ಅಕ್ಕಿಚೀಲದಿಂದ ರೆಡಿ ಆಯ್ತು ಸ್ಟೈಲಿಶ್ ಬ್ಯಾಗ್: ವೈರಲ್ ವಿಡಿಯೋ

Published : Apr 26, 2023, 01:11 PM IST
ಅಕ್ಕಿಚೀಲದಿಂದ ರೆಡಿ ಆಯ್ತು ಸ್ಟೈಲಿಶ್ ಬ್ಯಾಗ್: ವೈರಲ್ ವಿಡಿಯೋ

ಸಾರಾಂಶ

ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು ಖಾಲಿಯಾದ ಅಕ್ಕಿ ಚೀಲದಲ್ಲಿ ಸುಂದರವಾದ ಹ್ಯಾಂಡ ಬ್ಯಾಗ್ ತಯಾರಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಜೊತೆ ಎಲ್ಲರ ಮನ ಸೆಳೆಯುತ್ತಿದೆ.

ಕಸದಿಂದ ರಸ ತಯಾರಿಸುವ ಕಲೆ ಇವತ್ತು ನಿನ್ನೆಯದಲ್ಲ. ಬೇಡವಾದ ವಸ್ತುಗಳಿಂದ ಅನೇಕರು ವಿವಿಧ ಬಹುಪಯೋಗಿ ವಸ್ತುಗಳನ್ನು ತಯಾರಿಸುತ್ತಿರುತ್ತಾರೆ. ಈಗಂತೂ ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ವಸ್ತುಗಳ ತಯಾರಿಯ ವಿಡಿಯೋಗಳು ಸಾಕಷ್ಟು ಕಾಣಸಿಗುತ್ತಿರುತ್ತವೆ. ಬೇಡವಾದ ಹಳೆಯ ಬಟ್ಟೆ, ಬ್ಯಾಗ್‌, ಖಾಲಿಯಾದ ಡಬ್ಬಿಗಳಿಗೆ ವಿಭಿನ್ನ ರೂಪ  ನೀಡಿ ಮರು ಬಳಕೆ ಮಾಡಲಾಗುತ್ತದೆ.  ಹಾಗೆಯೇ ಈಗ ನಟಿ ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು ಖಾಲಿಯಾದ ಅಕ್ಕಿ ಚೀಲದಲ್ಲಿ ಸುಂದರವಾದ ಹ್ಯಾಂಡ ಬ್ಯಾಗ್ ತಯಾರಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಜೊತೆ ಎಲ್ಲರ ಮನ ಸೆಳೆಯುತ್ತಿದೆ.

ಅಕ್ಕಿ ಭಾರತದ ಪ್ರಮುಖ ಧಾನ್ಯವಾಗಿರುವುದರಿಂದ ಬಹುತೇಕರ ಮನೆಯಲ್ಲಿ ಈ ಅಕ್ಕಿ ಚೀಲ ಇದ್ದೇ ಇರುತ್ತದೆ. ಬಹುತೇಕರು ಅಕ್ಕಿ (rice bag) ಖಾಲಿಯಾಗುತ್ತಿದ್ದಂತೆ ಈ ಚೀಲಗಳನ್ನು ಬೇರೆ ಯಾವುದಾದರೂ ಅಗತ್ಯಗಳಿಗೆ ಬಳಸುತ್ತಾರೆ. ಬೇಡದ ವಸ್ತುಗಳನ್ನು ತುಂಬಿಸಿ ಮೇಲೆ ಎಸೆಯಲು, ಮಣ್ಣು ತುಂಬಿಸಿ ತರಕಾರಿ ಬೆಳೆಯಲು ಹೀಗೆ ವಿವಿಧ ರೀತಿಯಲ್ಲಿ ಅಕ್ಕಿ ಚೀಲಗಳು ಬಳಕೆಯಾಗುತ್ತವೆ. ಆದರೆ ಈ ನಟಿ ಮಾತ್ರ ಅಕ್ಕಿ ಚೀಲದಲ್ಲಿ ಒಂದು ಸುಂದರವಾದ ಹ್ಯಾಂಡ್ ಬ್ಯಾಗ್ ತಯಾರಿಸಿದ್ದು ಎಲ್ಲರ ಮನ ಸೆಳೆಯುತ್ತಿದೆ. 

ಪುತ್ತೂರು: ಕಸದಿಂದ ರಸ ತೆಗೆದು ಪರಿಸರ ರಕ್ಷಕಿಯಾದ ರೋಹಿಣಿ

ನಟಿ ಶ್ವೇತಾ ಮಹಾದಿಕ್ (Shweta Mahadik) ಅವರು ಇನ್ಸ್ಟಾಗ್ರಾಮ್‌ನಲ್ಲಿ(Instagram) ಈ ಬ್ಯಾಗ್ ತಯಾರಿಸಿದ ರೀತಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.  ನೀಲಿ ಬಣ್ಣದ ಅಕ್ಕಿ ಚೀಲವನ್ನು ಅವರು ಈ ಬ್ಯಾಗ್ ತಯಾರಿಸಲು ಬಳಸಿದ್ದು, ಅದನ್ನು ತುಂಡು ತುಂಡುಗಳಾಗಿ ಬ್ಯಾಗ್ ತಯಾರಿಸಲು ಬೇಕಾದಂತೆ ಕತ್ತರಿಸಿ ನಂತರ ನೆರಿಗೆ ನೆರಿಗೆಯಾಗಿ ಹೊಲಿದು ಮಧ್ಯದಲ್ಲಿ ಜಿಪ್ ಕೂರಿಸಿ ಎರಡು ಕೈಗಳನ್ನು ಅಳವಡಿಸಿ ಸುಂದರವಾದ ಬ್ಯಾಗ್ ನಿರ್ಮಿಸಲಾಗಿದೆ. ನಂತರ  ಸ್ಟೈಲಿಶ್‌ ಆಧುನಿಕ ಧಿರಿಸಿನ ಜೊತೆ ಈ ಬ್ಯಾಗ್ ಹಿಡಿದು ಶ್ವೇತಾ ಮಹಾದಿಕ್ ಫೋಸ್ ನೀಡಿದ್ದಾರೆ. ಇನ್ನು ಈ ವಿಡಿಯೋ ನೋಡಿ ನಟಿ ಉರ್ಫಿ ಜಾವೇದ್ ಕೂಡ ಇಂಪ್ರೆಸ್ ಆಗಿದ್ದು ಕಾಮೆಂಟ್ ಮಾಡಿದ್ದಾರೆ. 

5 ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಕೆಲವರು ಕಾಮೆಂಟ್ ಮಾಡಿದ್ದು,  ಇದನ್ನು ಉರ್ಪಿ ಜಾವೇಧ್ (Urfi Javed) ನೋಡಿದರೆ ಪಕ್ಕ ಇದರಲ್ಲೊಂದು ಲಂಗ ಹೊಲಿಸಿಕೊಳ್ಳೋದು ಪಕ್ಕಾ ಎಂದು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಹಲವು ಕಸದಿಂದ ರಸದಂತಹ ಪ್ರಯೋಗಗಳನ್ನು ಶ್ವೇತ ಮಹಾದಿಕ್ ಮಾಡಿದ್ದು, ಅವರ ಇನ್ಸ್ಟಾ ಖಾತೆಯ ಪೂರ್ತಿ ಇಂತಹ ಹಲವು ವಿಡಿಯೋಗಳು ವೈರಲ್ ಆಗಿವೆ. ಈ ಬ್ಯಾಗ್ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಿದೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮಗೆ ಈ ಜಗತ್ತಿನ ಪರಿಸರ ಪ್ರೇಮಿ ಕಲಾವಿದೆ ಎಂದು ಪ್ರಶಸ್ತಿ ನೀಡಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಸೊಗಸಾಗಿದೆ. 

ತರಕಾರಿ ಬೀಜ ಎಸಿಬೇಕಾಗಿಲ್ಲ, ಸ್ಟೈಲಿಶ್ ಆಭರಣ ತಯಾರಿಸ್ಬೋದು

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ ನ್ಯೂ ಇಯರ್ ಪಾರ್ಟಿಗೆ 2025ರ ಟ್ರೆಂಡಿಂಗ್ ಸೀರೆ ಧರಿಸಿ ಕ್ಲಾಸಿಯಾಗಿ ಮಿಂಚಿ
ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!