ಮಹಿಳೆ ತನ್ನ ವಯಸ್ಸಿನ ಗುಟ್ಟನ್ನು ರೆಟ್ಟು ಮಾಡದಿದ್ರೂ ಆಕೆ ತ್ವಚೆ ಸುಮ್ಮನಿರಬೇಕಲ್ಲ.ತನ್ನ ಮೇಲೆ ಮೂಡಿರೋ ನೆರಿಗೆಗಳನ್ನುಎಲ್ಲರಿಗೂ ತೋರಿಸಿ ಬಿಡುತ್ತೆ.ಇದೇ ಕಾರಣಕ್ಕೆ ವಯಸ್ಸಿನ ಗುಟ್ಟು ಬಿಚ್ಚಿಡೋ ನೆರಿಗೆಗಳ ಬಗ್ಗೆ ಆಕೆಗೆ ಭಯ.ಆದ್ರೆ ನಿತ್ಯದ ಜೀವನಶೈಲಿಯಲ್ಲಿ ಒಂದಿಷ್ಟು ಎಚ್ಚರ ವಹಿಸಿದ್ರೆ ಈ ನೆರಿಗೆಗಳು ಚರ್ಮದ ಮೇಲೆ ಬೇಗ ಮೂಡದಂತೆ ತಡೆಯಬಹುದು.
ಕೆಲವರಿಗೆ ವಯಸ್ಸಾಗಿದ್ದೇ ತಿಳಿಯಲ್ಲ, 5೦ರ ಗಡಿ ದಾಟಿದ್ದರೂಇನ್ನೂ ಸ್ವೀಟ್ 16 ಬ್ಯೂಟಿಯನ್ನು ಕಾಪಾಡಿಕೊಂಡಿರುತ್ತಾರೆ.ರೇಖಾ,ಮಾಧುರಿ ದೀಕ್ಷಿತ್,ನೀತಾ ಅಂಬಾನಿ ಮುಂತಾದ ಕೆಲವು ಸೆಲೆಬ್ರೆಟಿಗಳನ್ನೇ ನೋಡಿ,ಅವರ ವಯಸ್ಸು ಎಷ್ಟಿರಬಹುದು ಎಂದು ಅಂದಾಜಿಸೋದು ತುಸು ಕಷ್ಟದ ಕೆಲಸವೇ ಸರಿ.ವಯಸ್ಸಿಗಿಂತಲೂ ಚಿಕ್ಕವರಂತೆ ಕಾಣಬೇಕು ಎಂಬ ಬಯಕೆ ಬರೀ ಸೆಲೆಬ್ರೆಟಿಗಳಿಗೆ ಮಾತ್ರವಲ್ಲ,ಸಾಮಾನ್ಯ ಹೆಣ್ಣುಮಕ್ಕಳಿಗೂ ಇರುತ್ತೆ.ಸೋಪ್ ಜಾಹೀರಾತುಗಳಲ್ಲಿ ತೋರಿಸೋ ಯಂಗ್ ಅಮ್ಮನಂತೆ ಕಾಣಿಸಬೇಕು ಎಂಬ ಬಯಕೆ ಯಾವ ಮಹಿಳೆಗಿಲ್ಲ ಹೇಳಿ?
ಆದ್ರೆ ಇವೆಲ್ಲ ಬರೀ ಸ್ಕ್ರೀನ್ ಮೇಲೆ ನೋಡಲಷ್ಟೇ ಸರಿ,ರಿಯಲ್ ಲೈಫ್‌ನಲ್ಲಿಸಾಧ್ಯವೇ ಇಲ್ಲವೆಂದು ನೀವಂದ್ಕೊಂಡಿದ್ರೆ ಖಂಡಿತಾ ತಪ್ಪು,ನಿಮ್ಮ ಶರೀರ ಅಥವಾ ಚರ್ಮದ ಮೇಲೆ ಮುಪ್ಪಿನ ಲಕ್ಷಣಗಳು ಗೋಚರಿಸಲು ನಿಮ್ಮ ಕೆಲವು ಅಭ್ಯಾಸಗಳೇ ನೇರ ಕಾರಣವಾಗಿರುತ್ತವೆ. ಸ್ಟ್ರಾ ಬಳಸಿ ಜ್ಯೂಸ್ ಕುಡಿಯೋದು,ಭಾರವಾದ ವಸ್ತುಗಳನ್ನು ಎತ್ತೋದು ಕೂಡ ನಿಮ್ಮ ಚರ್ಮದ ಮೇಲೆ ವಯಸ್ಸಿನ ಗೆರೆಗಳನ್ನು ಮೂಡಿಸಬಲ್ಲವು ಎಂಬುದು ಗೊತ್ತಾ ನಿಮ್ಗೆ? ಕನ್ನಡಿ ಮುಂದೆ ನಿಂತ್ಕೊಂಡು ಅಯ್ಯೋ, ನನ್ನ ಮುಖದ ಮೇಲೆ ನೆರಿಗೆಗಳು ಮೂಡುತ್ತಿವೆ ಎಂದು ಚಡಪಡಿಸೋ ದಿನ ಇನ್ನೂ ದೂರವಿರಲಿ ಎಂಬ ಬಯಕೆ ನಿಮಗಿದ್ರೆ ಕೆಲವು ಅಭ್ಯಾಸಗಳನ್ನು ನೀವು ಬಿಡಬೇಕಾಗುತ್ತೆ. ಅವು ಯಾವುವು ಅಂತೀರಾ?
ವರ್ಕೌಟ್ ಸಮಯದಲ್ಲಿ ಒಳ-ಉಡುಗೆ ಏಕೆ ಮುಖ್ಯವಾಗುತ್ತೆ?
ವೇಟ್ ಲಿಫ್ಟಿಂಗ್‌ಗೆ ಬ್ರೇಕ್ ಹಾಕಿ
ಭಾರ ಎತ್ತೋದು,ವ್ಯಾಯಾಮ ಮಾಡೋದು ದೇಹಕ್ಕೆ ಒಳ್ಳೆಯದು ಅನ್ನೋದೇನು ನಿಜ.ಆದ್ರೆ ವೇಟ್ ಲಿಫ್ಟ್ ಮಾಡೋವಾಗ,ವ್ಯಾಯಾಮ ಮಾಡೋವಾಗ ಮುಖದ ಸ್ನಾಯುಗಳಿಗೂ ಒಳ್ಳೆಯ ಕೆಲ್ಸ ಸಿಗುತ್ತೆ.ಇದು ಮುಖದ ಚರ್ಮದಲ್ಲಿನ ಕೊಲಜೆನ್ ಬ್ರೇಕ್‌ಡೌನ್ ಆಗಲು ಕಾರಣವಾಗೋ ಮೂಲಕ ಮುಖದ ಮೇಲೆ ನೆರಿಗೆಗಳನ್ನು ಮೂಡಿಸುತ್ತೆ. ಆ ಮೂಲಕ ನಿಮ್ಮ ಚರ್ಮದ ಮೇಲೆ ಮುಪ್ಪಿನ ಲಕ್ಷಣಗಳು ಬೇಗ ಗೋಚರಿಸಲು ಕಾರಣವಾಗುತ್ತೆ ಎನ್ನೋದು ಕೆಲವು ಚರ್ಮರೋಗ ತಜ್ಞರ ಅಭಿಪ್ರಾಯ.ಚರ್ಮ ಹಾಗೂ ಸ್ನಾಯುಗಳು ಒಂದಕ್ಕೊಂದು ಅಂಟಿಕೊಂಡಿರುತ್ತವೆ. ವ್ಯಾಯಾಮ ಮಾಡಿದಾಗ ಅಥವಾ ಭಾರ ಎತ್ತೋ ಸಮಯದಲ್ಲಿ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದಾಗ ಚರ್ಮದ ಅಡಿಭಾಗದಲ್ಲಿರೋ ಕೊಲಜೆನ್ ಬಂಡಲ್ಸ್ ಹರಿದು ಗೆರೆಗಳು ಹಾಗೂ ನೆರಿಗೆಗಳು ಮೂಡುತ್ತವೆ.ಆದಕಾರಣ ವ್ಯಾಯಾಮ ಮಾಡೋವಾಗ ಮುಖದ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ಎಚ್ಚರ ವಹಿಸಿದ್ರೆ ಮುಪ್ಪಿನ ಲಕ್ಷಣಗಳು ಬೇಗ ಕಾಣಿಸೋದನ್ನು ತಪ್ಪಿಸಬಹುದು.
ಉಪ್ಪು, ಸಕ್ಕರೆ ಅತಿಯಾಗಿ ತಿಂದ್ರೆ ಬೇಗ ವಯಸ್ಸಾಗುತ್ತೆ
ನಿಮ್ಗೆ ಉಪ್ಪು ಮತ್ತು ಸಿಹಿ ಮೇಲೆ ಅತಿಯಾದ ವ್ಯಾಮೋಹವಿದ್ರೆ ಮುಪ್ಪು ಬೇಗ ಆವರಿಸಿಕೊಳ್ಳೋ ಸಾಧ್ಯತೆ ಹೆಚ್ಚಿದೆ. ಉಪ್ಪು ಮತ್ತು ಸಕ್ಕರೆ ಎರಡೂ ಅತಿಯಾದ್ರೆ ಶರೀರ ನಾನಾ ಕಾಯಿಲೆಗಳ ಗೂಡಾಗುತ್ತೆ ಎಂಬ ಸತ್ಯ ಎಲ್ಲರಿಗೂ ಗೊತ್ತು. ಉಪ್ಪು,ಸಕ್ಕರೆ ಎರಡೂ ನಾಲಿಗೆಗೆ ಎಷ್ಟು ರುಚಿಸುತ್ತವೋ ಅಷ್ಟೇ ಆರೋಗ್ಯಕ್ಕೆ ಹಾನಿಯನ್ನೂ ಮಾಡುತ್ತವೆ. ಉಪ್ಪುನಿರ್ಜಲೀಕರಣಕ್ಕೆ ಕಾರಣವಾಗೋ ಮೂಲಕ ಚರ್ಮದ ಮೇಲೆ ಸುಕ್ಕು ಹಾಗೂ ನೆರಿಗೆಗಳನ್ನು ಮೂಡಿಸುತ್ತೆ.ಇನ್ನುಸಕ್ಕರೆ ಶರೀರದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸೋ ಮೂಲಕ ಮುಪ್ಪಿನ ಲಕ್ಷಣಗಳು ಬೇಗ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಶರೀರದಲ್ಲಿ ಇನ್ಸುಲಿನ್ ಪ್ರಮಾಣ ಏರಿಕೆಯಾದ್ರೆ ಚರ್ಮದಲ್ಲಿನ ಪ್ರೋಟೋನ್ ಫೈಬರ್ಸ್,ಕೊಲಜೆನ್ ಹಾಗೂ ಇಲಸ್ಟಿನ್ ವಿಭಜನೆಯಾಗೋ ಮೂಲಕ ಮುಪ್ಪಿನ ಲಕ್ಷಣಗಳು ಬೇಗ ಕಾಣಿಸಿಕೊಳ್ಳುತ್ತವೆ.
ಲೆದರ್ ಶೂಸ್ ಬಾಳಿಕೆ ಬರಲು ಈ ಟ್ರಿಕ್ ಪಾಲಿಸಿ
ಪವರ್ ಗ್ಲಾಸ್ ಅಥವಾ ಸನ್‌ಗ್ಲಾಸ್ ಬಳಸದಿರೋದು
ನಿಮ್ಗೆ ದೂರ ಅಥವಾ ಸಮೀಪ ದೃಷ್ಟಿದೋಷವಿದ್ರೆ,ನೀವು ವೈದ್ಯರು ಸೂಚಿಸಿರೋ ಕನ್ನಡಕವನ್ನುತಪ್ಪದೆ ಧರಿಸಬೇಕು.ಒಂದು ವೇಳೆ ನೀವು ಪವರ್ ಗ್ಲಾಸ್ ಬಳಸದಿದ್ರೆ ಪ್ರತಿ ಬಾರಿ ಒಂದು ವಸ್ತುವಿನ ಮೇಲೆ ದೃಷ್ಟಿ ಕೇಂದ್ರೀಕರಿಸಲು ಕಣ್ಣುಗಳ ಮೇಲೆ ಸಾಕಷ್ಟು ಒತ್ತಡ ಹೇರಬೇಕಾಗುತ್ತೆ.ಹೀಗೆ ಮಾಡೋದ್ರಿಂದ ಕಣ್ಣುಗಳ ಸುತ್ತಲಿನ ಸ್ನಾಯುಗಳಿಗೆ ಆಯಾಸವಾಗುತ್ತದೆ.ಇದ್ರಿಂದ ಕಣ್ಣುಗಳ ಕೆಳಭಾಗದಲ್ಲಿ ಕಪ್ಪು ವರ್ತುಲಗಳು ಹಾಗೂ ಗೆರೆಗಳು ಮೂಡುತ್ತವೆ. ಇನ್ನುಬಿಸಿಲಿಗೆ ಸನ್‌ಗ್ಲಾಸ್ ಬಳಸೋದ್ರಿಂದ ಕೂಡ ಕಣ್ಣುಗಳ ಸುತ್ತಲಿನ ಚರ್ಮಕ್ಕೆ ಹಾನಿಯಾಗೋದನ್ನುತಪ್ಪಿಸಬಹುದು.ಕಣ್ಣುಗಳ ಕೆಳಭಾಗದ ಚರ್ಮ ತುಂಬಾ ಸೂಕ್ಷ್ಮವಾಗಿದ್ದು,ಬೇಗ ಹಾನಿಗೊಳಗಾಗುತ್ತೆ.ಹೀಗಾಗಿ ಮುಖದ ಈ ಭಾಗದ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡೋದು ಅಗತ್ಯ.
ಸ್ಕ್ರೀನ್ ಮುಂದೆ ಜಾಸ್ತಿ ಸಮಯ ಕಳೆಯೋದು
ಮೊಬೈಲ್, ಟಿವಿ ಅಥವಾ ಲ್ಯಾಪ್‌ಟಾಪ್ ಮುಂದೆ ಹೆಚ್ಚಿನ ಸಮಯ ಕಳೆಯೋದು ಕೂಡ ಚರ್ಮದ ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಸ್ಕ್ರೀನ್ ಹೊರಸೂಸುವ ಬೆಳಕಿನ ಕಿರಣಗಳು ನಿಧಾನವಾಗಿ ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಮನೆಯೊಳಗಡೆ ಇರೋವಾಗಲೂ ಸನ್‌ಗ್ಲಾಸ್ ಬಳಸೋದು ಸೂಕ್ತ ಎಂಬ ಅಭಿಪ್ರಾಯವನ್ನು ಕೆಲವು ವೈದ್ಯಕೀಯ ತಜ್ಞರು ನೀಡುತ್ತಾರೆ. ಇನ್ನು ಬೆಡ್ ಮೇಲೆ ಮಲಗಿಕೊಂಡು ಅಥವಾ ತೊಡೆ ಮೇಲೆ ಮೊಬೈಲ್ ಇಟ್ಟುಕೊಂಡು ತಲೆಬಗ್ಗಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬ್ಯುಸಿಯಾಗಿರೋ ಅಭ್ಯಾಸ ನಿಮಗಿದ್ರೆ ಇಂದೇ ಬಿಡಿ. ಈ ಅಭ್ಯಾಸ ನಿಮಗೇ ತಿಳಿಯದಂತೆ ನಿಮ್ಮ ಕುತ್ತಿಗೆ ಹಾಗೂ ಗಲ್ಲದ ಮೇಲೆ ನೆರಿಗೆಗಳನ್ನು ಮೂಡಿಸುತ್ತವೆ. ಹೀಗಾಗಿ ಮೊಬೈಲ್, ಲ್ಯಾಪ್‌ಟಾಪ್ ಬಳಸೋವಾಗ ಅವುಗಳನ್ನು ನಿಮ್ಮ ಕಣ್ಣಿನ ಮಟ್ಟದಲ್ಲಿಟ್ಟುಕೊಂಡು ಬಳಸಿ.
ಮುಖ ಕೆಳಗೆ ಮಾಡಿ ಮಲಗೋದು
ಹೊಟ್ಟೆ ಮೇಲೆ ಅಥವಾ ಒಂದು ಬದಿ ಮೇಲೆ ಮಲಗೋದು ಮುಖದ ಆಕಾರದ ಮೇಲೆ ಪರಿಣಾಮ ಬೀರುತ್ತದೆ. ದಿಂಬಿಗೆ ಮುಖವನ್ನು ಒತ್ತಿ ಮಲಗೋದ್ರಿಂದ ಗೆರೆಗಳು ಮೂಡುತ್ತವೆ ಕೂಡ.
ಸ್ಟ್ರಾ ಬಳಕೆ
ಜ್ಯೂಸ್ ಕುಡಿಯಲು ಕೆಲವರಿಗೆ ಸ್ಟ್ರಾ ಬೇಕೇಬೇಕು.ಆದ್ರೆ ಈ ಸ್ಟ್ರಾಗಳಿಂದ ಪರಿಸರ ಕೆಡೋ ಜೊತೆ ಮುಖದ ಅಂದವೂ ಹಾಳಾಗುತ್ತೆ ಎಂಬ ಸಂಗತಿ ಅನೇಕರಿಗೆ ಗೊತ್ತಿಲ್ಲ.ಸ್ಟ್ರಾ ಬಳಕೆಯಿಂದ ಕಾಲ ಕ್ರಮೇಣ ಬಾಯಿ ಸುತ್ತಲಿನ ಚರ್ಮದ ಮೇಲೆ ನೆರಿಗೆಗಳು ಬೀಳೋ ಸಾಧ್ಯತೆಯಿದೆ.
ಸ್ಮೋಕಿಂಗ್
ಸಿಗರೇಟ್‌ನಲ್ಲಿರೋ ನಿಕೋಟಿನ್ ಚರ್ಮದ ಹೊರಪದರದಲ್ಲಿರೋ ರಕ್ತನಾಳಗಳನ್ನು ಸಂಕುಚಿತಗೊಳಿಸಿ ರಕ್ತ ಪರಿಚಲನೆಯಲ್ಲಿ ವ್ಯತ್ಯಾಯವುಂಟು ಮಾಡುತ್ತದೆ. ಇದ್ರಿಂದ ಚರ್ಮಕ್ಕೆ ಆಮ್ಲಜನಕ ಹಾಗೂ ಪೋಷಕಾಂಶ ಕಡಿಮೆ ಪ್ರಮಾಣದಲ್ಲಿ ಸಿಗುತ್ತೆ. ಪರಿಣಾಮ ಕೊಲಜೆನ್ ಹಾಗೂ ಇಲಸ್ಟಿನ್‌ಗೆ ಹಾನಿಯಾಗುತ್ತೆ. ಜೊತೆಗೆ ಸ್ಮೋಕಿಂಗ್‌ನಿಂದ ತುಟಿಯ ಸುತ್ತಲಿನ ಚಮರ್ದ ಮೇಲೆ ನೆರಿಗೆಗಳು ಕಾಣಿಸಿಕೊಳ್ಳುತ್ತವೆ.