Anushka Sharma: ಅನುಷ್ಕಾ ಫಿಟ್ನೆಸ್ ಗುಟ್ಟೇನು? ಊಟ ಎಷ್ಟು ಗಂಟೆಗೆ ಮಾಡ್ತಾರೆ?

By Suvarna NewsFirst Published Jun 8, 2023, 2:34 PM IST
Highlights

ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ನಮ್ಮ ಆರೋಗ್ಯವನ್ನು ಕಾಪಾಡುತ್ತೆ. ಮಧ್ಯರಾತ್ರಿ ಊಟ ಮಾಡೋದಕ್ಕೂ ಸೂರ್ಯಾಸ್ತದ ಮೊದಲೇ ಆಹಾರ ಸೇವನೆಗೂ ಸಾಕಷ್ಟು ವ್ಯತ್ಯಾಸವಿದೆ. ಇದ್ರ ಲಾಭವನ್ನು ನಟಿ ಅನುಷ್ಕಾ ಶರ್ಮಾ ಅರಿತಿದ್ದಾರೆ.
 

ಫಿಟ್ನೆಸ್ ವಿಷ್ಯದಲ್ಲಿ ಸೆಲೆಬ್ರಿಟಿಗಳು ಸದಾ ಮುಂದಿರುತ್ತಾರೆ. ತಮ್ಮ ಬ್ಯುಸಿ ಲೈಫ್ ಸ್ಟೈಲ್ ಮಧ್ಯೆಯೂ ಅವರು ಫಿಟ್ನೆಸ್ ಮರೆಯೋದಿಲ್ಲ. ಬಾಲಿವುಡ್ ನ ಕೆಲ ಸ್ಟಾರ್ಸ್ ಸಾಮಾನ್ಯರಿಗೆ ಮಾದರಿ. ಅವರನ್ನು ರೋಲ್ ಮಾಡೆಲ್ ಆಗಿಟ್ಟುಕೊಂಡು ವರ್ಕ್ ಔಟ್ ಮಾಡ್ತಾರೆ. ಫಿಟ್ನೆಸ್ ವಿಷ್ಯ ಬಂದಾಗ ನಾವು ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರನ್ನು ಮರೆಯೋಕೆ ಆಗಲ್ಲ. ಮಗುವಾದ್ಮೇಲೂ ಕಷ್ಟಪಟ್ಟು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ ಅನುಷ್ಕಾ. ಫಿಟ್ ಆಗಿರುವ ಅನುಷ್ಕಾ, ನಿಯಮಿತ ವ್ಯಾಯಾಮದ ಜೊತೆ ಆಹಾರದ ಬಗ್ಗೆಯೂ ಕಾಳಜಿವಹಿಸ್ತಾರೆ. ಅನುಷ್ಕಾ ಏನು ತಿನ್ನುತ್ತಾರೆ ಅನ್ನೋದು ಮಾತ್ರವಲ್ಲ ಯಾವಾಗ ತಿನ್ನುತ್ತಾರೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ಅನುಷ್ಕಾ ತಿನ್ನುವ ಸಮಯ, ಅವರ ಈ ಫಿಟ್ನೆಸ್ ಗುಟ್ಟಿನಲ್ಲಿ ಸೇರಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅನುಷ್ಕಾ, ತಮ್ಮ ಆಹಾರದ ಟೈಂಮಿಂಗ್ಸ್ ಹೇಳಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ನೀವೂ ಅನುಷ್ಕಾರಂತೆ ಬಳಕುವ ಬಳ್ಳಿಯಾಗ್ಬೇಕು ಅಂದ್ರೆ ಅವರ ನಿಯಮ ಪಾಲನೆ ಮಾಡ್ಬಹುದು.

ಅನುಷ್ಕಾ (Anushka) ಫಿಟ್ನೆಸ್ ಗುಟ್ಟೇನು? : 

ಅನುಷ್ಕಾ ರಾತ್ರಿ ಊಟ (Dinner) ಮಾಡೋದು ಯಾವಾಗ ಗೊತ್ತಾ? : ರಾತ್ರಿ ಬೇಗ ಊಟ ಮಾಡ್ಬೇಕು ಎಂಬುದು ಎಲ್ಲರಿಗೂ ತಿಳಿದಿದೆ. ಸರಿಯಾಗಿ ಜೀರ್ಣವಾಗ್ಬೇಕೆಂದ್ರೆ ರಾತ್ರಿ ಮಲಗಲು 2 ಗಂಟೆ ಮೊದಲು ಊಟ ಮಾಡ್ಬೇಕು. ಮಧ್ಯರಾತ್ರಿ 12 ಗಂಟೆಗೆ ತಿಂದು 2 ಗಂಟೆಗೆ ಮಲಗೋದಲ್ಲ. ಸಾಮಾನ್ಯವಾಗಿ ತಜ್ಞರು ಸಂಜೆ 7 ಗಂಟೆಯೊಳಗೆ ಆಹಾರ ಸೇವನೆ ಮುಗಿಸ್ಬೇಕು ಎನ್ನುತ್ತಾರೆ. ಆದ್ರೆ ಅನುಷ್ಕಾ ಅದಕ್ಕಿಂತ ಒಂದು ಗಂಟೆ ಮುಂದಿದ್ದಾರೆ. ಅವರು ಸಂಜೆ 5.30ಯಿಂದ 6 ಗಂಟೆಯೊಳಗೆ ಆಹಾರ (food) ಸೇವನೆ ಮುಗಿಸ್ತಾರಂತೆ.
ಬೇಗ ಊಟ ಮಾಡೋದು ಮಾತ್ರವಲ್ಲ ರಾತ್ರಿ ಬೇಗ ಮಲಗ್ತಾರೆ ಅವರು. ಅನುಷ್ಕಾ ರಾತ್ರಿ 9.30ಕ್ಕೆಲ್ಲ ನಿದ್ರೆ ಮಾಡುವ ಪ್ರಯತ್ನ ನಡೆಸ್ತಾರಂತೆ. ಬೇಸಿಗೆಯಲ್ಲಿ ನಾನು ರಾತ್ರಿ ಊಟ ಮುಗಿಸುವ ವೇಳೆಗೆ ಸೂರ್ಯ ಮುಳುಗಿರೋದಿಲ್ಲ ಎನ್ನುತ್ತಾರೆ ಅವರು.

Fitness Tips: ದಪ್ಪಗಿದ್ರೂ ಫಿಟ್ ಆಗಿದ್ದೀರಾ? ಸಮಾಜದ ಚಿಂತೆ ಯಾಕೇ ಬಿಟ್ಹಾಕಿ

ಅನುಷ್ಕಾ ಶರ್ಮಾ ಮಧ್ಯಾಹ್ನದ ಊಟ : ಬರೀ ರಾತ್ರಿ ಊಟ ಮಾತ್ರ ಬೇಗ ಮಾಡೋದಿಲ್ಲ ಅನುಷ್ಕಾ. ಮಧ್ಯಾಹ್ನದ ಊಟಕ್ಕೂ ಮಹತ್ವ ನೀಡ್ತಾರೆ. ಮಧ್ಯಾಹ್ನ 11 ಗಂಟೆಯಿಂದ 11.30ರೊಳಗೆ ಊಟ ಮುಗಿಸ್ತಾರೆ ಅನುಷ್ಕಾ. ಬೇಗ ಊಟ ಮಾಡ್ತಿರೋದು ಒಂದರೆಡಲ್ಲ, ಅನೇಕ ಪ್ರಯೋಜನಗಳನ್ನು ನೀಡಿದೆಯಂತೆ.

ಬೇಗ ಊಟ ಮಾಡುವ ಪ್ರಯೋಜನ ಏನು? : ಹಿಂದಿನ ಕಾಲದಲ್ಲಿ ಜನರು ಬೇಗ ಊಟ ಮಾಡಿ ಮಲಗ್ತಿದ್ದರು. ಈಗಲೂ ವೃದ್ಧರಿರುವ ಮನೆಯಲ್ಲಿ ಊಟ ಬೇಗವಾಗುತ್ತದೆ. ಕೆಲವರು 12 ಗಂಟೆಯೊಳಗೆ ಮಧ್ಯಾಹ್ನದ ಊಟ ಮುಗಿಸಿದ್ರೆ ರಾತ್ರಿ 7.30ರೊಳಗೆ ಊಟ ಮಾಡ್ತಾರೆ. ಕರೆಂಟ್ ಸೇರಿದಂತೆ ಮನರಂಜನೆಗೆ ಯಾವುದೇ ಸೌಲಭ್ಯವಿರಲಿಲ್ಲ ಎನ್ನುವ ಕಾರಣಕ್ಕೆ ಹಿರಿಯರು ಬೇಗ ಊಟ ಮಾಡ್ತಿದ್ದರು ಎಂದು ನಾವೆಲ್ಲ ನಂಬಿದ್ದೇವೆ. ಆದ್ರೆ ಅದ್ರಿಂದ ಉಪಯೋಗ ಸಾಕಷ್ಟಿದೆ.
• ಬೇಗ ಊಟ ಮಾಡೋದ್ರಿಂದ ದೇಹ ಹೆಚ್ಚು ಶಾಂತವಾಗಿರುತ್ತದೆ.
•  ಆಳವಾದ ಮತ್ತು ಉತ್ತಮವಾದ ನಿದ್ರೆಗೆ ಇದು ಪ್ರಯೋಜನಕಾರಿ.
•  ಬೆಳಿಗ್ಗೆ ಫ್ರೆಶ್ ಆಗಿ ಏಳಲು ನೆರವಾಗುತ್ತದೆ.
• ದೇಹದ ಶಕ್ತಿ ಹೆಚ್ಚಾಗುತ್ತದೆ
• ಒಂದು ವಿಷ್ಯದ ಬಗ್ಗೆ ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.
• ಜೀರ್ಣಕ್ರಿಯೆ ಸರಿಯಾಗಿ ಆಗುವ ಜೊತೆಗೆ ಬೊಜ್ಜಿನ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

Fitness Tips: ತೂಕ ಇಳಿಸೋಕೆ ಸ್ವಿಮ್ಮಿಂಗ್ – ಸ್ಲೈಕಿಂಗ್ ಯಾವುದು ಬೆಸ್ಟ್ ?

ಫಿಟ್ನೆಸ್ ಬಗ್ಗೆ ಅನುಷ್ಕಾ ಹೇಳೋದೇನು? : ಸೆಲೆಬ್ರಿಟಿಗಳು ಫಿಟ್ ಆಗಿದ್ದಾರೆ ಎನ್ನುವ ಕಾರಣಕ್ಕೆ ಅವರ ದಾರಿಯಲ್ಲೇ ನೀವು ನಡೆಯಬೇಕಿಲ್ಲ ಎನ್ನುತ್ತಾರೆ ಅನುಷ್ಕಾ. ನಿಮ್ಮ ದೇಹವನ್ನು ನೀವು ಮೊದಲು ಅರಿಯಬೇಕು. ಪ್ರತಿಯೊಬ್ಬರ ದೇಹ, ಆರೋಗ್ಯ ಸ್ಥಿತಿ, ಅಗತ್ಯತೆ ಬೇರೆ ಇರುವ ಕಾರಣ ನಿಮಗೆ ಸೂಕ್ತವಾಗುವ ವ್ಯಾಯಾಮ ಹಾಗೂ ಆಹಾರ ಪದ್ಧತಿ ಪಾಲಿಸಿ ಎಂದು ಅನುಷ್ಕಾ ಸಲಹೆ ನೀಡ್ತಾರೆ. 

click me!