ನೀವು ಸರಿಯಾಗಿ ಮುಖ ತೊಳೆಯುತ್ತಿಲ್ಲ ಎಂಬುದಕ್ಕೆ ಇವೇ ಸಾಕ್ಷಿ!

By Suvarna NewsFirst Published Feb 11, 2021, 4:07 PM IST
Highlights

ಮುಖ ತೊಳೆಯೋದು ಅಂದ್ಕೊಂಡಷ್ಟು ಸಿಂಪಲ್ ವಿಷಯ ಅಲ್ಲವೇ ಅಲ್ಲ. ಮುಖದ ಮೇಲಿನ ಮೊಡವೆ ಸೇರಿದಂತೆ ಅನೇಕ ಚರ್ಮ ಸಮಸ್ಯೆಗಳಿಗೆ ಮೂಲಕಾರಣ ಸರಿಯಾಗಿ ಮುಖ ತೊಳೆಯದಿರೋದೆ ಆಗಿರುತ್ತೆ. ಹಾಗಾದ್ರೆ ಮುಖ ಸರಿಯಾಗಿ ತೊಳೆದಿದ್ದೇವೋ ಇಲ್ಲವೋ ಎಂದು ನಿರ್ಧರಿಸೋದು ಹೇಗೆ?

ಪ್ರತಿ ಮಹಿಳೆಯೂ ತನ್ನ ಮುಖದ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾಳೆ.ಆಗಾಗ ಮುಖ ತೊಳೆಯೋದ್ರಿಂದ ಯಾವುದೇ ಚರ್ಮ ಸಮಸ್ಯೆಗಳು ಕಾಡೋದಿಲ್ಲ, ಸೌಂದರ್ಯ ಹಾಳಾಗೋದಿಲ್ಲ ಎಂಬುದು ಬಹುತೇಕ ಮಹಿಳೆಯರ ಅನಿಸಿಕೆ. ಆದ್ರೆ ಕೆಲವರಿಗೆ ಎಷ್ಟೇ ಬಾರಿ ಮುಖ ತೊಳೆದ್ರೂ ಮೊಡವೆ, ಬ್ಲಾಕ್ಹೆಡ್ಸ್, ವೈಟ್ ಹೆಡ್ಸ್ ಅಥವಾ ಇನ್ಯಾವುದೋ ಸಮಸ್ಯೆ ಮುಖದ ಅಂದ ಕೆಡಿಸುತ್ತೆ.

ಮುಖ ತೊಳೆಯೋದ್ರಿಂದ ಚರ್ಮದಲ್ಲಿರೋ ಅಗತ್ಯಕ್ಕಿಂತ ಹೆಚ್ಚಿನ ಎಣ್ಣೆಯಂಶ,ಕೊಳೆ,ಕೀಟಾಣುಗಳು ನಾಶವಾಗಿ ತ್ವಚೆಯ ಆರೋಗ್ಯ ವರ್ಧಿಸುತ್ತದೆ ಅನ್ನೋದೇನೋ ನಿಜ.ಆದ್ರೆ ಪ್ರತಿದಿನ ಆಗಾಗ ಮುಖ ತೊಳೆದ್ರೂ ಚರ್ಮ ಸಮಸ್ಯೆ ಕಾಡುತ್ತಿದೆಯೆಂದ್ರೆ ನೀವು ಮುಖ ತೊಳೆಯುತ್ತಿರೋ ವಿಧಾನ ಸರಿಯಿಲ್ಲವೆಂದೇ ಅರ್ಥ.ಹಾಗಾದ್ರೆ ನೀವು ಮುಖವನ್ನು ಸಮರ್ಪಕವಾಗಿ ತೊಳೆದಿಲ್ಲಎಂದು ಸೂಚಿಸೋ ಚಿಹ್ನೆಗಳು ಯಾವುವು?

ಅಂಗೈ, ಪಾದದಲ್ಲಿ ಸಿಕ್ಕಾಪಟ್ಟೆ ಬೆವರು: ಮನೆಯಲ್ಲೇ ಇದೆ ಮದ್ದು!

ಮುಖ ತೊಳೆದ ಮೇಲೂ ಮೇಕಪ್ ಉಳಿದಿರೋದು

ಮುಖಕ್ಕೆ ಫೇಸ್ವಾಷ್ ಹಚ್ಚಿನೇ ತೊಳೆದಿರುತ್ತೀರಿ,ಆದ್ರೆ ಟೋನರ್ನಿಂದ ಮುಖವನ್ನುಉಜ್ಜಿನೋಡಿದ್ರೆ ಕಾಟನ್ ಪ್ಯಾಡ್ನಲ್ಲಿ ಒಂದಿಷ್ಟು ಫೌಂಡೇಷನ್ ಹಿಡಿದಿದೆ ಎಂದ್ರೆ ನೀವು ಮುಖವನ್ನು ಸರಿಯಾಗಿ ತೊಳೆದಿಲ್ಲ ಎಂದೇ ಅರ್ಥ.ಮೇಕಪ್ ತೆಗೆಯಲು ಮೊದಲು ಟೋನರ್ ಬಳಸಿ ಮುಖ ಸ್ವಚ್ಛಗೊಳಿಸಿ ಆ ಬಳಿಕ ನೀರಿನಿಂದ ಅಥವಾ ಆಯಿಲ್ ಬೇಸ್ಡ್ ಮಿಸೆಲ್ಲರ್ ವಾಟರ್ನಿಂದ ಸ್ವಚ್ಛಗೊಳಿಸಿ.

ತ್ವಚೆ ಒಣಗಿರೋದು ಅಥವಾ ಎಣ್ಣೆಜಿಡ್ಡಿನಿಂದ ಕೂಡಿರೋದು

ತ್ವಚೆಗೆ ಹೊಂದೋ ಫೇಸ್ವಾಷ್ ಬಳಸೋದು ಅತ್ಯಗತ್ಯ.ಇಲ್ಲವಾದ್ರೆ ನೀವು ಪ್ರತಿ ಬಾರಿ ಮುಖ ತೊಳೆದಾಗಲೂ ನಿಮ್ಮ ಚರ್ಮಕ್ಕೆ ಹಾನಿಯಾಗೋ ಸಾಧ್ಯತೆ ಹೆಚ್ಚಿರುತ್ತೆ.ನೀವು ಒಣ ತ್ವಚೆಯವರಾಗಿದ್ರೆ ಎಣ್ಣೆಜಿಡ್ಡನ್ನು ಪೂರ್ತಿಯಾಗಿ ಮುಖದಿಂದ ತೆಗೆದುಬಿಡೋ ಫೇಸ್ವಾಷ್ ಬಳಸಿದ್ರೆ ಮುಖ ತೊಳೆದ ಬಳಿಕ ಚರ್ಮ ಡ್ರೈಯಾಗಿ ಕಿರಿಕಿರಿಯುಂಟಾಗಬಹುದು.

ಮಗಳು ಜನಿಸಿದ ನಂತರದ ಅನುಷ್ಕಾರ ಫಿಟ್‌ ಲುಕ್ ಫೋಟೋ ವೈರಲ್‌!

ಅದೇರೀತಿ ಎಣ್ಣೆ ಚರ್ಮ ಹೊಂದಿರೋರು ತ್ವಚೆಯಲ್ಲಿ ತೇವಾಂಶ ಉಳಿಸೋ ಫೇಸ್ವಾಷ್ ಬಳಸಿದ್ರೆ ಮುಖ ಇನ್ನಷ್ಟು ಎಣ್ಣೆಯುಕ್ತವಾಗಿ ಕಾಣಿಸುತ್ತೆ. ಅದೇ ನಿಮ್ಮ ಚರ್ಮಕ್ಕೆ ಹೊಂದೋ ಫೇಸ್ವಾಷ್ ಬಳಸಿ ಮುಖ ತೊಳೆದ್ರೆ ಅನಗತ್ಯ ಜಿಡ್ಡಿನಂಶ ತ್ವಚೆಯಿಂದ ದೂರವಾಗೋ ಜೊತೆ ಅಗತ್ಯ ತೇವಾಂಶ ಉಳಿದು ಮುಖ ಸುಂದರವಾಗಿ ಕಾಣಿಸುತ್ತೆ. ಹಾಗಾಗಿ ನಿಮ್ಮ ತ್ವಚೆಗೆ ಹೊಂದೋ ಫೇಸ್ವಾಷ್ ಬಳಸಲು ಮರೆಯಬೇಡಿ.

ವೈಟ್ಹೆಡ್ಸ್, ಬ್ಲ್ಯಾಕ್ಹೆಡ್ಸ್

ವೈಟ್ಹೆಡ್ಸ್ ಹಾಗೂ ಬ್ಲ್ಯಾಕ್ಹೆಡ್ಸ್ ಮುಖದ ಅಂದ ಕೆಡಿಸುತ್ತವೆ.ಜೊತೆಗೆ ಮುಖ ಮುಟ್ಟಿದ್ರೆ ಒಂದು ರೀತಿಯ ಕಿರಿಕಿರಿ ಅನುಭವ ಕೂಡ. ಆದ್ರೆ ಈಗ ಮಾರುಕಟ್ಟೆಯಲ್ಲಿ ಈ ಸಮಸ್ಯೆಗೆ ಮುಕ್ತಿ ನೀಡೋ ಅನೇಕ ಫೇಸ್ವಾಷ್ಗಳು ಲಭ್ಯವಿವೆ. ಅಂಥ ಫೇಸ್ವಾಷ್ಗಳನ್ನು ಬಳಸಿ ವೈಟ್ಹೆಡ್ಸ್ ಹಾಗೂ ಬ್ಲ್ಯಾಕ್ಹೆಡ್ಸ್ಗೆ ಗುಡ್ಬೈ ಹೇಳ್ಬಹುದು.ಅದೇನೇ ಬಳಸಿದ್ರೂ ವೈಟ್ಹೆಡ್ಸ್ ಹಾಗೂ ಬ್ಲ್ಯಾಕ್ಹೆಡ್ಸ್ ಪದೇಪದೆ ಮುಖದ ಮೇಲೆ ಕಾಣಿಸಿಕೊಳ್ಳುತ್ತಿವೆಯೆಂದ್ರೆ ನೀವು ಸರಿಯಾಗಿ ಮುಖ ತೊಳೆಯುತ್ತಿಲ್ಲ ಅಥವಾ ಸಮರ್ಪಕವಾದ ಫೇಸ್ವಾಷ್ ಬಳಸುತ್ತಿಲ್ಲವೆಂದೇ ಅರ್ಥ.

ಮೇಕಪ್ ಅಥವಾ ಸ್ಕಿನ್ಕೇರ್ ಕ್ರೀಮ್ ಎದ್ದುಬರೋದು
ನೀವು ಮೇಕಪ್ ಅಥವಾ ಸ್ಕಿನ್ಕೇರ್ ಕ್ರೀಮ್ ಬಳಸಿದ ಸ್ವಲ್ಪ ಹೊತ್ತಿನಲ್ಲೇ ಅವು ಸಿಪ್ಪೆ ಸುಲಿದಂತೆ ಎದ್ದು ಬರುತ್ತಿದ್ರೆ ನೀವು ಮುಖವನ್ನು ಸರಿಯಾಗಿ ತೊಳೆದಿಲ್ಲ ಎನ್ನಬಹುದು. ನೀವು ನಿತ್ಯ ಮುಖವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸದಿದ್ರೆ ಕಣ್ಣಿಗೆ ಕಾಣಿಸದಂತಹ ಒಂದು ತೆಳುವಾದ ಪದರ ತ್ವಚೆಯ ಮೇಲೆ ರೂಪುಗೊಳ್ಳುತ್ತೆ.ಇದು ನೀವು ಮುಖಕ್ಕೆ ಮೇಕಪ್ ಅಥವಾ ಯಾವುದೇ ಕ್ರೀಮ್ ಹಚ್ಚಿದಾಗ ಅದು ಮುಖದ ಆಳಕ್ಕಿಳಿದು ಉತ್ತಮ ಫಲಿತಾಂಶ ನೀಡದಂತೆ ತಡೆಯುತ್ತೆ. ಮುಖಕ್ಕೆ ಕ್ರೀಮ್ ಹಚ್ಚಿದಾಗ ಅದನ್ನು ಚರ್ಮ ಹೀರಿಕೊಳ್ಳದೆ ಅದು ಮೇಲ್ಮೈಯಲ್ಲೇ ನಿಂತು ಸ್ವಲ್ಪ ಹೊತ್ತಿನಲ್ಲೇ ಸಿಪ್ಪೆ ಸುಲಿದಂತೆ ಎದ್ದು ಬರಲು ಪ್ರಾರಂಭಿಸುತ್ತೆ.

ನಿಜವೆಂದು ನಂಬಿರುವ ಹೇರ್ ಕಲರಿಂಗ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

ಹಿಂದಿಗಿಂತ ಹೆಚ್ಚು ಚರ್ಮದ ಅಲರ್ಜಿ
ನಿಮ್ಮ ಮುಖದ ಚರ್ಮಕ್ಕೆ ಹೊಸ ಕ್ರೀಮ್ ಅಥವಾ ಯಾವುದೇ ಪ್ರಾಡಕ್ಟ್ ಹಚ್ಚಿದ್ರೂ ಮೊದಲಿಗಿಂತ ಹೆಚ್ಚು ಉರಿ,ಅಲರ್ಜಿ ಅನುಭವವಾದ್ರೆ ನೀವು ಸರಿಯಾಗಿ ಮುಖ ತೊಳೆಯುತ್ತಿಲ್ಲಎಂದೇ ಹೇಳ್ಬಹುದು.ಮುಖವನ್ನು ಆಗಾಗ ತೊಳೆಯದಿರೋದು ಚರ್ಮಕ್ಕೆ ಎಷ್ಟು ಹಾನಿ ಮಾಡುತ್ತದೆಯೋ ಅಷ್ಟೇ ತೊಂದ್ರೆ ಅತಿಯಾಗಿ ಮುಖವನ್ನು ತೊಳೆಯೋದ್ರಿಂದಲೂ ಆಗುತ್ತೆ.ಅತಿಯಾಗಿ ಫೇಸ್ವಾಷ್ ಬಳಸಿ ಮುಖ ತೊಳೆಯೋದು ಅಥವಾ ಪದೇಪದೆ ಮುಖ ತೊಳೆಯುತ್ತಲೇ ಇರೋದ್ರಿಂದ ಯಾವುದಾದ್ರೂ ಕ್ರೀಮ್ ಅಥವಾ ಬ್ಯೂಟಿ ಪ್ರಾಡಕ್ಟ್ ಬಳಸಿದಾಗ ಅಲರ್ಜಿ ಅಥವಾ ದದ್ದುಗಳು ಕಾಣಿಸಿಕೊಳ್ಳೋ ಸಾಧ್ಯತೆ ಹೆಚ್ಚಿರುತ್ತೆ.ಹೀಗಾಗಿ ಮುಖ ತೊಳೆಯೋದು ಸಿಂಪಲ್ ವಿಷಯ ಅಲ್ಲವೇ ಅಲ್ಲ.ಈ ವಿಷಯವನ್ನುಲಘವಾಗಿ ಪರಿಗಣಿಸಿದ್ರೆ ಮುಖದ ಸೌಂರ್ದಯಕ್ಕೆ ಧಕ್ಕೆಯಾಗೋದಂತೂ ಪಕ್ಕಾ.

click me!