Tattoo ಹಾಕಿದ ನಂತ್ರ ಚರ್ಮದ ಆರೈಕೆ ಹೀಗಿರಲಿ

By Suvarna News  |  First Published Jun 8, 2022, 1:22 PM IST

ಫ್ಯಾಷನ್ ಎನ್ನುವ ಕಾರಣಕ್ಕೆ ಅನೇಕರು ಹಚ್ಚೆ ಹಾಕಿಸಿಕೊಳ್ತಾರೆ. ಆದ್ರೆ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ಅದ್ರ ಬಗ್ಗೆ ಸ್ವಲ್ಪವೂ ತಿಳಿದಿರೋದಿಲ್ಲ. ತಜ್ಞರ ಬಳಿ ಟ್ಯಾಟೂ ಹಾಕಿಸಿಕೊಳ್ಳದೆ ಯಡವಟ್ಟು ಮಾಡಿಕೊಳ್ಳುವ ಜನರು ಮತ್ತೊಂದಿಷ್ಟು ನಿರ್ಲಕ್ಷ್ಯ ಮಾಡಿ ಚರ್ಮದ ಆರೋಗ್ಯ ಹಾಳ್ಮಾಡಿಕೊಳ್ತಾರೆ.
 


ಹಚ್ಚೆ (Tattoo) ಬಹುತೇಕರ ಅಚ್ಚುಮೆಚ್ಚು. ಹಿಂದಿನ ಕಾಲದಿಂದಲೂ ಹಚ್ಚೆ ಇದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಚ್ಚೆ ಫ್ಯಾಷನ್ (Fashion) ಆಗಿದೆ. ಟ್ಯಾಟೂ ಇಷ್ಟಪಡದ ಜನರಿಲ್ಲ. ನೋವಾದ್ರೂ ದೇಹದ ತುಂಬೆಲ್ಲ ಟ್ಯಾಟೂ ಹಾಕಿಸಿಕೊಳ್ಳುವವರಿದ್ದಾರೆ.  ಟ್ಯಾಟೂ ಫ್ಯಾಷನ್ ಹೌದು. ಅದು ಆಕರ್ಷಕವೂ ಹೌದು. ಆದ್ರೆ ಇದ್ರಿಂದ ಕೆಲ ಆರೋಗ್ಯ (Health) ಸಮಸ್ಯೆ ಕಾಡುವ ಅಪಾಯವೂ ಇದೆ. ಹಚ್ಚೆ ಹಾಕಿದ ಸಂದರ್ಭದಲ್ಲಿ ನಾವು ಮಾಡುವ ಕೆಲ ಸಣ್ಣ ಪುಟ್ಟ ನಿರ್ಲಕ್ಷ್ಯಗಳು ದೊಡ್ಡ ಸಮಸ್ಯೆ (Problem) ಗೆ ಕಾರಣವಾಗಬಹುದು. ಹಚ್ಚೆ ಹಾಕಿಸಿಕೊಂಡವರು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದ್ರಿಂದ ನಿಮ್ಮ ಚರ್ಮ (Skin) ಸುರಕ್ಷಿತವಾಗಿರುವುದಲ್ಲದೆ ಆರೋಗ್ಯವೂ ಸುಧಾರಿಸುತ್ತದೆ. ಇಂದು ನಾವು ಟ್ಯಾಟೂ ಹಾಕಿದವರು ಚರ್ಮದ ರಕ್ಷಣೆ ಹೇಗೆ ಮಾಡ್ಬೇಕೆಂಬ ಬಗ್ಗೆ ಸಲಹೆ ನೀಡ್ತೇವೆ. 

ಟ್ಯಾಟೂ ಹಾಕಿದ ನಂತ್ರ ಏನು ಮಾಡ್ಬೇಕು ? : 

Latest Videos

undefined

ಸಾಬೂನು (Soap ) ಬಳಕೆ ಬಗ್ಗೆ ತಜ್ಞರ ಸಲಹೆ : ಹಚ್ಚೆ ಹಾಕಿದ ನಂತರ ನೀವು ವೈದ್ಯರ ಸಲಹೆಯ ಮೇರೆಗೆ ಸೋಪ್ ಬಳಕೆ ಮಾಡ್ಬೇಕು. ಸೋಪಿನಲ್ಲಿ ಕಂಡುಬರುವ ರಾಸಾಯನಿಕಗಳು ನಿಮ್ಮ ಚರ್ಮಕ್ಕೆ ಹಾನಿಯುಂಟು ಮಾಡ್ಬಹುದು. ಒಂದ್ವೇಳೆ ಸೋಫ್ ಬಳಸಿಯೇ ಬಳಸ್ತೇನೆ ಎನ್ನುವವರು ಬೇಬಿ ಸೋಪ್ ಬಳಕೆ ಮಾಡ್ಬಹುದು. ಇದು ಸೌಮ್ಯವಾದ ಸಾಬೂನು. ಇದರಲ್ಲಿ ರಾಸಾಯನಿಕ (Chemical) ಗಳು ಕೂಡ ಬಹಳ ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡುವ ಅಪಾಯ ಕಡಿಮೆಯಿರುತ್ತದೆ.

100 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದೆ ಲಿಪ್​ಸ್ಟಿಕ್ ಗಿಡ, ಇದ್ರ ವಿಶೇಷತೆ ತಿಳಿದ್ರೆ ಬೆರಗಾಗ್ತೀರಾ !

ಚರ್ಮವನ್ನು ಹೆಚ್ಚು ಉಜ್ಜಬೇಡಿ : ಸ್ನಾನದ ನಂತರ ಮೈ ಒರೆಸಿಕೊಳ್ಳಲು ನಾವೆಲ್ಲ  ಟವೆಲ್ (Towel) ಬಳಸುತ್ತೇವೆ. ಆದರೆ ಹಚ್ಚೆ ಹಾಕಿದ ಜಾಗದಲ್ಲಿ ಟವೆಲ್ ಅನ್ನು ಬಲವಾಗಿ ಉಜ್ಜಬೇಡಿ. ಇದರಿಂದ ದುದ್ದುಗಳಾಗುವ ಸಾಧ್ಯತೆಯಿರುತ್ತದೆ. ಇದಲ್ಲದೆ  ನಿಮ್ಮ ಚರ್ಮ ಒರಟಾಗಬಹುದು.

ಚರ್ಮದ ಸ್ವಚ್ಛತೆ (Clean) : ಬಹುತೇಕರು ಸ್ನಾನದ ನಂತರ ಹಚ್ಚೆ ಹಾಕಿಸಿಕೊಂಡ ಜಾಗವನ್ನು ಸ್ವಚ್ಛಗೊಳಿಸುವುದಿಲ್ಲ. ಆದರೆ ಹಾಗೆ ಮಾಡಬೇಡಿ. ಇದು ನಿಮ್ಮ ಚರ್ಮವು ಊದಿಕೊಳ್ಳಲು ಕಾರಣವಾಗಬಹುದು ಮತ್ತು ಅಲರ್ಜಿಯನ್ನು ಉಂಟುಮಾಡಬಹುದು. ನೀವು ಹಚ್ಚೆ ಹಾಕಿದ ಜಾಗದಲ್ಲಿ ಸೌಮ್ಯ ಬಟ್ಟೆ (Clothes) ಯಿಂದ ಸ್ವಚ್ಛಗೊಳಿಸಬೇಕು. ಹಚ್ಚೆ ಹಾಕಿದ ಜಾಗದಲ್ಲಿ ನೀರು (Water) ಇರದಂತೆ ನೋಡಿಕೊಳ್ಳಿ.

Fashion: ದಿನದ 24 ಗಂಟೆಯೂ ಚೆಂದ ಕಾಣಿಸ್ಬೇಕಾ? ರಾತ್ರಿ ಈ ಡ್ರೆಸ್ ಒಪ್ಪುತ್ತೆ!

ಸರಿಯಾದ ಲೋಷನ್ ಬಳಸಿ : ಹಚ್ಚೆ ಹಾಕಿದ ಜಾಗಕ್ಕೆ ಅನೇಕರು ಲೋಷನ್ ಹಚ್ಚುತ್ತಾರೆ. ಲೋಷನ್ ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ನಿಮ್ಮಿಷ್ಟದಂತೆ ಲೋಷನ್ ಬಳಸಿದ್ರೆ ಹಚ್ಚೆ ಹಾಕಿದ ಜಾಗದ ಚರ್ಮದಲ್ಲಿ ಸೋಂಕು ಕಾಣಿಸಿಕೊಳ್ಳಬಹುದು. ಆ ಸ್ಥಳದಲ್ಲಿ ಮೊಡವೆಗಳು ಮತ್ತು ಕಲೆಗಳು ಹೆಚ್ಚಾಗಬಹುದು.

ಸೂರ್ಯನಿಂದ ರಕ್ಷಣೆ : ಹಚ್ಚೆ ಹಾಕಿದ ಜಾಗವನ್ನು ಸೂರ್ಯನ ಬೆಳಕಿನಿಂದ  ದೂರವಿಡಬೇಕು. ಸೂರ್ಯನ ಬಲವಾದ ಕಿರಣಗಳು ಹಚ್ಚೆ ಚರ್ಮದ ಮೇಲೆ ಬಲವಾದ ಪರಿಣಾಮವನ್ನು ಬೀರಬಹುದು. ಹಚ್ಚೆ ಹಾಕಿದ ನಂತ್ರ ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವ ಅನಿವಾರ್ಯತೆಯಿದ್ದರೆ ಚರ್ಮವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ. ಇಲ್ಲವೆ ಛತ್ರಿಯನ್ನು ಬಳಸಿ. ಯಾವುದೇ ಕಾರಣಕ್ಕೂ ಸೂರ್ಯನ ಬೆಳಕು ಹಚ್ಚೆ ಮೇಲೆ ಬೀಳದಂತೆ ನೋಡಿಕೊಳ್ಳಿ.  

ತುರಿಕೆ ಸಮಸ್ಯೆ : ಹಚ್ಚೆ ಹಾಕಿಸಿಕೊಂಡ ಜಾಗದಲ್ಲಿ ತುರಿಕೆಯಾಗ್ತಿದ್ದರೆ  ವೈದ್ಯರನ್ನು ಸಂಪರ್ಕಿಸಿದ ನಂತರವೇ ಮನೆ ಮದ್ದನ್ನು ಬಳಸಿ. ನಿಮ್ಮ ವೈದ್ಯರು ಬೇಬಿ ಆಯಿಲ್, ಆಂಟಿಸೆಪ್ಟಿಕ್ ಲೋಷನ್ ಅಥವಾ ಕ್ರೀಮ್  ಅನ್ವಯಿಸಲು ಶಿಫಾರಸು ಮಾಡಬಹುದು. ಅವರ ಮಾತಿನಂತೆ ನಡೆದುಕೊಳ್ಳಿ.

ನೀರಿನಿಂದ ದೂರ : ಹಚ್ಚೆ ಹಾಕಿದ ಜಾಗಕ್ಕೆ ನೇರವಾಗಿ ನೀರು ಹಾಕ್ಬೇಡಿ.  ನೀರು ನಿಮ್ಮ ಚರ್ಮಕ್ಕೆ ಹಾನಿ ಮಾಡುತ್ತದೆ.  

 

 

click me!