ಎದೆಹಾಲಿನ ಆಭರಣ ಮಾರಿ ಈಕೆ ಸಂಪಾದಿಸ್ತಿರೋದು ಕೋಟಿ ಕೋಟಿ..!

By Suvarna News  |  First Published Mar 25, 2022, 2:38 PM IST

ತಾಯಿ (Mother)ಯಾಗುವುದು ಎಂದರೆ ಪ್ರತಿಯೊಬ್ಬ ಹೆಣ್ಣಿಗೂ ಜನ್ಮವೇ ಸಾರ್ಥಕ್ಯವೆನಿಸುವ ಭಾವ. ಅದರಲ್ಲೂ ಸ್ತನ್ಯಪಾನ (Breast Feeding)ವು ಪ್ರತಿಯೊಬ್ಬ ತಾಯಿಯ ಅದ್ಭುತ ಅನುಭವಗಳಲ್ಲಿ ಒಂದಾಗಿದೆ. ಆದರೆ ಇಲ್ಲೊಬ್ಬಾಕೆ ಎದೆಹಾಲನ್ನು ತಯಾರಿಸಿ ಕೋಟಿ (Crore) ಕೋಟಿ ಸಂಪಾದಿಸುತ್ತಿದ್ದಾಳೆ. ಅದ್ಹೇಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ


ಸ್ತನ್ಯಪಾನ ವು ಪ್ರತಿಯೊಬ್ಬ ತಾಯಿಯ ಅದ್ಭುತ ಅನುಭವಗಳಲ್ಲಿ ಒಂದಾಗಿದೆ. ಪುಟ್ಟ ಮಗುವಿನ ಪಾಲಿಗೆ ಹೇಗೆ ಎದೆಹಾಲು ಅಮೃತ ಸಮಾನವಾಗಿರುತ್ತದೋ ಹಾಗೆಯೇ ತಾಯಿಯ ಪಾಲಿಗೆ ಹಾಲೂಡಿಸುವುದು ಅದ್ಭುತ ಅನುಭವವಾಗಿರುತ್ತದೆ. ಹೀಗಾಗಿ, ಇತ್ತೀಚಿಗೆ ಬ್ರೆಸ್ಟ್‌ ಮಿಲ್ಕ್‌ ಜ್ಯುವೆಲ್ಲರಿ ಅಥವಾ ಎದೆಹಾಲಿನ ಆಭರಣ ಟ್ರೆಂಡ್ ಆಗಿದೆ. ತಾಯಿ ಮತ್ತು ಮಗುವಿನ ನಡುವಿನ ವಿಶೇಷ ಬಾಂಧವ್ಯದ ಸ್ಮರಣಿಕೆಯನ್ನು ಮಾಡಲು ಬಯಸುವವರು ಎದೆ ಹಾಲಿನ ಆಭರಣ (Jewellery)ತಯಾರಿಸಿ ಇಟ್ಟುಕೊಳ್ಳುತ್ತಾರೆ. ಇದೇ ರೀತಿ ಮಹಿಳೆಯೊಬ್ಬರು ಎದೆಹಾಲನ್ನು ಮಾರಿ ವಾರ್ಷಿಕಾವಗಿ 15 ಕೋಟಿ ರೂ. ಸಂಪಾದಿಸಿದ್ದಾರೆ. ಇವರು ಎದೆಹಾಲಿನ ಆಭರಣಗಳನ್ನು ತಯಾರಿಸಿ ಮಾರುತ್ತಿದ್ದರು. 

ಎದೆ ಹಾಲಿನ ಆಭರಣ ಎಂದರೇನು ?
ಸ್ತನ ಹಾಲಿನ ಆಭರಣವು ಎದೆ ಹಾಲಿನಿಂದ ತುಂಬಿದ ಕಲ್ಲು ಹೊಂದಿರುವ ಆಭರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಅನೇಕ ಹೆಸರಾಂತ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳು ತಾಯಂದಿರಿಗಾಗಿ ಈ ಆಭರಣವನ್ನು ತಯಾರಿಸಿ ಕೊಡುತ್ತಿವೆ.

Tap to resize

Latest Videos

ಮಕ್ಕಳಿಗೆ ಎದೆ ಹಾಲು ತುಂಬಾನೇ ಮುಖ್ಯ, ಮಿಲ್ಕ್‌ ಬ್ಯಾಂಕ್‌ ಬಗ್ಗೆ ಸಂದೇಶ ಸಾರಿದ ನಟಿ ರಾಧಿಕಾ ಪಂಡಿತ್!

ಎದೆ ಹಾಲಿನ ಆಭರಣವನ್ನು ಹೇಗೆ ತಯಾರಿಸಲಾಗುತ್ತದೆ ?
ಎದೆಹಾಲನ್ನು ಉಪಯೋಗಿಸಿ ನೆಕ್ಲೇಸ್ ಪೆಂಡೆಂಟ್, ಉಂಗುರ ಹೀಗೆ ಹಲವು ಆಭರಣಗಳನ್ನು ತಯಾರಿಸಲಾಗುತ್ತದೆ. ಹಾಲನ್ನು ಸಂರಕ್ಷಿಸಲು ರಾಸಾಯನಿಕಗಳನ್ನು ಬಳಸುವ ಮೂಲಕ ಹಾಲು ಬಿಸಿ ಮತ್ತು ತಂಪಾಗಿಸುವ ತೀವ್ರ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರಿಂದ ಹಾಲನ್ನು ಅಗತ್ಯವಿರುವಂತೆ ಅಚ್ಚು ಮಾಡಲು ಮತ್ತು ಆಕಾರವನ್ನು ಪಡೆಯಲು ಸುಲಭವಾಗುತ್ತದೆ. ನಂತರ ಇದನ್ನು ಎದೆ ಹಾಲಿನ ನೆಕ್ಲೇಸ್, ಉಂಗುರ, ಕಿವಿಯೋಲೆಗಳು ಇತ್ಯಾದಿಗಳನ್ನು ತಯಾರಿಸಲು ಬಳಸಬಹುದು.

ಎದೆಹಾಲಿನ ಆಭರಣ ಮಾರಿ ಕೋಟಿ ಕೋಟಿ ಸಂಪಾದನೆ
ಇದೇ ರೀತಿ ಲಂಡನ್‌ನ ಮಹಿಳೆಯೊಬ್ಬರು ಎದೆಹಾಲನ್ನು ಬಳಸಿ ಆಭರಣ ತಯಾರಿಸುತ್ತಿದ್ದಾರೆ. ಮೂರು ಮಕ್ಕಳ ತಾಯಿ ಎದೆಹಾಲನ್ನು ಬಳಸಿ ಆಭರಣಗಳನ್ನು ತಯಾರಿಸಿ ಮಾರುತ್ತಿದ್ದಾರೆ. ಸಫಿಯಾ ರಿಯಾದ್ ಮತ್ತು ಅವರ ಪತಿ ಆಡಮ್ ರಿಯಾದ್ ಅವರು ಮೆಜೆಂಟಾ ಫ್ಲವರ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಇವರು ತಾಯಿ ಮತ್ತು ಬಾಂಧವ್ಯವನ್ನು ಇನ್ನಷ್ಟು ಸ್ಮರಣೀಯವಾಗಿ ಮಾಡಲು ಎದೆಹಾಲು ಸೇರಿಸಿದ ರಿಂಗ್‌, ಪೆಂಡೆಂಟ್‌, ಕಿವಿಯೋಲೆ, ಕಲ್ಲುಗಳನ್ನು ತಯಾರಿಸುತ್ತಿದ್ದಾರೆ.  2023ರ ವೇಳೆಗೆ ಕಂಪನಿಯ ಯೋಜಿತ ವಹಿವಾಟು 15 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

2019ರಲ್ಲಿ ಈ ಕಂಪನಿಯು ಆರಂಭಗೊಂಡಿತು. ಇದು ಸುಮಾರು 4,000 ಆರ್ಡರ್‌ಗಳನ್ನು ಪಡೆದುಕೊಂಡಿದೆ. ದಂಪತಿಗಳು ಲಂಡನ್‌ನ ಬೆಕ್ಸ್ಲಿಯಿಂದ ಬಂದವರು. ಸಫಿಯಾ ಮತ್ತು ಅವರ ಪತಿ ಕೋವಿಡ್, ಲಾಕ್‌ಡೌನ್ ಸಮಯದಲ್ಲಿ ಆಭರಣಗಳನ್ನು ತಯಾರಿಸಲು ತಾಯಿಯ ಹಾಲನ್ನು ಬಳಸುತ್ತಾರೆ ಎಂಬುದನ್ನು ತಿಳಿದುಕೊಂಡರು. ಮತ್ತು ಇದನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಲು ನಿರ್ಧರಿಸಿದರು.

ಪಬ್ಲಿಕ್‌ನಲ್ಲಿ ಎದೆಹಾಲುಣಿಸುವ ಬಗ್ಗೆ ಶ್ವೇತಾ ತಿವಾರಿ ಹೇಳಿದ್ದಿಷ್ಟು

ಹಾಲು ಹಾಳಾಗದಂತೆ ಆಭರಣ ತಯಾರಿಸುವ ವಿಧಾನ
ಸದ್ಯ ಈ ಸಂಸ್ಥೆಯ ಎದೆಹಾಲು ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದಂಪತಿಗಳು ತಾಯಂದಿರೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ತಮ್ಮ ಸ್ತನ್ಯಪಾನ ಪ್ರಯಾಣವನ್ನು ನೆನಪಿಟ್ಟುಕೊಳ್ಳಲು  ಅಮೂಲ್ಯವಾದ ಕಲ್ಲುಗಳಾಗಿ ಪರಿವರ್ತಿಸುವ ಮೂಲಕ ತಮ್ಮ ಎದೆ ಹಾಲನ್ನು ಸಂರಕ್ಷಿಸಲು ಸಹಾಯ ಮಾಡುತ್ತಿದ್ದಾರೆ. ಆಭರಣವನ್ನು ತಯಾರಿಸಲು ಗ್ರಾಹಕರು ಕನಿಷ್ಠ 30 ಮಿಲಿ ಹಾಲನ್ನು ಒದಗಿಸಬೇಕಾಗುತ್ತದೆ.

ತಾಯಿಯ ಹಾಲನ್ನು ಅಮೂಲ್ಯವಾದ ಕಲ್ಲುಗಳಾಗಿ ಸಂರಕ್ಷಿಸುವ ಸೂತ್ರವನ್ನು ಕಂಡುಹಿಡಿಯಲು ಕಂಪನಿಯು ಸಾಕಷ್ಟು ಸಂಶೋಧನೆ ಮಾಡಿದೆ. ಹಾಲು ತನ್ನ ಮೂಲ ಬಣ್ಣವನ್ನು ಉಳಿಸಿಕೊಂಡಿದೆ ಎಂದು ಖಚಿತಪಡಿಸುತ್ತದೆ. ವರದಿಗಳ ಪ್ರಕಾರ, ಸಫಿಯಾ ಅವರು ದ್ರವವನ್ನು ನಿರ್ಜಲೀಕರಣಗೊಳಿಸುವ ತಾಂತ್ರಿಕ ಪ್ರಕ್ರಿಯೆಯನ್ನು ಕಂಡುಕೊಂಡರು ಮತ್ತು ನಂತರ ಅದನ್ನು ಉತ್ತಮ ಗುಣಮಟ್ಟದ ಹಳದಿ ಅಲ್ಲದ ರಾಳದೊಂದಿಗೆ ಸಂಯೋಜಿಸುತ್ತಾರೆ, ಇದರಿಂದಾಗಿ ಆಭರಣವು ದೀರ್ಘಕಾಲದವರೆಗೆ ಸ್ಪಷ್ಟವಾಗಿರುತ್ತದೆ. ಎದೆ ಹಾಲಿನ ಆಭರಣಗಳು ನೆಕ್ಲೇಸ್‌ಗಳು, ಕಿವಿಯೋಲೆಗಳು ಮತ್ತು ಉಂಗುರಗಳನ್ನು ಇವರು ತಯಾರಿಸುತ್ತಾರೆ.

click me!