ಮೆಟ್ರೋದಲ್ಲಿ ಸ್ಕರ್ಟ್ ಧರಿಸಿ ಬಂದು ಎಲ್ಲರೂ ಕತ್ತು ಕೊಂಕಿಸಿ ನೋಡುವಂತೆ ಮಾಡಿದ ಹುಡುಗರು

By Anusha Kb  |  First Published May 2, 2023, 3:35 PM IST

ದೆಹಲಿ ಮೆಟ್ರೋ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಈಗ ಮೆಟ್ರೋದಲ್ಲಿ ಜೋಡಿಯೊಂದು ಸಾರ್ವಜನಿಕವಾಗಿ ಮುದ್ದಾಡಿದ ಕಾರಣಕ್ಕೆ, ನಂತರ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗಳ ವೀಡಿಯೋ ಕಾರಣಕ್ಕೆ ಹಲವು ಬಾರಿ ಸುದ್ದಿಯಾಗಿತ್ತು. ಆದರೆ ಈಗ ಮತ್ತೊಂದು ವಿಶೇಷ ಕಾರಣಕ್ಕೆ ದೆಹಲಿ ಮೆಟ್ರೋ ಸುದ್ದಿ ಮಾಡಿದೆ.


ದೆಹಲಿ ಮೆಟ್ರೋ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಈಗ ಮೆಟ್ರೋದಲ್ಲಿ ಜೋಡಿಯೊಂದು ಸಾರ್ವಜನಿಕವಾಗಿ ಮುದ್ದಾಡಿದ ಕಾರಣಕ್ಕೆ, ನಂತರ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗಳ ವೀಡಿಯೋ ಕಾರಣಕ್ಕೆ ಹಲವು ಬಾರಿ ಸುದ್ದಿಯಾಗಿತ್ತು. ಆದರೆ ಈಗ ಮತ್ತೊಂದು ವಿಶೇಷ ಕಾರಣಕ್ಕೆ ದೆಹಲಿ ಮೆಟ್ರೋ ಸುದ್ದಿ ಮಾಡಿದೆ. ಅದೇ ಮಹಿಳೆಯರ ಸ್ಕರ್ಟ್‌. ಮಹಿಳೆಯರು ಧರಿಸುವ ಧಿರಿಸನ್ನು ಹುಡುಗರಿಬ್ಬರು ಧರಿಸಿ ಮೆಟ್ರೋ ಏರಿದ್ದು, ಮೆಟ್ರೋದಲ್ಲಿರುವ ಎಲ್ಲರೂ ಈ ಹುಡುಗರನ್ನು ವಿಚಿತ್ರ ಪ್ರಾಣಿಗಳಂತೆ ಕತ್ತು ಕೊಂಕಿಸಿ ನೋಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹೆಣ್ಣು ಮಕ್ಕಳು ಹುಡುಗರ ರೀತಿ ಡ್ರೆಸ್ಸಿಂಗ್ ಸ್ಟೈಲ್ (Dressing style) ಮಾಡುವುದನ್ನು ನೀವು ಗಮನಿಸಿರಬಹುದು. ಆದರೆ ಹುಡುಗಿಯರ ರೀತಿ ಹುಡುಗರು ಡ್ರೆಸ್ ಮಾಡುವುದು ತೀರಾ ಕಡಿಮೆ. ಆದರೆ ಇತ್ತೀಚೆಗೆ ಈ ಟ್ರೆಂಡ್ ಶುರುವಾಗಿದ್ದು, ಹುಡುಗರು ಕೂಡ ನಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಹೆಣ್ಣು ಮಕ್ಕಳ ಡ್ರೆಸ್ ಹಾಕಿಕೊಂಡು ಬಿಂದಾಸ್ ಆಗಿ ಓಡಾಡಲು ಶುರು ಮಾಡಿದ್ದಾರೆ. ಅದೇ ರೀತಿ ಇಲ್ಲಿ ಹುಡುಗರು ಹೆಣ್ಣು ಮಕ್ಕಳ ಧಿರಿಸು ಎನಿಸಿದ  ಜೀನ್ಸ್‌ ಸ್ಕರ್ಟ್‌ ಧರಿಸಿ ಮೆಟ್ರೋದಲ್ಲಿ ಬಂದಿದ್ದು, ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.  

Tap to resize

Latest Videos

ದಿಲ್ಲಿ ಮೆಟ್ರೋದಲ್ಲಿ ಬಿಕಿನ ಫೋಟೋ ವೈರಲ್ ನಂತರ ಕೆಂಪು ಸೀರೆ, ಆಭರಣ ಧರಿಸಿ ನಾರಿ ಡಾನ್ಸ್‌

ಫ್ಯಾಷನ್‌ ಹಾಗೂ ಡ್ರೆಸ್ಸಿಂಗ್ ಸ್ಟೈಲ್ ಎಲ್ಲಾ ಎಲ್ಲೆಗಳನ್ನು ಮೀರಿದ್ದು, ಈ ಫ್ಯಾಷನ್‌ಗೆ ಯಾವುದೇ ಬೌಂಡರಿಗಳಿಲ್ಲ.  ನೀವು ಮಾಡುವ ಯೂನಿಕ್ ಫ್ಯಾಷನ್ ನಿಮ್ಮನ್ನು ನೋಡುವವರಿಗೆ ಚೆಂದ ಕಾಣಿಸಿದರೆ . ಉಳಿದವರು ಕೂಡ ಅದನ್ನು  ಶುರು ಮಾಡಿ ಹೊಸ ಟ್ರೆಂಡ್ ಶುರು ಮಾಡುತ್ತಾರೆ. ಮಹಿಳೆಯರು ಬಹಳ ಹಿಂದಿನಿಂದಲೂ ಪುರುಷ ಉಡುಪುಗಳನ್ನು ಅಳವಡಿಸಿಕೊಂಡರೆ, ಇತ್ತೀಚೆಗೆ ಪುರುಷರು ಕೂಡ ನಿಧಾನವಾಗಿ 'ಮಹಿಳೆಯರಿಗೆ ಮಾತ್ರ' ಎಂಬ ಟ್ಯಾಗ್‌ನೊಂದಿಗೆ ಬರುವ ಉಡುಪುಗಳನ್ನು ಹಾಕಲು ಶುರು ಮಾಡಿದ್ದಾರೆ. . ಇತ್ತೀಚೆಗೆ, ಅನೇಕ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮೇಕಪ್ ಮತ್ತು ಸ್ಕರ್ಟ್‌ಗಳು ಮತ್ತು ಸೀರೆಗಳಂತಹ ಬಟ್ಟೆಗಳನ್ನು ಯಾವುದೇ ಲಿಂಗಕ್ಕೆ ಸೀಮಿತಗೊಳಿಸಬಾರದು ಎಂಬ ವಿಚಾರವನ್ನು ಹೆಚ್ಚೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಈ ಹುಡುಗರು ಈಗ ಮೆಟ್ರೋದಲ್ಲಿ ಸ್ಕರ್ಟ್‌ ಧರಿಸಿ ಬಂದಿದ್ದು, ಹಲ್‌ಚಲ್ ಸೃಷ್ಟಿಸಿದ್ದಾರೆ. 

ಇನ್ಸ್ಟಾಗ್ರಾಮ್‌ ಬಳಕೆದಾರ ಸಮೀರ್ ಖಾನ್ ಅವರು ಹಂಚಿಕೊಂಡ ಈ ವೀಡಿಯೊದಲ್ಲಿ ಸಮೀರ್ ಹಾಗೂ ಅವರ ಸ್ನೇಹಿತ ಟಿ-ಶರ್ಟ್‌ಗೆ ಕೆಳಗೆ ಡೆನಿಮ್ ಸ್ಕರ್ಟ್ ಧರಿಸಿದ್ದಾರೆ. ಈ ಜೋಡಿ ಮೆಟ್ರೋದ ಫ್ಲಾಟ್‌ಫಾರಂನಲ್ಲಿ ಹಾಗೂ ಮೆಟ್ಟಿಲುಗಳಲ್ಲಿ ನಡೆದುಕೊಂಡು ಸಾಗುತ್ತಿದ್ದರೆ, ಇತರರು ಅವರನ್ನೇ ವಿಚಿತ್ರವಾಗಿ ಆಶ್ಚರ್ಯ ಹಾಗೂ ಕುತೂಹಲದಿಂದ ಗಮನಿಸುತ್ತಿದ್ದಾರೆ. ಈ ವಿಡಿಯೋಗೆ 'ಕ್ಲೌಟ್ ಚೇಸರ್ಸ್' ಎಂದು ಶೀರ್ಷಿಕೆ ನೀಡಲಾಗಿದೆ.

'ಪ್ಲೀಸ್‌.. ರೈಲಿನಲ್ಲಿ ರೀಲ್ಸ್‌ ಡಾನ್ಸ್‌ ಮಾಡ್ಬೇಡಿ..' ಪ್ರಯಾಣಿಕರಿಗೆ ದೆಹಲಿ ಮೆಟ್ರೋ ಮೀಮ್‌ ಮನವಿ!

ಈ ವೀಡಿಯೊವನ್ನು Instagramನಲ್ಲಿ ನೋಡಿದ ಜನ ಈ ಯುವಕರ ಆತ್ಮವಿಶ್ವಾಸ ಹಾಗೂ ಫ್ಯಾಷನ್‌ ಶೈಲಿಯನ್ನು ಕೊಂಡಾಡಿದ್ದಾರೆ. ಇದು ಆರಾಮದಾಯಕ, ಸೊಗಸಾದ ಧಿರಿಸಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೋಡಿ ಇದನ್ನು ಎಲ್ಲರೂ ಏಕೆ ಧರಿಸಬಾರದು ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಮತ್ತೆ ಒಬ್ಬರು ಹುಡುಗರಿಗೆ ಮಹಿಳೆರಷ್ಟು ಬಟ್ಟೆಯ ವಿಷಯದಲ್ಲಿ ಆಯ್ಕೆಗಳಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೊಸ ಚರ್ಚೆ ಶುರು ಮಾಡಿದೆ. ಅನೇಕರು ಇದನ್ನು ಮೆಚ್ಚಿದರೆ, ಮತ್ತೆ ಕೆಲವರು ವ್ಯಂಗ್ಯ ಮಾಡಿದ್ದಾರೆ.

ಒಟ್ಟಿನಲ್ಲಿ ಈ ವಿಡಿಯೋ ಹೊಸ ಟ್ರೆಂಡ್ ಸೃಷ್ಟಿಸಿರುವುದು ಸುಳ್ಳಲ್ಲ. ಮೊದಲೆಲ್ಲಾ ಮನೆಯಲ್ಲಿರುವ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಅವರ ಡ್ರೆಸ್ ಹಾಕಿದರೆ ಬೈದಾಡುತ್ತಿದ್ದರು, ತಮಾಷೆಯ ದೊಡ್ಡ ಜಗಳವೇ ನಡೆಯುತ್ತಿತ್ತು. ಇನ್ನೂ ಈ ರೀತಿ ಟ್ರೆಂಡ್ ಶುರುವಾದ್ರೆ ಅಣ್ಣ ತಮ್ಮಂದಿರನ್ನು ಬೈಯೋ ಸರದಿ ಅಕ್ಕ ತಂಗಿಯರದಾಗುತ್ತೆ.

 
 
 
 
 
 
 
 
 
 
 
 
 
 
 

A post shared by Sameer Khan (@sameerthatsit)

 

 

click me!