
ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayanthara and Vignesh shivan) ಮದುವೆ ಅದ್ದೂರಿಯಾಗಿ ನೆರವೇರಿದೆ. ಜೂನ್ 9ರಂದು ಮಹಾಬಲಿಪುರಂ (Mahabalipuram)ನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಗಣ್ಯಾತಿಗಣ್ಯರು ಹಾಜರಿದ್ದು ನವಜೋಡಿಗೆ ಶುಭಹಾರೈಸಿದ್ದರು. ಅದ್ದೂರಿ ವಿವಾಹ (Grand wedding) ಸಮಾರಂಭದಲ್ಲಿ ನಯನತಾರಾ ಸೀರೆ (Saree) ಮತ್ತು ಜ್ಯುವೆಲ್ಲರಿ (JewellerY ಎಲ್ಲರ ಗಮನ ಸೆಳೆದಿತ್ತು. ಮದುವೆ ಡ್ರೆಸ್ ಹೀಗೆ ಇರಬೇಕೆಂದು ನಯನತಾರಾ ಅವರೇ ಖುದ್ದು ಹೇಳಿ ಮಾಡಿಸಿದ ಡಿಸೈನ್ (Design) ಇದಾಗಿದೆ.
ನಯನತಾರಾ ಮದುವೆಗೆ ಹೈದರಾಬಾದ್ ಟಚ್ ನೀಡಲಾಗಿತ್ತು. ಡ್ರೆಸ್ ಜೊತೆಗೆ ನಯನತಾರಾ ಧರಿಸಿದ್ದ ಜ್ಯುವೆಲ್ಲರಿ ಕೂಡ ಆಕರ್ಷಕವಾಗಿತ್ತು. ಬಹು ಎಳೆಯ ನೆಕ್ಲೆಸ್, ಮಾಂಗ್ ಟಿಕಾ, ದೊಡ್ಡದಾದ ಇಯರ್ ಸ್ಟಡ್ ಮತ್ತು ಬಳೆ ಧರಿಸಿದ್ದರು. ಇದು ಹೈದರಾಬಾದ್ ಸಾಂಪ್ರದಾಯಿಕ ಜ್ಯುವೆಲ್ಲರಿಯಾಗಿದ್ದು ರಾಜಾ ಮನೆತನದವರು ಧರಿಸುವ ಸಟ್ಲಡಾ ಹಾರ್ ಆಗಿದೆ. ಹೈಜರಾಬಾದ್ ನಿಜಾಮರು ಮತ್ತು ನವಾಬಿ ಪರಂಪರೆಯಾಗಿದ್ದು ಇಂದಿಗೂ ಕ್ಲಾಸಿಕ್ ಆಗಿ ಉಳಿದಿದೆ. ಒಟ್ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ವಿವಾಹದಲ್ಲಿ ನಯನತಾರ್ ಬ್ರೈಡಲ್ ಲುಕ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಯನತಾರಾ ಬ್ರೈಡಲ್ ಲುಕ್‌ನ ಸಿಂಪಲ್ ಐಡಿಯಾ ನೀವು ಕೂಡಾ ಟ್ರೈ ಮಾಡ್ಬೋದು. ಅವು ಯಾವುವು ?
ಹೈದರಾಬಾದ್ ನಿಜಾಮರ ಲುಕ್‌ನಲ್ಲಿ ಕಂಗೊಳಿಸಿದ ನಯನತಾರಾ; ಕೆಂಪು ಸೀರೆ-ಜ್ಯುವೆಲ್ಲರಿಯ ವಿಶೇಷತೆ ಇಲ್ಲಿದೆ
ಟೆಕ್ಸ್ಚರ್ಡ್ ಬನ್
ಹೂಗಳಿಂದ ಸುಂದರವಾಗಿ ಅಲಂಕೃತವಾದ ಹಜಾರದಲ್ಲಿ ನಯನತಾರಾ ಕೆಂಪುಬಣ್ಣದ ನೆಟೆಡ್ ಸೀರೆ ಧರಿಸಿ ನಡೆದು ಬಂದಾಗ ಅತ್ಯದ್ಭುತವಾಗಿ ಕಾಣಿಸುತ್ತಿದ್ದರು. ಅದರಲ್ಲೂ ಟೆಕ್ಸ್ಚರ್ಡ್ ಬನ್ ಮುಖಕ್ಕೆ ಇನ್ನಷ್ಟು ಕಳೆ ಕೊಟ್ಟಿತ್ತು. ಅಂದವಾದ ಕೂದಲಿನ ಬನ್‌ಗೆ ಮಲ್ಲಿಗೆ ಹೂಗಳ ಮಾಲೆ ಹಾಗೂ ಎಮರಾಲ್ಡ್ ಮಾಂಗ್‌ಟೀಕಾ ಸೊಗಸಾಗಿ ಒಪ್ಪಿತ್ತು.
ನ್ಯೂಡ್ ಲಿಪ್‌ಸ್ಟಿಕ್
ಎಲ್ಲಾ ಅದ್ಧೂರಿ ಮದುವೆಗಳಿಗೆ ಸಾಮಾನ್ಯವಾಗಿ ಬಳಸುವಂತೆ ಗಾಢವರ್ಣದ ಲಿಪ್‌ಸ್ಟಿಕ್‌ಗಳನ್ನು ಬಳಸುವುದು ಬಿಟ್ಟು, ನಯನತಾರಾ ನ್ಯೂಡ್ ಕಲರ್ ಲಿಪ್‌ಸ್ಟಿಕ್‌ನ್ನತ ತಮ್ಮ ಮದುವೆಗೆ ಆರಿಸಿಕೊಂಡರು. ಗಾಢ ಕೆಂಪು ಬಣ್ಣದ ಸೀರೆಗೆ, ನ್ಯೂಡ್ ಲಿಪ್‌ಸ್ಟಿಕ್ ತುಂಬಾ ಚೆನ್ನಾಗಿ ಒಪ್ಪುತ್ತದೆ. ಆಫ್ ಸ್ಕ್ರೀನ್‌ನಲ್ಲಿ ಯಾವಾಗಲೂ ಮಿನಿಮಮ್ ಮೇಕಪ್‌ನಲ್ಲಿ ಕಾಣಿಸಿಕೊಳ್ಳುವ ನಯನತಾರಾ ಮದುವೆಯಲ್ಲೂ ನ್ಯೂಡ್ ಕಲರ್ ಆಯ್ಕೆ ಮಾಡಿರೋದ್ರಲ್ಲಿ ಆಶ್ಚರ್ಯವಿಲ್ಲ.
ಸುಂದರ ಐಬ್ರೋ ಲುಕ್
ಐಬ್ರೋ ಶೇಪ್‌ಗಳ ವಿಭಿನ್ನ ಆಕಾರ ಮುಖಕ್ಕೆ ಭಿನ್ನ-ವಿಭಿನ್ನ ಆಕಾರವನ್ನು ನೀಡುತ್ತದೆ. ಇದು ಕೆಲವೊಮ್ಮೆ ಮುಖದ ಚಂದವನ್ನು ಹೆಚ್ಚಿಸಬಹುದು. ಇನ್ನು ಕೆಲವೊಮ್ಮೆ ಮುಖದ ಅಂದವನ್ನು ಹಾಳುಗೆಡಿಸಲೂ ಬಹುದು. ಹೀಗಾಗಿ ಮದುವೆಯ ಲುಕ್‌ಗೆ ಸಿಂಪಲ್ ಐಬ್ರೋ ಲುಕ್ ಚೆನ್ನಾಗಿರುತ್ತದೆ. ತಮ್ಮ ಮದುವೆಗೆ ಲೇಡಿ ಸೂಪರ್ ಸ್ಟಾರ್ ಇಂಥಹದ್ದೇ ಸರಳವಾದ ಐಬ್ರೋ ಲುಕ್‌ನ್ನು ಆಯ್ಕೆ ಮಾಡಿಕೊಂಡಿರು. ತೆಳುವಾದ ಪೆನ್ಸಿಲ್ ಥ್ರೆಡ್ ಅಲ್ಲದ, ಇನ್ನೊಂದೆಡೆ ದಪ್ಪಗಾಗಿರುವ ಐಬ್ರೋ ಸಹ ಅಲ್ಲದೆ ಮಧ್ಯಮ ಗಾತ್ರದ ಐಬ್ರೋ ಶೇಪ್‌ನ್ನು ನಯನತಾರಾ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.
ಪತ್ನಿ ನಯನಾತಾರಾಗೆ ದುಬಾರಿ ಉಡುಗೊರೆ ನೀಡಿದ ವಿಘ್ನೇಶ್ ಶಿವನ್; ಗಿಫ್ಟ್‌ನ ಬೆಲೆ ಎಷ್ಟು?
ಕಣ್ಣುಗಳ ಮೇಕಪ್
ನಯನತಾರಾ ತಮ್ಮ ಮದುವೆಗೆ ಸ್ಮೋಕಿ ಐಸ್ ಮೇಕಪ್ ಆರಿಸಿಕೊಂಡರು. ನಾಚುತ್ತಿರುವ ವಧು ಮೆಟಾಲಿಕ್ ಶೈನಿಂಗ್ ಕ್ಲಾಸೀ ಕಲರ್‌ನ್ನು ಐ ಮೇಕಪ್ ಆಗಿ ಮಾಡಿಕೊಂಡರು. ಹೀಗಾಗಿಯೇ ಸಂಪೂರ್ಣ ಮುಖ ಸರಳ, ಸುಂದರ ಮತ್ತು ಆಕರ್ಷಕವಾಗಿ ಕಾಣುತ್ತಿತ್ತು.
ಕನಿಷ್ಠ ಮೆಹಂದಿ ಧರಿಸಿ
ಭಾರತೀಯ ವಧು ಸಾಂಪ್ರದಾಯಿಕವಾಗಿ ತಮ್ಮ ಮದುವೆಯ ದಿನ ಕೈ ತುಂಬಾ ಮೆಹಂದಿ ಹಚ್ಚುತ್ತಾರೆ. ಅಂಗೈಯಲ್ಲಿ ಮಾತ್ರವಲ್ಲ, ಮೊಣಕೈ, ಕಾಲಿಗೂ ಹಚ್ಚಿಕೊಳ್ಳುತ್ತಾರೆ. ಮಾತ್ರವಲ್ಲ ತುಂಬಾ ಗ್ರ್ಯಾಂದ್ ಆದ ಡಿಸೈನ್‌ನನ್ನು ಸಹ ಆರಿಸಿಕೊಳ್ಳುತ್ತಾರೆ. ಆದರೆ ನಯನತಾರಾ ತಮ್ಮ ಮದುವೆಗೆ ಸಿಂಪಲ್ ಮೆಹಂದಿಯನ್ನು ಆರಿಸಿಕೊಂಡರು. ಇದು ಸರಳವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಿದೆ. ಈ ಹಿಂದೆ ಬಾಲಿವುಡ್ ನಟಿ ಆಲಿಯಾ ಭಟ್ ಸಹ ತಮ್ಮ ಮದುವೆಗೆ ಸಿಂಪಲ್ ಮೆಹಂದಿ ಡಿಸೈನ್‌ನ್ನು ಆಯ್ಕೆ ಮಾಡಿಕೊಂಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.