ಜೀನ್ಸ್ ಮೇಲೆ ಅಪಾರ ಪ್ರೀತಿಯಿರುವವರಿದ್ದಾರೆ. ಹಳೆ ಜೀನ್ಸ್ ಕೂಡ ಅವರ ಕಪಾಟಿನಲ್ಲಿರುತ್ತದೆ. ಸ್ವಲ್ಪ ಹರಿದ ಜೀನ್ಸನ್ನ ಕೂಡ ನೀವು ಆರಾಮವಾಗಿ ಧರಿಸಬಹುದು. ಬಣ್ಣ ಹೋದ ಜೀನ್ಸನ್ನು ಮರುಬಳಕೆ ಮಾಡ್ಬಹುದು.
ಎಲ್ಲರಿಗೂ ಇಷ್ಟವಾಗುವ ಡ್ರೆಸ್ (Dress) ನಲ್ಲಿ ಜೀನ್ಸ್ (Jeans) ಕೂಡ ಒಂದು. ಇದು ಎಲ್ಲ ಸಂದರ್ಭದಲ್ಲೂ ಸ್ಟೈಲಿಶ್ (Stylish) ಲುಕ್ ನೀಡುತ್ತದೆ. ಹುಡುಗ್ರು –ಹುಡುಗಿಯರು ಎಲ್ಲರೂ ಜೀನ್ಸ್ ಇಷ್ಟಪಡ್ತಾರೆ. ಎಲ್ಲರ ವಾರ್ಡ್‌ರೋಬ್ (Wardrobe)ನಲ್ಲಿ ಜೀನ್ಸ್ ದ್ದೇ ಇರುತ್ತೆ. ಜೀನ್ಸ್ ಧರಿಸುವುದು ಫ್ಯಾಷನ್ ಮಾತ್ರವಲ್ಲ ಆರಾಮದಾಯಕ ಎನ್ನುವ ಕಾರಣಕ್ಕೆ ಬಹುತೇಕರು ಜೀನ್ಸ್ ಧರಿಸಲು ಇಷ್ಟಪಡ್ತಾರೆ. ತುಂಬಾ ಬಾಳಿಕೆ ಬರುವ ಡ್ರೆಸ್ ನಲ್ಲಿ ಜೀನ್ಸ್ ಕೂಡ ಒಂದು. ಅನೇಕ ಬಾರಿ ಒಂದೇ ಜೀನ್ಸ್ ಧರಿಸಿ ಬೋರ್ ಆಗಿರುತ್ತದೆ. ಇಲ್ಲವೆ ಸಣ್ಣಪುಟ್ಟ ಕಲೆ ಅಥವಾ ಸಣ್ಣ ಗೀರು ಬಿದ್ದಿರುತ್ತದೆ. ಅಂಥ ಜೀನ್ಸ್ ಧರಿಸಲು ಸಾಧ್ಯವಿಲ್ಲ. ಇದನ್ನು ಒಗೆಯಲು ಮನಸ್ಸಿಲ್ಲದೆ ಧರಿಸಲು ಆಗದೆ ಕಪಾಟಿನ ಮೂಲೆ ಸೇರುತ್ತದೆ ಜೀನ್ಸ್. ನಿಮ್ಮ ನೆಚ್ಚಿನ ಜೀನ್ಸ್ ಧರಿಸಲು ಬರ್ತಿಲ್ಲವೆಂದಾದ್ರೆ ನೀವು ಅದಕ್ಕೆ ಹೊಸ ರೂಪ ನೀಡಬಹುದು. ಅದರ ನೋಟ ಬದಲಿಸಿ ಮರುಬಳಕೆ ಮಾಡ್ಬಹುದು.
ಜೀನ್ಸ್ ಅಲಂಕರಿಸಿ : ಜೀನ್ಸ್ ಹಳೆಯದಾಗಿದ್ದರೆ ಮತ್ತು ಬಣ್ಣ ಮಾಸುತ್ತಿದ್ದರೆ ಟೆನ್ಷನ್ ಬೇಡ. ಅದೇ ಜೀನ್ಸನ್ನು ನೀವು ಮತ್ತೆ ಬಳಸಬಹುದು. ಅದಕ್ಕೆ ಸಣ್ಣ ಕೆಲಸ ಮಾಡ್ಬೇಕು. ಹಳೆಯದಾಗಿದೆ ಎನ್ನಿಸುವ ಜೀನ್ಸ್ ಗೆ ಮಣಿಗಳು ಮತ್ತು ಮುತ್ತುಗಳನ್ನು ಹಾಕಿ ಅದನ್ನು ಅಲಂಕರಿಸಬಹುದು. ಬಟ್ಟೆಗೆ ಬಳಸುವ ಅಂಟಿನ ಸಹಾಯದಿಂದ ನೀವು ಮಣಿಗಳನ್ನು ಅಂಟಿಸಬಹುದು. ಜೀನ್ಸ್ ಪಾಕೆಟ್ ಬಳಿ ಅಥವಾ ಕೆಳಭಾಗದಲ್ಲಿ ಮಣಿಗಳನ್ನು ಅಂಟಿಸಿ. ಕಲೆಯಾಗಿದೆ ಎಂಬ ಜಾಗದಲ್ಲಿ ಮಾತ್ರವೇ ನೀವು ಮಣಿ ಅಂಟಿಸಬಹುದು. ನಂತ್ರ ಅದನ್ನು ಒಣಗಲು ಬಿಡಿ. ಹಳೆ ಜೀನ್ಸ್ ಹೊಸದರಂತೆ ಕಾಣುತ್ತದೆ. ಆಗ ನೀವು ಮತ್ತೆ ಅದನ್ನು ಧರಿಬಹುದು.
ವಿವಾಹ ಸಮಯದಲ್ಲಿ ಕೈಕಾಲಿಗೆ HENNA ಹಾಕುವುದೇಕೆ?
ಜೀನ್ಸ್ ಗೆ ಬಣ್ಣ : ಜೀನ್ಸ್ ಹಳೆಯದಾಗಿದ್ದರೆ ಮತ್ತು ಅದರ ಬಣ್ಣ ಹಾಳಾಗ್ತಿದ್ದರೆ ಬೇಸರಪಟ್ಟುಕೊಳ್ಳಬೇಡಿ. ನೀವು ಅವುಗಳನ್ನು ಮತ್ತೆ ಧರಿಸಲು ಬಯಸಿದರೆ ಜೀನ್ಸ್ ಬಣ್ಣ ಬದಲಿಸಿ. ಇತ್ತೀಚಿನ ದಿನಗಳಲ್ಲಿ ಟೈ ಮತ್ತು ಡೈ ಹೆಚ್ಚು ಫ್ಯಾಷನ್ ಆಗಿದೆ. ಎರಡು ಮೂರು ಬಣ್ಣಗಳನ್ನು ನೀವು ಇದಕ್ಕೆ ಬಳಸಬಹುದು. ಇದಕ್ಕೆ ರಬ್ಬರ್ ಬ್ಯಾಂಡ್ ಅಗತ್ಯವಿರುತ್ತದೆ. ಮೊದಲು ಜೀನ್ಸನ್ನು ಬಣ್ಣದಲ್ಲಿ ನೆನೆಸಿ ಮತ್ತು ಅವುಗಳನ್ನು ರಬ್ಬರ್ ಬ್ಯಾಂಡ್ ನೊಂದಿಗೆ ಕಟ್ಟಿಡಿ. ಅದು ಒಣಗಿದಾಗ ರಬ್ಬರ್ ಬ್ಯಾಂಡ್ ತೆರೆಯಿರಿ. ನೆಚ್ಚಿನ ಜೀನ್ಸ್ ಬಣ್ಣ ಬದಲಾಗಿರುತ್ತದೆ. ಅದನ್ನು ಮತ್ತೆ ಟ್ರೆಂಡಿ ಲುಕ್‌ನಲ್ಲಿ ನೀವು ಧರಿಸಬಹುದು.
ಹರಿದ ಜೀನ್ಸ್ : ಹರಿದ ಜೀನ್ಸ್ ಫ್ಯಾಷನ್. ಆದ್ರೆ ಸರಿಯಾಗಿರುವ ಜೀನ್ಸ್ ಹರಿದ್ರೆ ಅದ್ರ ಲುಕ್ ಬದಲಾಗುತ್ತದೆ. ಆಗ ನೀವು ಅದ್ರ ಎಳೆ ತೆಗೆದು ಅದಕ್ಕೆ ರಿಪ್ಪಡ್ ಲುಕ್ ನೀಡಬಹುದು. ಅದು ಸಾಧ್ಯವಿಲ್ಲವೆಂದ್ರೆ ಪ್ಯಾಚ್ ವರ್ಕ್ ಮಾಡಿ ಅದಕ್ಕೆ ಹೊಸ ರೂಪ ನೀಡಬಹುದು. ಪ್ಯಾಚ್ ವರ್ಕ್ ಜೀನ್ಸ್ ಕೂಡ ಫ್ಯಾಷನ್.
ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ಆರೋಗ್ಯ ವೃದ್ಧಿಸುತ್ತಾ?!
ಜೀನ್ಸ್ ಮೇಲೆ ಚಿತ್ರ : ಜೀನ್ಸ್ ಮೇಲೆ ಚಿತ್ರ ಬಿಡಿಸುವ ಮೂಲಕ ಜೀನ್ಸ್ ನೋಟ ಬದಲಿಸಬಹುದು. ಕೆಲ ಚಿತ್ರಗಳನ್ನು ತಂದು ನೀವು ಅಂಟಿಸಲೂಬಹುದು. ಮಾರ್ಕರ್ ಅಥವಾ ಸ್ಕೆಚ್ ಸಹಾಯದಿಂದ ಜೀನ್ಸ್ ಮೇಲೆ ಚಿತ್ರವನ್ನು ಬಿಡಿಸಿ. ಇದು ತುಂಬಾ ಕೂಲ್ ಲುಕ್ ನೀಡುತ್ತದೆ.
ಎರಡು ಜೀನ್ಸ್ ಸೇರಿಸಿ : ಎರಡು ಜೀನ್ಸ್ ಹರಿದಿದ್ದರೆ ಅದನ್ನು ಸೇರಿಸಿ ನೀವು ಹೊಸ ಜೀನ್ಸ್ ಮಾಡಬಹುದು. ಈಗ ಬೇರೆ ಬೇರೆ ಬಣ್ಣದ ಜೀನ್ಸ್ ಜೋಡಿಸಿ ಧರಿಸುವುದು ಫ್ಯಾಷನ್ ಆಗಿದೆ. ಜೀನ್ಸ್ ನ ಸೈಡ್ ಕತ್ತರಿಸಿ ಇನ್ನೊಂದರ ಜೊತೆ ಜೋಡಿಸಿ ಹೊಲಿದ್ರೆ ಹೊಸ ಜೀನ್ಸ್ ಸಿದ್ಧವಾಗುತ್ತದೆ.