ಬರೀ 10 ಗ್ರಾಂ ಬೆಳ್ಳಿಯಲ್ಲಿ ಸಿಗುತ್ತೆ ಸಖತ್ ಟ್ರೆಂಡಿ ಮಾಂಗಲ್ಯ.. ಈ 6 ಡಿಸೈನ್ಸ್ ನೋಡಿ

Published : Mar 20, 2026, 10:02 PM IST
Silver mangalsutra

ಸಾರಾಂಶ

Silver mangalsutra designs under 10 grams: ಕಡಿಮೆ ಬಜೆಟ್‌ನಲ್ಲಿ ಸುಂದರ ಮತ್ತು ಟ್ರೆಂಡಿ ಮಾಂಗಲ್ಯ ಸರ ಖರೀದಿಸಬೇಕಾ? ಹಾಗಿದ್ರೆ 10 ಗ್ರಾಂ ಬೆಳ್ಳಿಯ ಮಾಂಗಲ್ಯ ಗುಡ್ ಸೆಲೆಕ್ಷನ್.  ಇತ್ತೀಚೆಗಂತೂ ದಿನನಿತ್ಯದ ಬಳಕೆಗೆ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಹೊಸ ಡಿಸೈನ್‌ಗಳು ಸಿಗುತ್ತಿವೆ.    

ಭಾರತದಲ್ಲಿ ವಿವಾಹಿತ ಮಹಿಳೆಯರಿಗೆ ಮಾಂಗಲ್ಯ ಕೇವಲ ಒಂದು ಆಭರಣವಲ್ಲ, ಅದೊಂದು ವಿಶೇಷ ಸಂಪ್ರದಾಯ ಮತ್ತು ಭಾವನಾತ್ಮಕ ಸಂಕೇತ. ಮೊದಲೆಲ್ಲಾ ಹೆಚ್ಚಿನ ಮಹಿಳೆಯರು ಚಿನ್ನದ ಮಾಂಗಲ್ಯವನ್ನೇ ಧರಿಸುತ್ತಿದ್ದರು. ಆದರೆ, ಇತ್ತೀಚೆಗೆ ಬೆಳ್ಳಿಯ ಮಾಂಗಲ್ಯ (Silver Mangalsutra) ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಕಡಿಮೆ ಬಜೆಟ್‌ನಲ್ಲಿ ಸ್ಟೈಲಿಶ್ ಮತ್ತು ಸುಂದರವಾದ ಮಾಂಗಲ್ಯ ಬೇಕಿದ್ದರೆ, 10 ಗ್ರಾಂ ಬೆಳ್ಳಿಯಲ್ಲೂ ಹಲವು ಅದ್ಭುತ ಡಿಸೈನ್‌ಗಳು ಸಿಗುತ್ತವೆ. ಈ ಮಾಂಗಲ್ಯಗಳು ನೋಡಲು ಮಾಡರ್ನ್ ಆಗಿದ್ದು, ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದಂತಿವೆ. ಬನ್ನಿ, 10 ಗ್ರಾಂ ಬೆಳ್ಳಿಯಲ್ಲಿ ಸಿಗುವ 6 ಟ್ರೆಂಡಿ ಸಿಲ್ವರ್ ಮಾಂಗಲ್ಯ ಡಿಸೈನ್‌ಗಳ ಬಗ್ಗೆ ತಿಳಿಯೋಣ.

ಮಿನಿಮಲ್ ಬ್ಲ್ಯಾಕ್ ಬೀಡ್ ಸಿಲ್ವರ್ ಮಾಂಗಲ್ಯ

ಈ ಡಿಸೈನ್ ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ಇದರಲ್ಲಿ ಬೆಳ್ಳಿಯ ಚೈನ್ ಜೊತೆ ಸಣ್ಣಸಣ್ಣ ಕಪ್ಪು ಮಣಿಗಳು (Black Beads) ಇರುತ್ತವೆ ಮತ್ತು ಮಧ್ಯದಲ್ಲಿ ಬೆಳ್ಳಿಯ ಪುಟ್ಟ ಪೆಂಡೆಂಟ್ ಇರುತ್ತದೆ. ಈ ಡಿಸೈನ್ ಹಗುರ, ನೋಡಲು ಸುಂದರ ಹಾಗೂ ಆಫೀಸ್ ವೇರ್‌ಗೂ ಪರ್ಫೆಕ್ಟ್ ಅಂತಾರೆ.

ಇನ್ನಷ್ಟು ಓದಿ - ಡೈಲಿ ವೇರ್‌ಗೆ ಬೆಸ್ಟ್ ಈ ಚಾರ್ಮ್ ಬ್ಲ್ಯಾಕ್ ಬೀಡ್ಸ್ ಸಿಲ್ವರ್ ಆ್ಯಂಕ್ಲೆಟ್

ಹಾರ್ಟ್ ಪೆಂಡೆಂಟ್ ಸಿಲ್ವರ್ ಮಾಂಗಲ್ಯ ಡಿಸೈನ್

ನೀವು ಸ್ವಲ್ಪ ರೊಮ್ಯಾಂಟಿಕ್ ಮತ್ತು ಸ್ಟೈಲಿಶ್ ಡಿಸೈನ್ ಇಷ್ಟಪಡುವವರಾದರೆ, ಹಾರ್ಟ್ ಪೆಂಡೆಂಟ್ ಇರುವ ಬೆಳ್ಳಿ ಮಾಂಗಲ್ಯ ಉತ್ತಮ ಆಯ್ಕೆ. ಇದರಲ್ಲಿ ಮಧ್ಯದಲ್ಲಿ ಬೆಳ್ಳಿಯ ಹಾರ್ಟ್ ಶೇಪ್ ಪೆಂಡೆಂಟ್ ಇದ್ದು, ಅದರ ಎರಡೂ ಬದಿಯಲ್ಲಿ ಕಪ್ಪು ಮಣಿಗಳಿರುತ್ತವೆ. ಈ ಡಿಸೈನ್ ಹೊಸದಾಗಿ ಮದುವೆಯಾದ  ಹೆಣ್ಣು ಮಕ್ಕಳಿಗೆ ತುಂಬಾ ಸುಂದರವಾಗಿ ಕಾಣುತ್ತದೆ.

ಫ್ಲವರ್ ಡಿಸೈನ್ ಸಿಲ್ವರ್ ಮಾಂಗಲ್ಯ.. ಲೇಟೆಸ್ಟ್ ಡಿಸೈನ್

ಹೂವಿನ ಡಿಸೈನ್ ಇರುವ ಆಭರಣಗಳು ಯಾವಾಗಲೂ ಟ್ರೆಂಡ್‌ನಲ್ಲಿರುತ್ತವೆ. ಈ ಮಾಂಗಲ್ಯದಲ್ಲಿ ಹೂವಿನ ಆಕಾರದ ಬೆಳ್ಳಿ ಪೆಂಡೆಂಟ್ ಇರುತ್ತದೆ. ಇದು ನೋಡಲು ತುಂಬಾ ನಾಜೂಕಾಗಿ ಮತ್ತು ಆಕರ್ಷಕವಾಗಿ ಕಾಣುತ್ತದೆ. ಸರಳವಾದರೂ ಕ್ಲಾಸಿಯಾಗಿ ಕಾಣುವ ಆಭರಣ ಇಷ್ಟಪಡುವ ಮಹಿಳೆಯರಿಗೆ ಈ ಡಿಸೈನ್ ಹೇಳಿ ಮಾಡಿಸಿದ್ದು.

ಫ್ಯಾನ್ಸಿ ಡಬಲ್ ಚೈನ್ ಸಿಲ್ವರ್ ಮಾಂಗಲ್ಯ

ಡಬಲ್ ಚೈನ್ ಇರುವ ಬೆಳ್ಳಿ ಮಾಂಗಲ್ಯ ನೋಡಲು ಸ್ವಲ್ಪ ರಿಚ್ ಮತ್ತು ಸ್ಟೈಲಿಶ್ ಲುಕ್ ಕೊಡುತ್ತದೆ. ಇದರಲ್ಲಿ ಎರಡು ತೆಳುವಾದ ಚೈನ್‌ಗಳಿದ್ದು, ಮಧ್ಯದಲ್ಲಿ ಒಂದು ಸಣ್ಣ ಪೆಂಡೆಂಟ್ ಇರುತ್ತದೆ. ಈ ಡಿಸೈನ್ ದಿನನಿತ್ಯದ ಬಳಕೆಯ ಜೊತೆಗೆ ಪಾರ್ಟಿಗಳಿಗೂ ಚೆನ್ನಾಗಿ ಹೊಂದುತ್ತದೆ.

ಇನ್ನಷ್ಟು ಓದಿ - Gold Jhumka Designs: ಮಗಳ ಜೊತೆ ಅಮ್ಮನೂ ಧರಿಸಬಹುದು 5 ಗ್ರಾಂ ಚಿನ್ನದ ಜುಮುಕಿ

ಸ್ಟೋನ್ ಸ್ಟಡೆಡ್ ಸಿಲ್ವರ್ ಮಾಂಗಲ್ಯ ಡಿಸೈನ್ 

ನೀವು ಸ್ವಲ್ಪ ಗ್ಲಾಮರಸ್ ಲುಕ್ ಬಯಸುವುದಾದರೆ, ಸ್ಟೋನ್ ಇರುವ ಬೆಳ್ಳಿ ಮಾಂಗಲ್ಯ ಟ್ರೈ ಮಾಡಬಹುದು. ಇದರಲ್ಲಿ ಪೆಂಡೆಂಟ್‌ನಲ್ಲಿ ಸಣ್ಣಸಣ್ಣ ಸ್ಟೋನ್‌ಗಳನ್ನು ಕೂರಿಸಿದ್ದು, ಇದು ಮಾಂಗಲ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಹಬ್ಬ-ಹರಿದಿನ ಮತ್ತು ವಿಶೇಷ ಸಮಾರಂಭಗಳಲ್ಲಿ ಧರಿಸಲು ಇದು ಉತ್ತಮ ಆಯ್ಕೆ.

ರೌಂಡ್ ಪೆಂಡೆಂಟ್ ಸಿಲ್ವರ್ ಮಾಂಗಲ್ಯ

ದುಂಡಗಿನ ಆಕಾರದ ಪೆಂಡೆಂಟ್ ಅನ್ನು ಬಹಳ ಕ್ಲಾಸಿಕ್ ಡಿಸೈನ್ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಬೆಳ್ಳಿಯ ದುಂಡಗಿನ ಪೆಂಡೆಂಟ್ ಇದ್ದು, ಎರಡೂ ಬದಿಗಳಲ್ಲಿ ಕಪ್ಪು ಮಣಿಗಳು ಇರುತ್ತವೆ. ಈ ಡಿಸೈನ್ ಹಗುರವಾಗಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿಯೂ ಕಾಣುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಡೆಗೆ ಕೊಡಿ ಹೊಸ ಟ್ವಿಸ್ಟ್, ಈದ್ ಹಬ್ಬಕ್ಕೆ ಟ್ರೈ ಮಾಡಿ ಈ ಬ್ರೇಡ್ ಹೇರ್‌ಸ್ಟೈಲ್!
ಹಬ್ಬದ ಶೃಂಗಾರಕ್ಕೆ ಬೇಕೇಬೇಕು ಗಾಜಿನ ಬಳೆ! ಇಲ್ಲಿದೆ 5 ಟ್ರೆಂಡಿ ಡಿಸೈನ್ಸ್!