು ಮಕ್ಕಳು ಬಾಳ್ಯದಲ್ಲಿ ಆಡುವುದನ್ನು ಆಡಿದ್ದನ್ನು ನೀವು ನೀವು ಆಡಿರಬಹುದು. ಬಹುಶಃ ನಿಮ್ಮ ಬಾಲ್ಯವೂ ಅದೇ ರೀತಿ ಕಳೆದಿರಬಹುದು. ಆದರೆ ಈಗಿನ ಮಕ್ಕಳು ಕಾಲಕ್ಕೆ ತಕ್ಕಂತೆ ಬದಲಾಗಿದ್ದಾರೆ. ಪುಟ್ಟ ಮಕ್ಕಳಲ್ಲಿ ಗಂಡು ಮಕ್ಕಳು ಕಾರು ಸೈಕಲ್ ಅಂತ ಸ್ಕೇಟಿಂಗ್ ಅಂತ ಅವುಗಳ ಹಿಂದೆ ಓಡಿದರೆ ಹೆಣ್ಣು ಮಕ್ಕಳ ಆಟವೇ ಒಂಥರಾ ಚೆಂದ ಹೆಚ್ಚಾಗಿ ಬಾರ್ಬಿಗಳೊಂದಿಗೆ ಆಡುವ ಮಕ್ಕಳು ಅವುಗಳಿಗೆ ಜುಟ್ಟು ಕಟ್ಟುವುದು, ವಿಭಿನ್ನ ಹೇರ್ ಸ್ಟೈಲ್‌ ಮಾಡುವುದು, ಲಿಪ್‌ಸ್ಟಿಕ್ ಹಚ್ಚುವುದು ಮುಂತಾದವುಗಳನ್ನು ಮಾಡುತ್ತಿರುತ್ತಾರೆ.

Tap to resize

Latest Videos

ಹುಡುಗಿ ಮೇಕಪ್ ಹಾಕಿದ್ದಾಗ ಎಂಗೇಜ್‌ಮೆಂಟ್ ಆಯ್ತು, ವಿತೌಟ್ ಮೇಕಪ್ ಬಂದಾಗ ಮದ್ವೆ ಕ್ಯಾನ್ಸಲ್ ಆಯ್ತು !
 

 
 
 
 
 
 
 
 
 
 
 
 
 
 
 

A post shared by VIARA RANA (@viaa_rana)

 

ಗಂಡು ಮಕ್ಕಳು ಅಪ್ಪನನ್ನು ಅನುಕರಿಸಿದರೆ ಹೆಣ್ಣು ಮಕ್ಕಳು ತಾಯಿಯನ್ನೇ ಅನುಸರಿಸುವುದು ಹೆಚ್ಚು. ಹಾಗೆಯೇ ಈಗಿನ ಹೆಣ್ಣು ಮಕ್ಕಳಿಗೆ ದೊಡ್ಡವರು ಚಿಕ್ಕವರು ಎಂಬ ಬೇಧವಿಲ್ಲದೇ ಮೇಕಪ್ ಮಾಡುವುದು ಇಷ್ಟದ ಕೆಲಸ ಹಾಗೆಯೇ ಇಲ್ಲೊಂದು ಪುಟಾಣಿ ಹೆಣ್ಣು ಮಗು ತನ್ನ ಅಮ್ಮನಂತೆ ಸೀರೆ ಉಟ್ಟು ಲಿಪ್‌ಸ್ಟಿಕ್‌ ಹಚ್ಚಿ ಕನ್ನಡಿ ಮುಂದೆ ಶೋಕಿ ಮಾಡುತ್ತಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್‌ನ viaa_rana ಎಂಬ ಖಾತೆಯಿಂದ ಈ ವಿಡಿಯೋ ಪೋಸ್ಟ್ ಆಗಿದ್ದು, 20 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  ಎ ಆರ್ ರೆಹಮಾನ್ (AR Rahman) ಮತ್ತು ಸನಾ ಮೊಯ್ದುಟ್ಟಿ (Sanah Moidutty) ಅವರ ತು ಹೈ ಹಾಡು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. 

ಟಿವಿಲಿ ಡೈನೋಸಾರ್‌ ನೋಡಿ ಶಾಕ್‌ ಆದ ಪುಟಾಣಿ: ವಿಡಿಯೋ

ವಿಯಾರಾ ರಾಣಾ (Viara Rana) ಹೆಸರಿನ ಬಾಲಕಿ ಹಸಿರು ಬಣ್ಣದ ರವಿಕೆಗೆ ಪ್ರಿಂಟೆಡ್‌ ಸಾರಿಯನ್ನು (printed saree) ಉಟ್ಟಿದ್ದು ಜೊತೆಗೆ ತುಟಿಗಳಿಗೆ ಲಿಪ್‌ಸ್ಟಿಕ್‌, ಉಗುರುಗಳಿಗೆ ನೈಲ್ ಪಾಲಿಶ್‌ ಅನ್ನು ಹಚ್ಚಿದ್ದಾಳೆ. ಬಳಿಕ ದೊಡ್ಡದಾದ ಕನ್ನಡಿ ಮುಂದೆ ನಿಂತುಕೊಂಡು ತನ್ನನ್ನು ತಾನು ಕನ್ನಡಿ ಮುಂದೆ ನೋಡಿಕೊಳ್ಳುತ್ತಿದ್ದಾಳೆ. ಈ ವಿಡಿಯೋಗೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ.

ಕೆಲ ದಿನಗಳ ಹಿಂದೆ ನಾಯಿ ಪ್ರೇಮಿ ಬಾಲಕಿಯೊಬ್ಬಳು ತನ್ನ ಸಾಕುನಾಯಿಯಂತೆ ತಾನು ಕಾಣುವ ಹಾಗೆ ಮೇಕಪ್ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ನಾಯಿಗಳಿಗೂ ಮಕ್ಕಳಿಗೂ ಎಲ್ಲಿಲ್ಲದ ಅವಿನಾಭಾವ ಸಂಬಂಧ. ಕೆಲವರಂತೂ ಶ್ವಾನವನ್ನು ತಾವು ಎಲ್ಲಿಗೆಲ್ಲ ಹೋಗುತ್ತಾರೋ ಅಲ್ಲಿಗೆಲ್ಲ ಶ್ವಾನವನ್ನು ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರೆ. ಪುಟ್ಟ ಮಕ್ಕಳೊಂದಿಗೆ ಶ್ವಾನವೂ ಕೂಡ ತುಂಬಾ ಆತ್ಮೀಯತೆಯಿಂದ ವರ್ತಿಸುತ್ತದೆ. ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ಪುಟ್ಟ ಬಾಲಕಿ ತನ್ನ ಸಾಕು ನಾಯಿಯಂತೆ ಕಾಣಿಸುವುದಕ್ಕೋಸ್ಕರ ನಾಯಿಯಂತೆ ಮೇಕಪ್‌ ಮಾಡುವುದನ್ನು ಆಕೆಯ ಅಮ್ಮ ವಿಡಿಯೋ ಚಿತ್ರೀಕರಿಸಿದ್ದಾರೆ.

ಈ ವೇಳೆ ಈ ರೀತಿ ಏಕೆ ಮೇಕಪ್ ಮಾಡುತ್ತಿದ್ದೀಯಾ ಎಂದು ಆಕೆಯನ್ನು ಆಕೆಯ ಅಮ್ಮ ಕೇಳುತ್ತಾಳೆ. ಅದಕ್ಕೆ ನಾನು ನನ್ನ ನಾಯಿ ಫ್ರಾಂನ್ಸಿಸ್ಕೋ ತರ ಕಾಣಿಸಬೇಕು ಅದಕ್ಕಾಗಿ ಈ ಮೇಕಪ್ ಮಾಡುತ್ತಿದ್ದೇನೆ ಎಂದು ಆಕೆ ಹೇಳುತ್ತಾಳೆ. ಆಕೆಯ ಮಾತು ಕೇಳಿದ ತಾಯಿ ಜೋರಾಗಿ ನಗುತ್ತಾರೆ. ಈ ವಿಡಿಯೋವನ್ನು 8 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈಕೆಯ ಶ್ವಾನ ಕಪ್ಪು ಬಿಳಿ ಮ್ರಿಶ್ರಿತ ಬಣ್ಣದಲ್ಲಿದೆ. ಇದನ್ನು ನೋಡಿ ಆಕೆ ತನ್ನ ಶ್ವಾನಕ್ಕೆ ಮುಖದ ಎಲ್ಲೆಲ್ಲಾ ಕಪ್ಪು ಬಣ್ಣವಿದೆಯೋ ಅಲ್ಲೆಲ್ಲಾ ಈಕೆ ತನಗೂ ಕಪ್ಪು ಬಣ್ಣವನ್ನು ಹಚ್ಚಿಕೊಳ್ಳುತ್ತಾಳೆ. ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಇನ್ಸ್ಟಾಗ್ರಾಮ್‌ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

click me!