ಪನ್ನೀರ್ ಎಂದಾಗ ಬಗೆ ಬಗೆಯ ಖಾದ್ಯ ನೆನಪಾಗುತ್ತೆ. ರುಚಿ ರುಚಿ ಆಹಾರ ತಯಾರಿಲು ನಾವು ಪನ್ನೀರ್ ಬಳಸ್ತೇವೆ. ಆದ್ರೆ ಇದ್ರಿಂದ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಗೊತ್ತಾ?
ಪನ್ನೀರ್ ಕರಿ, ಪಾಲಾಕ್ ಪನ್ನೀರ್ ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ನಾವು ಪನ್ನೀರ್ ಸೇವನೆ ಮಾಡ್ತೇವೆ. ಸ್ಪೇಷಲ್ ದಿನಗಳಲ್ಲಿ ಪನ್ನೀರ್ ಖಾದ್ಯವಿಲ್ಲದೆ ಊಟ ಅಪೂರ್ಣವಾಗುತ್ತದೆ. ಪನ್ನೀರ್ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಬಹಳ ಒಳ್ಳೆಯದು. ನಮಗೆ ಪನ್ನೀರ್ ನಿಂದ ಖಾದ್ಯ ತಯಾರಿಸೋದು ಮಾತ್ರಗೊತ್ತು. ಆದ್ರೆ ಪನ್ನೀರ್ ನಮ್ಮ ಸೌಂದರ್ಯಕ್ಕೂ ಸಹಕಾರಿ ಎಂಬುದು ನಿಮಗೆ ತಿಳಿದಿದ್ಯಾ? ನೀವು ಪನ್ನೀರ್ ನೀರಿನಿಂದ ತ್ವಚೆಯನ್ನು ಸುಧಾರಿಸಿಕೊಳ್ಳಬಹುದು. ಟ್ಯಾನಿಂಗ್, ಕಲೆಗಳು, ಮೊಡವೆಗಳನ್ನು ತೆಗೆದುಹಾಕಲು ಪನ್ನೀರ್ ಸಹಾಯ ಮಾಡುತ್ತದೆ. ಚರ್ಮದ ಸೌಂದರ್ಯ ಹೆಚ್ಚಿಸಲು ನೀವು ಪನ್ನೀರ್ ನೀರನ್ನು ಹೇಗೆ ಬಳಸಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಪನ್ನೀರ್ (Panneer) ನೀರಿನ ಬಳಕೆಯಿಂದ ಆಗುವ ಪ್ರಯೋಜನ (Benefit) : ಪನೀರ್ ನೀರಿ (Water) ನಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಚರ್ಮವನ್ನು ಪೋಷಿಸುವ ಕೆಲಸ ಮಾಡುತ್ತದೆ. ಇದು ಒಳಗಿನಿಂದ ಚರ್ಮ (Skin) ವನ್ನು ಸ್ವಚ್ಛಗೊಳಿಸುತ್ತದೆ. ಮೊಡವೆ ಮತ್ತು ಸುಕ್ಕು ಕಡಿಮೆ ಮಾಡುವ ಕೆಲಸವನ್ನು ಇದು ಮಾಡುತ್ತದೆ. ಚರ್ಮವನ್ನು ತೇವಗೊಳಿಸುವ ಜೊತೆಗೆ ಶುಷ್ಕ ಚರ್ಮದ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ಚರ್ಮ ಕಪ್ಪಾಗುವುದನ್ನು ತಡೆಯುವುದಲ್ಲದೆ ಕಲೆಯಿಂದ ಮುಕ್ತಿ ನೀಡುತ್ತದೆ.
ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರ ಫ್ಯಾಷನ್ ಝಲಕ್
ಪನ್ನೀರ್ ನೀರನ್ನು ಹೀಗೆ ಬಳಸಿ : ಮುಖಕ್ಕೆ ಪನೀರ್ ನೀರನ್ನು ನೀವು, ಮಾಯಿಶ್ಚರೈಸರ್ ಮತ್ತು ಫೇಸ್ ಪ್ಯಾಕ್‌ನಲ್ಲಿ ಬೆರೆಸಿ ಹಚ್ಚಿಕೊಳ್ಳಬೇಕು. ಟೋನರ್ ತಯಾರಿಸಿಯೂ ನೀವು ಬಳಸಬಹುದು.
ಪನ್ನೀರ್ ನೀರಿನ ಟೋನರ್ ತಯಾರಿಸೋದು ಹೇಗೆ? : ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಟೋನರ್ ಲಭ್ಯವಿದೆ. ಆದ್ರೆ ಅದ್ರ ಖರೀದಿ ಕಷ್ಟ ಎನ್ನುವವರು ಪನ್ನೀರ್ ನೀರನ್ನು ಟೋನರ್ ಆಗಿ ಬಳಸಿ. ಪನ್ನೀರ್ ಟೋನರ್ ತಯಾರಿಸಲು ಪನೀರ್ ನೀರನ್ನು ಮೂರರಿಂದ ನಾಲ್ಕು ಚಮಚ ತೆಗೆದುಕೊಳ್ಳಬೇಕು. ಇದಕ್ಕೆ ಅಲೋವೆರಾ ಜೆಲ್ ಒಂದು ಚಮಚ ಬಳಸಿ. ಅಲ್ಲದೆ ಕೇಸರಿಯ ಒಂದರಿಂದ ಎರಡು ತುಂಡುಗಳು ಅಗತ್ಯವಿರುತ್ತವೆ.
Beauty Tips : ಬೇಸಿಗೆಯಲ್ಲಿ ಹಿಮ್ಮಡಿ ಒಡೆಯುವುದೇಕೆ?
ಒಂದು ಪಾತ್ರೆಯಲ್ಲಿ ಪನ್ನೀರ್ ನೀರನ್ನು ಹಾಕಿ. ಅದಕ್ಕೆ ಅಲೋವೆರಾ ಜೆಲ್ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣಕ್ಕೆ ನೀವು ಕೇಸರಿ ಎಸಳನ್ನು ಹಾಕಿ ಸ್ವಲ್ಪ ಹೊತ್ತು ಹಾಗೆಯೇ ಬಿಡಬೇಕು. ಕೇಸರಿ ಎಸಳು ರಸಬಿಟ್ಟುಕೊಳ್ಳುತ್ತದೆ. ನಂತ್ರ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಬೇಕು. ಈಗ ಪನ್ನೀರ್ ನೀರು ಟೋನರ್ ಗೆ ಸಿದ್ಧವಾಗಿದೆ. ನೀವು ಈ ನೀರನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಡಬಹುದು. ನಿಮಗೆ ಅಗತ್ಯವಿದ್ದಾಗ ನೀವು ಈ ನೀರನ್ನು ಟೋನರ್ ರೀತಿ ಬಳಸಬೇಕು.
ಹತ್ತಿರ ಉಂಡೆಯನ್ನು ತೆಗೆದುಕೊಂಡು, ಅಕ್ಕೆ ಪನ್ನೀರ್ ನೀರಿನ ಟೋನರ್ ಹಾಕಿ ಅದನ್ನು ಮುಖಕ್ಕೆ ಮೃದುವಾಗಿ ಹಚ್ಚಬೇಕು. ಪನ್ನೀರ್ ನೀರನ್ನು ನೀವು ಫೇಸ್ ಪ್ಯಾಕ್ ರೂಪದಲ್ಲೂ ಬಳಸಬಹುದು.
ಪನ್ನೀರ್ ಫೇಸ್ ಪ್ಯಾಕ್ ಮಾಡೋದು ಹೇಗೆ ಗೊತ್ತಾ? : ಪನೀರ್ ಫೇಸ್ ಪ್ಯಾಕ್ ಮಾಡಲು ನಿಮಗೆ ಎರಡರಿಂದ ಮೂರು ಚಮಚ ಪನ್ನೀರ್ ನೀರು ಅಗತ್ಯವಿದೆ. ಇದ್ರ ಜೊತೆ ಒಂದು ಚಮಚ ಜೇನುತುಪ್ಪ ಬಳಸಿ. ಇದಲ್ಲದೆ ಒಂದು ಸ್ಲೈಸ್ ಚೀಸ್ ಬಳಸಿ. ಫೇಸ್ ಪ್ಯಾಕ್ ಮಾಡಲು ನೀವು ಚೀಸನ್ನು ತುರಿಯಬೇಕು. ನಂತ್ರ ಅದಕ್ಕೆ ಸ್ವಲ್ಪ ಪನೀರ್ ನೀರು ಮತ್ತು ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಬೇಕು. ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ನಂತ್ರ ಇದನ್ನು ಮುಖ ಮತ್ತು ಕತ್ತಿಗೆ ಹಚ್ಚಬೇಕು. ಫೇಸ್ ಪ್ಯಾಕ್ ಹಚ್ಚಿದ 15 ರಿಂದ 20 ನಿಮಿಷಗಳ ನಂತರ ಮುಖವನ್ನು ಶುದ್ಧ ನೀರಿನಲ್ಲಿ ತೊಳೆಯಬೇಕು.