ಸಿಂಗರ್ ಕೈಯಲ್ಲಿರೋದು ಪೈಂಟ್ ಡಬ್ಬ ಅಲ್ಲ ಪ್ರತಿಷ್ಠಿತ ಲೂಯಿ ವಿಟಾನ್ ಬ್ಯಾಗ್, ಇದ್ರ ಬೆಲೆ ಬೆಂಕಿ

Published : Feb 23, 2026, 04:02 PM IST
Kanika Kapoor Bag

ಸಾರಾಂಶ

ಸಿಂಗರ್ ಕೈಯಲ್ಲಿರೋದು ಪೈಂಟ್ ಡಬ್ಬ ಅಲ್ಲ ಪ್ರತಿಷ್ಠಿತ ಲೂಯಿ ವಿಟಾನ್ ಬ್ಯಾಗ್, ಸೋಶಿಯಲ್ ಮೀಡಿಯಾದಲ್ಲಿ ಇದು ಏಷ್ಯನ್ ಪೈಂಟ್ಸ್ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅಚ್ಚರಿ ಎಂದರೆ ಇದರ ಬೆಲೆ. 

ಮುಂಬೈ (ಫೆ.23) ಗಾಯಕಿ ಕನಿಕಾ ಕಪೂರ್ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಕಾರ್ಯಕ್ರಮಗಳಲ್ಲಿ, ರೆಸ್ಟೋರೆಂಟ್‌ಗಳಲ್ಲಿ ಕನಿಕಾ ಕಪೂರ್ ಕಾಣಿಸಿಕೊಂಡಿದ್ದಾರೆ. ಪ್ರತಿ ಬಾರಿ ಕನಿಕಾ ಕಪೂರ್ ಕಾಣಿಸಿಕೊಂಡಾಗ ಅವರ ಫ್ಯಾಶನ್, ಡ್ರೆಸ್ ಭಾರಿ ಚರ್ಚೆಯಾಗುತ್ತದೆ. ಈ ಬಾರಿ ಕನಿಕಾ ಕಪೂರ್ ಕೈಯಲ್ಲಿ ಹಿಡಿದಿರುವ ಬ್ಯಾಗ್ ಭಾರಿ ಚರ್ಚೆಯಾಗುತ್ತಿದೆ, ಟ್ರೋಲ್ ಆಗುತ್ತಿದೆ. ಕನಿಕಾ ಕಪೂರ್ ಕೈಯಲ್ಲಿ ಖಾಲಿ ಪೈಂಟ್ ಡಬ್ಬ ರೀತಿಯ ಬ್ಯಾಗ್ ಹಿಡಿದು ತಿರುಗಾಡಿದ್ದಾರೆ. ಎಲ್ಲರೂ ಇದೇ ಬ್ಯಾಗ್ ಪ್ರಶ್ನಿಸಿದ್ದಾರೆ. ವಿಶೇಷ ಅಂದರೆ ಇದು ಪೈಂಟ್ ಡಬ್ಬ ಅಲ್ಲ, ಪ್ರತಿಷ್ಠಿತ ಫ್ಯಾಶನ್ ಬ್ರ್ಯಾಂಡ್ ಲೂಯಿ ವಿಟಾನ್ ಹೊರತಂದಿರುವ ಬ್ಯಾಗ್. ಇನ್ನು ಇದರ ಬೆಲೆ ಕೇಳದರೆ ಅಚ್ಚರಿಯಾಗುವುದು ಖಚಿತ

ಲೂಯಿ ವಿಟಾನ್ ಪೈಂಟ್ ಡಬ್ಬ ಬ್ಯಾಗ್ ಬೆಲೆ ಎಷ್ಟು

ಕನಿಕಾ ಕಪೂರ್ ಕೈಯಲ್ಲಿ ಹಿಡಿದು ತಿರುಗಾಡುತ್ತಿರುವುದು ಪೈಂಟ್ ಡಬ್ಬ ಅಲ್ಲ. ಪ್ರತಿಷ್ಠಿತ ಲೂಯಿ ವಿಟಾನ್ ಈ ಬ್ಯಾಗ್ ಬೆಲೆ ಬರೋಬ್ಬರ 1.9 ಲಕ್ಷ ರೂಪಾಯಿ. ಲೂಯಿ ವಿಟಾನ್ ವೆಬ್‌ಸೈಟ್‌ನಲ್ಲಿ ಇದರ ಬೆಲೆ ನಮೂದಿಸಲಾಗಿದೆ. ಇದಕ್ಕೆ 1,91,522 ರೂಪಾಯಿ (£1,980) ಎಂದು ನೀಡಲಾಗಿದೆ. 2022ರಲ್ಲಿ ಈ ಫ್ಯಾಶನ್ ಬ್ಯಾಗ್ ಬಿಡುಗಡೆಯಾಗಿದೆ. ಕೆಂಪು, ನೀಲಿ, ಹಳದಿ, ಹಸಿರು, ಪರ್ಪಲ್ ಹಾಗೂ ಆರೇಂಜ್ ಬಣ್ಣಗಳಲ್ಲಿ ಈ ಬ್ಯಾಗ್ ಲಭ್ಯವಿದೆ. ಈ ಬ್ಯಾಗ್ ಒಳಗೆ ಎರಡು ಮೊಬೈಲ್ ಫೋನ್ ಹಾಗೂ ಇತರ ಕೆಲ ವಸ್ತುಗಳನ್ನು ಇಡಲು ಸ್ಥಳವಕಾಶವಿದೆ.

ಕನಿಕಾ ಕಪೂರ್ ಈ ಲೂಯಿ ವಿಟಾನ್ ಬ್ಯಾಗ್ ಹಿಡಿದು ಪ್ರತ್ಯಕ್ಷಗೊಳ್ಳುತ್ತಿದ್ದಂತೆ ಹಲವರು ಈ ಕುರಿತು ಪ್ರಶ್ನಿಸಿದ್ದಾರೆ. ಬ್ಯಾಗ್ ವಿಶೇಷತೆ, ಇದರ ಸ್ಥಳವಕಾಶ ಕುರಿತು ಕೇಳಿದ್ದರೆ. ಇದರ ಬೆನ್ನಲ್ಲೇ ಕನಿಕಾ ಕಪೂರ್ ಬ್ಯಾಗ್ ಒಪನ್ ಮಾಡಿ ತೋರಿಸಿದ್ದಾರೆ. ನಗದು ಹಣ, ಲಿಪ್‌ಸ್ಟಿಕ್ ಸೇರಿದಂತೆ ಇತರ ಕೆಲ ವಸ್ತುಗಳನ್ನು ಕನಿಕಾ ಕಪೂರ್ ಈ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದರು.

ಪೈಂಟ್ ಬ್ಯಾಗ್ ಎಂದ ಜನ

ಕನಿಕಾ ಕಪೂರ್ 1.9 ಲಕ್ಷ ರೂಪಾಯಿ ಲೂಯಿ ವಿಟಾನ್ ಬ್ಯಾಗ್ ಹಿಡಿದು ತಿರುಗಾಡುತ್ತಿದ್ದರೆ ಜನ ಇದು ಪೈಂಟ್ ಡಬ್ಬ ರೀತಿ ಇದೆ ಎಂದಿದ್ದಾರೆ. ನಮ್ಮ ಮನೆಯಲ್ಲೂ ಇದೇ ರೀತಿ ಪೈಂಟ್ ಡಬ್ಬ ಇದೆ. ನಾವೇ ಒಂದಷ್ಟು ಚಿತ್ರ ಬಿಡಿಸಿಕೊಡುತ್ತಿದ್ದೇವು. ಬೇಕು ಎಂದರೆ ಕಸ್ಟಮೈಸ್ಡ್ ಮಾಡಿ ನಿಮ್ಮ ಫೋಟೋನ್ನೇ ಹಾಕುತ್ತಿದ್ದೇವು ಎಂದಿದ್ದಾರೆ. ಶ್ರೀಮಂತರ ಫ್ಯಾಶನ್‌ಗೆ ಅರ್ಥ ಇರಲ್ಲ, ಕ್ರಿಯೇಟಿವಿಟಿ ಇರಲ್ಲ. ಬ್ಯಾಗ್‌ನಲ್ಲಿ ಕ್ರಿಯೇಟಿವಿಟಿ ತೂರಿಸಲು ಪೈಂಟ್ ಡಬ್ಬ ರೀತಿ ಮಾಡಿದ್ದಾರೆ. ಅದನ್ನು ಖರೀದಿಸಲು ಸೆಲೆಬ್ರೆಟಿಗಳು ಶ್ರೀಮಂತರು ಕ್ಯೂ ನಿಲ್ಲುತ್ತಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ಈ ಬ್ಯಾಗ್ ಹಿಡಿದು ಹೋದರೆ ಹಣ ಸಂಗ್ರಹ, ದೇಣಿಗೆ ಸಂಗ್ರಹ ಮಾಡಲು ದಾರಿಯಲ್ಲಿ ಹೋದ ರೀತಿ ಇದೆ. ಈ ಬ್ಯಾಗನ್ನು ಫ್ಯಾಶನ್ ಎಂದು ಜನರು ತಿಳಿದುಕೊಂಡರೆ ಏನು ಮಾಡುವುದು ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Gardening Tips: ಮನೆಯಲ್ಲೇ ಅಲೋವೆರಾ ಬೆಳೆಸಿ, ಈ 5 ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
Mangalsutra Designs: 5 ಗ್ರಾಂನಲ್ಲಿ ಸಿಗುವ ಮಂಗಳಸೂತ್ರ ಸೂಪರ್ ಡಿಸೈನ್‌ಗಳಿವು