12,638 ವಜ್ರದಿಂದ ತಯಾರಾದ ಉಂಗುರ ಗಿನ್ನಿಸ್ ರೆಕಾರ್ಡ್‌

By Suvarna News  |  First Published Dec 5, 2020, 1:31 PM IST

ಉಂಗುರವನ್ನು 'ಮಾರಿಗೋಲ್ಡ್'- ಸಮೃದ್ಧಿಯ ಉಂಗುರ' ಎಂದು ಹೆಸರಿಸಲಾಗಿದೆ. ಆಭರಣ ವ್ಯಾಪಾರಿ ಪ್ರಕಾರ ಈ ಉಂಗುರ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾದ ಮಾರಿಗೋಲ್ಡ್ ಹೂವಿನಿಂದ ಪ್ರೇರೇಪಿತವಾಗಿ ವಿನ್ಯಾಸ ಮಾಡಲಾಗಿದೆ


ಒಂದೇ ಉಂಗುರದಲ್ಲಿ ಅತ್ಯಧಿಕ ವಜ್ರ ಪೋಣಿಸಿರುವುದಕ್ಕಾಗಿ ಮೀರತ್‌ನ ವಿನ್ಯಾಸಕರ ಈ ಉಂಗುರ ಗಿನ್ನಿಸಿ ದಾಖಲೆ ಸೇರಿದೆ. ಈ ಉಂಗುರದಲ್ಲಿ ಸುಮಾರು 12,638 ವಜ್ರಗಳಿವೆ. ರೆನಾನಿ ಜ್ಯುವೆಲ್ಸ್ ಈ ಉಂಗುರಕ್ಕೆ ಮಾರಿ ಗೋಲ್ಡ್ - ಸಮೃದ್ಧಿಯ ಉಂಗುರ ಎಂದು ಹೆಸರಿಟ್ಟಿದೆ.

ಈ ಹೂ ಮಾರಿಗೋಲ್ಡ್ ಹೂವಿನ ಆಕಾರದಲ್ಲಿಯೇ ಇದ್ದು, ಇದು ರೆನಾನಿ ಜ್ಯುವೆಲ್ಸ್‌ನ ಕನಸಿನ ಪ್ರಾಜೆಕ್ಟ್ ಆಗಿತ್ತು ಎಂದಿದ್ದಾರೆ ಕಂಪನಿಯ ಎಂಡಿ ಹರ್ಷಿತ್ ಬನ್ಸಾಲ್. 25 ವರ್ಷದ ಯುವ ವಜ್ರದ ವಿನ್ಯಾಸಕ ಹಾಗೂ ವ್ಯಾಪಾರಿಯಾಗಿರೋ ಇವರ ಕನಸಾಗಿತ್ತು ಈ ಉಂಗುರ.

Latest Videos

undefined

ಭಾರತದ ಈ ಹಳ್ಳಿಯಲ್ಲಿ ಸಿಕ್ತು ವಜ್ರದ ಖಜಾನೆ, ಗುಡ್ಡ ಕೊರೆದು ಲೂಟಿ ಹೊಡೆದ ಗ್ರಾಮಸ್ಥರು!

ಎರಡು ಮೂರು ವರ್ಷಗಳಿಂದ ಈ ಉಂಗುರ ತಯಾರಿಸಲು ಪ್ರಯತ್ನಿಸುತ್ತಿದ್ದೆವು. ವಿನ್ಯಾಸ ಮೀರತ್‌ನಲ್ಲಾದರೆ, ತಯಾರಿ 28 ಕೆಲಸಗಾರರೊಂದಿಗೆ ಸೂರತ್‌ನಲ್ಲಾಗಬೇಕಿತ್ತು. ನನ್ನ ಕುಟುಂಬ ವಿಶೇಷವಾಗಿ ತಂದೆ ಅನಿಲ್ ಬಾನ್ಸಾಲ್ ಅವರಿಗೆ ತುಂಬಾ ಖುಷಿಯಾಗಿದೆ. ವಿಶೇಷ ಅಭರಣ ಹಿನ್ನೆಲೆ ಉಳ್ಳ ಮೀರತ್‌ನಂತ ಚಿಕ್ಕ ನಗರಕ್ಕೆ ಇದು ದೊಡ್ಡ ಮನ್ನಣೆ ಎಂದಿದ್ದಾರೆ.

ಈ ಉಂಗುರ 165.450 ಗ್ರಾಂ ಭಾರವಿದ್ದು, 38.08 ಕ್ಯಾರೆಟ್ ನ್ಯಾಚುರಲ್ ಡೈಮಂಡ್ ಬಳಸಲಾಗಿದೆ. ಇನ್ನು ಹಿಂದೂ ಸಂಪ್ರದಾಯದಲ್ಲಿ ಮಾರಿಗೋಲ್ಡ್ ಹೂವು ಅದೃಷ್ಟ ತರುತ್ತದೆ ಎಂದು ನಂಬಲಾಗುತ್ತದೆ.

ಜಗತ್ತಿನ ಪ್ರಸಿದ್ಧ ರಾಜ ಮನೆತನದ ಒಡೆತನದಲ್ಲಿರುವ ದುಬಾರಿ ವಜ್ರಾಭರಣಗಳಿವು..!

ಅದೇ ಕಾನ್ಸೆಪ್ಟ್ ಮೇಲೆ ಉಂಗುರದ ಶೇಪ್ ಈ ರೀತಿ ಮಾಡಲಾಗಿದೆ ಎಂದಿದ್ದಾರೆ. ಉಂಗುರದ ಬೆಲೆ ಬಗ್ಗೆ, ನಮಗಿದು ಬೆಲೆ ಕಟ್ಟಲಾಗದ್ದು. ಇದಕ್ಕೆ ಒಂದು ಬೆಲೆ ನಮೂದಿಸುವ ಬಗ್ಗೆ ನಾವು ಯೋಚಿಸಿಯೇ ಇಲ್ಲ ಎಂದಿದ್ದಾರೆ.

click me!