ಫ್ಯಾಷನ್ (Fashin) ಜಮಾನ. ಎಲ್ಲರ ಕೈ, ಕಾಲು, ಕುತ್ತಿಗೆ ಎಲ್ಲಿ ನೋಡಿದ್ರೂ ಟ್ಯಾಟೂ (Tattoo)ನೆ. ಎಲ್ರೂ ದೇಹದಲ್ಲಿ ಒಂದೆರಡು ಟ್ಯಾಟೂ ಹಾಕಿರೋದನ್ನು ನೋಡಿರ್ತೀರಾ. ಆದ್ರೆ ಇಲ್ಲೊಬ್ರು ತಾತಂಗೆ ಏನ್ ಕ್ರೇಜ್ ನೋಡಿ. ಮೈಯಲ್ಲಿ ಅಲ್ಲ ಮೈತುಂಬಾ ಟ್ಯಾಟೂ ಹಾಕ್ಕೊಂಡಿದ್ದಾರೆ.
ವರ್ಷಗಳು ಬದಲಾಗುತ್ತಾ ಹೋಗುವ ಹಾಗೆಯೇ ಟ್ರೆಂಡ್ (Trend)ಗಳು ಸಹ ಬದಲಾಗುತ್ತಾ ಹೋಗುತ್ತವೆ. ಫ್ಯಾಷನ್, ಮೇಕಪ್, ಲೈಫ್‌ಸ್ಟೈಲ್ ಎಲ್ಲದರಲ್ಲೂ ಹೊಸ ಹೊಸ ಬದಲಾವಣೆಯಾಗುತ್ತಾ ಬರುತ್ತದೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್ ಆಗಿರೋದು ಟ್ಯಾಟೂ ಫ್ಯಾಷನ್. ಕೈ, ಕಾಲು, ಬೆನ್ನು, ತೋಳು, ಸೊಂಟ ಹೀಗೆ ಹಲವೆಡೆ ಆಕರ್ಷಕವಾಗಿ ಟ್ಯಾಟೂ (Tattoo) ಹಾಕಿಕೊಳ್ಳುತ್ತಾರೆ. ಚಿಟ್ಟೆ, ಮ್ಯೂಸಿಕ್, ಸ್ಪೈಡರ್, ದೇವರ ಫೋಟೋ ಮೊದಲಾದವುಗಳನ್ನು ಟ್ಯಾಟೂ ಆಗಿ ಹಾಕಲಾಗುತ್ತದೆ. ಆದ್ರೆ ಮೈಯಲ್ಲಿ ಟ್ಯಾಟೂ ಹಾಕಿಕೊಳ್ಳೋದು ಓಕೆ. ಆದ್ರೆ ಇಲ್ಲೊಬ್ರು ತಾತಂಗೆ ಏನ್ ಕ್ರೇಜ್ ನೋಡಿ. ಮೈಯಲ್ಲಿ ಅಲ್ಲ ಮೈತುಂಬಾ ಟ್ಯಾಟೂ ಹಾಕ್ಕೊಂಡಿದ್ದಾರೆ
ಹೀಗೆ ದೇಹದ ಮೇಲೆಲ್ಲಾ ಟ್ಯಾಟೂ ಹಾಕಿಸಿಕೊಂಡವರು ಮಾರ್ಸೆಲೊ ಬ್ಬೋಯ್. ಮಾಡೆಲ್ ಮತ್ತು ಟ್ಯಾಟೂ ಕಲಾವಿದ. ಕೇವಲ 15 ವರ್ಷದವರಾಗಿದ್ದಾಗಲೇ ಮೊದಲ ಬಾರಿಗೆ ಟ್ಯಾಟೂ ಹಾಕಿಸಿಕೊಂಡಿರು. ಆ ಬಳಿಕ ಅವರಲ್ಲಿ ಟ್ಯಾಟೂ ಕುರಿತಾದ ಕ್ರೇಜ್ ಹೆಚ್ಚಾಯಿತು. ದೇಹದ ವಿವಿಧ ಭಾಗಗಳಲ್ಲಿ ಒಂದೊಂದೇ ಟ್ಯಾಟೂ ಹಾಕಿಕೊಳ್ಳುತ್ತಾ ಬಂದರು. ಸದ್ಯ ಇದು 1500ಕ್ಕೆ ತಲುಪಿದೆ. ನಾನು ಹೆಚ್ಚು ಹಚ್ಚೆಗಳನ್ನು ಬಯಸುತ್ತೇನೆ ಎಂದು ನಾನು ಅರಿತುಕೊಂಡಾಗ ನನಗೆ 22 ವರ್ಷ, ಮತ್ತು ಅಂದಿನಿಂದ ನಾನು ಅವುಗಳನ್ನು ನಾನು ಹೆಚ್ಚು ಹಾಕಿಸಿಕೊಂಡೆ ಎಂದು ಮಾರ್ಸೆಲೊ ಬ್ಬೋಯ್ ಹೇಳುತ್ತಾರೆ.
Tattoo Side Effects: ಹಚ್ಚೆ ಹಾಕಿಸ್ಕೊಳ್ಳೋ ಮುನ್ನ ಈ ವಿಚಾರ ಗೊತ್ತಿರಲಿ
ಈ ಅಜ್ಜ ತನ್ನ ಕಣ್ಣುಗಳು ಸೇರಿದಂತೆ ದೇಹದ 98 ಪ್ರತಿಶತದಷ್ಟು ಭಾಗದಲ್ಲಿ ಟ್ಯಾಟೂಗಳನ್ನು ಹೊಂದಿದ್ದಾರೆ. ಇವರ ದೇಹದಲ್ಲಿ ಒಟ್ಟು 1500 ಟ್ಯಾಟೂಗಳಿವೆ. ಸದ್ಯ ಕಾಲು ಮತ್ತು ಇತರ ಕೆಲವು ಭಾಗಗಳಲ್ಲಿ ಮಾತ್ರ ಟ್ಯಾಟೂ ಇಲ್ಲ. ಆದರೆ ಅಲ್ಲಿಯೂ ಟ್ಯಾಟೂ ಹಾಕಿಸಿಕೊಳ್ಳುವ ಪ್ಲಾನ್ ಇದೆ ಎಂದು ಮಾರ್ಸೆಲೊ ಬ್ಬೋಯ್ ಹೇಳಿದ್ದಾರೆ. ಅಜ್ಜ ತಮ್ಮ ಕಣ್ಣುಗಳು ಮತ್ತು ಒಸಡುಗಳನ್ನು ಕಪ್ಪು ಬಣ್ಣಕ್ಕೆ ಹಚ್ಚೆ ಹಾಕಿಸಿಕೊಂಡಿದ್ದಾರೆ, ನಾಲಿಗೆಯನ್ನು ಸೀಳಿದ್ದಾರೆ, ಅವರ ಹಲ್ಲುಗಳನ್ನು ಬದಲಾಯಿಸಿದ್ದಾರೆ. ಅಷ್ಟೇ ಅಲ್ಲ ಕಿವಿಗಳನ್ನು ಟ್ಯಾಟೂ ಹಾಕಿ ಮಾರ್ಪಡಿಸಿದ್ದಾರೆ.
ನಾಲಗೆ, ಕಣ್ಣಿಗೆ ಟ್ಯಾಟೂ ಹಾಕಿಸಿಕೊಳ್ಳುವಾಗ ಭಯವಾಗಲಿಲ್ಲವೇ ಎಂದು ಕೇಳಿದ್ದಕ್ಕೆ ಅವರು ಉತ್ತರಿಸಿದರು. ನಾನು ಕುರುಡನಾಗುವ ಬಗ್ಗೆ ಚಿಂತಿಸಲಿಲ್ಲ ಏಕೆಂದರೆ ನಾನು ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡಿದ್ದೇನೆ. ಕಣ್ಣಿನ ಪಿಗ್ಮೆಂಟೇಶನ್ ಅನ್ನು ಕಣ್ಣಿನ ಬಿಳಿ ಭಾಗದಲ್ಲಿ ಮಾತ್ರ ಮಾಡಲಾಗುತ್ತದೆ ಎಂದು ಬೋಯ್ ಹೇಳಿದರು. ನಾಲಗೆಯಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ವಿಚಿತ್ರ ಅನುಭವವಾಯಿತು. ಹೆಚ್ಚು ನೋವಾಯಿತು. ಆದರೂ ಟ್ಯಾಟೂ ಸಿದ್ಧಗೊಂಡ ಬಳಿಕ ಖುಷಿಪಟ್ಟೆ ಎಂದು ಮಾರ್ಸೆಲೊ ಬ್ಬೋಯ್ ಹೇಳಿದ್ದಾರೆ.
ಬೋಯ್‌ಗೆ ಇಬ್ಬರು ಗಂಡುಮಕ್ಕಳು ಮತ್ತು ಒಬ್ಬ ಮೊಮ್ಮಕ್ಕಳಿದ್ದಾರೆ. ಅವರು ಬ್ರೆಜಿಲ್‌ನ ಬೊಕೈವಾದಲ್ಲಿ ವಾಸಿಸುತ್ತಿದ್ದಾರೆ, ಅಲ್ಲಿ ಅವರು ಹಚ್ಚೆಗಳ ಮೇಲಿನ ಉತ್ಸಾಹವನ್ನು ವೃತ್ತಿಯಾಗಿ ಪರಿವರ್ತಿಸಿದ್ದಾರೆ. ಜೊತೆಗೆ ಸಾರ್ವಜನಿಕ ವ್ಯಕ್ತಿಯಾಗಿ ಹಚ್ಚೆ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ.
ಈ ಲೇಡಿ ಡಾಕ್ಟರ್ ಮೈಯಲ್ಲಿ ಮತ್ತೆ ಟ್ಯಾಟೂ ಹಾಕಿಸಿ ಕೊಳ್ಳಲು ಇಲ್ಲವೇ ಇಲ್ಲ ಜಾಗ...
ಪ್ರಸ್ತುತ ಬೋಯ್ ಅವರು ಬಯಸಿದ ಎಲ್ಲಾ ದೇಹದ ಮಾರ್ಪಾಡುಗಳನ್ನು ಹೊಂದಿದ್ದಾರೆ ಆದರೆ ಇನ್ನೂ ಕೆಲವು ಹಚ್ಚೆಗಳನ್ನು ಹಾಕಲು ಬಯಸುತ್ತಿದ್ದಾರೆ. ನನ್ನ ದೇಹವನ್ನು ಕ್ಯಾನ್ವಾಸ್ ಆಗಿ ಪರಿವರ್ತಿಸಲು ಇಷ್ಟಪಡುತ್ತೇನೆ ಎಂದು ಬೋಯ್ ಹೇಳುತ್ತಾರೆ. ಬಹಳಷ್ಟು ಟ್ಯಾಟೂಗಳನ್ನು ಬಯಸುವವರಿಗೆ ನಾನು ನೀಡುವ ಸಲಹೆಯೆಂದರೆ, ಇದರಿಂದ ಇರುವ ಸಾಧಕಬಾಧಕಗಳನ್ನು ತಿಳಿದುಕೊಳ್ಳುವುದು ಎಂದಿದ್ದಾರೆ. ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡಿರುವ ನಡೆಗೆ ಮಾರ್ಸೆಲೊ ಬೋಯ್ ಸಕಾರಾತ್ಮಕ ಹಾಗೂ ನಕಾರಾತ್ಮಕ ಕಾಮೆಂಟ್‌ಗಳನ್ನು ಸ್ವೀಕರಿಸುತ್ತಾರೆ. ಯಾರೂ ಹೀಯಾಳಿಸುವುದರಿಂದಲೂ ನನಗೆ ಬೇಸರವಾಗುವುದಿಲ್ಲ. ಟ್ಯಾಟೂವನ್ನು ನಾನು ಇಷ್ಟಪಡುತ್ತೇನೆ ಎಂದು ಬೋಯ್ ಹೆಮ್ಮೆಯಿಂದ ಹೇಳುತ್ತಾರೆ.